ಅಪ್ಪ ಹಿಂದು, ಅಮ್ಮ ಮುಸ್ಲಿಂ: ಈಗ NCB ಆಫೀಸರ್ ಜಾತಿ ಪ್ರಶ್ನೆ ಯಾಕೆ ?

By Suvarna NewsFirst Published Oct 26, 2021, 9:35 AM IST
Highlights
  • ಎನ್‌ಸಿಬಿ ಆಫೀಸರ್ ಸಮೀರ್ ವಾಂಖೆಡೆಯ ಜಾತಿ ಪ್ರಶ್ನೆ
  • ಅಪ್ಪ ಹಿಂದು-ಅಮ್ಮ ಮುಸ್ಲಿಂ, ಈಗ ಈ ಚರ್ಚೆ ಶುರುವಾಗಿದ್ಯಾಕೆ ?

ಮಹಾರಾಷ್ಟ್ರದ ಸಚಿವ ನವಾಬ್ ಮಲಿಕ್ ಅವರು ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಅವರ ಜನ್ಮ ಪ್ರಮಾಣಪತ್ರವನ್ನು ಟ್ವೀಟ್ ಮಾಡಿದ್ದಾರೆ. ಈ ಮೂಲಕ ಆರ್ಯನ್ ಖಾನ್ ಡ್ರಗ್ಸ್ ಕೇಸ್‌ನಲ್ಲಿ ಸುದ್ದಿಯಾಗಿರೋ ಎನ್‌ಸಿಬಿ ಆಫೀಸರ್ ಜಾತಿ ಕುರಿತ ಚರ್ಚೆ ಶುರುವಾಗಿದೆ.

ಸಮೀರ್ ದಾವೂದ್ ವಾಂಖೆಡೆಯ ಫೋರ್ಜರಿ ಇಲ್ಲಿಂದ ಪ್ರಾರಂಭವಾಯಿತು ಎಂದು ಅವರು ಬರೆದಿದ್ದಾರೆ. ಅವರ ತಂದೆ ಜ್ಞಾನದೇವ್ ಕಚ್ರುಜಿ ವಾಂಖೆಡೆ ಹಿಂದೂ ಮತ್ತು ಅವರ ತಾಯಿ ಜಹೀದಾ ಮುಸ್ಲಿಂ ಎಂದು ವಾಂಖೆಡೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ನಾನು ಬಹು-ಧರ್ಮೀಯ ಮತ್ತು ಜಾತ್ಯತೀತ ಕುಟುಂಬಕ್ಕೆ ಸೇರಿದವನು. ನನ್ನ ಪರಂಪರೆಯ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಅವರು ಹೇಳಿದ್ದಾರೆ. ಈ ಮೂಲಕ ತಮ್ಮ ಜಾತಿ ಬಗ್ಗೆ ಪ್ರಶ್ನಿಸಿದ ಸಚಿವರಿಗೆ ತಕ್ಕ ಉತ್ತರ ಕೊಟ್ಟಿದ್ದಾರೆ.

25 ಕೋಟಿ ಸುಲಿಗೆ: ಸಮೀರ್‌ ವಾಂಖೇಡೆ ವಿರುದ್ಧ ತನಿಖೆ!

ಮುಂಬೈನಿಂದ ಗೋವಾಗೆ ಪ್ರಯಾಣಿಸುತ್ತಿದ್ದ ಐಷರಾಮಿ ಹಡಗಿನಲ್ಲಿ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿಗೆ ಮುಂಬೈ ಎನ್‌ಸಿಬಿ ತಂಡ ದಾಳಿ ನಡೆಸಿದೆ. ಎನ್‌ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ನೇತೃತ್ವದಲ್ಲಿ ದಾಳಿ ನಡೆದಿತ್ತು. ಬಾಲಿವುಡ್ ನಟ ಶಾರೂಖ್ ಖಾನ್ ಮಗ ಆರ್ಯನ್ ಖಾನ್ ಸೇರಿದಂತೆ 20ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿತ್ತು.

ಆರ್ಯನ್ ಖಾನ್, ಅರ್ಭಾಝ್ ಮರ್ಚಂಡ್, ಮುನ್ಮುನ್ ಧಮೇಚಾ ಬಂಧನದಲ್ಲಿದ್ದಾರೆ. ಆರ್ಯನ್ ಖಾನ್‌ಗೆ ಈಗಾಗಲೇ ವಿಶೇಷ ನ್ಯಾಯಾಲಯ ಹಲವು ಬಾರಿ ಜಾಮೀನು ನಿರಾಕರಿಸಿದ್ದು, ಆರ್ಯನ್ ತಂಡ ಮುಂಬೈ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

"

ಈ ನಡುವೆ ಬಾಲಿವುಡ್ ನಟಿ ಅನನ್ಯಾ ಪಾಂಡೆಗೂ ಕಂಟಕ ಎದುರಾಗಿದೆ. ಆರ್ಯನ್‌ಗೆ ಡ್ರಗ್ಸ್ ಡೀಲರ್ ಕಾಂಟ್ಯಾಕ್ಟ್ ಒದಗಿಸಿದ ಆರೋಪ ಎದುರಿಸುತ್ತಿರುವ ನಟಿ ಈಗಾಗಲೇ ವಿಚಾರಣೆಗೂ ಹಾಜರಾಗಿದ್ದಾರೆ. ಇಂದು ಆರ್ಯನ್ ಖಾನ್ ಜಾಮೀನು ಅರ್ಜಿಯನ್ನು ಮುಂಬೈ ಹೈಕೋರ್ಟ್ ವಿಚಾರಣೆ ನಡೆಸಲಿದೆ. ವೀಶೇಷ ನ್ಯಾಯಾಲಕ ಸ್ಟಾರ್ ಕಿಡ್‌ಗೆ ಅ.30ರ ತನಕ ನ್ಯಾಯಾಂಗ ಬಂಧನ ವಿಧಿಸಿದೆ.

click me!