
ತೆಲುಗು ಚಿತ್ರರಂಗದ ನಿರ್ಮಾಪಕ ದಿಲ್ ರಾಜು 50ನೇ ಹುಟ್ಟುಹಬ್ಬದ ಪ್ರಯುಕ್ತ ಇಡೀ ಭಾರತೀಯ ಚಿತ್ರರಂಗದ ಸ್ಟಾರ್ ನಟರನ್ನು ಆಹ್ವಾನಿಸಿ, ಅದ್ಧೂರಿಯಾಗಿ ಆಚರಿಸಿಕೊಂಡರು. ದೊಡ್ಡ ಸ್ಟಾರ್‌ಗಳನ್ನು ಒಟ್ಟಾಗಿ ಕಂಡ ಅಭಿಮಾನಿಗಳು ಫುಲ್ ಥ್ರಿಲಾಗಿದ್ದರು. ಆದರೆ ಜೂನಿಯರ್ ಎನ್‌ಟಿಆರ್ ಹಾಗೂ ನಂದಮುರಿ ಕಾಣಿಸಿಕೊಳ್ಳದ ಕಾರಣ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಪತ್ನಿಯನ್ನು ಕಳೆದುಕೊಂಡು, ಮಗಳ ವಯಸ್ಸಿನ ಮಹಿಳೆ ಜತೆ ನಿರ್ಮಾಪಕ ಮತ್ತೊಂದು ವೈವಾಹಿಕ ಬದುಕು ಆರಂಭ!
ಮೆಗಾ ಸ್ಟಾರ್ ಚಿರಂಜೀವಿ, ವಿಜಯ್ ದೇವರಕೊಂಡ, ಪವನ್ ಕಲ್ಯಾಣ್, ರಾಮ್ ಚರಣ್, ಮಹೇಶ್ ಬಾಬು ಜೊತೆ ಕನ್ನಡದಿಂದ ಯಶ್, ಪ್ರಶಾಂತ್ ನೀಲ್ ಹಾಗೂ ವಿಜಯ್ ಕಿರಗಂದೂರ್ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ನಟಿಯರಲ್ಲಿ ಸಮಂತಾ ಹಾಗೂ ಪೂಜಾ ಹೆಗ್ಡೆ ಅವರನ್ನೂ ಫೋಟೋಗಳಲ್ಲಿ ಕಾಣಬಹುದು. ಆದರೆ ನಂದಮುರಿ ಹಾಗೂ ಜೂನಿಯರ್ ಎನ್‌ಟಿಆರ್ ಯಾಕೆ ಬಂದಿರಲಿಲ್ಲ ಎಂಬುದು ಎಲ್ಲರ ಪ್ರಶ್ನೆಯಾಗಿತ್ತು.
ಕೆಲವು ಮೂಲಗಳ ಮಾಹಿತಿ ಪ್ರಕಾರ ನಂದಮುರಿಯನ್ನು ಆಹ್ವಾನಿಸದ ಕಾರಣ ಜೂನಿಯರ್ ಎನ್‌ಟಿಆರ್ ಭಾಗಿಯಾಗಿರಲಿಲ್ಲ. ಅಲ್ಲದೇ ದಿಲ್ ರಾಜು ನಿರ್ಮಾಣ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಕಲ್ಯಾಣ್ ರಾಮ್ ಕೂಡ ಬಂದಿರಲಿಲ್ಲ. ಬದಲಿಗೆ ಜೂನಿಯರ್ ಹಾಗೂ ಕಲ್ಯಾಣ್ ಇಬ್ಬರೂ ಹೈದರಾಬಾದ್‌ನಲ್ಲಿ ಇದ್ದರಂತೆ.
'ಸರಿಗಮಪ ಸೀಸನ್ 17 ' ವಿಜಯದ ಕಿರೀಟ ಮುಡಿಗೇರಿಸಿಕೊಂಡ ಶ್ರೀನಿಧಿ ಶಾಸ್ತ್ರಿ!
ದಿಲ್ ರಾಜು ಪುತ್ರ ಆರೋಜಿಸಿದ್ದಂತೆ ಬರ್ತಡೇ ಪಾರ್ಟಿಯಲ್ಲಿ ಭಾಗಿಯಾದ ಸ್ಟಾರ್‌ಗಳು ಭೇಷ್ ಎಂದಿದ್ದಾರೆ. ಮೇ ತಿಂಗಳಲ್ಲಿ ದಿಲ್ ರಾಜುಗೆ ಮತ್ತೊಂದು ಮದುವೆ ಮಾಡಿಸಿದ್ದು ಮಗಳೇ. ಪ್ರೈವೇಟ್ ವೆಡ್ಡಿಂಗ್ ಆಗಿದ್ದ ಕಾರಣ ಎಲ್ಲಿಯೂ ಮದುವೆ ಫೋಟೋ ಹೆಚ್ಚಾಗಿ ಲೀಕ್ ಆಗಿರಲಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.