ಇನ್ಮುಂದೆ ನಾನು ಸಿಂಗಲ್ ಆಗಿ ಇರಲ್ಲ, ಬಟ್ಟೆ ಬಿಚ್ಚಿ ಕುಣಿಯಲ್ಲ ಎಂದ ನಟಿ ಸಮಂತಾ!

Published : Nov 08, 2024, 02:56 PM IST
ಇನ್ಮುಂದೆ ನಾನು ಸಿಂಗಲ್ ಆಗಿ ಇರಲ್ಲ, ಬಟ್ಟೆ ಬಿಚ್ಚಿ ಕುಣಿಯಲ್ಲ ಎಂದ ನಟಿ ಸಮಂತಾ!

ಸಾರಾಂಶ

ಸಮಂತಾ ಏನೋ ಹೇಳಿದ್ದಾರೆ, ಅದಕ್ಕೆ ಕೆಲಸವಿಲ್ಲದ ಕೆಲವರು ಫೀಲಿಂಗ್‌ಗೆ ಹೋಗಿದ್ದಾರೆ ಎನ್ನಲಾಗಿದೆ. ನಟಿ ಸಮಂತಾ ತಮ್ಮ ಮಾಜಿ ಪತಿ ನಾಗಚೈತನ್ಯ ಮರುಮದುವೆಯಾದ ಬಳಿಕ ತಾವೂ ಕೂಡ ದಿಟ್ಟ ನಿರ್ಧಾರಕ್ಕೆ ಬಂದಿದ್ದು...

ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ (Samantha Ruth Prabhu) ಅವರು ಯಾರಿಗೆ ಗೊತ್ತಿಲ್ಲ. ಎಸ್‌ಎಸ್‌ ರಾಜಮೌಳಿ ನಿರ್ದೇಶನದ 'ಈಗ' ಸಿನಿಮಾ ಬಳಿಕವಂತೂ ನಟಿ ಸಮಂತಾ ಅವರು ಒಂಥರಾ ಇಂಟರ್‌ನ್ಯಾಷನಲ್ ಲೆವಲ್ ಖ್ಯಾತಿ ಹೊಂದಿದವರು. ತಮಿಳು ಹಾಗೂ ತೆಲುಗು ಸಿನಿಮಾ ಉದ್ಯಮದಲ್ಲಿ ನಟಿ ಸಮಂತಾ ಅವರು ಭಾರೀ ಛಾಪು ಮೂಡಿಸಿದ್ದು, ಅವರಿಗೆ ಅಸಂಖ್ಯಾತ ಅಭಿಮಾನಿಗಳು ಇದ್ದಾರೆ. ತೆಲುಗು ನಟ ನಾಗಚೈತನ್ಯ ಅವರನ್ನು ಲವ್ ಮಾಡಿ ಮದುವೆಯಾಗಿದ್ದ ನಟಿ ಸಮಂತಾ, ಬಳಿಕ ಅವರಿಂದ ಡಿವೋರ್ಸ್ ಪಡೆದು ಸದ್ಯ ಸಿಂಗಲ್ ಆಗಿದ್ದಾರೆ. 

ಇತ್ತೀಚೆಗೆ ಸಮಂತಾ ಮಾಜಿ ಪತಿ ನಾಗಚೈತನ್ಯ (Naga Chaitanya) ಅವರು ಮತ್ತೊಬ್ಬರು ನಟಿ ಶೋಭಿತಾ ದುಲಿಪಾಲ (Shobhita Dhulipala) ಅವರನ್ನು ಮದುವೆಯಾಗಿದ್ದಾರೆ. ಅ ಬಳಿಕ ಸಮಂತಾ ಏನು ಮಾಡಬಹುದು ಎಂದು ಅನೇಕರು ಯೋಚಿಸಿದ್ದರು. ಇದೀಗ ಸಮಂತಾ ಹೇಳಿರುವ ಹೇಳಿಕೆ ಸಾಕಷ್ಟು ವೈರಲ್ ಆಗುತ್ತಿದೆ. ನಟಿ ಸಮಂತಾ ಈ ಹೇಳಿಕೆಯಿಂದ ಏನೇನೋ ಕನಸು ಕಾಣುತ್ತಿದ್ದ ಪಡ್ಡೆ ಹೈಕ್ಳಿಗೆ ಭಾರೀ ಸಮಸ್ಯೆ  ಆಗೋ ತರಹ ಕೆಲವರಿಗೆ ಕಾಣಿಸುತ್ತಿದೆಯಂತೆ!

ಕನ್ನಡ ಹಾಡು ಹಾಡಿಸಿದ್ದು ಮೊದಲು ವಿಷ್ಣು ಸರ್, ಸೋನು ನಿಗಮ್ ಹೇಳಿದ ಗುಟ್ಟು!

ಹಾಗಿದ್ದರೆ ನಟಿ ಸಮಂತಾ ಹೇಳಿರೋದೇನು? ಹೌದು, ಸಮಂತಾ ಏನೋ ಹೇಳಿದ್ದಾರೆ, ಅದಕ್ಕೆ ಕೆಲಸವಿಲ್ಲದ ಕೆಲವರು ಫೀಲಿಂಗ್‌ಗೆ ಹೋಗಿದ್ದಾರೆ ಎನ್ನಲಾಗಿದೆ. ನಟಿ ಸಮಂತಾ ತಮ್ಮ ಮಾಜಿ ಪತಿ ನಾಗಚೈತನ್ಯ ಮರುಮದುವೆಯಾದ ಬಳಿಕ ತಾವೂ ಕೂಡ ದಿಟ್ಟ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ತಮ್ಮ ನಿರ್ಧಾರವನ್ನು ಸಹ ಅಷ್ಟೇ ದಿಟ್ಟತನದಿಂದ ಹೇಳಿಕೊಂಡಿದ್ದಾರೆ. 

