
ಶ್ರದ್ಧಾ ಕಪೂರ್ ಮತ್ತು ರಾಜ್‌ಕುಮಾರ್ ರಾವ್ ಅಭಿನಯದ ‘ಸ್ತ್ರೀ 2’ ಬಾಲಿವುಡ್ನ ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡಿದೆ. ಕಳೆದ ಆಗಸ್ಟ್ 15ರಂದು ಬಿಡುಗಡೆಯಾಗಿರುವ ಈ ಚಿತ್ರವು, ಇಲ್ಲಿಯವರೆಗೆ ಶಾರುಖ್ ಖಾನ್ ಅಭಿನಯದ ಜವಾನ್ ಚಿತ್ರದಲ್ಲಿದ್ದ ದಾಖಲೆಯನ್ನು ಸ್ತ್ರೀ ಅಳಿಸಿ ಹಾಕಿದೆ. ಸ್ತ್ರೀ 2 ದೇಶೀಯ ಬಾಕ್ಸ್ ಆಫೀಸ್‌ನಲ್ಲಿ 600 ಕೋಟಿ ರೂಪಾಯಿ ದಾಟಿದ ಮೊದಲ ಹಿಂದಿ ಚಿತ್ರವಾಗಿದೆ. ವಿಶ್ವದಾದ್ಯಂತ 700 ಕೋಟಿ ರೂ.ಗಳನ್ನು ದಾಟಿದೆ ಎಂದು ವರದಿಯಾಗಿದೆ. ಅಂದಹಾಗೆ ಈ ಚಿತ್ರದಲ್ಲಿ ಶ್ರದ್ಧಾ ಕಪೂರ್ ಅವರು ಹಾಗೂ ರಾಜ್‌ಕುಮಾರ್ ರಾವ್ ನಟಿಸಿದ್ದಾರೆ. ‘ಸ್ತ್ರೀ’ ಪಾರ್ಟ್-1 ಸಿನಿಮಾ ಭಾರಿ ಯಶಸ್ಸು ಕಂಡ ಬೆನ್ನಲ್ಲೇ ಪಾರ್ಟ್-2 ಮಾಡಲಾಗಿತ್ತು. ಆಶಿಕಿ 2 (2013), ಓಕೆ ಜಾನು (2017) ಮತ್ತು ಚಿಚೋರೆ (2019) ಅಂತಹ ಯಶಸ್ವಿ ಚಿತ್ರಗಳೊಂದಿಗೆ ಶ್ರದ್ಧಾ ಅವರು ಭಾರತದ ಅಗ್ರ ತಾರೆಗಳಲ್ಲಿ ಪರಿಗಣಿಸಲ್ಪಟ್ಟಿದ್ದರೂ, ಇದೀಗ ಸ್ತ್ರೀ-2 ಅವರನ್ನು ಮತ್ತಷ್ಟು ಉನ್ನತ ಸ್ಥಾನಕ್ಕೆ ಏರಿಸಿದೆ.
ಕುತೂಹಲದ ವಿಷಯ ಏನೆಂದರೆ, ಈ ಚಿತ್ರದಲ್ಲಿ ಯಾವುದೇ ಆ್ಯಕ್ಷನ್ ಇಲ್ಲ. ಈ ಚಿತ್ರ ಹಾರರ್ ಶೈಲಿಯಲ್ಲಿ ಮೂಡಿ ಬಂದಿದ್ದು, ಭರ್ಜರಿ ಹಾಸ್ಯವೂ ಇದೆ ಎನ್ನಲಾಗಿದೆ. ಆದ್ದರಿಂದ ಸಹಸ್ರಾರು ಕೋಟಿ ರೂಪಾಯಿಗಳಲ್ಲಿ ತೆಗೆದ ಆ್ಯಕ್ಷನ್ ಚಿತ್ರ ಜವಾನ್ ದಾಖಲೆಯನ್ನೂ ಸ್ತ್ರೀ-2 ಅಳಿಸಿಹಾಕಿದೆ. ಅಂದಹಾಗೆ ಇದು ಕಳೆದ ಆಗಸ್ಟ್ 15ರಂದು ರಿಲೀಸ್ ಆಗಿದೆ. ತಿಂಗಳಾದರೂ ಅನೇಕ ಕಡೆಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾ ಕೇವಲ 39 ದಿನಗಳಲ್ಲಿ ಬರೋಬ್ಬರಿ 600 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ದೊಡ್ಡ ಯಶಸ್ಸನ್ನು ಗಳಿಸಿದೆ.
