1989 ಮಾಡೆಲಿಂಗ್ ಫೋಟೋ ಶೇರ್ ಮಾಡಿದ ನಟ: ಆಗಿನ ಪೇಮೆಂಟ್ ಎಷ್ಟು ಗೊತ್ತಾ..?

Published : Dec 22, 2020, 10:11 AM ISTUpdated : Dec 22, 2020, 10:33 AM IST
1989 ಮಾಡೆಲಿಂಗ್ ಫೋಟೋ ಶೇರ್ ಮಾಡಿದ ನಟ: ಆಗಿನ ಪೇಮೆಂಟ್ ಎಷ್ಟು ಗೊತ್ತಾ..?

ಸಾರಾಂಶ

1989 ಮಾಡೆಲಿಂಗ್ ಅನ್ನೋದು ಯಾವ ತರ ಇತ್ತು..? ಬಾಲಿವುಡ್‌ನ ಖ್ಯಾತ ನಟ ಮಿಲಿಂದ್ ಸೋಮನ್ ಫೋಟೋ ಶೇರ್ ಮಾಡಿದ್ದಾರೆ ನೋಡಿ

ಮಾಡೆಲ್ ನಟ ಮಿಲಿಂದ್ ಸೋಮನ್ ಅವರ ಹಳೆಯ ಫೊಟೋ ಒಂದನ್ನು ಶೇರ್ ಮಾಡಿ ಫ್ಯಾನ್ಸ್‌ಗೆ ಸರ್ಪೈಸ್ ಕೊಟ್ಟಿದ್ದಾರೆ. ತನ್ನ ಮೊಟ್ಟ ಮೊದಲ ಮಾಡೆಲಿಂಗ್ ಶೂಟ್‌ ಫೋಟೋ ಶೇರ್ ಮಾಡಿಕೊಂಡಿದ್ದಾರೆ ಮಿಲಿಂದ್.

ನಾನು ಬಹಳ ಶೈ ಬಾಯ್ ಆಗಿದ್ದೆ, ಆದರೆ ಒಂದು ಗಂಟೆಯ ಕೆಲಸಕ್ಕೆ 50 ಸಾವಿರ ಕೊಡ್ತಾರೆ ಅಂದಾಗ ಅದನ್ನು ನಿರಾಕರಿಸಲು ಆಗಲಿಲಲ್ಲ ಎಂದಿದ್ದಾರೆ ನಟ. ಈ ಮಾಡೆಲಿಂಗ್ ಪ್ರಾಜೆಕ್ಟ್‌ಗೂ ಮೊದಲು ಮಿಲಿಂದ್ ಸೋಮನ್‌ಗೆ ಮಾಡೆಲಿಂಗ್‌ನಲ್ಲಿ ಭವಿಷ್ಯ ಇದೆ, ಇದೊಂದು ಉದ್ಯೋಗ ಅನ್ನೋದೆ ಗೊತ್ತಿರಲಿಲ್ಲವಂತೆ.

ಸೆಕ್ಸ್‌ ದೃಶ್ಯದಲ್ಲಿ ನಟಿಸಿದ್ದೀನಿ, ಬೆತ್ತಲಾಗೋದು ಯಾವ ಲೆಕ್ಕ?; ನಟ ಮಿಲಿಂದ್‌ ಕೊಟ್ಟ ಸ್ಪಷ್ಟನೆ!

ನನ್ನ ಮೊದಲ ಜಾಹೀರಾತು 1989ರಲ್ಲಿ. ಇದಕ್ಕೂ ಮುನ್ನ ಮಾಡೆಲಿಂಗ್ ಒಂದು ಉದ್ಯೋಗ ಅನ್ನೋದು ನನಗೆ ಗೊತ್ತಿರಲಿಲ್ಲ. ಅದೊಂದು ಸರ್ಪೈಸ್ ಫೋನ್ ಕಾಲ್ ಆಗಿತ್ತು. ನನ್ನನ್ನು ನೋಡಿದ ಯಾರೋ ಒಬ್ಬ ವ್ಯಕ್ತಿ ನನ್ನ ಫೋಟೋ ತೆಗೆಯಬೇಕು ಎಂದು ಕೇಳಿಕೊಂಡಿದ್ದರು. ಆದರೆ 1 ಗಂಟೆಗೆ 50 ಸಾವಿರ ಕೊಡುತ್ತಾರೆ ಎಂದಾಗ ನಾನು ಯಸ್ ಹೇಳಿದೆ ಎಂದಿದ್ದಾರೆ ಮಿಲಿಂದ್.

ಮಾಡೆಲಿಂಗ್‌ನಲ್ಲಿ ಸಕ್ಸಸ್ ಆದಾಗ ಮಿಲಿಂದ್ ನಟನೆ ಆರಂಭಿಸಿದ್ದರು. ಸೀ ಹಾಕ್ಸ್, ಕ್ಯಾಪ್ಟನ್ ವ್ಯೋಮ್‌ನಂತಹ ಟಿವಿ ಶೋಗಳ ಮೂಲಕ ಕೆರಿಯರ್ ಆರಂಭಿಸಿದ್ದರು. ಸದ್ಯ ನಟ ಆಲ್ಟ್‌ಬಾಲಾಜಿ ಸಿರೀಸ್‌ನಲ್ಲಿ ನಟಿಸುತ್ತಿದ್ದು, ಇದರಲ್ಲಿ ಬೋರಿಸ್ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ಮಿಲಿಂದ್ ಮೊದಲಬಾರಿಗೆ ತೃತೀಯಲಿಂಗಿಯಾಗಿ ನಟಿಸುತ್ತಿರುವುದು ವಿಶೇಷ.

ಶಿವದೇವಾಲಯಕ್ಕೆ ಹೋಗ್ತಾ ದಾರಿಯುದ್ದಕ್ಕೂ ಕಸ ಹೆಕ್ಕಿ, ಸ್ವಚ್ಛ ಮಾಡಿದ್ರು ಬಾಲಿವುಡ್ ನಟ

ಇತ್ತೀಚೆಗಷ್ಟೇ ನಟ ಗೋವಾ ಬೀಚ್‌ನಲ್ಲಿ ಬೆತ್ತಲೆಯಾಗಿ ಓಡಿ ಸುದ್ದಿಯಾಗಿದ್ದರು. ಮಿಲಿಂದ್, ಅವರ ಪತ್ನಿ ಹಾಗೂ ತಾಯಿಯೂ ಫಿಟ್ನೆಸ್ ಫ್ರೀಕ್. ಮೂವರೂ ಫಿಟ್ನೆಸ್ ಬಗ್ಗೆ ಹೆಚ್ಚು ಫೇಮಸ್ ಆಗಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!