ಬರೋಬ್ಬರಿ 25 ವರ್ಷಗಳ ಬಳಿಕ ಮಣಿರತ್ನಂ ಮತ್ತು ಕಮಲ್ ಹಾಸನ್ ಅವರಿಬ್ಬರೂ ಮತ್ತೆ ಒಂದಾಗುತ್ತಿದ್ದಾರೆ. KH234 ಚಿತ್ರದ ಮೂಲಕ ಮತ್ತೆ ಕಮಾಲ್ ಮಾಡಲು ಬರುತ್ತಿರುವ ಈ ಜೋಡಿ, 2024ರಲ್ಲಿ ಈ ಚಿತ್ರವನ್ನು ತೆರೆಗೆ ತರುವ ಗುರಿ ಹೊಂದಿದ್ದಾರೆ ಎನ್ನಲಾಗಿದೆ.
ಭಾರತೀಯ ಚಿತ್ರರಂಗದ ಲೆಜೆಂಡ್ ಡೈರೆಕ್ಟರ್ ಮಣಿರತ್ನಂ ಅವರು ಮುಂಬೈನಲ್ಲಿ ಜಿಯೋ MAMI ಸಿನಿಮಾ ಫೆಸ್ಟಿವಲ್ 2023ನಲ್ಲಿ ಹೃದಯಬಿಚ್ಚಿ ಮಾತನಾಡಿದ್ದಾರೆ. ತಮ್ಮ ನೆಚ್ಚಿನ ನಟ ಕಮಲ್ ಹಾಸನ್ ಜತೆ 35 ವರ್ಷಗಳ ಬಳಿಕ ಮತ್ತೆ ಸಿನಿಮಾ ಮಾಡುವ ಬಗ್ಗೆ ಕೂಡ ಮಾತನಾಡಿದ್ದಾರೆ. ಇಷ್ಟು ಸುಧೀರ್ಘ ವೇಳೆ ಯಾಕೆ ತಾವು ಕಮಲ್ ಹಾಸನ್ ಜತೆ ಮತ್ತೆ ಚಿತ್ರ ಮಾಡಿರಲಿಲ್ಲ ಎಂಬ ಗುಟ್ಟನ್ನು ಸಹ ಮಣಿರತ್ನಂ ಬಿಚ್ಚಿಟ್ಟಿದ್ದಾರೆ.
ಮುಂಬೈನಲ್ಲಿ ಈ ಬಗ್ಗೆ ಮಾತನಾಡಿರುವ ಮಣಿರತ್ನಂ 'ಕಮಲ್ ಹಾಸನ್ ಅಥವಾ ರಜನಿಕಾಂತ್ ಅವರಂಥ ಹಿರಿಯ, ಶ್ರೇಷ್ಠ ನಾಯಕನಟರ ಜತೆ ಕೆಲಸ ಮಾಡಲು ಅವರಿಗೆ ಸರಿಹೊಂದುವ ಸ್ಕ್ರಿಪ್ಟ್ ಬೇಕು. ಅದನ್ನು ನಾನು ಪದೇ ಪದೇ ಮಾಡಲು ಸಾಧ್ಯವಾಗುವುದಿಲ್ಲ. 'ನಾಯಗನ್' ಬಳಿಕ ಕಮಲ್ ಹಾಸನ್ ಅವರಿಗೆ ಅಂತ ನಾನು ಸಾಕಷ್ಟು ಚಿತ್ರಕಥೆಗಳನ್ನು ಮಾಡಿದ್ದರೂ ಅದ್ಯಾವುದೂ ಅವರ ಕಾಲ್‌ಶೀಟ್ ಕೇಳುವ ಧೈರ್ಯ ಮಾಡುವಷ್ಟು ಚೆನ್ನಾಗಿರಲಿಲ್ಲ. ಹೀಗಾಗಿ ನಾನು ಮತ್ತೆ ಕಮಲ್ ಹಾಸನ್ ಅವರೊಂದಿಗೆ ಇಷ್ಟು ವರ್ಷಗಳು ಕೆಲಸ ಮಾಡಲು ಸಾಧ್ಯವಾಗಲೇ ಇಲ್ಲ' ಎಂದಿದ್ದಾರೆ.
