ದೆಹಲಿ ಗ್ಯಾಂಗ್ ರೇಪ್ ಆಧರಿತ ವೆಬ್‌ ಶೋಗೆ ಸಿಕ್ತು ಅಂತಾರಾಷ್ಟ್ರೀಯ ಎಮಿ ಪ್ರಶಸ್ತಿ

By Suvarna News  |  First Published Nov 24, 2020, 4:05 PM IST

ದೇಶವನ್ನೇ ಬೆಚ್ಚಿ ಬೀಳಿಸಿದ್ದ ದೆಹಲಿ ಗ್ಯಾಂಗ್ ರೇಪ್ ಘಟನೆಯಾಧರಿತ ಸಿರೀಸ್‌ಗೆ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಈ ಮೂಲಕ ಈ ಪ್ರಶಸ್ತಿ ಪಡೆದ ಮೊದಲ ಹಿಂದಿ ವೆಬ್ ಸಿರೀಸ್ ಎಂಬ ಕೀರ್ತಿಗೂ ಪಾತ್ರವಾಗಿದೆ


ರಿಚಿ ಮೆಹ್ತಾ ನಿರ್ದೇಶನದ ದೆಹಲಿ ಕ್ರೈಂ ಸಿರೀಸ್‌ಗೆ ಅಂತಾರಾಷ್ಟ್ರೀಯ ಎಮ್ಮಿ ಪ್ರಶಸ್ತಿ ಬಂದಿದೆ. ಶೆಫಾಲಿ ಶಾ ಪ್ರಮುಖ ಪಾತ್ರದಲ್ಲಿ ನಟಿಸಿದ ಈ ಶೋ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಿತ್ತು. ಈ ಸಿನಿಮಾ ಅಂತಾರಾಷ್ಟ್ರೀಯ ಎಮ್ಮಿ ಪ್ರಶಸ್ತಿ ಪಡೆದ ಮೊದಲ ಹಿಂದಿ ಭಾಷೆಯ ಸಿರೀಸ್ ಆಗಿದೆ.

ದೆಹಲಿ ಗ್ಯಾಂಗ್‌ರೇಪ್ ಘಟನೆ ಆಧರಿತ ಸಿರೀಸ್‌ ಬೆಸ್ಟ್ ಡ್ರಾಮಾ ಸಿರೀಸ್ ಆಗಿ ಹೊರಹೊಮ್ಮಿದೆ. ಈ ಕ್ಯಾಟಗರಿಯಲ್ಲಿ ಅರ್ಜಟೈಂನಾದ ದಿ ಬ್ರೋನ್ಸ್ ಗಾರ್ಡನ್, ಜರ್ಮನಿಯ ಚರಿತೆ, ಯುಕೆಯ ಕ್ರಿಮಿನಲ್ ನಾಮಿನಿಯಾಗಿತ್ತು.

Tap to resize

Latest Videos

undefined

ಮಕ್ಕಳು ಅಂದ್ರೆ ಬರೀ ಕಿರಿಕಿರಿ ಅಂತಾರೆ ಈ ನಟಿ..!

ಇದೀಗ ನೆಟ್ಟಿಗರು ದೆಹಲಿ ಕ್ರೈಂ ತಂಡದ ಕಲಾವಿದರಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಟ್ವಿಟರ್‌ನಲ್ಲಿಯೂ ಇದು ಟ್ರೆಂಡ್ ಆಗಿದೆ. ಈ ಸಿರೀಸ್‌ನಲ್ಲಿ ಮನ ನೋಯಿಸುವ ದೃಶ್ಯಗಳಿದ್ದರೂ ಇದು ಅತ್ಯಂತ ಒಳ್ಳೆಯ ಸಿರೀಸ್ ಆಗಿತ್ತು ಎಂದಿದ್ದಾರೆ ನಟ್ಟಿಗರು

The International Emmy for Drama Series goes to “Delhi Crime” produced by / / , ! pic.twitter.com/kA5pHCuTC4

— International Emmy Awards (@iemmys)
click me!