ಕತ್ರಿನಾ-ವಿಕ್ಕಿಗೆ ಜೀವ ಬೆದರಿಕೆ: ಕಿರಾತಕನನ್ನು ಎರಡೇ ಗಂಟೆಯಲ್ಲಿ ಅರೆಸ್ಟ್‌ ಮಾಡಿದ ಪೊಲೀಸರು!

Published : Jul 26, 2022, 12:41 PM IST
ಕತ್ರಿನಾ-ವಿಕ್ಕಿಗೆ ಜೀವ ಬೆದರಿಕೆ: ಕಿರಾತಕನನ್ನು ಎರಡೇ ಗಂಟೆಯಲ್ಲಿ ಅರೆಸ್ಟ್‌ ಮಾಡಿದ ಪೊಲೀಸರು!

ಸಾರಾಂಶ

ದೂರು ದಾಖಲಿಸಿದ ಎರಡೇ ಗಂಟೆಗಳಲ್ಲಿ ಕಿರಾತಕರನ್ನು ಅರೆಸ್ಟ್‌ ಮಾಡಿದ ಮುಂಬೈ ಪೊಲೀಸರು. ಸಲಾಂ ಎಂದ ನೆಟ್ಟಿಗರು...

ಬಾಲಿವುಡ್‌ ದಿ ಮೋಸ್ಟ್‌ ಹಾಟ್ ಆಂಡ್ ಕ್ಯೂಟ್‌ ನಟಿ ಕತ್ರಿನಾ ಕೈಫ್‌ ಮತ್ತು ವಿಕ್ಕಿ ಕೌಶಾಲ್‌ 2021 ಡಿಸೆಂಬರ್ 9ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಾಮಾಜಿಕ ಜಾಲತಾಣದಿಂದ ದೂರ ಉಳಿದುಕೊಂಡಿರುವ ಈ ಜೋಡಿ ಪ್ಯಾಪರಾಜಿಗಳ ಕಣ್ಣಿಗೆ ಬಿದ್ದರಂತೂ ಹಬ್ಬವೋ ಹಬ್ಬ. ಸಖತ್ ನೇಮ್, ಫೇಮ್ ಆಂಡ್ ಮನಿ ಮಾಡುತ್ತಿರುವ ಈ ಜೋಡಿಗೆ ಕಿರಾತಕನೊಬ್ಬ ಜೀವ ಬೆದರಿಕೆ ಹಾಕಿದ್ದಾನೆ. ತಕ್ಷಣವೇ ಮುಂಬೈ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರ ವೇಗಗತಿಯನ್ನು ಮೆಚ್ಚಿಕೊಂಡಿದ್ದಾರೆ.

ವಿಕ್ಕಿ ಕೌಶಾಲ್ ಮತ್ತು ಕತ್ರಿನಾ ಕೈಫ್‌ಗೆ ಸೋಷಿಯಲ್ ಮೀಡಿಯಾ ಮೂಲಕ ಅಪರಿಚಿತ ವ್ಯಕ್ತಿಯೊಬ್ಬ ಜೀವ ಬೆದರಿಕೆ ಕರೆ ನೀಡುತ್ತಿದ್ದಾನೆ. ಮುಂಬೈ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿತ್ತು ಎಂದು ಮೊದಲು ವರದಿಯಾಗಿತ್ತು. 'ಸಾಂತಾಕ್ರೂಜ್ ಪಿಎಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇನ್‌ಸ್ಟಾಗ್ರಾಂನಲ್ಲಿ ವ್ಯಕ್ತಿಯೊಬ್ಬ ಪದೇ ಪದೇ ಜೀವ ಬೆದರಿಕೆ ಹಾಕುತ್ತಿದ್ದಾನೆ. ಅಲ್ಲದೆ ನನ್ನ ಪತ್ನಿಯನ್ನು ಫಾಲೋ ಮಾಡುತ್ತಿದ್ದಾರನೆ ಅವರ ಎಲ್ಲಾ ಕೆಲಸಗಳ ಮೇಲೆ ಕಣ್ಣಿಟ್ಟಿದ್ದಾನೆ. ಕಠಿಣ ಕ್ರಮ ಕೈಗೊಳ್ಳಿ'ಎಂದು ವಿಕ್ಕಿ ದೂರು ದಾಖಲಿಸಿದ್ದರಂತೆ.

