
ಅಭಿನಯಚಕ್ರವರ್ತಿ ಕಿಚ್ಚ ಸುದೀಪ್ ಸದ್ಯ ವಿಕ್ರಾಂತ್ ರೋಣ ಸಿನಿಮಾದ ಪ್ರಚಾರಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರುತ್ತಿರುವ ವಿಕ್ರಾಂತ್ ರೋಣ ಸಿನಿಮಾದ ಪ್ರಮೋಷನ್ ಕೆಲಸ ಭರ್ಜರಿಯಾಗಿ ನಡೆಯುತ್ತಿದೆ. ಅಭಿನಯ ಚಕ್ರವರ್ತಿ ಅಂಡ್ ತಂಡ ಸದ್ಯ ಮುಂಬೈನಲ್ಲಿದ್ದು ವಿಕ್ರಾಂತ್ ರೋಣ ಪ್ರಚಾರ ಮಾಡುತ್ತಿದ್ದಾರೆ. ಅಭಿನಯ ಚಕ್ರವರ್ತಿಗೆ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್, ರಿತೇಶ್ ದೇಶಮುಖ್ ಮತ್ತು ಜೆನಿಲಿಯಾ ಸಾಥ್ ನೀಡಿದರು. ಮುಂಬೈ ಪ್ರಿ ರಿಲೀಸ್ ಈವೆಂಟ್‌ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಸಮಯದಲ್ಲಿ ವಿಕ್ರಾಂತ್ ರೋಣ ತಂಡದ ಜೊತೆ ಸಲ್ಮಾನ್ ಖಾನ್ ಬ್ಲಾಕ್ ಬಸ್ಟರ್ ಹಿಟ್ ಹಾಡಿಗೆ ಭರ್ಜರಿ ಹೆಜ್ಜೆ ಹಾಕಿದ್ದಾರೆ. ಈಗಾಗಲೇ ಸಖತ್ ವೈರಲ್ ಆಗಿರುವ ರಾ..ರಾ..ರಕ್ಕಮ್ಮ ಹಾಡಿಗೆ ಸಲ್ಮಾನ್ ಖಾನ್ ಸಹ ಹೆಜ್ಜೆ ಹಾಕಿ ಸಂತಸ ಪಟ್ಟಿದ್ದಾರೆ.
ವಿಕ್ರಾಂತ್ ರೋಣ ಮುಂಬೈ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ಅಭಿನಯಚಕ್ರವರ್ತಿಗೆ ಬಾಲಿವುಡ್ ಮತ್ತು ಸೌತ್ ಸಿನಿಮಾರಂಗದ ಚರ್ಚೆಯ ಬಗ್ಗೆ ಪ್ರಶ್ನೆ ಎದುರಾಗಿದೆ. ದಕ್ಷಿಣ ಭಾರತದ ಸಿನಿಮಾಗಳು ಬಾಲಿವುಡ್ ನಲ್ಲಿ ಸೂಪರ್ ಸಕ್ಸಸ್ ಆಗುತ್ತಿವೆ. ಕೆಜಿಎಫ್-2, ಆರ್ ಆರ್ ಆರ್, ಪುಷ್ಪ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಹಿಂದಿ ಪ್ರೇಕ್ಷಕರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಬಾಕ್ಸ್ ಆಫೀಸ್ ನಲ್ಲೂ ಭರ್ಜರಿ ಕಮಾಯಿ ಮಾಡಿದೆ. ಸೌತ್ ಸಿನಿಮಾಗಳ ಅಬ್ಬರದಿಂದ ಬಾಲಿವುಡ್ ಮಂಕಾಗಿದೆ. ಈ ಬಗ್ಗೆ ಕೇಳಿದ್ದಕ್ಕೆ ಸುದೀಪ್, ವಿರಾಟ್ ಕೊಹ್ಲಿ ಫಾರ್ಮ್ ಬಗ್ಗೆ ಮಾತನಾಡಿದ್ದಾರೆ.
