
ನವದೆಹಲಿ (ಮೇ 30) ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಮತ್ತು ಪತಿ ಶ್ರೀರಾಮ್ ನೆನೆ ಇದೀಗ ಸಂತಸ ತುಂಬಿದ ಪೋಷಕರು ಪುತ್ರ ಆರಿನ್ ಹೈಸ್ಕೂಲ್ ಗ್ರಾಜುವೇಶನ್ ಮುಗಿಸಿದ್ದಾರೆ.
ನಟಿ ಮಾಧುರಿ ಈ ಸಂಭ್ರಮವನ್ನು ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. 'graduates from high school with flying colors' ಎಂದು ಬಣ್ಣಿಸಿದ್ದಾರೆ.
ಬಾಲಿವುಡ್ ಹ್ಯಾಂಡ್ ಸಮ್ ಹುಡುಗನ ಒಲ್ಲೆ ಎಂದಿದ್ದ ಮಾಧುರಿ
ಶಾಲೆಯ ಗ್ರಾಜಿವೇಶನ್ ಡೇ ವರ್ಚುವಲ್ ಮಾದರಿಯಲ್ಲಿ ನಡೆಯಿತು. ಈ ವರ್ಷ ಎಂಥ ಸಮಸ್ಯೆಗಳನ್ನು ತಂದಿಟ್ಟಿದೆ ಎನ್ನುವುದು ಎಲ್ಲರಿಗೂ ಗೊತ್ತು. ಅದೆಲ್ಲದರ ನಡುವೆ ನೀನು ಸಾಧನೆ ಮಾಡಿದ್ದೀಯಾ. ಅಭಿನಂದನೆ ಎಂದು ಮಾಧುರಿ ಪುತ್ರನ ಕೊಂಡಾಡಿದ್ದಾರೆ. ಸಣ್ಣ ವಿಡಿಯೋ ತುಣುಕನ್ನು ಹಂಚಿಕೊಂಡಿದ್ದಾರೆ.
ತಾವೇ ಮುಂದೆ ನಿಂತು ಗ್ರಾಜುವೇಶನ್ ಡೇಗೆ ಪುತ್ರನ ಸಿಂಗರಿಸಿದ್ದಾರೆ. ಜತೆಗೆ ನಿನ್ನ ಮುಂದಿನ ಜೀವನದಲ್ಲಿ ಸದಾ ಯಶಸ್ಸು ಸಿಗಲಿ ಎಂದು ಹಾರೈಸಿದ್ದಾರೆ.
ಒಂದು ಕಾಲದಲ್ಲಿ ಬಾಲಿವುಡ್ ನ ನಂಬರ್ ಒನ್ ನಾಯಕಿಯಾಗಿ ಮೆರೆದ ಮಾಧುರಿ ವೈದ್ಯ ಶ್ರೀರಾಮ್ ಅವರನ್ನು 1999 ರಲ್ಲಿ ವಿವಾಹವಾದರು. ಒಟಿಟಿ ಮಾದರಿಯಲ್ಲಿ ಮಾಧುರಿ ಹೊಸ ಸಾಹಸ ಮಾಡುತ್ತಿದ್ದು ಕೆಲಸಗಳು ಭರದಿಂದ ಸಾಗಿವೆ. ಕರಣ್ ಜೋಹರ್ ನಿರ್ದೇಶನದಲ್ಲಿ ಸೀರಿಸ್ ಮೂಡಿಬರಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.