ವಿಜಯ್ ಗೆ ರಶ್ಮಿಕಾ ಪ್ರೀತಿಯಿಂದ ಇಟ್ಟ ಹೆಸರೇನು? ಬರ್ತ್ ಡೇ ವಿಶ್ ಮಾಡಿ ಕ್ಯೂಟ್ ಫೋಟೋ ಹಂಚಿಕೊಂಡ ನಟಿ

Published : May 10, 2025, 11:08 AM ISTUpdated : May 12, 2025, 11:58 AM IST
ವಿಜಯ್ ಗೆ ರಶ್ಮಿಕಾ ಪ್ರೀತಿಯಿಂದ ಇಟ್ಟ ಹೆಸರೇನು? ಬರ್ತ್ ಡೇ ವಿಶ್ ಮಾಡಿ ಕ್ಯೂಟ್ ಫೋಟೋ ಹಂಚಿಕೊಂಡ ನಟಿ

ಸಾರಾಂಶ

ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಹುಟ್ಟುಹಬ್ಬಕ್ಕೆ ಇನ್‌ಸ್ಟಾಗ್ರಾಮ್‌ನಲ್ಲಿ ಶುಭಾಶಯ ಕೋರಿದ್ದಾರೆ. "ವಿಜ್ಜು" ಎಂದು ಪ್ರೀತಿಯಿಂದ ಸಂಬೋಧಿಸಿ, ಆರೋಗ್ಯ, ಸಂತೋಷ ಹಾರೈಸಿದ್ದಾರೆ. ಇಬ್ಬರ ಸಂಬಂಧದ ಗುಲ್ಲು ಹೆಚ್ಚುತ್ತಿದ್ದರೂ, ಅಧಿಕೃತ ಘೋಷಣೆಯಾಗಿಲ್ಲ. ಇಬ್ಬರೂ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದು, ರಶ್ಮಿಕಾ ಹಲವು ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (National crush Rashmika Mandanna), ಸಿನಿಮಾ ವಿಚಾರಕ್ಕೆ ಮಾತ್ರವಲ್ಲ ವೈಯಕ್ತಿಕ ವಿಚಾರಕ್ಕೂ ಸದಾ ಸುದ್ದಿಯಲ್ಲಿರುವ ನಟಿ. ಸೋಶಿಯಲ್ ಮೀಡಿಯಾದಲ್ಲೂ ರಶ್ಮಿಕಾ ಮಂದಣ್ಣ ಆಕ್ಟಿವ್ ಆಗಿದ್ದಾರೆ. ಅಭಿಮಾನಿಗಳ ಜೊತೆ ನಗ್ತಾ ಫೋಟೋಕ್ಕೆ ಫೋಸ್ ನೀಡುವ ರಶ್ಮಿಕಾರನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಇನ್ನು ಸೌತ್ ನಟ ವಿಜಯ್ ದೇವರಕೊಂಡ (South actor Vijay Devarakonda) ಹುಟ್ಟುಹಬ್ಬದಂದು ರಶ್ಮಿಕಾ ಸುದ್ದಿಯಾಗ್ಲಿಲ್ಲ ಅಂದ್ರೆ ಹೇಗೆ?. ನಿನ್ನೆ ಅಂದ್ರೆ ಮೇ 9ರಂದು ವಿಜಯ್ ದೇವರಕೊಂಡ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅಭಿಮಾನಿಗಳ ದಂಡೇ ವಿಜಯ್ ದೇವರಕೊಂಡಗೆ ಹುಟ್ಟುಹಬ್ಬದ ಶುಭಕೋರಿತ್ತು. ಲೇಟ್ ಆಗಿ ಬಂದ್ರೂ ಲೇಟೆಸ್ಟ್ ಆಗಿ ಸುದ್ದಿ ಮಾಡಿದ್ದಾರೆ ರಶ್ಮಿಕಾ ಮಂದಣ್ಣ. ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಬರ್ತ್ ಡೇಗೆ ವಿಶ್ ಮಾಡಿದ್ದಾರೆ. ಅಲ್ಲಿ, ರಶ್ಮಿಕಾ, ಪ್ರೀತಿಯಿಂದ ವಿಜಯ್ ಗೆ ಕರೆಯುವ ಹೆಸರು ರಿವೀಲ್ ಆಗಿದೆ. ಅಲ್ಲದೆ ರಶ್ಮಿಕಾ, ವಿಜಯ್ ದೇವರಕೊಂಡ ಅವರ ಅಪರೂಪದ ಫೋಟೋ ಹಂಚಿಕೊಂಡಿದ್ದು, ಫ್ಯಾನ್ಸ್ ಗೆ ಇಷ್ಟವಾಗಿದೆ.

