
ಕನ್ನಡ ಮಾತುಗಳನ್ನು ಕೇಳೋದು ಈಗ ಅಪರೂಪ ಎನ್ನುವಂತಾಗಿದೆ. ಅದ್ರಲ್ಲೂ ಮಕ್ಕಳ ಬಾಯಲ್ಲಿ ಕನ್ನಡ (Kannada) ಬರೋದೇ ಕಷ್ಟ. ಬೆಂಗಳೂರು ಮಾತ್ರವಲ್ಲ ಸಣ್ಣ ಪಟ್ಟಣಗಳಲ್ಲಿಯೂ ಮಕ್ಕಳು ಇಂಗ್ಲೀಷ್ ಮಾತನಾಡ್ತಿದ್ದಾರೆ. ಶಾಲೆಯಲ್ಲಿ ಮಾತ್ರವಲ್ಲ ಮನೆಯಲ್ಲೂ ಇಂಗ್ಲೀಷ್ ಪದಗಳೇ ಹೆಚ್ಚಾಗಿ ಕೇಳಸಿಗುತ್ವೆ. ಮಕ್ಕಳಿಗೆ ಕನ್ನಡ ಕಲಿಸಲು ಪಾಲಕರೂ ಆಸಕ್ತಿ ತೋರುತ್ತಿಲ್ಲ. ಸೆಲೆಬ್ರಿಟಿಗಳ ಮಕ್ಕಳಿಗೆ ಕನ್ನಡ ಬರುತ್ತೆ ಅನ್ನೋದನ್ನು ನಂಬೋದೇ ಕಷ್ಟವಾಗಿದೆ. ಕಳೆದು ಹೋಗ್ತಿರುವ ಕನ್ನಡದ ಮಧ್ಯೆ ಸ್ಯಾಂಡಲ್ವುಡ್ ನಟಿ ಮೇಘನಾ ರಾಜ್ (sandalwood actress Meghana Raj) ಮಗ ರಾಯನ್ ಎಲ್ಲರ ಗಮನ ಸೆಳೆದಿದ್ದಾನೆ. ಸುಂದರವಾಗಿ ಕನ್ನಡ ಹಾಡನ್ನು ಹೇಳಿರುವ ರಾಯನ್ (Rayan) ವಿಡಿಯೋವನ್ನು ಮೇಘನಾ ರಾಜ್ ಹಂಚಿಕೊಂಡಿದ್ದಾರೆ.
ಇನ್ಸ್ಟಾಗ್ರಾಮ್ ನಲ್ಲಿ ಮೇಘನಾ ರಾಜ್, ರಾಯನ್ ವಿಡಿಯೋ ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ರಾಯನ್, ಹಚ್ಚೇವು ಕನ್ನಡದ ದೀಪ ಅಂತ ಹಾಡನ್ನು ಹಾಡ್ತಿದ್ದಾನೆ. ಮುದ್ದಾದ ಧ್ವನಿಯಲ್ಲಿ ರಾಯನ್ ಹೇಳ್ತಿರುವ ಹಾಡನ್ನು ಕೇಳಲು ಖುಷಿಯಾಗುತ್ತೆ. ವಿಡಿಯೋ ಹಾಕಿರುವ ಮೇಘನಾ, ತನ್ನ ಮಗನ ಹಾಡಿನ ಬಗ್ಗೆ ವಿವರವಾದ ಶೀರ್ಷಿಕೆ ನೀಡಿದ್ದಾರೆ.
ಅನುಪಮಾಗೆ ಮುತ್ತಿಟ್ಟ ಕೃಷಿ ತಾಪಂಡ, ನನ್ನ ಲೋಕ ನೀನೆಂದ ನಿರೂಪಕಿ
ಎಂತ ಹೆಮ್ಮೆಯ ಗಳಿಗೆ! ನಿನ್ನೆ ರಾಯನ್ ಹಚ್ಚೇವು ಕನ್ನಡದ ದೀಪ ಎಂದು ಹಾಡ್ತಿದ್ದ. ನಿನಗೆ ಈ ಹಾಡು ಹೇಗೆ ಗೊತ್ತು ಅಂತ ಕೇಳ್ದಾಗ ಸ್ಕೂಲಲ್ಲಿ ಹೇಳ್ಕೊಟ್ರು ಅಮ್ಮ ಎಂದ. ನಾನು ರೆಕಾರ್ಡ್ ಮಾಡಿಕೊಂಡೆ. ಮನೆ ಮಾತ್ರ ಅಲ್ಲ. ನಮ್ಮ ಸುತ್ತ ಇರುವ ವಾತಾವರಣದ ಪ್ರಭಾವ ನಮ್ಮ ಮೇಲಿರುತ್ತೆ. ನಾನೊಬ್ಬ ಕನ್ನಡಿಗಳಾಗಿ ಪ್ರತಿನಿತ್ಯ ನನ್ನ ಭಾಷೆ ಸಂಭ್ರಮಿಸುತ್ತೇನೆ. ಇನ್ನು ಮುಂದೆ ಈ ತಿಂಗಳನ್ನ ನಮ್ಮ ನವೆಂಬರ್ ಎಂದು ಕರೆಯೋಣ? ಎಂದು ಮೇಘನಾ ರಾಜ್ ಬರೆದಿದ್ದಾರೆ.
