
ಕೊಚ್ಚಿ(ನ. 25) ಪ್ರತಿಷ್ಠಿತ ಆಸ್ಕರ್ ಪುರಸ್ಕಾರಕ್ಕೆ ಭಾರತದ 'ಜಲ್ಲಿಕಟ್ಟು' ಸಿನಿಮಾ ಆಸ್ಕರ್ ಆಯ್ಕೆಯಾಗಿದೆ. ಮಲಯಾಳಂ ಸಿನಿಮಾ 'ಜಲ್ಲಿಕಟ್ಟು' ಆಸ್ಕರ್ 2021ರ ಪ್ರಶಸ್ತಿಗೆ ಭಾರತದಿಂದ ನೇರವಾಗಿ ಆಯ್ಕೆಯಾಗಿದ್ದು ಸಿನಿತಂಡ ಸಂಭ್ರಮ ಹಂಚಿಕೊಂಡಿದೆ.
ಇದನ್ನು ಲಿಜೊ ಜೋಸ್ ಪಿಲ್ಲಿಸ್ಸೆರಿ ನಿರ್ದೇಶನ ಮಾಡಿದ್ದರು. 2019ರಲ್ಲಿ ತೆರೆ ಕಂಡಿದ್ದ ಜಲ್ಲಿಕಟ್ಟು ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆಂಟನಿ ವಾರ್ಘೀಸ್, ಚೆಂಬನ್ ವಿನೋದ್ ಜೋಸ್ ಮುಂತಾದವರು ಸಿನಿಮಾದಲ್ಲಿ ನಟಿಸಿದ್ದರು.
ಹದಿನೈದು ವರ್ಷದಲ್ಲೇ ಬಲವಂತದ ಸೆಕ್ಸ್ ಮಾಡಿದ್ದ ನಟ
'ಮೋಯಸ್ಟ್' ಎಂಬ ಸಣ್ಣ ಕಥೆಯ ಮೇಲೆ ಈ ಸಿನಿಮಾ ಆಧಾರಿತವಾಗಿದೆ. ಹರೀಶ್ ಎಸ್ ಎನ್ನುವವರು ಈ ಕಥೆ ಬರೆದಿದ್ದರು. ಆರ್ ಜಯಕುಮಾರ್ ಜೊತೆಗೆ ಹರೀಶ್ ಕೂಡ ಈ ಸಿನಿಮಾಕ್ಕೆ ಚಿತ್ರಕಥೆ ಬರೆದಿದ್ದರು. 2019ರಲ್ಲಿ ಈ ಸಿನಿಮಾ ರಿಲೀಸ್ ಆಗಿತ್ತು. ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
27 ಸಿನಿಮಾಗಳ ಮಧ್ಯೆ ಮಲಯಾಳಂನ ಜಲ್ಲಿಕಟ್ಟು ಚಿತ್ರ ಆಯ್ಕೆ ಆಗಿದೆ. ಕಳೆದ ವರ್ಷ ಭಾರತದಿಂದ ಅಧಿಕೃತವಾಗಿ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡಿದ್ದ ರಣವೀರ್ ಸಿಂಗ್ ನಟನೆಯ 'ಗಲ್ಲಿ ಬಾಯ್' ಸಿನಿಮಾ ಆಸ್ಕರ್‌ಗೆ ಆಯ್ಕೆಯಾಗಿತ್ತು.
ಏಪ್ರಿಲ್ 25, 2021ರಲ್ಲಿ 93ನೇ ಅಕಾಡೆಮಿ ಅವಾರ್ಡ್ಸ್ ನಡೆಯಲಿದೆ. ಕೊರೊನಾದಿಂದಾಗಿ ಈ ಕಾರ್ಯಕ್ರಮ ಸ್ವಲ್ಪ ತಡವಾಗಿದೆ. ಫೆಬ್ರವರಿ 28ರಂದು ಈ ಕಾರ್ಯಕ್ರಮ ನಡೆಯಬೇಕಾಗಿತ್ತು. 2021ರ ಫೆಬ್ರವರಿಯಲ್ಲಿ ಯಾವ ಸಿನಿಮಾಗಳು ಈ ಪ್ರಶಸ್ತಿಗಳಿಗೆ ಫೈನಲ್ ಪಟ್ಟಿಗೆ ಏರುತ್ತವೆ ಎಂಬುದು ಗೊತ್ತಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.