'ಕೃಷಿ ಜಮೀನು ರೆಸಾರ್ಟ್' ಲೈವ್ ಬಂದು ದಾಖಲೆ ಇಟ್ಟು ಮಾತಾಡಿ ಎಂದ ಉಪೇಂದ್ರ

By Suvarna NewsFirst Published May 26, 2021, 9:00 PM IST
Highlights

*  ಹಲವು ಆರೋಪಗಳಿಗೆ ರಿಯಲ್ ಸ್ಟಾರ್ ಉತ್ತರ
* ದಯವಿಟ್ಟು ದಾಖಲೆಗಳನ್ನು ಇಟ್ಟುಕೊಂಡು
* ನಾನು ಪಡೆದುಕೊಂಡ ಭೂಮಿಯಲ್ಲಿ ಇವತ್ತಿಗೂ ಕೃಷಿ ಮಾಡುತ್ತಿದ್ದೇನೆ

ಬೆಂಗಳೂರು( ಮೇ 26)  ಕೊರೋನಾ ಸಂಕಷ್ಟದ ಸಮಯದಲ್ಲಿ ರೈತರಿಗೆ ರಿಯಲ್ ಸ್ಟಾರ್ ಉಪೇಂದ್ರ ನೆರವಾಗುತ್ತಿದ್ದಾರೆ. ವಿವಿಧ ಕಡೆ ಉಪೇಂದ್ರ ಅವರ ಕೆಲಸಗಳು ಸುದ್ದಿಯಾಗುತ್ತಿವೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಅವರ ಮೇಲೆ ಕೆಲಸವರು ಆರೋಪವನ್ನು ಮಾಡಿದ್ದರು.

ಉಪೇಂದ್ರ ರೈತರ ಜಮೀನು ಕಸಿದುಕೊಂಡು ರೆಸಾರ್ಟ್  ಮಾಡಿಕೊಂಡಿದ್ದಾರೆ. ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ. ಆಡಳಿತದಲ್ಲಿ ಇರುವರನ್ನು ಖಂಡಿಸುತ್ತಿಲ್ಲ ಎಂಬ ಆರೋಪಗಳನ್ನು ಮಾಡಿದ್ದರು. ಅದೆಲ್ಲದಕ್ಕೆ ರಿಯಲ್ ಸ್ಟಾರ್ ಅವರೇ ಮುಂದೆ ಬಂದು ಉತ್ತರ ನೀಡಿದ್ದಾರೆ.

'ಗೆಲ್ಲಿಸಿ ಸಿಎಂ ಮಾಡ್ತೀರಾ, ಕೇಳಿದ ಉಪೇಂದ್ರ'

ಈ ವ್ಯಕ್ತಿಯನ್ನು ನಾಯಕನನ್ನಾಗಿ ಮಾಡಬೇಡಿ !! DO NOT MAKE THIS PERSON.... A LEADER !!! ಸಮಸ್ಯೆಗಳ ಪರಿಹಾರಕ್ಕಾಗಿ ನಡೆದ ಹೋರಾಟ, ಚಳುವಳಿಗಳು ಹೊಸ ನಾಯಕರನ್ನು ಸ್ರಷ್ಠಿಸಿದೆ ! ಆದರೂ ಆ ಸಮಸ್ಯೆಗಳು ಹಾಗೇ ಇದೆ ! ಎಂಬ ಲೈನ್ ಬರೆದುಕೊಂಡು ಅನೇಕ ವಿಚಾರ ಹಂಚಿಕೊಂಡಿದ್ದಾರೆ.

ಇಲ್ಲಿ ಯಾರೂ ನಾಯಕರಲ್ಲ,  ಇದೆಲ್ಲ ನಾವು ಮಾಡಿಕೊಂಡಿರುವ ವ್ಯವಸ್ಥೆ. ಇವತ್ತಿಗೂ ನಾನು ಪಡೆದುಕೊಂಡ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದೇನೆ. ದಯವಿಟ್ಟು ದಾಖಲೆ ಇಟ್ಟುಕೊಂಡು ಮಾತನಾಡಿ.  ಜಾತಿಯನ್ನು ಬಿಟ್ಟು ರಾಜಕಾರಣ ಮಾಡುವವರು ಮುಂದೆ ಬಂದರೆ ಪ್ರಜಾಕೀಯವೇ ಬೆಂಬಲ ನೀಡಲಿದೆ. ಪ್ರಜೆಗಳಿಂದ ದೊಡ್ಡ ಬದಲಾವಣೆ ಆಗಬೇಕಾಗಿದ್ದೆ ಪ್ರಜಾಕೀಯ. ದಾಖಲೆಗಳನ್ನು ನೋಡಿ ವಿಚಾರಿಸಿ ಮಾತನಾಡಿ ಎಂದು ತಿಳಿಸಿದ್ದಾರೆ.

ನಾವು ಪ್ರಣಾಳಿಕೆ ನೀಡಲ್ಲ. ಅಂಥ ಪರಿಸ್ಥಿತಿ ಈಗಿಲ್ಲ. ಸುಳ್ಳು ಭರವಸೆ ನೀಡುವ ಬದಲು ಹಾಗೆ ಇರುವುದು ಉತ್ತಮ. ದಯವಿಟ್ಟು ಇನ್ನೊಮ್ಮೆ ಯೋಚನೆ ಮಾಡಿ ಪ್ರಜೆಗಳಿಂದಲೇ ಬದಲಾವಣೆ ಸಾಧ್ಯ ಎಂದು  ಉಪೇಂದ್ರ ಹೇಳಿದ್ದಾರೆ.

 

click me!