ನವಾಝುದ್ದೀನ್ ಜೊತೆ ಸೆಕ್ಸ್ ಸೀನ್ ನಂತ್ರ ನೆಲದಲ್ಲಿ ಬಿದ್ದು ಅತ್ತಿದ್ರಂತೆ ಈ ನಟಿ

Published : Oct 25, 2021, 04:42 PM ISTUpdated : Oct 25, 2021, 07:07 PM IST
ನವಾಝುದ್ದೀನ್ ಜೊತೆ ಸೆಕ್ಸ್ ಸೀನ್ ನಂತ್ರ ನೆಲದಲ್ಲಿ ಬಿದ್ದು ಅತ್ತಿದ್ರಂತೆ ಈ ನಟಿ

ಸಾರಾಂಶ

ಸೆಕ್ಸ್ ಸೀನ್(Sex Scene) ಮಾಡಿದ ಮೇಲೆ ನೆಲದಲ್ಲಿ ಬಿದ್ದು ಅತ್ತಿದ್ದ ನಟಿ ಸೇಕ್ರೆಡ್ ಗೇಮ್ಸ್‌ನ(Secred Games) ಇಂಟಿಮೇಟ್ ಸೀನ್ ಶೂಟಿಂಗ್ ಕಥೆ ಇದು

ಸೇಕ್ರೆಡ್ ಗೇಮ್ಸ್‌ನಲ್ಲಿ(Sacred Games) ತೃತೀಯಲಿಂಗಿಯಾಗಿ ಕುಕೂ ಪಾತ್ರದಲ್ಲಿ ನಟಿಸಿದ್ದ ನಟಿ ಕುಬ್ರಾ ಸೇಠ್(Kubra Sait) ಶೋಗಾಗಿ ಇಂಟಿಮೇಟ್ ಸೆಕ್ಸ್ ಸೀನ್ ಮಾಡಿರುವುದರ ಬಗ್ಗೆ ಮಾತನಾಡಿದ್ದಾರೆ. ಸೀನ್ ಮಾಡಿ ನಂತರ ನೆಲಕ್ಕೆ ಬಿದ್ದು ತಾನು ಹೇಗೆ ಅತ್ತಿದ್ದೆ ಎಂಬುದನ್ನೂ ನಟಿ ರಿವೀಲ್ ಮಾಡಿದ್ದಾರೆ. ನೆಟ್‌ಫ್ಲಿಕ್ಸ್ ಒರಿಜಿನಲ್ ಸಿರೀಸ್‌ನಲ್ಲಿ ನಟಿ ಕುಬ್ರಾ ನಟ ನವಾಝುದ್ದೀನ್ ಸಿದ್ಧಿಕಿ ಜೊತೆ ನಟಿಸಿದ್ದರು.

ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ ಇಂಟಿಮೇಟ್ ಸೀನ್ ಶೂಟಿಂಗ್ ಬಗ್ಗೆ ಮಾತನಾಡಿದ್ದಾರೆ. ಸೆಕ್ಸ್ ಸೀನ್ ಬರೋಬ್ಬರಿ 7 ಬಾರಿ ಶೂಟ್ ಮಾಡಲಾಗಿತ್ತು. ನಿರ್ದೇಶಕ ಅನುರಾಗ್ ಕಷ್ಯಪ್ ಈ ಸೀನ್‌ ಬೇರೆ ಬೇರೆ ಆಂಗಲ್‌ನಲ್ಲಿ ಚಿತ್ರೀಕರಿಸಲು ಬಯಸಿದ್ದರು. ಎಲ್ಲವೂ ಸರಾಗವಾಗಿ ನೀಟಾಗಿ ಸಾಗಲು ಸೀನ್ ಕಟ್ ಮಾಡಲಿಲ್ಲ ಎಂದಿದ್ದಾರೆ ನಟಿ.

National Film Awards 2021: 4ನೇ ಬಾರಿ ಅತ್ಯುತ್ತಮ ನಟಿ ಪ್ರಶಸ್ತಿ ಮುಡಿಗೇರಿಸಿಕೊಂಡ ಕಂಗನಾ

ನಾನು ಮಾಡಿದ ಮೊದಲ ಟೇಕ್ ಮಾಡಿದ ನಂತರ ಅವರು ನಾವು ಮುಂದಿನದಕ್ಕೆ ಬೇಗನೆ ಹೋಗುತ್ತೇವೆ ಎಂದು ಹೇಳಿದ್ದರು. ಎರಡನೆಯ ಸೀನ್ ಆದಾಗಲೂ ಮುಂದಿನದಕ್ಕೆ ಬೇಗನೆ ಹೋಗುತ್ತೇವೆ. 3ನೇ ಬಾರಿಯೂ ನಾನು ಅದನ್ನು ಮಾಡಿದಾಗ, ಅವರು ಕ್ಯಾಮೆರಾವನ್ನು ನವಾಜ್  ಕಡೆ ಬದಲಾಯಿಸಿದರು. ನಂತರ ನಾವು ಬೇರೆ ಏನೋ ಮಾಡಿದೆವು. ಏಳನೇ ಬಾರಿ ನಾನು ಅದನ್ನು ಮಾಡಿದಾಗ ನನಗೆ ಸಾಕಾಗಿಹೋಗಿತ್ತು. ಆ ಸಮಯದಲ್ಲಿ ನಾನು ನಿಜವಾಗಿ ಬ್ರೇಕ್‌ಡೌನ್ ಆದೆ. ನಾನು ತುಂಬಾ ಭಾವುಕಳಾಗಿದ್ದೆ. ನಂತರ ಅವನು ನನ್ನ ಬಳಿಗೆ ಬಂದು 'ಧನ್ಯವಾದಗಳು. ನಾನು ನಿನ್ನನ್ನು ಹೊರಗೆ ನೋಡುತ್ತೇನೆಯೇ? ಎಂದಾಗ ಆ ದೃಶ್ಯವು ಮುಗಿದಿದೆ ಎಂದು ನನಗೆ ಅರ್ಥವಾಯಿತು ಎಂದಿದ್ದಾರೆ.

ನಾನು ನೆಲದ ಮೇಲೆ ನಿಂತು ಅಳುತ್ತಿದ್ದೆ. ನಾನು ಸುಮ್ಮನೆ ಅಳುತ್ತಿದ್ದೆ ಮತ್ತು ಅಳುತ್ತಿದ್ದೆ. ನನ್ನ ದೃಶ್ಯ ಇನ್ನೂ ಉಳಿದಿರುವ ಕಾರಣ ನೀವು ಹೊರಗೆ ಹೋಗಬೇಕು ಎಂದು ನವಾಜ್ ಹೇಳಿದರು. ಅವರ ಪ್ರವೇಶದ ದೃಶ್ಯವನ್ನು ಇನ್ನೂ ಚಿತ್ರೀಕರಿಸಲು ಉಳಿದಿದೆ ಎಂದು ಅವರು ನಕ್ಕಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?
10 ಭಾಷೆಗಳಲ್ಲಿ 90 ಸಿನಿಮಾಗಳು, ಗಂಗೂಲಿ ಜೊತೆ ಅಫೇರ್ ವದಂತಿ.. 50 ವರ್ಷವಾದರೂ ಮದುವೆಯಾಗದ ನಟಿ ಯಾರು?