
ಅಮೆರಿಕ ಕಿರುತೆರೆಯ ಜನಪ್ರಿಯ ಸೀರಿಯಲ್ 'ಫ್ರೆಂಡ್ಸ್' (Friends) ಮೂಲಕ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದ ನಟ ಜೇಮ್ಸ್ ಮೈಕಲ್ (James Michael Tyler) ಕ್ಯಾನ್ಸರ್ ಗೆಲ್ಲಲು ಸಾಧ್ಯವಾಗದೇ ನಿಧನರಾಗಿದ್ದಾರೆ. 2018ರಲ್ಲಿ ಜೇಮ್ಸ್ ಅವರಿಗೆ ಕ್ಯಾನ್ಸರ್ (Cancer) ಇರುವುದಾಗಿ ತಿಳಿದು ಬಂದಿದ್ದು, ಅಂದಿನಿಂದ ಚಿಕಿತ್ಸೆ ಪಡೆಯುತ್ತಲೇ ನಟಿಸುತ್ತಿದ್ದರು.
59 ವರ್ಷ ಜೇಮ್ಸ್ ಲಾಸ್ ಏಂಜಲಿಸ್‌ನ (Los Angeles) ತಮ್ಮ ನಿವಾಸದಲ್ಲಿ ಅಕ್ಟೋಬರ್ 24ರಂದು ಕೊನೆ ಉಸಿರೆಳೆದಿದ್ದಾರೆ. ಜೇಮ್ಸ್ ನಿಧನ ಸುದ್ದಿ ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಫ್ರೆಂಡ್ಸ್ ಸೀರಿಸ್ ಅಮೆರಿಕದಲ್ಲಿ ಮಾತ್ರವಲ್ಲದೇ ಹಲವಾರು ದೇಶಗಳಲ್ಲಿಯೂ ವೀಕ್ಷಿಸುತ್ತಿದ್ದರು. ಭಾರತದಿಂದಲೂ (India) ಅಪಾರ ಫಾಲೋವರ್ಸ್ ಹೊಂದಿದ್ದ ಜೇಮ್ಸ್ ಸಾವಿನ ವಿಚಾರ ಕೇಳಿ ಕಂಬನಿ ಮಿಡಿದಿದ್ದಾರೆ. 2018ರಿಂದ Prostate Cancer ಚಿಕಿತ್ಸೆ ಪಡೆಯುತ್ತಿದ್ದ ಜೇಮ್ಸ್ ಎಲ್ಲಿಯೂ ಈ ಬಗ್ಗೆ ಹೇಳಿಕೊಂಡಿರಲಿಲ್ಲ ಆದರೆ ಜೂನ್ 2021ರಲ್ಲಿ ಬಹಿರಂಗ ಪಡಿಸಿದ್ದರು.
ಜೇಮ್ಸ್ 10 ವರ್ಷವಿದ್ದಾಗ ತಂದೆಯನ್ನು ಕಳೆದುಕೊಂಡರು. ತಂದೆ USAF ಕ್ಯಾಪ್ಟನ್ ಆಗಿದ್ದರು. 11ನೇ ವಯಸ್ಸಿಗೆ ತಾಯಿಯನ್ನೂ ಕಳೆದುಕೊಂಡಿದ್ದರು. ಸೌತ್ ಕ್ಯಾರೋಲಿನಾದಲ್ಲಿ (South Carolina) ಸಹೋದರಿ ಇದ್ದ ಕಾರಣ 12ನೇ ವಯಸ್ಸಿಗೆ ಮಿಸಿಸಿಪಿಯಿಂದ (Mississippi) ಸಂಪೂರ್ಣವಾಗಿ ಅಕ್ಕನ ಜೊತೆಗಿರಲು ಶಿಫ್ಟ್ ಆದರು. ಜಾರ್ಜಿಯಾ ವಿಶ್ವವಿದ್ಯಾಲಯದಲ್ಲಿ ( University of Georgia) ಫೈನ್ ಆರ್ಟ್ಸ್ ಮಾಸ್ಟರ್ಸ್ ಮಾಡಿರುವ ಜೇಮ್ಸ್ ಲಾಸ್ ಏಂಜಲೀಸ್‌ನಲ್ಲಿ ಪ್ರೊಡಕ್ಷನ್ ಅಸಿಸ್ಟೆಂಟ್ ಆಗಿ ಕೆಲಸ ಆರಂಭಿಸಿದ್ದರು.
1995ರಲ್ಲಿ ಜೇಮ್ಸ್ ಬಾರ್ಬರಾ ಚಾಡ್ಸೆ ಅವರನ್ನು ಮದುವೆಯಾದರು (Marriage), ಅದರೆ 2003ರಲ್ಲಿ ಇಬ್ಬರೂ ದೂರವಾಗಿ, 2014ರಲ್ಲಿ ವಿಚ್ಛೇದನ ಪಡೆದುಕೊಂಡರು. 2017ರಲ್ಲಿ ಜೆನ್ನಿಫರ್ ಕಾರ್ನೋ ಅವರನ್ನು ಮದುವೆಯಾಗಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.