
'ಅರ್ಜುನ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಮೀರಾ ಚೋಪ್ರಾ ಇದೀಗ ವಿವಾದ ಒಂದರಲ್ಲಿ ಸಿಲುಕಿಕೊಂಡಿದ್ದಾರೆ. ಇಡೀ ಭಾರತವೇ ಕೊರೋನಾ ಅಟ್ಟಹಾಸದಲ್ಲಿ ಸಿಲುಕಿಕೊಂಡು ವ್ಯಾಕ್ಸಿನ್ ಪಡೆಯಲು ಪೇಚಾಡುವ ಪರಿಸ್ಥಿತಿ ಎದುರಾಗಿದೆ. ಆದರೆ ಮೀರಾ ಮಾತ್ರ ಸುಳ್ಳು ಹೇಳಿ ವ್ಯಾಕ್ಸಿನ್ ಪಡೆದಿದ್ದಾರೆ, ಎಂದು ಎಲ್ಲೆಡೆ ಹರಿದಾಡುತ್ತಿದೆ. ಇದು ನಿಜನಾ?
ಮೀರಾ ಚೋಪ್ರಾ ಮತ್ಯಾರೂ ಅಲ್ಲ ಬಾಲಿವುಡ್ ಸ್ಟಾರ್ ನಟಿ ಪ್ರಿಯಾಂಕಾ ಚೋಪ್ರಾ ಸಹೋದರಿ. 18 ವರ್ಷ ಮೇಲ್ಪಟ್ಟವರೂ ನೋಂದಣೆ ಮಾಡಿಸಿ ಲಸಿಕೆ ಪಡೆಯಬೇಕಾಗಿದೆ. ಆದರೆ ಮೀರಾ ಫ್ರಂಟ್‌ಲೈನ್ ವರ್ಕರ್ ಎಂದು ಹೇಳಿ, ಲಸಿಕೆ ಪಡೆದಿರುವ ಪೋಟೋ ಹರಿದಾಡುತ್ತಿದೆ. ಸುಳ್ಳು ಸುದ್ದಿ ಬಗ್ಗೆ ಮೀರಾ ಚೋಪ್ರಾ ಕೊಟ್ಟ ಸ್ಪಷ್ಟನೆ:
ಪ್ರಿಯಾಂಕಳಿಂದಾಗಿ ನಂಗೆ ಕೆಲಸ ಸಿಗಲಿಲ್ಲ: ಪಿಗ್ಗಿ ಕಸಿನ್ ಹೇಳಿದ್ದಿಷ್ಟು
'ನಾವೆಲ್ಲರೂ ಲಸಿಕೆ ಹಾಕಿಸಿಕೊಳ್ಳಲು ಬಯಸುತ್ತೇವೆ. ನಾನು 1 ತಿಂಗಳು ಪ್ರಯತ್ನದ ನಂತರ ನೋಂದಾಯಿಸಿ ಆಧಾರ್ ಕಾರ್ಡ್ ನೀಡಿ ಲಸಿಕೆ ಪಡೆದಿದ್ದೀನಿ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಐಡಿ ಕಾರ್ಡ್ ನನ್ನದಲ್ಲ. ನೋಂದಣಿಯಾದ ಆಧಾರ್ ಸಂಖ್ಯೆಯನ್ನೇ ನಾನು ಲಸಿಕೆ ಪಡೆಯಲು ನೀಡಿದ್ದೇನೆ. ಹರಿದಾಡುತ್ತಿರುವ ಐಡಿ ಯಾರದ್ದು ಎಂದು ನನಗೆ ಗೊತ್ತಿಲ್ಲ. ನಾನು ಮೊದಲು ಈ ಸುದ್ದಿ ನೋಡಿದ್ದು ಟ್ಟಿಟ್ಟರ್‌ನಲ್ಲಿ,' ಎಂದು ಬರೆದುಕೊಂಡಿದ್ದಾರೆ.
ಈ ಸಾಂಕ್ರಾಮಿಕ ರೋಗದಿಂದ ಮೀರಾ ಇಬ್ಬರು ಸಂಬಂಧಿಕರನ್ನು ಕಳೆದುಕೊಂಡಿದ್ದಾರೆ. ಇಬ್ಬರ ವಯಸ್ಸು 40 ಆಗಿದ್ದು ಜೀವನ ನೋಡಲು ತುಂಬಾ ಇತ್ತು ಎಂದು ದುಃಖ ಪಟ್ಟಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.