ಕಿಡ್ನಿ ವೈಫಲ್ಯ: ಕೊನೆಗಾಲದಲ್ಲಿ ನೆರವಿವಾಗಿ ಕೈಚಾಚಿದ್ದ ಹಿರಿಯ ನಟ ಸಾವು

Suvarna News   | Asianet News
Published : Nov 24, 2020, 01:50 PM ISTUpdated : Nov 24, 2020, 06:03 PM IST
ಕಿಡ್ನಿ ವೈಫಲ್ಯ: ಕೊನೆಗಾಲದಲ್ಲಿ ನೆರವಿವಾಗಿ ಕೈಚಾಚಿದ್ದ ಹಿರಿಯ ನಟ ಸಾವು

ಸಾರಾಂಶ

ನಟ ಆಶಿಶ್ ರಾಯ್ ತಮ್ಮ 55ನೇ ವಯಸ್ಸಿನಲ್ಲಿ ಮೃತಪಟ್ಟಿದ್ದಾರೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ನಟ ಕೊನೆಗಾಲದಲ್ಲಿ ನೆರವಾಗಿ ಕೈ ಚಾಚಿದ್ದರು

ನಟ ಆಶಿಶ್ ರಾಯ್ 55ನೇ ವಯಸ್ಸಿನಲ್ಲಿ ಮುಂಬೈನ ತಮ್ಮ ಮನೆಯಲ್ಲಿ ಮೃಪಟ್ಟಿದ್ದಾರೆ. ಸಿನಿಮಾ ಮತ್ತು ಧಾರವಾಹಿಗಳಲ್ಲಿ ನಟಿಸಿದ್ದ ಹಿರಿಯ ನಟ ದಿರ್ಘ ಕಾಲದಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು.

ಸಿನಿಮಾ ಮತ್ತು ಟಿವಿ ಕಲಾವಿದರ ಸಂಘಟನೆ ನಟನ ಸಾವನ್ನು ಖಚಿತಪಡಿಸಿದೆ. 1997ರಲ್ಲಿ ನಟನೆ ಆರಂಭಿಸಿದ ಆಶಿಶ್ ಸಸುರಾಲ್ ಸಿಮರ್‌ ಕಾ, ರೆಮಿಕ್ಸ್, ಉರೇ ಭೀ ಹಂ, ಭಲೇ ಬೀ ಹಮ್, ಜೆನ್ನಿ ಆರ್ ಜುಜುನಲ್ಲಿ ನಟಿಸಿದ್ದರು. ಹೋಂ ಡೆಲಿವರಿ, ಎಂಪಿ೩ ಮೇರಾ ಪರಹ್ಲಾ ಪೆಹ್ಲಾ ಪ್ಯಾರ್ ಸಿನಿಮಾದಲ್ಲಿ ನಟಿಸಿದ್ದರು.

ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಕಿರುತೆರೆ ನಟಿ ಸಾವು

ನಟನಿಗೆ ಕಿಡ್ನಿ ವೈಫಲ್ಯಕ್ಕೆ ಡಯಾಲಿಸಿಸ್ ಆಗುವುದಿತ್ತು. ಆದರೆ ಅದಕ್ಕೆ ಮುನ್ನವೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಹಲವು ಬಾರಿ ಆಸ್ಪತ್ರೆಗೆ ದಾಖಲಾಗಿದ್ದ ನಟನಲ್ಲಿ ಚಿಕಿತ್ಸೆಗೆ ಹಣವಿರಲಿಲ್ಲ. ಕೆಲಸವೂ ಇಲ್ಲ ಎಂಬುದನ್ನು ಹೇಳಿದ್ದರು ನಟ, ಲಾಕ್‌ಡೌನ್ ನಂತರ ಪರಿಸ್ಥಿತಿ ಇನ್ನಷ್ಟು ಹದೆಗೆಟ್ಟಿತ್ತು.

ನಟನಿಗೆ ನೆರವು ಸಿಕ್ಕಿತ್ತಾದರೂ ಕೆಲಸ ಮಾಡಿ ಎಲ್ಲವನ್ನೂ ಹಿಂತಿರುಗಿಸುತ್ತೇನೆ ಎಂದೇ ಹೇಳುತ್ತಿದ್ದರು ನಟ. ಆದರೆ ಆರೋಗ್ಯ ಸ್ಥಿತಿ ಏರುಪೇರಾಗಿ ಡಯಾಲಿಸಿಸ್ ಮುನ್ನವೇ ಮೃತಪಟ್ಟಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!