ಕರಣ್ ಜೋಹಾರ್‌ ಹೇಳಿದ್ದಕ್ಕೆ ತೆಳ್ಳಗಾದೆ; ತೂಕ ಇಳಿಸಿಕೊಂಡ ಕಷ್ಟದ ಜರ್ನಿ ಬಿಚ್ಚಿಟ್ಟ ಸಾರಾ ಅಲಿ ಖಾನ್

By Vaishnavi Chandrashekar  |  First Published Mar 8, 2023, 5:13 PM IST

ಬಿಗ್ ಟ್ರಾನ್ಸ್‌ಫಾರ್ಮೇಷನ್‌ ಮಾಡಿಕೊಂಡ ಸಾರಾ ಅಲಿ ಖಾನ್. ಕರಣ್ ಜೋಹಾರ್‌ ಕಿವಿ ಮಾತಿನಿಂದ ವೃತ್ತಿ ಜೀವನ ಕಟ್ಟಿಕೊಂಡ ಸಾರಾ....


ಬಾಲಿವುಡ್ ಸಿಂಪಲ್ ನಟ ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ ಮುದ್ದಾದ ಮಗಳು ಸಾರಾ ಅಲಿ ಖಾನ್ ವಿದ್ಯಾಭ್ಯಾಸ ಮುಗಿಸಿಕೊಂಡು ಫ್ಯಾಮಿಲಿ ಟೈಮ ಎಂಜಾಯ್ ಮಾಡುವಾಗ ಸಿನಿಮಾ ಆಫರ್‌ ಬರುತ್ತದೆ. ಸಿಕ್ಕಾಪಟ್ಟೆ ದಪ್ಪಗಿದ್ದ ಕಾರಣ ಸುಮಾರು 40 ಕೆಜಿ ತೂಕ ಇಳಿಸಿಕೊಂಡ ಕಥೆ.

'ದಿನ ಬೆಳಗ್ಗೆ ಎದ್ದು ತೂಕ ಚೆಕ್ ಮಾಡಿದರೆ 85 ಕೆಜಿ ಇದ್ದು ಯಾವ ಬಟ್ಟೆನೂ ತೂರುತ್ತಿಲ್ಲ ಅಂದರ ತುಂಬಾ ಬೇಸರವಾಗುತ್ತದೆ. ಕಾಲೇಜ್‌ನಲ್ಲಿ ಇದ್ದಾಗ ನಾನು ತುಂಬಾ ದಪ್ಪಗಿದ್ದೆ ಹೇಗಿದ್ದರೂ ದಪ್ಪ ಇರುವೆ ಎಂದು ಹೆಚ್ಚಿಗೆ ತಿನ್ನುತ್ತಿದ್ದೆ. ಸಣ್ಣಗಾಗಿದ್ದರೂ ನಾನು ಪದೇ ಪದೇ ದಪ್ಪವಾಗುತ್ತಿರುವೆ. ಇತ್ತೀಚಿಗೆ ನಾನು ಮತ್ತೆ ದಪ್ಪಗಾಗಿದ್ದೆ. ಒಂದು ಸಲ ಸ್ನೇಹಿತರ ಜೊತೆ ದುಬೈಗೆ ಹೋಗಿದರೆ ಮಧ್ಯಾಹ್ನ ಊಟಕ್ಕೆ ಪಿಜಾ ರಾತ್ರಿ ಊಟಕ್ಕೆ ಜಂಕ್ ಫುಟ್ ಸೇವಿಸುತ್ತಿದ್ದೆ. ಡಯಟ್‌ ಟ್ರ್ಯಾಕ್‌ನಲ್ಲಿ ಇರುವುದು ತುಂಬಾ ಮುಖ್ಯವಾಗುತ್ತದೆ. ಇದ್ದಕ್ಕಿದ್ದಂತೆ ನಾನು ಸಣ್ಣಗಾಗುವುದಕ್ಕೆ ಮನಸ್ಸು ಮಾಡಿದ್ದು ಕರಣ್ ಜೋಹಾರ್‌ನಿಂದ. ಒಂದು ದಿನ ಮನೆಗೆ ಬಂದು ನಿನಗೆ ಎರಡು ಸಿನಿಮಾ ಆಫರ್ ಮಾಡುವೆ ಆದರೆ ನೀನು ಸಣ್ಣಗಾಗಬೇಕು ಎಂದರು. ಡಯಟ್ ಮಾಡಿ ವರ್ಕೌಟ್ ಮಾಡಿ ನಾನು 40 ಕೆಜಿ ತೂಕ ಇಳಿಸಿಕೊಂಡೆ. ಈಗ ನಾನು 56 ಕೆಜಿ ಬಂದು ನಿಂತಿರುವೆ'ಎಂದು ಸಾರಾ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

