ಮಾಧುರಿ ಜೊತೆ 'ಆ' ಸೀನ್‌ನಲ್ಲಿ ನಟಿಸುವುದಕ್ಕೆ ಭಯಗೊಂಡಿದ್ದೆ, ಆದರೆ ಅವರ ವರ್ತನೆ ನನ್ನ ಭಯ ಕಡಿಮೆ ಮಾಡ್ತು

Published : Feb 02, 2025, 09:55 AM ISTUpdated : Feb 02, 2025, 11:52 AM IST
 ಮಾಧುರಿ ಜೊತೆ 'ಆ' ಸೀನ್‌ನಲ್ಲಿ ನಟಿಸುವುದಕ್ಕೆ ಭಯಗೊಂಡಿದ್ದೆ, ಆದರೆ ಅವರ ವರ್ತನೆ ನನ್ನ ಭಯ ಕಡಿಮೆ ಮಾಡ್ತು

ಸಾರಾಂಶ

ಬಾಲಿವುಡ್ ನಟ ಗೋವಿಂದ್ ನಾಮ್‌ದೇವ್ ಅವರು 1996 ರ ಪ್ರೇಮಗ್ರಂಥ ಚಿತ್ರದಲ್ಲಿ ಮಾಧುರಿ ದೀಕ್ಷಿತ್ ಜೊತೆಗಿನ ಬಲತ್ಕಾರದ ಸೀನ್ ಬಗ್ಗೆ ಮಾತನಾಡಿದ್ದಾರೆ. ಶೂಟಿಂಗ್ ಸಮಯದಲ್ಲಿ ತಾನು ಭಯಭೀತರಾಗಿದ್ದೆ ಎಂದು ಹೇಳಿದ್ದಾರೆ, ಆದರೆ ಮಾಧುರಿಯವರ ಸಹಕಾರದಿಂದಾಗಿ ಆ ದೃಶ್ಯವನ್ನು ಯಶಸ್ವಿಯಾಗಿ ಚಿತ್ರೀಕರಿಸಲಾಯಿತು.

ಬಾಲಿವುಡ್‌ನ ಹಿರಿಯ ಖಳ ನಟ ಗೋವಿಂದ್ ನಾಮ್‌ದೇವ್ ಅವರು ಸಿನಿಮಾಗಾಗಿ ಮಾಧುರಿ ದೀಕ್ಷಿತ್ ಜೊತೆಗಿನ ಬಲತ್ಕಾರದ ಸೀನ್‌ವೊಂದರಲ್ಲಿ ನಟಿಸಿದ ಸಂದರ್ಭವನ್ನು ಮೆಲುಕು ಹಾಕಿದ್ದಾರೆ. 1996ರಲ್ಲಿ ಬಿಡುಗಡೆಯಾದ ಪ್ರೇಮಗ್ರಂಥ ಸಿನಿಮಾದಲ್ಲಿ ನಟ ಗೋವಿಂದ್ ನಾಮ್‌ದೇವ್ ಅವರು ಮಾಧುರಿ ದೀಕ್ಷಿತ್ ಅವರ ಮೇಲೆ ಬಲತ್ಕಾರ ಮಾಡುವ ದೃಶ್ಯವಿದೆ. ಇದರ ಶೂಟಿಂಗ್ ವೇಳೆ ತಾವು ತುಂಬಾ ಭಯಗೊಂಡಿದ್ದಾಗಿ ಗೋವಿಂದ್ ನಾಮ್‌ದೇವ್‌ ಅವರು ಹೇಳಿದ್ದಾರೆ. 'ಹಿಂದಿ ರಶ್‌'ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ವೇಳೆ ಅವರು ಈ ವಿಚಾರವನ್ನು ನೆನಪಿಸಿಕೊಂಡಿದ್ದಾರೆ. 

ಈ ದೃಶ್ಯದ ಬಳಿಕ ಮಾಧುರಿಯೊಂದಿಗಿನ ಮಾತುಕತೆ ಮತ್ತು ಅವರು ತಮ್ಮೊಂದಿಗೆ ಸಹಕರಿಸಿದ ರೀತಿಯಿಂದಾಗಿ ತಾವು ಅವರ ಅಭಿಮಾನಿಯಾದೆ ಎಂದು  ನಾಮ್‌ದೇವ್ ಹೇಳಿದ್ದಾರೆ. ಆ ದೃಶ್ಯದ ಸಮಯದಲ್ಲಿ ಸಂಭವಿಸಬಹುದಾದ ಯಾವುದೇ ಅಹಿತಕರ ಘಟನೆಯಿಂದಾಗಿ ಅಂತಹ ದೃಶ್ಯವನ್ನು ಮಾಧುರಿ ಜೊತೆ ಮಾಡಲು ತಾನು ಭಯಭೀತನಾಗಿದ್ದೆ ಎಂಬುದನ್ನು ಅವರು ನೆನಪಿಸಿಕೊಂಡರು.