ಕಾಜೋಲ್ ಮುಂಚೆ ಅಜಯ್ ದೇವಗನ್ ಲವ್ ಮಾಡಿದ್ದು ಬೇರೆ ಸ್ಟಾರ್ ನಟಿ, ಅದಕ್ಕೂ ಮೊದಲು ಇನ್ನೊಬ್ಬರು!
ಮುಂದುವರೆದು ಮಾತನಾಡಿರುವ ಮಣಿರತ್ನಂ 'ನಾನು ಯಾವುದೇ ಒಬ್ಬ ನಟರ ಜತೆ ಕೆಲಸ ಮಾಡಬೇಕು ಎಂದರೆ, ಅವರಿಗೆ ಅದು ಸ್ಯೂಟ್ ಆಗಬೇಕು, ಮಾಡಿರುವ ಸಬ್ಜೆಕ್ಟ್ ಅವರಿಗೆ ಸರಿಹೊಂದಿಲ್ಲ ಎಂದರೆ ಅದನ್ನು ನಂಬಿ ಹಣ ಹಾಕಿರುವ ನಿರ್ಮಾಪಕರಿಗೆ ನಾನು ದ್ರೋಹ ಮಾಡಿದಂತೆ. ಉದಾಹರಣೆಗೆ ನಾನು ಇನ್ನೂ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರಿಗೆ ಕಥೆ ಮಾಡಲು ಸಾಧ್ಯವೇ ಆಗಿಲ್ಲ. ಕಾರಣ, ಅವರಿಗೆ ಸರಿಹೊಂದುವ ಕಥೆಯನ್ನು ನಾನು ಇನ್ನೂ ಬರೆದಿಲ್ಲ' ಎಂದಿದ್ದಾರೆ ಮಣಿರತ್ನಂ.
ತನಿಷಾ-ವಿನಯ್ ಗೌಡ ಜಗಳ ಬಿಡಿಸಲು ಕಾರ್ತಿಕ್ ಪರದಾಟ, ನೀತು-ಸಂಗೀತಾ ಮಧ್ಯೆ ಅದೇನಾಯ್ತು?
ಇದೀಗ, ಬರೋಬ್ಬರಿ 25 ವರ್ಷಗಳ ಬಳಿಕ ಮಣಿರತ್ನಂ ಮತ್ತು ಕಮಲ್ ಹಾಸನ್ ಅವರಿಬ್ಬರೂ ಮತ್ತೆ ಒಂದಾಗುತ್ತಿದ್ದಾರೆ. KH234 ಚಿತ್ರದ ಮೂಲಕ ಮತ್ತೆ ಕಮಾಲ್ ಮಾಡಲು ಬರುತ್ತಿರುವ ಈ ಜೋಡಿ, 2024ರಲ್ಲಿ ಈ ಚಿತ್ರವನ್ನು ತೆರೆಗೆ ತರುವ ಗುರಿ ಹೊಂದಿದ್ದಾರೆ ಎನ್ನಲಾಗಿದೆ. ಮುಂಬೈ ಸಿನಿಮಾ ಉತ್ಸವದಲ್ಲಿ ನಿರ್ದೇಶಕ ಮಣಿರತ್ನಂ ಜತೆ ಅವರ ಪತ್ನಿ, ಸ್ಟಾರ್ ನಟಿ ಸುಹಾಸಿನಿ ಹಾಗೂ ಲೆಜೆಂಡ್ ನಟ ಕಮಲ್ ಹಾಸನ್ ಕೂಡ ಹಾಜರಿದ್ದರು. ಮಣಿರತ್ನಂ ಅವರು ಇಷ್ಟನ್ನೂ ಹೇಳಿದ್ದು ಕಮಲ್ ಹಾಸನ್ ಎದುರಿನಲ್ಲಿಯೇ ಎಂಬುದು ವಿಶೇಷ.