ನಾನು ವರ್ಜಿನ್ ಆಗಿದ್ದೆ, ಆ ಬಗ್ಗೆ ನಂಗೆ ಗೊತ್ತಿರಲಿಲ್ಲ, ಅದು ತಪ್ಪೆಂದು ಅನ್ನಿಸಲಿಲ್ಲ ಎಂದ ನಟಿ

Published : Feb 02, 2025, 03:15 PM IST
ನಾನು ವರ್ಜಿನ್ ಆಗಿದ್ದೆ, ಆ ಬಗ್ಗೆ ನಂಗೆ ಗೊತ್ತಿರಲಿಲ್ಲ, ಅದು ತಪ್ಪೆಂದು ಅನ್ನಿಸಲಿಲ್ಲ ಎಂದ ನಟಿ

ಸಾರಾಂಶ

ಬಾಲಿವುಡ್ ನಟಿ ಶೋನಲ್ಲಿ ತಮ್ಮ ವೃತ್ತಿ ಮತ್ತು ಖಾಸಗಿ ಜೀವನದ ಬಗ್ಗೆ ಅಚ್ಚರಿಯ ವಿಷಯಗಳನ್ನು ಹಂಚಿಕೊಂಡಿದ್ದಾರೆ. ನ್ಯೂಡ್ ಫೋಟೋಶೂಟ್ ಮಾಡಿಸುವಾಗ ತಾವು ವರ್ಜಿನ್ ಆಗಿದ್ದು, ಲೈಂಗಿಕತೆಯ ಬಗ್ಗೆ ತಿಳುವಳಿಕೆ ಇರಲಿಲ್ಲ ಎಂದು ಹೇಳಿದ್ದಾರೆ.

ಮುಂಬೈ: ಬಾಲಿವುಡ್ ನಟಿ ಮಮತಾ ಕುಲಕರ್ಣಿ ನೀಡಿದ ಸಂದರ್ಶನದಲ್ಲಿ ಹಲವು ವಿಷಯಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಮಮತಾ ಕುಲಕರ್ಣಿ, ಮಹಾಕುಂಭ ಮೇಳದಲ್ಲಿ ಭಾಗಿಯಾಗಿ ಸನ್ಯಾಸತ್ವ ಸ್ವೀಕರಿಸಿದ್ದರು. ತದನಂತರ ಮಹಾಮಂಡಲೇಶ್ವರ ಸ್ಥಾನಕ್ಕೂ ನೇಮಕ ಮಾಡಲಾಗಿತ್ತು. ವಿವಾದದ ಬಳಿಕ ಮಹಾಮಂಡಲೇಶ್ವರ ಸ್ಥಾನದಿಂದ ವಜಾಗೊಳಿಸಿ, ಕಿನ್ನರ ಅಖಾಡದಿಂದಲೂ ಹೊರಗೆ ಹಾಕಲಾಗಿತ್ತು. ಇದೀಗ ಖಾಸಗಿ ವಾಹಿನಿ ಆಪ್ ಕಿ ಅದಾಲತ್ ಶೋನಲ್ಲಿ ಭಾಗಿಯಾಗಿರುವ  ಮಮತಾ ಕುಲಕರ್ಣಿ, ತಮ್ಮ ವೃತ್ತಿ ಮತ್ತು ಖಾಸಗಿ ಜೀವನದ ಬಗ್ಗೆ ಅಚ್ಚರಿಯ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಈ ಶೋನಲ್ಲಿ ನಿರೂಪಕ ರಜತ್ ಶರ್ಮಾ ಕೇಳಿದ ಪ್ರಶ್ನೆಗಳಿಗೆ ಮಮತಾ ಕುಲಕರ್ಣಿ  ಉತ್ತರಿಸಿದರು. ಸ್ಟಾರ್‌ಡಸ್ಟ್ ಮ್ಯಾಗ್‌ಜಿನ್‌ಗೆ ನ್ಯೂಡ್ ಫೋಟೋಶೂಟ್‌ ಕುರಿತು ಕೇಳಲಾಗಿತ್ತು. ಈ ಪ್ರಶ್ನೆಗೆ ಉತ್ತರಿಸಿದ ಮಮತಾ ಕುಲಕರ್ಣಿ, ಅಂದು ಸ್ಟಾರ್‌ಡಸ್ಟ್ ಸಿಬ್ಬಂದಿ ನನಗೆ ಡೆಮಿ ಮ್ಯೂರ್ ಫೋಟೋಗಳನ್ನು ತೋರಿಸಿದ್ದರು. ಅದರಲ್ಲಿ ನನಗೆ ಯಾವುದೇ ಅಶ್ಲೀಲತೆ ಕಾಣಿಸಲಿಲ್ಲ. ಅಂದು ನಾನು 9ನೇ ಕ್ಲಾಸ್ ಓದುತ್ತಿದ್ದೆ. ಅಂದು ನಾನು ನೀಡಿದ್ದ ಹೇಳಿಕೆಯೂ ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು. ಫೋಟೋಶೂಟ್ ಮಾಡಿಸುವ ಸಂದರ್ಭದಲ್ಲಿ ವರ್ಜಿನ್ ಆಗಿದ್ದೆ, ನನಗೆ ಲೈಂಗಿಕ ಸಂಪರ್ಕದ ತಿಳುವಳಿಕಯೇ ಇರಲಿಲ್ಲ ಎಂದು ಹೇಳಿದ್ದೆ. ಈ ಹೇಳಿಕೆ ಬಹುತೇಕರಿಗೆ ಇಷ್ಟವಾಗಿರಲಿಲ್ಲ ಅಂತ ಮಮತಾ ಕುಲಕರ್ಣಿ ಹೇಳಿದ್ದಾರೆ. 