ದೀಪಿಕಾ, ಆಲಿಯಾ, ಕತ್ರಿನಾರನ್ನು ಹಿಂದಿಕ್ಕಿದ ಸಮಂತಾ ನಂ.1 ನಟಿ

ದೂರು ದಾಖಲಾದ ಎರಡೇ ಗಂಟೆಗಳಲ್ಲಿ ಪೊಲೀಸರು ಕಿರಾತಕನನ್ನು ಬಂಧಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. 'ನಟ ವಿಕ್ಕಿ ಹೇಳಿರುವ ಪ್ರಕಾರ ಕಿರುಕುಳ ಮತ್ತು ಬೆದರಿಕೆ ಹಲವು ದಿನಗಳಿಂದ ನಡೆಯುತ್ತಿದೆ. ಮಿತಿ ಮೀರಿದಾಗ ಕ್ರಮ ಕೈಗೊಳ್ಳಬೇಕು ಎಂದು ದೂರು ದಾಖಲಿಸಿದ್ದಾರೆ. ಆತನ ವಿರುದ್ಧ ಸೆಕ್ಷನ್ 506(2) ಕ್ರಿಮಿನಲ್ ಇಂಟಿಮಿಡೇಶನ್, ಸೆಕ್ಷನ್ 354(d) ಸ್ಟಾಕಿಂಗ್, ಐಪಿಸಿ ಮತ್ತು ಸೆಕ್ಷನ್ 67 (transmitting obscene material) ದಾಖಲಾಗಿದೆ' ಎಂದು ಮಂಜುನಾಥ್‌ ಸಿಂಧೆ ಖಾಸಗಿ ವೆಬ್‌ಗೆ ಹೇಳಿದ್ದಾರೆ.

ಸ್ವರಾ ಭಾಸ್ಕರ್‌ಗೂ ಬೆದರಿಕೆ:

ಇದೇ ವರ್ಷ ಜ್ಯೂನ್‌ ತಿಂಗಳಿಲ್ಲಿ ನಟಿ ಸ್ವರಾ ಬಾಸ್ಕರ್‌ಗೆ ಜೀವ ಬೆದರಿಕೆ ಕರೆ ಬಂದಿತ್ತು. ಮನೆಯ ವೆರ್ಸೋವಾ ಮನೆಗೆ ವ್ಯಕ್ತಿಯೊಬ್ಬ ಪತ್ರ ಬರೆಯುವ ಮೂಲಕ ಬೆದರಿಕೆ ಹಾಕಿದ್ದಾನೆ. ಪತ್ರವನ್ನು ಸಾಕ್ಷಿಯಾಗಿ ಹಿಡಿದುಕೊಂಡು ಸ್ವರಾ ದೂರು ದಾಖಲಿಸಿದ್ದರು.

ಕಂಗನಾಗೂ ಬೆದರಿಕೆ: 

ನವೆಂಬರ್ 2021ರಲ್ಲಿ ಕಂಗನಾ ರಣಾವತ್‌ ಕೂಡ ಹಿಮಾಚಲ್ ಪ್ರದೇಶದಲ್ಲಿ ಜೀವ ಬೆದರಿಕೆ ಹಾಕುತ್ತಿರು ವ್ಯಕ್ತಿ ವಿರುದ್ಧ ದೂರು ದಾಖಲಿಸಿದ್ದರು.

ಲಂಡನ್‌ ಮನೆಯಿಂದ ಐಷಾರಾಮಿ ಕಾರುಗಳವರೆಗೆ; ಈ ದುಬಾರಿ ವಸ್ತುಗಳ ಓನರ್‌ ಕತ್ರಿನಾ ಕೈಫ್‌

ಮಾಲ್ಡೀವ್ಸ್‌ನಲ್ಲಿ ಕತ್ರಿನಾ ಕೈಫ್‌ ಬರ್ತ್‌ಡೇ:

ನಟಿ ಕತ್ರಿನಾ ಕೈಫ್  (Katrina Kaif) ಜುಲೈ 16 ರಂದು ಮಾಲ್ಡೀವ್ಸ್‌ನಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.  ಅವರು ಈ ಆಚರಣೆಯ ಕೆಲವು ಫೋಟೋಗಳನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಅದು ವೈರಲ್ ಆಗಿದೆ. ಕತ್ರಿನಾ ಅವರಲ್ಲದೆ, ಅವರ ಸಹೋದರಿ ಇಸಾಬೆಲ್ ಕೈಫ್, ಸಹೋದರ ಸೆಬಾಸ್ಟಿಯನ್, ಪತಿ ವಿಕ್ಕಿ ಕೌಶಲ್, ಸೋದರ ಮಾವ ಸನ್ನಿ ಕೌಶಲ್, ಸನ್ನಿ ಗೆಳತಿ ನಟಿ ಶಾರ್ವರಿ ಮತ್ತು ನಟಿ ಇಲಿಯಾನಾ ಡಿಕ್ರೂಜ್
ಸೇರಿದಂತೆ ಅನೇಕರು ಈ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?
10 ಭಾಷೆಗಳಲ್ಲಿ 90 ಸಿನಿಮಾಗಳು, ಗಂಗೂಲಿ ಜೊತೆ ಅಫೇರ್ ವದಂತಿ.. 50 ವರ್ಷವಾದರೂ ಮದುವೆಯಾಗದ ನಟಿ ಯಾರು?