'ನಾನು ಹೆಚ್ಚು ಹೇಳಲು ಬಯಸುವುದಿಲ್ಲ. ದಕ್ಷಿಣದಲ್ಲಿ ಹಲವಾರು ಚಿತ್ರಗಳು ತಯಾರಾಗುತ್ತವೆ, ಎಲ್ಲಾ ಸನಿಮಾಗಳೂ ಉತ್ತಮವಾಗಿರುವುದಿಲ್ಲ. ನಾವು ಅದನ್ನು ಪ್ರಾಬಲ್ಯ ಎಂದು ಕರೆಯಲು ಸಾಧ್ಯವಿಲ್ಲ. ಎಲ್ಲದಕ್ಕೂ ಒಳ್ಳೆಯ ಸಮಯ ಬರುತ್ತೆ. ಹಿಂದಿ ಚಿತ್ರೋದ್ಯಮವು ಉತ್ತಮ ಚಿತ್ರಗಳನ್ನು ಮಾಡದಿದ್ದರೆ, ಅದರಲ್ಲಿ ಉತ್ತಮ ವ್ಯಕ್ತಿಗಳಿಲ್ಲದಿದ್ದರೆ, ನೀವು ಇಷ್ಟು ವರ್ಷಗಳ ಕಾಲ ಉದ್ಯಮವನ್ನು ಹೇಗೆ ಉಳಿಸಿಕೊಳ್ಳುತ್ತೀರಿ? ವಿರಾಟ್ ಕೊಹ್ಲಿ ಕೆಲಕಾಲ ಫಾರ್ಮ್‌ನಲ್ಲಿ ಇಲ್ಲ ಅಂದರೆ ಅವರು ಏನು ದಾಖಲೆ ಮಾಡಿಲ್ಲ ಅಂತನಾ. ಅದು ಆ ರೀತಿಯಲ್ಲಿ ಕೆಲಸ ಮಾಡುವುದಿಲ್ಲ. ದಿನದ ಕೊನೆಯಲ್ಲಿ, ಸಾಕಷ್ಟು ಚಲನಚಿತ್ರಗಳು ತಯಾರಾಗುತ್ತಿವೆ, ಕೆಲವು ಕೆಲಸ ಹಿಟ್ ಆಗುತ್ತವೆ ಇನ್ನು ಕೆಲವು ಇಲ್ಲ' ಎಂದಿದ್ದಾರೆ.
ರಾ..ರಾ ರಕ್ಕಮ್ಮ ಆಯ್ತು, ಈಗ ರಣ ಭಯಂಕರ ಡೆವಿಲ್! ಇದೇ 28 ಕ್ಕೆ ವಿಕ್ರಾಂತ್ ರೋಣ ಹಬ್ಬ!
ಇನ್ನು ಸುದೀಪ್ ಅವರಿಗೆ ಈಗಾಗಲೇ ದಾಖಲೆ ಬರೆದಿರುವ ಕೆಜಿಎಫ್2, ಆರ್ ಆರ್ ಆರ್, ಪುಷ್ಪ ಸಿನಿಮಾಗಳನ್ನು ವಿಕ್ರಾಂತ್ ರೋಣ ಹಿಂದಿಕ್ಕಲಿದೆಯಾ ಎಂದು ಪ್ರಶ್ನೆ ಎದುರಾಗಿದೆ. ಇದಕ್ಕೆ ಉತ್ತರಿಸಿದ ಸುದೀಪ್, ನಾನು ಹಾಗೆ ಭಾವಿಸುತ್ತೇನೆ ಎಂದು ಹೇಳಿದರು.
ರಾ.. ರಾ.. ರಕ್ಕಮ್ಮ.. ಹಾಡಿಗೆ ಸಲ್ಮಾನ್ ಸಖತ್ ಸ್ಟೆಪ್; ವಿಕ್ರಾಂತ್ ರೋಣ ಈವೆಂಟ್‌ನಲ್ಲಿ ಬಾಲಿವುಡ್ ಸ್ಟಾರ್
ವಿಕ್ರಾಂತ್ ರೋಣ ಸಿನಿಮಾ ಜುಲೈ 28ರಂದು ರಿಲೀಸ್ ಆಗುತ್ತಿದೆ. ಇನ್ನೇನು ಸಿನಿಮಾ ರಿಲೀಸ್ ಗೆ ದಿನಗಣನೆ ಪ್ರಾರಂಭವಾಗಿದೆ. ಈಗಾಗಲೇ ಟ್ರೈಲರ್ ಮತ್ತು ಹಾಡುಗಳ ಮೂಲಕ ಸದ್ದು ಮಾಡುತ್ತಿರುವ ವಿಕ್ರಾಂತ್ ರೋಣನನ್ನು ತೆರೆಮೇಲೆ ನೋಡಲು ಕಾತರರಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.