ಶಾರುಖ್ ಖಾನ್ ನಿವಾಸಕ್ಕೆ ನುಗ್ಗಿದ ಇಬ್ಬರೂ ವ್ಯಕ್ತಿಗಳು ಯಾರು? ಗುಜರಾತಿನಿಂದ ಬಂದಿದ್ದು ಯಾಕೆ?

Published : Mar 08, 2023, 05:52 PM IST
ಶಾರುಖ್ ಖಾನ್ ನಿವಾಸಕ್ಕೆ ನುಗ್ಗಿದ ಇಬ್ಬರೂ ವ್ಯಕ್ತಿಗಳು ಯಾರು? ಗುಜರಾತಿನಿಂದ ಬಂದಿದ್ದು ಯಾಕೆ?

ಸಾರಾಂಶ

ಶಾರುಖ್ ಖಾನ್ ಮನೆಯೊಳಗೆ ನುಗ್ಗಿದ ಇಬ್ಬರೂ ವ್ಯಕ್ತಿಗಳು ಯಾರು? ಗುಜರಾತಿನಿಂದ ಬಂದಿದ್ದು ಯಾಕೆ ಎಂದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.  

ಬಾಲಿವುಡ್ ಕಿಂಗ್ ಖಾನ್ ಶಾರುಖ್​ ಖಾನ್​  ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ.  ಶಾರುಖ್ ಅವರನ್ನು ಪೂಜಿಸುವ ಆರಾದಿಸುವ ಕೋಟ್ಯಂತರ ಅಭಿಮಾನಿಗಳು ಇದ್ದಾರೆ. ಕೆಲವೊಮ್ಮೆ ಅಭಿಮಾನಿಗಳ ಅಭಿಮಾನ ಮಿತಿ ಮೀರುತ್ತದೆ. ತಮ್ಮ ನೆಚ್ಚಿನ ನಟನನ್ನು ಭೇಟಿಯಾಗಲು​ ಶಾರುಖ್​ ನಿವಾಸ ಮನ್ನತ್ ಮುಂದೆ ಬಂದು ನಿಂತಿರುತ್ತಾರೆ. ಆದರೆ ಈ ಬಾರಿ ಅಭಿಮಾನಿಗಳು ಮಿತಿ ಮೀರಿ ವರ್ತಿಸಿದ್ದಾರೆ. ಇಬ್ಬರೂ ಶಾರುಖ್ ಖಾನ್ ನಿವಾಸದೊಳಗೆಯೇ ನುಗ್ಗಿದ್ದಾರೆ. ಮನ್ನತ್ ಮನೆಯೊಳಗೆ ನುಗ್ಗಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಬಗ್ಗೆ ಹೆಚ್ಚಿನ ವಿವರ ಈಗ ಬಹಿರಂಗವಾಗುತ್ತಿದೆ.  ಇಬ್ಬರು ಅಭಿಮಾನಿಗಳು ಅರೆಸ್ಟ್​ ಆಗುವುದಕ್ಕೂ ಮೊದಲು  8 ಗಂಟೆಗಳ ಕಾಲ ಶಾರುಖ್​ ಖಾನ್​ ಅವರ ಮೇಕಪ್ ರೂಮಿನಲ್ಲಿ ಅಡಗಿ ಕುಳಿತಿದ್ದರು ಎನ್ನುವ ವಿಚಾರ ಬಹಿರಂಗವಾಗಿದೆ. ಅಷ್ಟಕ್ಕೂ ಆ ಇಬ್ಬರೂ ಅಭಿಮಾನಿಗಳು ಶಾರುಖ್ ಮನೆಯೊಳಗೆ ನುಗ್ಗಿದ್ದು ನಡು ರಾತ್ರಿ. 

ಶಾರುಖ್ ಖಾನ್​ ಅವರ ನಿವಾಸ ನೋಡಿದ್ರೆ ಅಚ್ಚರಿಯಾಗುತ್ತದೆ. ಅದು ಬರೀ ಮನೆಯಲ್ಲ ದೊಡ್ಡ ಅರಮನೆ. ಸಾಕಷ್ಟು ಕೊಠಡಿಗಳು ಅವರ ಬಂಗಲೆಯಲ್ಲಿವೆ. ಅನೇಕ ಸಂದರ್ಶನಗಳನ್ನು ಈ ಮನೆಯಲ್ಲೇ ಮಾಡಲಾಗುತ್ತದೆ. ಪ್ರಚಾರಕ್ಕೆ ಸಂಬಂಧಿಸಿದ ವಿಡಿಯೋಗಳ ಶೂಟಿಂಗ್ ಕೂಡ ಅವರ ಮನೆಯಲ್ಲೇ ನಡೆಯುತ್ತದೆ. ಶಾರುಖ್ ಮನೆಯೊಳಗೆ ನುಗ್ಗಿದ ಇಬ್ಬರೂ ವ್ಯಕ್ತಿಗಳು ಗುಜರಾತ್ ಮೂಲದವರು ಎಂದು ಹೇಳಲಾಗುತ್ತಿದೆ. 

