ನಡುರಾತ್ರಿ ಕರೆದಾಗ ಹೋದ್ರೆ ಮಾತ್ರ ಚಾನ್ಸ್ ಸಿಗುತ್ತೆ; ಎ-ಲಿಸ್ಟ್‌ ಹೀರೋಗಳ ವಿರುದ್ಧ ಮಲ್ಲಿಕಾ ಗಂಭೀರ ಆರೋಪ

Published : Aug 02, 2022, 10:47 AM ISTUpdated : Aug 02, 2022, 10:49 AM IST
ನಡುರಾತ್ರಿ ಕರೆದಾಗ ಹೋದ್ರೆ ಮಾತ್ರ ಚಾನ್ಸ್ ಸಿಗುತ್ತೆ; ಎ-ಲಿಸ್ಟ್‌ ಹೀರೋಗಳ ವಿರುದ್ಧ ಮಲ್ಲಿಕಾ ಗಂಭೀರ ಆರೋಪ

ಸಾರಾಂಶ

ಬೋಲ್ಡ್ ನಟಿ ಎಂದೆ ಖ್ಯಾತಿ ಗಳಿಸಿರುವ ಮಲ್ಲಿಕಾ ಬಾಲಿವುಡ್ ನಲ್ಲಿ ತನ್ನದೆ ಆದ ಅಭಿಮಾನಿ ಬಳಗ ಸಂಪಾದಿಸಿದ್ದಾರೆ. ತೆರೆಮೇಲೆ ಸಖತ್ ಹಾಟ್ ಅಂಡ್ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದ ಮಲ್ಲಿಕಾ ಮಾತುಗಳು ಸಹ ಅಷ್ಟೆ ಬೋಲ್ಡ್ ಆಗಿಯೇ ಇರುತ್ತದೆ. ಸಿನಿಮಾರಂಗದ ಕರಾಳ ಮುಖವನ್ನು ಯಾವುದೇ ಮುಲಾಜಿಲ್ಲದೇ ತೆರೆದಿಟ್ಟಿದ್ದಾರೆ. ಬಾಲಿವುಡ್ ಕಾಸ್ಟಿಂಗ್ ಕೌಚ್ ಬಗ್ಗೆ ಮಲ್ಲಿಕಾ ಶೆರಾವತ್ ಅನೇಕ ಬಾರಿ ಬಹಿರಂಗ ಪಡಿಸಿದ್ದಾರೆ. ಸಿನಿಮಾರಂಗದಲ್ಲಿ ಅವಕಾಶಗಳು ಯಾಕೆ ಕಡಿಮೆಯಾಯಿತು ಎನ್ನುವ ಬಗ್ಗೆಯೂ ಮಲ್ಲಿಕಾ ಶೆರಾವತ್ ಮನಬಿಚ್ಚಿ ಮಾತನಾಡಿದ್ದಾರೆ. ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಲ್ಲಿಕಾ ಕಾಸ್ಟಿಂಗ್ ಕೌಚ್ ಯಿಂದ ತನ್ನ ವೃತ್ತಿಜೀವನದ ಮೇಲೆ ಹೇಗೆ ಪ್ರಭಾವ ಬೀರಿದೆ ಎನ್ನವುದನ್ನು ಬಹಿರಂಗ ಪಡಿಸಿದರು. 