ಇನ್ಸ್ಟಾ ಸ್ಟೋರಿಯಲ್ಲಿ ಏನಿದೆ? : ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಅವರ ಕೂಲ್ ಫೋಟೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಜೊತೆಗೆ, ನಾನು ಮತ್ತೊಮ್ಮೆ ತುಂಬಾ ತಡವಾಗಿ ಬಂದಿದ್ದೇನೆ. ಆದ್ರೆ ವಿಜ್ಜುಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ಪ್ರತಿದಿನವೂ ಬಹಳಷ್ಟು ಸಂತೋಷ, ಪ್ರೀತಿ, ಆರೋಗ್ಯ, ಸಂಪತ್ತು, ಶಾಂತಿ ಮತ್ತು ಇತರ ಎಲ್ಲಾ ಒಳ್ಳೆಯ ವಿಷಯಗಳಿಂದ ತುಂಬಿರಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ರಶ್ಮಿಕಾ ಬರೆದಿದ್ದಾರೆ. ರಶ್ಮಿಕಾ ಈ ಪೋಸ್ಟ್ ವೇಗವಾಗಿ ವೈರಲ್ ಆಗಿದೆ.  ರಶ್ಮಿಕಾ, ತಮ್ಮ ಪ್ರೀತಿಯ ವಿಜಯ್ ದೇವರಕೊಂಡ  ಅವರನ್ನು ವಿಜ್ಜು ಅಂತ ಕರೀತಾರೆ ಅನ್ನೋದು ಇಲ್ಲಿ ರಿವೀಲ್ ಆಗಿದೆ. 

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಪ್ರೀತಿಯಲ್ಲಿದ್ದಾರೆ ಎನ್ನವು ಸುದ್ದಿ ಅನೇಕ ದಿನಗಳಿಂದ ಕೇಳಿ ಬರ್ತಿದೆ. ಈ ಬಗ್ಗೆ ನೇರವಾಗಿ ಎಲ್ಲೂ ಹೇಳಿಕೊಳ್ಳದೆ ಹೋದ್ರೂ ಇಬ್ಬರ ಅನೇಕ ಫೋಟೋಗಳು ವೈರಲ್ ಆಗಿವೆ. ಹಾಗೆಯೇ ರಶ್ಮಿಕಾ ಹಾಗೂ ವಿಜಯ್, ತಾವು ಸಂಬಂಧದಲ್ಲಿ ಇರೋದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದೂ ಇದೆ. ಹಿಂದಿನ ದೀಪಾವಳಿಯನ್ನು ರಶ್ಮಿಕಾ ಮಂದಣ್ಣ, ವಿಜಯ್ ಮನೆಯಲ್ಲಿ ಆಚರಿಸಿಕೊಂಡಿದ್ದರು. ಅದ್ರ ಫೋಟೋ ಜೊತೆ ಅವರು ಡಿನ್ನರ್ ಡೇಟ್ ಗೆ ಹೋದ ಕೆಲ ಫೋಟೋ ವೈರಲ್ ಆಗಿತ್ತು. 

ಎರಡು ಚಿತ್ರಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದ ರಶ್ಮಿಕಾ – ವಿಜಯ್ : ರಶ್ಮಿಕಾ ಮಂದಣ್ಣ ಮತ್ತು ವಿಜಯ್ ಜೋಡಿ ಎರಡು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದೆ. ಮೊದಲ ಚಿತ್ರ ಗೀತಾ ಗೋವಿಂದಂ, ಇದು 2018 ರಲ್ಲಿ ಬಿಡುಗಡೆಯಾಗಿತ್ತು. ಎರಡನೇ ಚಿತ್ರ ಡಿಯರ್ ಕಾಮ್ರೇಡ್, ಇದು 2019 ರಲ್ಲಿ ತೆರೆ ಕಂಡಿತ್ತು. ಅದಾದ್ಮೇಲೆ ಇಬ್ಬರೂ ಯಾವುದೇ ಸಿನಿಮಾದಲ್ಲಿ ಒಟ್ಟಿಗೆ ನಟಿಸಿಲ್ಲ.  

ಸಿನಿಮಾ  ಶೂಟಿಂಗ್ ನಲ್ಲಿ ಬ್ಯುಸಿ :  ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ಇಬ್ಬರೂ ಸಿನಿಮಾದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ.  ವಿಜಯ್ ದೇವರಕೊಂಡ, ಕಿಂಗ್ಡಮ್, VD14 ಮತ್ತು SVC59 ಸಿನಿಮಾದಲ್ಲಿ ನಟಿಸ್ತಿದ್ದಾರೆ. ಇನ್ನು ರಶ್ಮಿಕಾ ಮಂದಣ್ಣ ಕೈನಲ್ಲೂ ಸಾಕಷ್ಟು ಪ್ರಾಜೆಕ್ಟ್ ಇದೆ.  ಕನ್ನಡ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟ ರಶ್ಮಿಕಾ ಹಿಂತಿರುಗಿ ನೋಡಿಲ್ಲ. ತಮಿಳು, ತೆಲುಗು, ಬಾಲಿವುಡ್ ಚಿತ್ರಗಳು ರಶ್ಮಿಕಾರನ್ನು ಕೈಬೀಸಿ ಕರೆಯುತ್ತಿವೆ. ರಶ್ಮಿಕಾ ಮಂದಣ್ಣ  ಸದ್ಯ ಕುಬೇರಾ, ದಿ ಗರ್ಲ್ಫ್ರೆಂಡ್,  ಪುಷ್ಪ 3  ಮತ್ತು  ರೇನ್ಬೋ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?