ರಾಯನ್ ಕನ್ನಡ ಹಾಡಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈಗಿನ ಮಕ್ಕಳಿಗೆ ಇದ್ರ ಅವಶ್ಯಕತೆಯಿದೆ. ಒಳ್ಳೆಯದಾಗಲಿ, ಕನ್ನಡ ಕಂದ, ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಎಂದೆಲ್ಲ ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಮೇಘನಾ ರಾಜ್, ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದಾರೆ. ರಾಯನ್ ಗೆ ಈಗ ನಾಲ್ಕು ವರ್ಷ. ಅಕ್ಟೋಬರ್ 22, 2020ರಂದು ಮೇಘನಾ ರಾಜ್, ರಾಯನ್ ಗೆ ಜನ್ಮ ನೀಡಿದ್ದರು. ಈ ಬಾರಿ ರಾಯನ್ ಹುಟ್ಟುಹಬ್ಬವನ್ನು ಮೇಘನಾ ರಾಜ್, ಜುರಾಸಿಕ್ ಪಾರ್ಕ್ ಶೈಲಿಯಲ್ಲಿ ಆಚರಿಸಿದ್ದಾರೆ. ರಾಯನ್ ಹುಟ್ಟುಹಬ್ಬಕ್ಕೆ ಬಂದು, ದ್ರುವ ಸರ್ಜಾ ಸಂಭ್ರಮಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ರಾಯನ್ ನನ್ನ ಮೊದಲ ಮಗ ಅಂತ ದ್ರುವ ಸರ್ಜಾ ಹೇಳಿದ್ದರು. ಅಣ್ಣನ ಮಗನನ್ನು ತಮ್ಮ ಮಗನಂತೆ ನೋಡ್ತಿರುವ ದ್ರುವ ಸರ್ಜಾ, ರಾಯನ್ ಮೇಲೆ ಅಪಾರ ಪ್ರೀತಿ ಹೊಂದಿದ್ದಾರೆ. ಮೇಘನಾ ರಾಜ್ ಕೂಡ ಮಗನ ಜೊತೆ ಅಮೂಲ್ಯ ಸಮಯವನ್ನು ಕಳೆಯುತ್ತಿದ್ದು, ಸಾಕಷ್ಟು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ತಿರುತ್ತಾರೆ.
ಮದುವೆ ಉಡುಗೆಯಲ್ಲೇ ರೀಲ್ಸ್ ಮಾಡಿದ ನಟಿ, ಫ್ಯಾನ್ಸ್ ಗೆ ಮಹತ್ವದ ಸಂದೇಶ
ನಟಿ ಮೇಘನಾ ರಾಜ್ ಹಾಗೂ ನಟ ಚಿರಂಜೀವಿ ಸರ್ಜಾ (Actor Chiranjeevi Sarja) 2018ರಲ್ಲಿ ಮದುವೆಯಾಗಿದ್ದರು. ಆದ್ರೆ ಚಿರಂಜೀವಿ ಸರ್ಜಾ ಪ್ರೀತಿಯನ್ನು ಮೇಘನಾ ಕಳೆದುಕೊಳ್ಳಬೇಕಾಯ್ತು. 2020ರಲ್ಲಿ ಚಿರಂಜೀವಿ ಸರ್ಜಾ ಇಹಲೋಕ ತ್ಯಜಿಸಿದ್ರು. ಆಗ ತುಂಬು ಗರ್ಭಿಣಿಯಾಗಿದ್ದ ಮೇಘನಾ ರಾಜ್ ಬಾಳಲ್ಲಿ ಬೆಳಕು ತಂದಿದ್ದು ರಾಯನ್. ನಟ ಸುಂದರ್ ರಾಜ್ (actor Sundar Raj) ಹಾಗೂ ನಟಿ ಪ್ರಮೀಳಾ ಜೋಷಾಯಿ (Actress Pramila Joshai) ಯವರ ಏಕೈಕ ಪುತ್ರಿ ಮೇಘನಾ ರಾಜ್. ಕನ್ನಡ, ಮಲಯಾಳಂ ಚಿತ್ರಗಳಲ್ಲಿ ಬ್ಯುಸಿ ಇರುವ ಮೇಘನಾ ರಾಜ್ ಮೊದಲ ಚಿತ್ರ ಪುಂಡ. ಆದ್ರೆ ಅವರಿಗೆ ಬ್ರೇಕ್ ನೀಡಿದ ಸಿನಿಮಾ ರಾಜಾಹುಲಿ. ಬಹುಪರಾಕ್, ಆಟಗಾರ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿರುವ ಮೇಘನಾ ರಾಜ್ ಸದ್ಯ ಅಥರ್ವ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ, ಚಿತ್ರ ಡಿಸೆಂಬರ್ 13ರಂದು ತೆರೆಗೆ ಬರಲಿದೆ. ಮೇಘನಾ ರಾಜ್ ಜೊತೆ ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ನಟಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.