ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್‌ಗಳಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲದಿದ್ದರೂ ಸ್ಟಾರ್ ನಟರ ಫ್ಯಾನ್ಸ್‌ಗಳಲ್ಲಿ ಶುರುವಾಗಿರುವ 'ಸ್ಟಾರ್‌ವಾರ್' ಇಲ್ಲಿಗೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಕೆಲ ದಿನಗಳಿಂದ ಶಾಂತವಾಗಿದೆ ಎನ್ನುವಾಗಲೇ ಮತ್ತೆ ಸ್ಯಾಂಡಲ್‌ವುಡ್ ಫ್ಯಾನ್ಸ್ ವಾರ್ ಬೆಂಕಿ ಹೊತ್ತಿಕೊಂಡಿದೆ.
ಬೆಂಗಳೂರು (ಏ.5): ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್‌ಗಳಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲದಿದ್ದರೂ ಸ್ಟಾರ್ ನಟರ ಫ್ಯಾನ್ಸ್‌ಗಳಲ್ಲಿ ಶುರುವಾಗಿರುವ 'ಸ್ಟಾರ್‌ವಾರ್' ಇಲ್ಲಿಗೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಕೆಲ ದಿನಗಳಿಂದ ಶಾಂತವಾಗಿದೆ ಎನ್ನುವಾಗಲೇ ಮತ್ತೆ ಸ್ಯಾಂಡಲ್‌ವುಡ್ ಫ್ಯಾನ್ಸ್ ವಾರ್ ಬೆಂಕಿ ಹೊತ್ತಿಕೊಂಡಿದೆ.
ಆರ್‌ಸಿಬಿ ಸೋಲಿಗೆ ದೊಡ್ಡಮನೆ ಸೊಸೆ ಬಗ್ಗೆ ಕೀಳಾಗಿ ಮಾತಾಡಿರುವ ಅವಿವೇಕಿಗಳು. ಅಭಿಮಾನದ ಹೆಸರಲ್ಲಿ ಇಷ್ಟೊಂದು ಕೀಳುಮಟ್ಟಕ್ಕೆ ಇಳಿಯೋದಾ? ಇದನ್ನು ಅಭಿಮಾನ ಅಂತಾರಾ? ಅಲ್ಲ, ಅಂಧಾಭಿಮಾನ, ಮಾನಸಿಕ ಸ್ಥಿಮಿತ ಕಳೆದುಕೊಂಡ ಹುಚ್ಚರು ಮಾತ್ರ ಹೀಗೆ ಒಬ್ಬ ಮಹಿಳೆ ಬಗ್ಗೆ ಕೀಳಾಗಿ ಮಾತಾಡಲು ಸಾಧ್ಯ.
ಹೊಸಪೇಟೆಯಲ್ಲಿ 'ಯುವ' ಸಂಭ್ರಮ: ಅಪ್ಪು ಹಾಡಿಗೆ ಮೊಬೈಲ್ ಟಾರ್ಚ್ ಹಾಕಿ ನಮನ ಸಲ್ಲಿಸಿದ ಅಭಿಮಾನಿಗಳು!
ಗಜಪಡೆ ಹೆಸರಿನಲ್ಲಿ ನಕಲಿ ಐಡಿ ಸೃಷ್ಟಿಸಿ ಅಶ್ವಿನಿ ಪುನೀತ್ ಗೆ ಅವಾಚ್ಯವಾಗಿ ನಿಂದಿಸಿರುವ ದುರುಳರು. ಸ್ಟಾರ್ ನಟರೊಬ್ಬರ ಅಭಿಮಾನಿ ಎಂದು ಹೇಳಿಕೊಂಡಿರೋ 'ಗಜಪಡೆ' ಕೆಟ್ಟದಾಗಿ ಬರೆದು ಪೋಸ್ಟ್ ಮಾಡಿರುವ ಕಿಡಿಗೇಡಿ. ಕಿಡಿಗೇಡಿಗಳು ಮಾಡಿರುವ ಪೋಸ್ಟ್ ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು, ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಆಗ್ರಹಿಸಿದ್ದಾರೆ.
ಘಟನೆ ಹಿನ್ನೆಲೆ ಏನು?