ಇದನ್ನೂ ಓದಿ: ಎಲ್ಲಾ ಮುಗಿದ್‌ ಮೇಲೆ ಸನ್ಯಾಸತ್ವದತ್ತ ಮನಸ್ಸು ಮಾಡಿದ್ರ ನಟಿ ಮಮತಾ ಕುಲಕರ್ಣಿ:ಕುಂಭಮೇಳದ ವೀಡಿಯೋ ವೈರಲ್

ನನಗೆ ಸೆಕ್ಸ್ ಬಗ್ಗೆಯೂ ಗೊತ್ತಿರಲಿಲ್ಲ. ಎಲ್ಲಿಯವರೆಗೂ ನಿಮಗೆ ಸೆಕ್ಸ್ ಬಗ್ಗೆ ಗೊತ್ತಿರಲ್ಲವೋ? ಅಲ್ಲಿಯವರೆಗೆ ನಿಮಗೆ ಯಾವುದರಲ್ಲಿಯೂ ಅಶ್ಲೀಲತೆ ಕಾಣಿಸಲ್ಲ ಎಂದು ಮಮತಾ ಕುಲಕರ್ಣಿ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ. ಹಾಗಾಗಿ ನನಗೆ ನ್ಯೂಡ್ ಫೋಟೋಶೂಟ್‌ ಬಗ್ಗೆಯೂ ಗೊತ್ತಿರಲಿಲ್ಲ. ನೀವು ನಂಬ್ತಿರೋ ಇಲ್ಲವೋ ನನಗೆ ಗೊತ್ತಿಲ್ಲ. ನಾನು ಕಳೆದ 23 ವರ್ಷಗಳಲ್ಲಿ ಯಾವುದೇ ಪೋರ್ನೊಗ್ರಾಫಿ ಅಥವಾ ಪೋರ್ನ್ ವಿಡಿಯೋಗಳನ್ನು ನೋಡಿಲ್ಲ ಎಂದು ಹೇಳಿದರು. 

ತಮ್ಮ ಮಾತು ಮುಂದುವರಿಸಿದ ಮಮತಾ ಕುಲಕರ್ಣಿ,  ತಮ್ಮ ಹಲವು ಹಾಡುಗಳ ಕುರಿತು ಮಾತನಾಡಿದರು. "ಛತ್ ಪರ್ ಸೋಯಾ ಥಾ " ಹಾಡಿನ ಕುರಿತು ಪ್ರಶ್ನಿಸಿದಾಗ, ಇದನ್ನು ಮಾಧುರಿ ದೀಕ್ಷಿತ್ ಅಥವಾ ಬೇರೆ ಡ್ಯಾನ್ಸರ್ ಬಳಿಯಲ್ಲಿಯೂ ಕೇಳಿ. ನಾವು ಕೇವಲ ಡ್ಯಾನ್ಸ್ ಸ್ಟೆಪ್ ಮೇಲೆ ಗಮನ ನೀಡುತ್ತೇವೆ. ನಮ್ಮ ಇಡೀ ಗಮನ ಕೇವಲ ಡ್ಯಾನ್ಸ್ ಸ್ಟೆಪ್ ಮೇಲೆ ಮಾತ್ರ ಇರುತ್ತೆಯೇ ಹೊರತು ಬೇರೆ ಯಾವುದರ ಮೇಲೆಯೂ ಅಲ್ಲ ಎಂದು ಹೇಳಿದರು. 

ಇದನ್ನೂ ಓದಿ: ಮಮತಾ ಕುಲಕರ್ಣಿಗೆ ಬಿಗ್ ಶಾಕ್; ಮಹಾಮಂಡಲೇಶ್ವರ ಪದವಿಯಿಂದ ವಜಾ, ಅಖಾಡದಿಂದಲೂ ಔಟ್!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಹೀರೋ ಆಗುವ ಮುನ್ನ ಶಾಕ್ ಕೊಟ್ಟ ಅಕೀರಾ ನಂದನ್: ರೇಣು ದೇಸಾಯಿ ಫೋನ್ ಮಾಡಿದಾಗ ಪವನ್ ನಕ್ಕಿದ್ದೇಕೆ?
'ನನಗೆ ಡೈವೋರ್ಸ್‌ ಸಿಗೋದು ಪಕ್ಕಾ..' ನ್ಯಾಷನಲ್‌ ಕ್ರಶ್‌ ಗಿರಿಜಾ ಓಕ್‌ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್‌