ಮಹಿಳಾ ಅಭಿಮಾನಿಯನ್ನು ಕಟ್ಟಿ ಹಾಕಿ ಮೂತ್ರ ಕುಡಿಸಿದ ಗಾಯಕ

Suvarna News   | Asianet News
Published : May 30, 2021, 09:27 AM ISTUpdated : May 30, 2021, 09:52 AM IST
ಮಹಿಳಾ ಅಭಿಮಾನಿಯನ್ನು ಕಟ್ಟಿ ಹಾಕಿ ಮೂತ್ರ ಕುಡಿಸಿದ ಗಾಯಕ

ಸಾರಾಂಶ

ಟಾಪ್ ಸಿಂಗರ್ ವಿರುದ್ಧ ರೇಪ್ ಆರೋಪ ಮಹಿಳಾ ಅಭಿಮಾನಿಯನ್ನು ಚೇರ್‌ಗೆ ಕಟ್ಟಿ ಹಾಕಿ ಮೂತ್ರ ಕುಡಿಸಿದ ಸಿಂಗರ್ ಗರ್ಲ್‌ಫ್ರೆಂಡ್‌ನಿಂದಲೇ ಆರೋಪ

ವಾಷಿಂಗ್ಟನ್(ಮೇ.30): ಅಮೆರಿಕನ್ ಸಂಗೀತಗಾರ ಮರಿಲಿನ್ ಮಾನ್ಸನ್‌ನ ಮಾಜಿ ಗೆಳತಿ ಆತನ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದಾರೆ. ಅತ್ಯಾಚಾರ ಮಾಡಿ, ದೈಹಿಕ ಹಲ್ಲೆ ನಡೆಸಿದ್ದಾನೆ. ಹಾಗೆಯೇ ಭೀಕರವಾದ, ಭಯನಾಕ ಸಿನಿಮಾ ನೋಡುವಂತೆ ಒತ್ತಾಯಿಸಿದ್ದು, ಆತ ತನ್ನ ಯುವ ಅಭಿಮಾನಿಯನ್ನು ಕೊಲೆ ಮಾಡಿದ್ದಂತೆ ಕಾಣುತ್ತದೆ ಎಂದು ಆಕೆ ದೋಷಿಸಿದ್ದಾಳೆ.

ಮಾನ್ಸನ್ ವಿರುದ್ಧ ಸಾಕಷ್ಟು ಲೈಂಗಿಕ ಕಿರುಕುಳ ಆರೋಪದ ಬೆನ್ನಲ್ಲೇ ಆತನ ಗೆಳತಿ ಜೇನ್ ಡಾಯ್ ಕೂಡಾ ಈಗ ಆತನ ವಿರುದ್ಧ ಆರೋಪಿದ್ದಾಳೆ. 2011ರಲ್ಲಿ ನಾನು ಅವನ ಜೊತೆ ಡೇಟ್ ಮಾಡಲಾರಂಭಿಸಿದೆ. ಆರಂಭದಲ್ಲಿ ಸಂಬಂಧ ಚೆನ್ನಾಗಿದ್ದರೂ ನಂತರ ಅತ್ಯಂತ ಕೆಟ್ಟ ಅನುಭವವಾಗಿದೆ ಎಂದಿದ್ದಾರೆ ಜೇನ್.

ದೈಹಿಕ ಸಂಪರ್ಕ ಬೆಳೆಸಿ ವಂಚನೆ : ನಟಿ ಕಂಗನಾ ಮಾಜಿ ಬಾಡಿಗಾರ್ಡ್‌ ಸೆರೆ

ಮಾನ್ಸನ್ ಗೆಳತಿಗೆ 1996ರಲ್ಲಿ ಚಿತ್ರೀಕರಿಸಲಾದ ವಿಡಿಯೋ ತೋರಿಸಿದ್ದ. ಅದರಲ್ಲಿ ಪೋರ್ನ್, ಗನ್, ಅವಮಾನಿಸುವಂತಹ ಅಂಶಗಳಿದ್ದವು. ಅದರಲ್ಲಿ ಆತ ಮಹಿಳಾ ಅಭಿಮಾನಿಯನ್ನು ಚೇರ್‌ಗೆ ಕಟ್ಟಿ ಹಾಕಿ ಬಾಂಡ್ ಸದಸ್ಯನ ಮೂತ್ರ ಕುಡಿಸಲು ಬಲವಂತ ಮಾಡುವುದರೊಂದಿಗೆ ಗನ್‌ ಹಿಡಿದು ಬೆದರಿಸುತ್ತಿದ್ದ ಎಂದು ಜೇನ್ ಹೇಳಿದ್ದಾರೆ.

ಕೀ ಮರಳಿಸಲು ಹೋದಾಗ ತನ್ನ ಮೇಲೆ ಆತ ಅತ್ಯಾಚಾರ ಮಾಡಿದ್ದಾಗಿಯೂ ಜೇನ್ ಆರೋಪಿಸಿದ್ದಾರೆ. ಇದೀಗ ಸಿಂಗರ್ ವಿರುದ್ಧ ಅರೆಸ್ಟ್ ವಾರೆಂಟ್ ರಿಲೀಸ್ ಆಗಿದೆ. ಈ ಬಗ್ಗೆ ಮಾನ್ಸನ್ ವಕ್ತಾರ ಮಾಡತನಾಡಿ, ಇದರ ಬಗ್ಗೆ ಆತ ಪ್ರತಿಕ್ರಿಯಿಸುವುದಿಲ್ಲ. ವಿಡಿಯೋ ಹಳೆಯದ್ದಾಗಿದ್ದು, ಅದು ಶಾರ್ಟ್ ಫಿಲ್ಮ್‌ಗಾಗಿ  ಚಿತ್ರೀಕರಿಸಲಾಗಿದೆ, ಆದರೆ ಯಾವುತ್ತೂ ಬಿಡುಗಡೆಯಾಗಿಲ್ಲ ಎಂದಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬ್ರೇಕ್‌ಫಾಸ್ಟ್ ಬಫೆಯಲ್ಲಿ ದೋಸೆ ಇದ್ದಾಗ ಹೀಗೆ ಆಗುತ್ತದೆ ಎಂದ ನಿಕ್ ಜೊನಾಸ್; ಪ್ರಿಯಾಂಕಾ ಚೋಪ್ರಾ ಎಲ್ಲಿ?
ಪ್ರಭಾಸ್ 'ಮಗು' ಅಂದ್ರಾ ನಿಧಿ ಅಗರ್ವಾಲ್? 'ದಿ ರಾಜಾ ಸಾಬ್' ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದ ನಟಿ ಏನ್ ನೋಡಿದ್ರಂತೆ?