ನಡುರಾತ್ರಿ ಏಕಾಏಕಿ ಫ್ಯಾನ್ ತಿರುಗಿ, ಗೊಂಬೆ ಚಲಿಸಿದಾಗ... ಭಯಾನಕ ಅನುಭವ ತೆರೆದಿಟ್ಟ ನಟ ವಿಶ್ವಾಸ್
ಇನ್ನು ಶಾರುಖ್ ಖಾನ್ ಅವರ ಆ್ಯಕ್ಷನ್ ಚಿತ್ರ ‘ಪಠಾಣ್’, ಸನ್ನಿ ಡಿಯೋಲ್ ನಟನೆಯ ‘ಗದರ್ 2’ ಮೊದಲಾದ ಚಿತ್ರಗಳು 500 ಕೋಟಿ ರೂಪಾಯಿ ಕ್ಲಬ್ ಸೇರಿದ್ದವು. ಇದೇ ಇಲ್ಲಿಯವರೆಗಿನ ದಾಖಲೆಯಾಗಿತ್ತು. ಇದನ್ನು ಯಾವ ಸಿನಿಮಾ ಮೀರಿರಲಿಲ್ಲ. ಆದರೆ ಶ್ರದ್ಧಾ ಕಪೂರ್ ದಾಖಲೆ ಉಡೀಸ್ ಮಾಡಿದ್ದಾರೆ. ಈ ಮೂಲಕವಾಗಿ ಶಾರುಖ್ ಖಾನ್, ಸನ್ನಿ ಡಿಯೋಲ್, ರಣಬಿರ್ ಕಪೂರ್ ಅವರಂಥ ಸಿನಿಮಾಗಳ ಗಳಿಕೆಯನ್ನು ಹಿಂದಿಕ್ಕಿ ಮುನ್ನುಗ್ಗುತ್ತಿದೆ. ಈ ಬಗ್ಗೆ ಬಾಕ್ಸ್ ಆಫೀಸ್ ಪಂಡಿತ ತರಣ್ ಆದರ್ಶ್ ಕೂಡ ವಿವರಣೆ ನೀಡಿದ್ದಾರೆ. ಚಿತ್ರ ಇತಿಹಾಸ ಸೃಷ್ಟಿಸಿರುವುದಾಗಿ ಹೇಳಿದ್ದಾರೆ.
ನಿನ್ನೆ ಅಂದರೆ ಸೆ.22 5.32 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಚಿತ್ರದ ಒಟ್ಟಾರೆ ಗಳಿಕೆ 604 ಕೋಟಿ ರೂಪಾಯಿ’ ಆಗಿರುವುದಾಗಿ ತಿಳಿಸಿದ ಅವರು, ಚಿತ್ರ ಬಿಡುಗಡೆಯಾದ ಒಂದೂವರೆ ತಿಂಗಳ ಬಳಿಕವೂ ಚಿತ್ರವೊಂದು 5+ ಕೋಟಿ ರೂಪಾಯಿ ಗಳಿಸುತ್ತದೆ ಎಂದರೆ ಅದು ಮತ್ತೊಂದು ದಾಖಲೆ ಎಂದಿದ್ದಾರೆ. ಈ ಸಿನಿಮಾದ ಗ್ರಾಸ್ ಕಲೆಕ್ಷನ್ 713 ಕೋಟಿ ರೂಪಾಯಿದೆ. ವಿಶ್ವ ಬಾಕ್ಸ್ ಆಫೀಸ್ ಕೂಡ ಸೇರಿದರೆ ಗಳಿಕೆ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ. ಅಮರ್ ಕೌಶಿಕ್ ನಿರ್ದೇಶನದ 'ಸ್ತ್ರೀ 2 ನಲ್ಲಿ ರಾಜ್‌ಕುಮಾರ್ ರಾವ್ , ಅಭಿಷೇಕ್ ಬ್ಯಾನರ್ಜಿ, ಅಪರಶಕ್ತಿ ಖುರಾನಾ ಮತ್ತು ಪಂಕಜ್ ತ್ರಿಪಾಠಿ ಪ್ರಮುಖ ಪಾತ್ರಗಳಲ್ಲಿದ್ದಾರೆ .
ಮದುವೆಗೆ ಶುಭಹಾರೈಸಿ, ಆದ್ರೆ ವಧುವಿನ ಮುಖ ನೋಡ್ಬೇಡಿ! ಹೀಗಿದೆ ಬಿಗ್ಬಾಸ್ ಅದ್ನಾನ್ ಆಮಂತ್ರಣ ಪತ್ರಿಕೆ...
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.