ಆ ಬಾರಿಯೂ ಆರ್‌ಸಿಬಿ ಐಪಿಎಲ್‌ನಲ್ಲಿ ಸೋಲುವ ಮುನ್ಸೂಚನೆ ಸಿಕ್ಕಿದೆ. ಇದುವರೆಗೆ ಆಡಿದ ನಾಲ್ಕು ಮ್ಯಾಚ್‌ಗಳಲ್ಲಿ ಮೂರರಲ್ಲಿ ಸೋತು ಒಂದು ಪಂದ್ಯ ಗೆದ್ದಿದೆ. ಈ ಬಾರಿ ಮತ್ತೆ ಆರ್‌ಸಿಬಿ ಸೋಲುತ್ತಿರುವುದರಿಂದ ಹತಾಸೆಗೊಂಡಿರುವ ಆರ್‌ಸಿಬಿ ಅಭಿಮಾನಿಗಳು ಕೆಲವರು ಮ್ಯಾನೇಜ್‌ಮೆಂಟ್ ಸರಿಯಿಲ್ಲ ಎಂದು ದೂರುತ್ತಿದ್ದಾರೆ. ಆದರೆ ಇತ್ತ ಸ್ಯಾಂಡಲ್‌ನಲ್ಲಿ ಸ್ಟಾರ್ ವಾರ್ ಮಾಡುವ ಕಿಡಿಗೇಡಿಗಳು ಐಪಿಎಲ್ ಆಟದಲ್ಲೂ ಮೂಗು ತೂರಿಸಿದ್ದಾರೆ. ಆರ್‌ಸಿಬಿ ಸೋಲಿಗೆ ಅಶ್ವಿನಿ ಪುನೀತ್ ರಾಜ್‌ಕುಮಾರರನ್ನ ಕರೆಸಿದ್ದೇ ಕಾರಣ ಎನ್ನುತ್ತಿದ್ದಾರೆ. ಆರ್‌ಸಿಬಿ ಅನಬಾಕ್ಸಿಂಗ್ ಇವೆಂಟ್‌ಗೆ ಹೋಗಿದ್ದ ಅಶ್ಚಿನಿ ಪುನೀತ್ ಇದೊಂದೇ ನೆಪ ಇಟ್ಟುಕೊಂಡು ದರ್ಶನ್ ಫ್ಯಾನ್ಸ್ ಎಂದು ಹೇಳಿಕೊಂಡಿರುವ ಮನೋರೋಗಿ ಅಭಿಮಾನಿಯೊಬ್ಬ ದೊಡ್ಡ ಮನೆ ಸೊಸೆ ವಿರುದ್ಧ ಇಲ್ಲ ಸಲ್ಲದ ಪೋಸ್ಟ್ ಮಾಡಿದ್ದಾನೆ. 'ಗಂಡ ಇಲ್ಲದ ಮಹಿಳೆಯನ್ನ ಕರೆಸಿದ್ದೇ ಆರ್‌ಸಿಬಿ ಸೋಲಿಗೆ ಕಾರಣ' ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಕಿಡಿಗೇಡಿಗಳು. ಕಿಡಿಗೇಡಿಗಳ ಕೃತ್ಯವನ್ನು ರಾಜ್ಯಾದ್ಯಂತ ಅನೇಕರು ತೀವ್ರವಾಗಿ ಖಂಡಿಸಿದ್ದಾರೆ.
ರೊಚ್ಚಿಗೆದ್ದ ಪುನೀತ್ ಫ್ಯಾನ್ಸ್
ರಾಜ್ಯದಲ್ಲಿ ಅಪ್ಪು ಅಭಿಮಾನಿಗಳು ಕೋಟ್ಯಂತರ ಸಂಖ್ಯೆಯಲ್ಲಿದ್ದಾರೆ. ಅಪ್ಪು ನಿಧನದ ಬಳಿಕ ಅಶ್ವಿನಿಯವರಲ್ಲಿ ಅಪ್ಪುವನ್ನು ಕಾಣುತ್ತಿರುವ ಅಭಿಮಾನಿಗಳು. ಇಂಥ ದೊಡ್ಡಮನೆ ಸೊಸೆ ಬಗ್ಗೆ ಕೆಟ್ಟದಾಗಿ ಪೋಸ್ಟ್ ಮಾಡಿದರೆ ಸುಮ್ಮನೆ ಬಿಡುತ್ತಾರಾ? ಪೋಸ್ಟ್ ವೈರಲ್ ಬಳಿಕ ರಾಜ್ಯಾದ್ಯಂತ ಅಪ್ಪು ಅಭಿಮಾನಿಗಳು ಅಕ್ರೋಶ ವ್ಯಕ್ತಪಡಿಸಿದ್ದು, ಇದೀಗ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಕಮಿಷನರ್ ಭೇಟಿಯಾಗಿ ಆರೋಪಿಗಳ ದೂರು ಸಲ್ಲಿಸಿದ ಅಪ್ಪು ಹುಡುಗರ ಸಂಘಟನೆ.
ಅಪ್ಪು ಅಭಿಮಾನಿ ಅಂಜಿ ಆರೋಪವೇನು?