Tap to resize

Latest Videos

ಕೆಳಗೆ ಬೀಳುವುದೂ ಮುಖ್ಯ; ವೃತ್ತಿ ಜೀವನದಲ್ಲಿ ಮಾಡಿದ ತಪ್ಪುಗಳ ಬಗ್ಗೆ ಸಾರಾ ಅಲಿ ಖಾನ್ ಮಾತು

'ಇವತ್ತಿಗೂ ನಾನು ಬೆಳಗ್ಗೆ ತಿಂಡಿಗೆ ಚಾಕೋಲೇಟ್ ಬ್ರೌನಿ ತಿನ್ನಬಹುದು. ಏನೇ ತಿಂದರೂ ಎಂಜಾಯ್ ಮಾಡಿಕೊಂಡು ಸೇವಿಸುವೆ.ಫಿಟ್ ಆಗಿರುವುದಕ್ಕೆ ಮೋಟಿವೇಷನ್ ಮುಖ್ಯವಾಗುತ್ತದೆ. ಒಂದು ದಿನವೂ ತಪ್ಪದೆ ವರ್ಕೌಟ್ ಮಾಡುವೆ. ನಾನು ತುಂಬಾ ದಪ್ಪ ಇದ್ದೆ ಯಾವ ಕಾರಣಕ್ಕೆ ಒಳ್ಳೆಯ ಅರೋಗ್ಯ ಸಿಗುತ್ತಿರಲಿಲ್ಲ...60 ಕೆಜಿ ತೂಕ ದಾಟುತ್ತಿದ್ದಂತೆ ಆರೋಗ್ಯ ಸಮಸ್ಯೆ ಶುರುವಾಗಿತ್ತು. ಓವರ್ ವೇಟ್‌ ಇದ್ದಾಗ ಎಚ್ಚರಗೊಳ್ಳಬೇಕು. ಏನಂದ್ರೆ ಅದನ್ನು ತಿನ್ನಬಾರದು ಆಗ ನಮ್ಮ ಹಾರ್ಮೋನ್‌ನಲ್ಲಿ ಬದಲಾವಣೆಗಳು ಇರುತ್ತದೆ. ನೋಡಲು ಮಾತ್ರ ಸಣ್ಣ ಕಾಣಬೇಕು ಎಂದು ತಿನ್ನಬಾರದು ನಮ್ಮ ದೇಹಕ್ಕೆ ನಮ್ಮ ಹಾರ್ಮೋನ್‌ಗೆ ಏನು ಪರ್ಫೆಕ್ಟ್‌ ಅದನ್ನು ಸೇವಿಸಬೇಕು.' ಎಂದು ಸಾರಾ ಹೇಳಿದ್ದಾರೆ.

ನಟನೆಯಲ್ಲಿ ಮಾತ್ರವಲ್ಲ ಶಿಕ್ಷಣದಲ್ಲೂ ಮುಂದು ಈ ಬಾಲಿವುಡ್‌ ನಟಿಯರು

'ನನ್ನನ್ನು ನಾನು ಹೆಚ್ಚಿಗೆ ಕೇರ್ ಮಾಡದೇ ಇರುವುದನ್ನು ನೋಡಲು ಅಮ್ಮನಿಗೆ ಬೇಸರವಾಗುತ್ತಿತ್ತು. ನೀನು ಪಿಜಾ ತಿನ್ನುವುದರಿಂದ ನನಗೆ ಬೇಸರವಿಲ್ಲ ಆದರೆ ಎಂದೂ ತಿಂದಿಲ್ಲ ಅನ್ನೋ ರೀತಿ ತಿನ್ನುವುದು ಸರಿ ಅಲ್ಲ ಎಂದು ಅಮ್ಮ ಹೇಳುತ್ತಿದ್ದರು.  ಒಂದು ದಿನ ನಾನು ಇಷ್ಟೊಂದು ಸಣ್ಣ ಅಗುತ್ತೀನಿ ಅನ್ನೋ ನಂಬಿಕೆ ಇರಲಿಲ್ಲ ಹೀಗಾಗಿ ಆಹಾರವನ್ನು ಎಂಜಾಯ್ ಮಾಡುತ್ತಿದ್ದೆ. ಬಾಲ್ಯವನ್ನು ತುಂಬಾ ಎಂಜಾಯ್ ಮಾಡಿದ್ದೀನಿ. ಯಾರ ಮೇಲೂ ಕೋಪ ಮಾಡಿಕೊಳ್ಳುವುದಿಲ್ಲ ಸಿಟ್ಟು ದ್ವೇಷ ಕಟ್ಟಿಕೊಳ್ಳುವ ವ್ಯಕ್ತಿ ನಾನಲ್ಲ ಹೀಗಾಗಿ ನಾನು ಸದಾ ಸಂತೋಷದಿಂದ ಇರುವೆ. ಕಳೆದ 5 ದಿನಗಳಿಂದ ನಾನು ತುಂಬಾ ಬೇಸರದಲ್ಲಿದ್ದೆ ಆಗ ತುಂಬಾ ಸ್ವೀಟ್ ತಿಂದು ಖುಷಿ ಪಟ್ಟೆ, ಒಂದೆರಡು ದಿನ ಹೀಗೆ ಮಾಡಬಹುದು ಆದರೆ ಹೆಚ್ಚಿಗೆ ದಿನ ನಡೆಯುವುದಿಲ್ಲ' ಎಂದಿದ್ದಾರೆ. 
 

click me!