 'ಇನ್ಮುಂದೆ ನಾನು ಸಿಂಗಲ್ ಆಗಿ ಇರಲ್ಲ, ಬಟ್ಟೆ ಬಿಚ್ಚಿ ಮೈ ತೋರಿಸಿ ಕುಣಿಯಲ್ಲ..ಎಂದಿದ್ದಾರೆ ನಟಿ ಸಮಂತಾ. ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ಜೋಡಿಯ 'ಪುಷ್ಪಾ' ಸಿನಿಮಾದಲ್ಲಿ ಬಟ್ಟೆ ಬಿಚ್ಚಯೋ ಅಥವಾ ಸರಿಯಾಗಿ ಬಟ್ಟೆಯನ್ನೇ ಹಾಕಿಕೊಳ್ಳದೆಯೋ 'ಥಕಧಿಮಿ' ಅಂತ ಕುಣಿದಿದ್ದ ನಟ ಸಮಂತಾ, ಇನ್ನು ಹಾಗೆಲ್ಲಾ ಮಾಡುವುದಿಲ್ಲವಂತೆ. ಅವರೀ ನಿರ್ಧಾರವನ್ನು ಕೆಲವರು ಸಮರ್ಥಿಸಿ ನಟಿ ಸಮಂತಾ ನಿರ್ಧಾರಕ್ಕೆ ಮೆಚ್ಚಿ ಮಾತನಾಡಿದ್ದಾರೆ. 

ಆದರೆ, ಇನ್ನೂ ಕೆಲವರು ಸಹಜವಾಗಿ 'ಲೋಕೋ ಭಿನ್ನ ರುಚಿಃ..' ಎಂಬಂತೆ ವಿಭಿನ್ನವಾಗಿ ಕಾಮೆಂಟ್ ಮಾಡಿದ್ದಾರೆ. 'ನಾಗಚೈತನ್ಯ ಮತ್ತೊಂದು ಮದುವೆಯಾದ ಮೇಲೆ ಸಮಂತಾಗೆ ಬುದ್ಧಿ ಬಂದಿದೆ, ಇನ್ಮುಂದೆ ತಾವಿಬ್ಬರು ಮತ್ತೆ ಒಂದಾಗೋ ಚಾನ್ಸ್ ಇಲ್ಲವೆ ಇಲ್ಲ ಎಂಬುದು ಗೊತ್ತಾಗಿದೆ. ಹೀಗಾಗಿ, ಇನ್ನು ತಾವೂ ಕೂಡ ಮತ್ತೊಂದು ಮದುವೆ ಆಗುವುದು ಒಳ್ಳೆಯದು ಎನಿಸಿರಬಹುದು. ಎಷ್ಟು ದಿನ ಅಂತ ಸಿಂಗಲ್ ಆಗಿ ಇರೋಕೆ ಆಗುತ್ತೆ ಎನ್ನಿಸಿರಬೇಕು. ವಯಸ್ಸು ಯಾವತ್ತೂ ಹೀಗೇ ಇರುತ್ತಾ..? ಎಂದಿದ್ದಾರೆ ಹಲವರು!

ಹಾಗಿದ್ರೆ ಶಿವಣ್ಣಂಗೆ 'ಜೈ' ಅಂದೇಬಿಟ್ರು ದರ್ಶನ್ ಫ್ಯಾನ್ಸ್; ಶಿವರಾಜ್‌ಕುಮಾರ್ ಹೇಳಿದ್ದೇನು?

ಒಟ್ಟಿನಲ್ಲಿ, ಇನ್ನು ಸಮಂತಾ ಐಟಂ ಡಾನ್ಸ್ ಮಾಡೋದಿಲ್ಲ ಎಂದು ಘೋಷಿಸಿಯಾಗಿದೆ. ಜೊತೆಗೆ, ಮರುಮದುವೆ ಆಗುವುದಾಗಿಯೂ ಹೇಳಿದ್ದಾರೆ. ಯಾರಾದರೂ ಸದ್ಯಕ್ಕೆ ಸಿಂಗಲ್ ಆಗಿರೋ ನಟಿ ಸಮಂತಾ ಅವರನ್ನು ಮದುವೆಯಾಗಿ ಮಿಂಗಲ್ ಆಗೋ ಆಸೆ ಇದ್ದರೆ ಅವರನ್ನು ಅಪ್ರೋಚ್ ಮಾಡಬಹುದೇನೋ! ಯಾವುದಕ್ಕೂ ಎರಡೆರಡು ಸಾರಿ ಯೋಚಿಸಿ ಅಂತಿದ್ದಾರೆ ಸಮಂತಾ ಅಭಿಮಾನಿ ಅಲ್ಲದವರು. ಯಾಕೆಂದು ಅವರೇನೂ ಹೇಳಿಲ್ಲ, ನಿಮಗೆ ಬೇಕಾಗಿದ್ದರೆ ಕೇಳಿಕೊಳ್ಳಿ.. !

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!