ಬಾಲಿವುಡ್ ನ ಹಾಟ್ ನಟಿ ಎಂದೇ ಖ್ಯಾತಿಗಳಿಸಿರುವ ನಟಿ ಮಲ್ಲಿಕಾ ಶೆರಾವತ್ ಸದ್ಯ ಅಪರೂಪಕ್ಕೊಂದು ಸಿನಿಮಾ ಮಾಡುತ್ತಿದ್ದಾರೆ. ಅನೇಕ ವರ್ಷಗಳು ಚಿತ್ರರಂಗದಿಂದ ದೂರ ಸರಿದಿದ್ದ ನಟಿ ಇದೀಗ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ವೃತ್ತಿ ಜೀವನದಲ್ಲಿ ತರಹೇವಾರಿ ಪಾತ್ರಗಳನ್ನು ನಿರ್ವಹಿಸಿರುವ ಮಲ್ಲಿಕಾ ಸಹ ಕಲಾವಿದರನ್ನು ಕಂಗೆಡಿಸಿದ್ದರು. ಬೋಲ್ಡ್ ನಟಿ ಎಂದೆ ಖ್ಯಾತಿ ಗಳಿಸಿರುವ ಮಲ್ಲಿಕಾ ಬಾಲಿವುಡ್ ನಲ್ಲಿ ತನ್ನದೆ ಆದ ಅಭಿಮಾನಿ ಬಳಗ ಸಂಪಾದಿಸಿದ್ದಾರೆ. ತೆರೆಮೇಲೆ ಸಖತ್ ಹಾಟ್ ಅಂಡ್ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದ ಮಲ್ಲಿಕಾ ಮಾತುಗಳು ಸಹ ಅಷ್ಟೆ ಬೋಲ್ಡ್ ಆಗಿಯೇ ಇರುತ್ತದೆ. ಸಿನಿಮಾರಂಗದ ಕರಾಳ ಮುಖವನ್ನು ಯಾವುದೇ ಮುಲಾಜಿಲ್ಲದೇ ತೆರೆದಿಟ್ಟಿದ್ದಾರೆ. ಬಾಲಿವುಡ್ ಕಾಸ್ಟಿಂಗ್ ಕೌಚ್ ಬಗ್ಗೆ ಮಲ್ಲಿಕಾ ಶೆರಾವತ್ ಅನೇಕ ಬಾರಿ ಬಹಿರಂಗ ಪಡಿಸಿದ್ದಾರೆ. ಸಿನಿಮಾರಂಗದಲ್ಲಿ ಅವಕಾಶಗಳು ಯಾಕೆ ಕಡಿಮೆಯಾಯಿತು ಎನ್ನುವ ಬಗ್ಗೆಯೂ ಮಲ್ಲಿಕಾ ಶೆರಾವತ್ ಮನಬಿಚ್ಚಿ ಮಾತನಾಡಿದ್ದಾರೆ. ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಲ್ಲಿಕಾ ಕಾಸ್ಟಿಂಗ್ ಕೌಚ್ ಯಿಂದ ತನ್ನ ವೃತ್ತಿಜೀವನದ ಮೇಲೆ ಹೇಗೆ ಪ್ರಭಾವ ಬೀರಿದೆ ಎನ್ನವುದನ್ನು ಬಹಿರಂಗ ಪಡಿಸಿದರು. 

'ಎಲ್ಲಾ ಎ-ಲಿಸ್ಟರ್ ನಾಯಕರು ನನ್ನೊಂದಿಗೆ ಸಿನಿಮಾ ಮಾಡಲು ನಿರಾಕರಿಸಿದರು. ಏಕೆಂದರೆ ನಾನು ರಾಜಿ ಮಾಡಿಕೊಳ್ಳುವುದಿಲ್ಲ' ಎಂದು ಹೇಳಿದರು. 'ಇದು ತುಂಬಾ ಸಿಂಪಲ್, ಅವರು ನಿಯಂತ್ರಿಸಬಹುದಾದ ಮತ್ತು ಅವರೊಂದಿಗೆ ರಾಜಿ ಮಾಡಿಕೊಳ್ಳುವ ನಟಿಯರನ್ನು ಮಾತ್ರ ಅವರು ಇಷ್ಟಪಡುತ್ತಾರೆ. ಆದರೆ ನಾನು ಹಾಗಲ್ಲ, ನನ್ನ ವ್ಯಕ್ತಿತ್ವ ಅದಲ್ಲ. ನಾನು ಯಾರೊಬ್ಬರ ಆಸೆ ಮತ್ತು ಅಭಿಮಾನಗಳಿಗೆ ಒಳಗಾಗಲು ಬಯಸುವುದಿಲ್ಲ' ಎಂದು 45 ವರ್ಷದ ನಟಿ ಮಲ್ಲಿಕಾ ಹೇಳಿದರು. 
ರಾಜಿ ಮಾಡಿಕೊಳ್ಳುವುದು ಎಂದರೆ ಏನು ಅಂತ ಕೇಳಿದ ಪ್ರಶ್ನೆಗೆ ಮಲ್ಲಿಕಾ, 'ಕುಳಿತುಕೊಳ್ಳಿ, ನಿಲ್ಲು ಎಂದರೆ ಹಾಗೆ ಮಾಡಬೇಕು. ಮುಂಜಾನೆ 3 ಗಂಟೆಗೆ ಹೀರೋ ನಿಮಗೆ ಕರೆ ಮಾಡಿ, ನನ್ನ ಮನೆಗೆ ಬಾ ಎಂದು ಹೇಳಿದರೆ, ನೀವು ಆ ವಲಯದಲ್ಲಿ ಇದ್ದರೆ ಮತ್ತು ನೀವು ಆ ಚಿತ್ರ ಮಾಡುತ್ತಿದ್ದರೆ ಹೋಗಬೇಕು. ಒಂದು ವೇಳೆ ನೀವು ಹೋಗದಿದ್ದರೆ, ನೀವು ಸಿನಿಮಾದಿಂದ ಔಟ್ ಆಗುತ್ತೀರಿ' ಎಂದು ಸ್ಟಾರ್ ಹೀರೋಗಳ ವಿರುದ್ಧ ಗಂಭೀರ ಆರೋಪ ಮಾಡಿದರು. 