ಆ ದೃಶ್ಯದಲ್ಲಿ ನಟಿಸುವ ಮೊದಲು ಅವರು ಅಥವಾ ಮಾಧುರಿ ನರ್ವಸ್ ಆಗಿದ್ದರಾ ಮತ್ತು ಅವರು ಶೂಟಿಂಗ್‌ ಅನ್ನ ಹೇಗೆ ಮುಂದುವರಿಸಲು ನಿರ್ಧರಿಸಿದರು ಎಂದು ಗೋವಿಂದ್ ಅವರನ್ನು ಕೇಳಿದಾಗ, ಅವರು, 'ಈ ವಿಷಯದಲ್ಲಿ ನಾನು ಮಾಧುರಿಯ ಅಭಿಮಾನಿಯಾಗಿದ್ದೇನೆ. ನರ್ವಸ್ ಮತ್ತು ಸೂಕ್ಷ್ಮವಾಗಿರುವ ಹೊಸ ನಟನಿಗೆ ಉನ್ನತ ಮಟ್ಟದ ನಟನಿಂದ ಅಂತಹ ಸಹಕಾರ ಸಿಕ್ಕರೆ, ಅವರು ತಮ್ಮ ಶೇಕಡಾ 100 ನ್ನು ನೀಡಬಹುದು. ಸಾಮಾನ್ಯವಾಗಿ, ಅದು ಸಂಭವಿಸುವುದಿಲ್ಲ. ಒಬ್ಬ ನಟಿ ತನ್ನದೇ ಆದ ಫೇಮ್‌ನಲ್ಲಿ ಇರುತ್ತಾರೆ. ಆದರೆ ಮಾಧುರಿ ಅವರು ಮೊದಲಿನಿಂದಲೂ ಬಹಳಷ್ಟು ಸಹಕರಿಸಿದರು ಎಂದು ಗೋವಿಂದ್ ನಾಮ್‌ದೇವ್ ಉತ್ತರಿಸಿದರು.

ಮಾಧುರಿಯವರ ವರ್ತನೆ ನನಗೆ ತುಂಬಾ ಆರಾಮವಾಗಿರುವಂತೆ ಮಾಡಿತ್ತು. ನಾವು ಈ ದೃಶ್ಯವನ್ನು ಬಹುತೇಕ ಕೊನೆಯಲ್ಲಿ ಚಿತ್ರೀಕರಿಸಿದೆವು, ಈ ಸೀನ್‌ಗೂ ಮೊದಲು ನಾನು ಆಕೆಯ ಮುಂದೆ  ಕೈಗಳನ್ನು ಮಡಚಿ 'ನಾನು ಇದನ್ನು ಮಾಡುತ್ತೇನೆ' ಎಂದು ಹೇಳುತ್ತಿದ್ದೆ. ಅವಳು 'ಹೌದು, ಸರಿ' ಎಂದು ಹೇಳುತ್ತಿದ್ದಳು. ಅವಳು ತುಂಬಾ ಮುಕ್ತಳಾಗಿದ್ದಳು. ಆ ದೃಶ್ಯದ ವಾತಾವರಣ ಹಾಗಿತ್ತು. ನಂಬರ್ ಒನ್ ನಾಯಕಿಯೊಂದಿಗೆ ಏನಾದರೂ ಅಹಿತಕರ ಅಥವಾ ತಪ್ಪು ಸಂಭವಿಸಬಾರದು ಮತ್ತು ನಮ್ಮ ನಡುವೆ ವಿಷಯಗಳು ಕೆಟ್ಟದಾಗಿ ಹೋಗಬಹುದು ಎಂದು ನಾನು ಹೆದರುತ್ತಿದ್ದೆ. ಎಂದು ಗೋವಿಂದ್ ನಾಮ್‌ದೇವ್ ಹೇಳಿದ್ದಾರೆ. 

1996 ರಲ್ಲಿ ಬಿಡುಗಡೆಯಾದ ಪ್ರೇಮ್ ಗ್ರಂಥವನ್ನು ರಾಜೀವ್ ಕಪೂರ್ ನಿರ್ದೇಶಿಸಿದ್ದಾರೆ. ಥಾಮಸ್ ಹಾರ್ಡಿ ಅವರ ಇಂಗ್ಲಿಷ್ ಕಾದಂಬರಿ ಟೆಸ್ ಆಫ್ ದಿ ಡಿ'ಅರ್ಬರ್ವಿಲ್ಲೆಸ್ ನ ರೂಪಾಂತರವಾದ ಇದರಲ್ಲಿ ರಿಷಿ ಕಪೂರ್ ಮತ್ತು ಮಾಧುರಿ ದೀಕ್ಷಿತ್ ನಟಿಸಿದ್ದರು. ಮೇಲೆ ತಿಳಿಸಲಾದ ಲೈಂಗಿಕ ದೌರ್ಜನ್ಯದ ದೃಶ್ಯವು ಚಿತ್ರ ಬಿಡುಗಡೆಯ ಸಮಯದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು. ಅತ್ಯಾ*ಚಾರದ ವಿಷಯವನ್ನು ನಿಭಾಯಿಸಿದ್ದಕ್ಕಾಗಿ ಚಿತ್ರವು ಪ್ರಶಂಸೆಯನ್ನು ಗಳಿಸಿದರೂ, ದೃಶ್ಯವನ್ನು ಸಾಕಷ್ಟು ಸೂಕ್ಷ್ಮವಾಗಿ ತೋರಿಸಲಾಗಿಲ್ಲ ಎಂದು ಹಲವರು ಭಾವಿಸಿದ್ದರಿಂದ ಅದು ಕೆಲವು ಟೀಕೆಗಳನ್ನು ಎದುರಿಸಿತು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಮಿತಾಭ್ 14 ಚಿತ್ರಗಳ ರೀಮೇಕ್ ಮಾಡಿ, 33 ವರ್ಷಗಳ ಬಳಿಕ ಅಮಿತಾಭ್ ಜೊತೆ ನಟಿಸಿದ ನಟ ರಜನಿಕಾಂತ್!
Sonali Bendre: 'ಅಡುಗೆಮನೆಗೆ ಹೋಗ್ಬೇಡ ನೀನು'.. ಅಂತ ಖಡಕ್ ಆಗಿ ಹೇಳಿದ್ರು ನನ್ ಅತ್ತೆ!