
ಹಿಂದಿ ಸೇರಿದಂತೆ ಭಾರತದ 5 ಭಾಷೆಗಳಲ್ಲಿ ಯಶಸ್ವಿ ಸರಣಿ ಸಿನಿಮಾ ಎಂದರೆ ದೃಶ್ಯಂ. ಈಗ ಇದರ ಮೂರನೇ ಭಾಗ ಸೆಟ್ಟೇರುತ್ತಿದ್ದು, ಇದರಲ್ಲಿ ಇಬ್ಬರು ಸ್ಟಾರ್ ನಟರು ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ.
ಜನಪ್ರಿಯ ನಟ-ನಿರ್ದೇಶಕ ಜೋಡಿಯಾಗಿರುವ ಮೋಹನ್ ಲಾಲ್ ಮತ್ತು ಜಿತು ಜೋಸೆಫ್ ಅವರ ದೃಶ್ಯಂ ಸರಣಿಯ ಮೂರನೇ ಸಿನಿಮಾ ಸೆಟ್ಟೇರಿದೆ. ದೃಶ್ಯಂ 3 ಎಂದು ಹೆಸರಿಸಲಾಗಿರುವ ಸಿನಿಮಾದಲ್ಲಿ ಮೆಗಾಸ್ಟಾರ್ ಮಮ್ಮುಟ್ಟಿ ಸಹ ನಟಿಸುತ್ತಿದ್ದಾರೆ ಎಂಬುದು ಲೇಟೆಸ್ಟ್ ಅಪ್ಡೇಟ್.
ದೃಶ್ಯಂ ನಿರ್ದೇಶಕನಿಗೆ ಬಾಹುಬಲಿ ಡೈರೆಕ್ಟರ್ ರಾಜಮೌಳಿಯ ದೀರ್ಫ ಪತ್ರ.
ದೃಶ್ಯಂ 3 ಸಿನಿಮಾಗಾಗಿ ನಟರಾದ ಮೋಹನ್‌ಲಾಲ್ ಮತ್ತು ಮೆಗಾಸ್ಟಾರ್ ಮಮ್ಮುಟ್ಟಿ ಜೊತೆಯಾಗುತ್ತಿದ್ದಾರೆ. ನಿರ್ದೇಶಕ ಜಿತು ಜೋಸೆಫ್ ಈ ಸ್ಟಾರ್ ನಟರನ್ನು ಜೊತೆಯಾಗಿಸುತ್ತಿದ್ದಾರೆ.
ಮೂರನೆಯ ಭಾಗದಲ್ಲಿ ಮಮ್ಮುಟ್ಟಿ ತನಿಖಾ ಅಧಿಕಾರಿಯ ಪಾತ್ರ ಮಾಡಬಹುದೆಂದು ಹೇಳಲಾಗುತ್ತಿದೆ. ದೃಶ್ಯಂ 3 ರಲ್ಲಿ ಮಮ್ಮುಟ್ಟಿ ಅವರ ಅತ್ಯಂತ ಪ್ರಸಿದ್ಧ ಪಾತ್ರವಾದ ಸಿಬಿಐ ಅಧಿಕಾರಿ ಸೇತುರಾಮ ಅಯ್ಯರ್ ಪಾತ್ರದಲ್ಲಿ ನಟಿಸಬಹುದೆಂದು ಹೇಳಲಾಗಿದೆ.
ದೃಶ್ಯಂ 2 ಸಿನಿಮಾದ ಮೋಹನ್‌ಲಾಲ್ ತುಂಟ ಮಗಳು ಇವಳೇ .
ದೃಶ್ಯಂ 2 ಫೆಬ್ರವರಿ ತಿಂಗಳಲ್ಲಿ ಓಟಿಟಿ ಮೂಲಕ ಬಿಡುಗಡೆಯಾಗಿತ್ತು. ಈಗ ಮೂರನೇ ಭಾಗ ಯಾವಾಗ ಸೆಟ್ಟೇರುತ್ತದೆ ಎನ್ನುವ ಕುತೂಹಲ ಮೂಡಿದೆ. ಈಗ ಕನ್ನಡದಲ್ಲೂ ಇದರ ಮುಂದುವರಿದ ಕತೆ ಯಾವಾಗ ತೆರೆ ಮೇಲೆ ಬರಲಿದೆ ಎಂಬ ಕುತೂಹಲ ಇದೆ.
ಮಲಯಾಳಂ ಹಿಟ್ ಸಿನಿಮಾ ದೃಶ್ಯಂ 2 ಚಿತ್ರದ ಹಿಂದಿ ರಿಮೇಕ್ ಹಕ್ಕುಗಳನ್ನು ಪಡೆದುಕೊಂಡಿದ್ದ ಪನೋರಮಾ ಸ್ಟುಡಿಯೋಸ್ ಇಂಟರ್‌ನ್ಯಾಷನಲ್ ತನ್ನ ವಿರುದ್ಧ ದಾಖಲಾದ ಹಕ್ಕುಸ್ವಾಮ್ಯ ಮೊಕದ್ದಮೆ ಬಾಕಿ ಇತ್ಯರ್ಥ ಆಗುವವರೆಗೂ ಚಿತ್ರದ ಚಿತ್ರೀಕರಣ ಪ್ರಾರಂಭಿಸುವುದಿಲ್ಲ ಎಂದು ಬಾಂಬೆ ಹೈಕೋರ್ಟ್‌ಗೆ ಭರವಸೆ ನೀಡಿದೆ. ವಯೋಕಾಮ್ 18 ಮೀಡಿಯಾ ಪ್ರೈವೇಟ್ ಲಿಮಿಟೆಡ್ ಈ ಚಿತ್ರದ ಯಾವುದೇ ಸೀಕ್ವೆಲ್ ಹಿಂದಿ ಭಾಷೆಯಲ್ಲಿ ನಿರ್ಮಿಸದಂತೆ ಪನೋರಮಾ ಸ್ಟುಡಿಯೋಸ್ ಇಂಟರ್‌ನ್ಯಾಷನಲ್‌ನಲ್ಲಿ ತಡೆಯಾಜ್ಞೆ ಕೋರಿ ಹೈಕೋರ್ಟ್ ಮೆಟ್ಟಿಲೇರಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.