ನೂರ್ ರೂಪಾಯಿಗೆ ಇಂಥವ್‌ ಬೇಜಾನ್ ಸಿಗತ್ತೆ; ಗೌರಿ ಖಾನ್‌ ಡಿಸೈನ್‌ ಮಾಡಿದ ಪೆಂಗ್ವಿನ್‌‌ಗೆ ನೆಟ್ಟಿಗರ ಟೀಕೆ

ಗುಜರಾತಿನಿಂದ ಬಂದ ಇಬ್ಬರೂ ವ್ಯಕ್ತಿಗಳು ರಾತ್ರೋರಾತ್ರಿ ಶಾರುಖ್ ಮನೆಯ ಕಾಂಪೌಂಡ್ ಹಾರಿ ಒಳಗೆ ಎಂಟ್ರಿ ಕೊಟ್ಟಿದ್ದಾರೆ ಎನ್ನಲಾಗಿದೆ. ಮನೆಗೆ ಎಂಟ್ರಿ ಕೊಟ್ಟವರೇ ಸೀದಾ ಶಾರುಖ್​ ಖಾನ್​ ಅವರ ಮೇಕಪ್​ ರೂಂ ಒಳಗೆ ಅಡಗಿ ಕುಳಿತರು. ಬೆಳಗ್ಗೆ 10.30ರ ಸುಮಾರಿಗೆ ಅವರಿಬ್ಬರನ್ನು ತನ್ನ ಮೇಕಪ್ ರೂಮಿನಲ್ಲಿ ನೋಡಿ ಶಾರುಖ್​ ಖಾನ್​ಗೆ ಅಚ್ಚರಿ ಆಯಿತು. ಸದ್ಯ ಆ ಅಭಿಮಾನಿಗಳನ್ನು ಪೊಲೀಸರು ಬಂಧಿಸಿದ್ದು ಆ ಇಬ್ಬರೂ ವ್ಯಕ್ತಿಗಳ ವಿರುದ್ಧ ಕೇಸ್​ ದಾಖಲಾಗಿದೆ. 

Gauri Khan: ಭಾರಿ ಸುದ್ದಿಯಾಗ್ತಿದೆ ಶಾರುಖ್​ ಮನೆ ಡಸ್ಟ್‌ಬಿನ್​! ಯಾಕೆ ಅಂತೀರಾ?

ಶಾರುಖ್ ಖಾನ್ ಸದ್ಯ ಪಠಾಣ್ ಸಿನಿಮಾದ ಸಕ್ಸಸ್‌ನಲ್ಲಿದ್ದಾರೆ. ಅನೇಕ ವರ್ಷಗಳ ಬಳಿಕ ಶಾರುಖ್ ತೆರೆಮೇಲೆ ಬಂದಿದ್ದು ದೊಡ್ಡ ಮಟ್ಟದ ಸಕ್ಸಸ್ ಕಂಡಿದ್ದಾರೆ. ಬಾಕ್ಸ್ ಆಫೀಸ್ ನಲ್ಲಿ ಸಿನಿಮಾ ಕೋಟಿ ಕೋಟಿ ಬಾಚಿಕೊಂಡಿದೆ. 1000 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಶಾರುಖ್ ಸದ್ಯ ಡಂಕಿ ಮತ್ತು ಜವಾನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಎರಡು ಸಿನಿಮಾಗಳ ಚಿತ್ರೀಕರಣ ನಡೆಯುತ್ತಿದೆ. ಡಂಕಿ ಚಿತ್ರಕ್ಕೆ ರಾಜ್ ಕುಮಾರ್ ಹಿರಾನಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಜವಾನ್ ಸಿನಿಮಾಗೆ ತಮಿಳಿನ ಖ್ಯಾತ ನಟ ಆಟ್ಲಿ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ.   

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಪವನ್ ಕಲ್ಯಾಣ್ ಮುಂದಿನ ಚಿತ್ರಕ್ಕೆ ಹೊಸ ಟ್ವಿಸ್ಟ್: ನಿರ್ದೇಶಕ ಯಾರು? ಅಭಿಮಾನಿಗಳಲ್ಲಿ ಕುತೂಹಲ
Vijay Trisha Wedding: ತ್ರಿಷಾ-ದಳಪತಿ ವಿಜಯ್‌ಗೆ ಮದುವೆ? ತ್ರಿಷಾ ಅಮ್ಮ ಕೊಟ್ಟ ಸಿಗ್ನಲ್‌ನಿಂದ ಹೊಸ ಚರ್ಚೆ!