ಕಳೆದ ಮೂರ್ನಾಲ್ಕು ದಿನದಿಂದ ಫೇಕ್ ಐಡಿ ಪೇಜ್‌ಗಳಲ್ಲಿ ಅಶ್ವಿನಿ ಪುನೀತ್ ವಿರುದ್ಧ ಕೆಟ್ಟದಾಗಿ ಕಾಮೆಂಟ್ ಮಾಡ್ತಿದ್ದಾರೆ. ಅವರನ್ನು ಹಿಡಿದಾಗ 'ನಾವಲ್ಲ' ಅಂತಾರೆ. ತಿರುಗಾ ಇದೇ ಕೆಲಸ ಮಾಡ್ತಿದ್ದಾರೆ. ಕೆಲವು ಜನರು ಇದ್ದಾರೆ ಅವರೇ ಇಂಥ ಕೃತ್ಯ ನಡೆಸುತ್ತಿರುವುದು. ದರ್ಶನ್ ಅಭಿಮಾನಿಗಳು 'ಯುವ' ಸಿನಿಮಾದ ಪೈರಸಿ ಮಾಡ್ತಿದ್ದಾರೆ. ಗಜಪಡೆ ಪೋಸ್ಟ್ ವೈರಲ್ ಆದ್ಮೇಲೆ ಸುದೀಪ್ ಮತ್ತು ಅಪ್ಪು ಫ್ಯಾನ್ಸ್ ಗೆ ತಂದಿಕ್ಕಿ ತಮಾಷೆ ನೋಡಬೇಕು ಅಂತಾ ಸುದೀಪ್ ಅಭಿಮಾನಿ ಹೆಸರಲ್ಲೂ ಪೋಸ್ಟ್ ಮಾಡಿದ್ದಾರೆ ಎಂದು ದರ್ಶನ್ ಅಭಿಮಾನಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶೂಟಿಂಗ್ ಸ್ಪಾಟ್‌ನಲ್ಲಿ ಸೂಪರ್ ನ್ಯಾಚುರಲ್ ಪವರ್ ಅನುಭವವಾಗಿತ್ತು; ಸಪ್ತಮಿ ಗೌಡ ಮಾತಿನ ಮರ್ಮವೇನು?
ಇವರೆದಂಥ ವಿಕೃತ ಮನಸ್ಥಿತಿ?
ದರ್ಶನ್ ಅಭಿಮಾನಿ ಅನ್ನಿಸಿಕೊಂಡಿರೋರು ಫೇಕ್ ಪೇಜ್ ಗಳಲ್ಲಿ ದೊಡ್ಮನೆಯ ಎಲ್ಲರ ಬಗ್ಗೆಯೂ ಕೆಟ್ಟದಾಗಿ ಕಮೆಂಟ್ ಮಾಡ್ತಾರೆ. ಮೊದಲು ಇವ್ರನ್ನ ಗಡಿಪಾರು ಮಾಡಬೇಕು ಅದಕ್ಕಾಗಿಯೇ ಫೇಕ್ ಐಡಿ ವಿರುದ್ಧ ಕಮೀಷನರ್ ಗೆ ಕಂಪ್ಲೇಟ್ ಮಾಡೋಕೆ ಬಂದಿದ್ದೇವೆ. ಅಶ್ಬಿನಿ ಮೇಡಮ್ ಈಗಾಗಲೇ ಬೇಜಾರಲ್ಲಿ ಇದ್ದಾರೆ ಪದೇ ಪದೇ ಅವ್ರನ್ನ ಬೀದಿಗೆ ತರೋ ಕೆಲಸ ದರ್ಶನ್ ಅಭಿಮಾನಿಗಳು ಮಾಡ್ತಿದ್ದಾರೆ. ಇತರ ಕೆಟ್ಟದಾಗಿ ಮಾಡಿದ್ರೆ ಏನು ಸಿಗುತ್ತೆ ಅವರಿಗೆ? ಇದು ಫ್ಯಾನ್ಸ್ ವಾರ್ ಅಲ್ಲ, ಆದರೂ ಯಾಕೆ ಹೀಗೆ ಮಾಡ್ತಾರೆ ಗೊತ್ತಿಲ್ಲ. ಯುವ ಸಿನಿಮಾ, ಯುವರಾಜ್ ಕುಮಾರ ಬಗ್ಗೆಯೂ ಕೆಟ್ಟದಾಗಿ ಮಾತಾಡಿದ್ದಾರೆ, ಪೈರಸಿ ಮಾಡ್ತಾರೆ. ಏನು ಲಾಭ ಇದರಿಂದ. ಫ್ಯಾನ್ ಅನ್ನಿಸಿಕೊಂಡು ಇವುಗಳೆದಂಥ ಮನೋವಿಕೃತಿ ಎಂದು ಕಿಡಿಕಾರಿದ ಅಪ್ಪು ಫ್ಯಾನ್ ಲಕ್ಷ್ಮಣ್