ನಿರ್ಮಾಪಕರೊಬ್ಬರ ಹಾಟ್ ವಿಚಾರವೊಂದನ್ನು ಬಹಿರಂಗಪಡಿಸಿದ ಮಲ್ಲಿಕಾ ಶೆರಾವತ್‌

    ಮಲ್ಲಿಕಾ ಶೆರಾವತ್ 2004ರಲ್ಲಿ ಬಂದ ಮರ್ಡರ್ ಸಿನಿಮಾದ ಅದ್ಭುತ ಪಾತ್ರಕ್ಕಾಗಿ  ಖ್ಯಾತಿಗಳಿಸಿದ್ದಾರೆ. ಬಳಿಕ ಮಲ್ಲಿಕಾ ಸಿನಿಮಾಗಳ ಸಂಖ್ಯೆ ಕಡಿಮೆಯಾಯಿತು. ಈ ಬಗ್ಗೆ ಮಾತನಾಡಿದ ನಟಿ, 'ನಾನು ನನ್ನ ಕೈಲಾದಷ್ಟು ಪ್ರಯತ್ನಿಸಿದೆ. ಒಳ್ಳೆಯ ಪಾತ್ರಗಳನ್ನು ಹುಡುಕಲು ಪ್ರಯತ್ನಿಸಿದೆ. ನಾವೆಲ್ಲರೂ ಮಾಡುವಂತೆ ನಾನು ಕೆಲವು ತಪ್ಪುಗಳನ್ನು ಮಾಡಿದ್ದೇನೆ. ಕೆಲವು ಪಾತ್ರಗಳು ಚೆನ್ನಾಗಿದ್ದವು, ಕೆಲವು ಚೆನ್ನಾಗಿಲ್ಲ. ಇದು ಕಲಾವಿದರ ಪ್ರಯಾಣದ ಭಾಗವಾಗಿದೆ, ಆದರೆ ಒಟ್ಟಾರೆಯಾಗಿ, ಇದು ಅದ್ಭುತವಾಗಿತ್ತು' ಎಂದು ಹೇಳಿದರು. 

    Mallika Sherawat: ಬೇಕಾದಷ್ಟು ಹಣ ಮಾಡಿದೆ, ಈಗ ಕಮ್ಮಿ ಕೆಲಸ ಮಾಡ್ತೀನಿ ಎಂದ ಹಾಟ್ ನಟಿ

    2002ರಲ್ಲಿ ಬಾಲಿವುಡ್ ಗೆ ಎಂಟ್ರಿ ಕೊಟ್ಟ ಮಲ್ಲಿಕಾ ವಿಶೇಷ ಪಾತ್ರದ ಮೂಲಕ ಅಭಿಮಾನಿಗಳ ಮುಂದೆ ಬಂದರು. ಬಳಿಕ 2003ರಲ್ಲಿ ಬಂದ ಖ್ವಾಹಿಶ್ ಸಿನಿಮಾ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟರು. ನಂತರ ಬಂದ ಮರ್ಡರ್ ಸಿನಿಮಾ ದೊಡ್ಡ ಮಟ್ಟದ ಬ್ರೇಕ್ ತಂದು ಕೊಡ್ತು. ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಮಲ್ಲಿಕಾ 2019ರಲ್ಲಿ ವೆಬ್ ಸೀರಿಸ್ ಮೂಲಕ ಒಟಿಟಿಯಲ್ಲಿ ಮಿಂಚಿದ್ದರು. ಸದ್ಯ ಮಲ್ಲಿಕಾ ಅನೇಕ ವರ್ಷಗಳ ಬಳಿಕ RK/RKay ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.  ಮಲ್ಲಿಕಾ ಅಮೆರಿಕದ ಲಾಸ್ ಏಂಜಲೀಸ್ ನಲ್ಲಿ ನೆಲೆಸಿದ್ದಾರೆ. ಭಾರತಕ್ಕಿಂತ ಹೆಚ್ಚಾಗಿ ಅಮೆರಿಕದಲ್ಲೇ ಸಮಯ ಕಳೆಯುತ್ತಿದ್ದಾರೆ. 

    PREV

    ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

    Read more Articles on
    click me!

    Recommended Stories

    ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
    ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?