ಮೆಗಾ ಸ್ಟಾರ್ ಡ್ಯಾನ್ಸ್ ಸ್ಟೆಪ್‌ಗಳನ್ನು ಹುಡುಕುತ್ತಿರುವ ಅಭಿಮಾನಿಗಳು.... ಹೊಸ ದಾಖಲೆ ಮಾಡಿದ ನಟ...
ಮೆಗಾ ಸ್ಟಾರ್ ಚಿರಂಜೀವಿಗೆ ಮತ್ತೊಂದು ಜಾಗತೀಕ ಗೌರವ ದೊರೆಕಿದೆ. ವಿಶ್ವ ಗಿನ್ನೀಸ್ ದಾಖಲೆ ಬುಕ್‌ನಲ್ಲಿ ಚಿರಂಜೀವಿ ಹೆಸರು ಸೇರಿದೆ. ಮೋಸ್ಟ್ ಪ್ರೋಫೈಲಿಕ್ ಸ್ಟಾರ್ ಅನ್ನೋ ಪ್ರಮಾಣ ಪತ್ರ ಮೆಗಾ ಸ್ಟಾರ್ ಮನೆ ಸೇರಿದೆ. ಚಿರಂಜೀವಿಯನ್ನು ಫ್ಯಾನ್ಸ್ ಗಾಡ್ ಆಫ್ ಡ್ಯಾನ್ಸ್ ಅಂತ ಕರೀತಾರೆ. ಇದೀಗ ಚಿರು ಡ್ಯಾನ್ಸಿಂಗ್ ಸ್ಟೆಪ್‌ಗಳೇ ಗಿನ್ನಿಸ್ ಬುಕ್‌ನಲ್ಲಿ ಅಚ್ಚು ಒತ್ತಿವೆ. ತಮ್ಮ ಕಲಾಸೇವೆಗಾಗಿ ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಗಳನ್ನು ಪಡೆದಿರೋ ಮೆಗಾಸ್ಟಾರ್ ಚಿರಂಜೀವಿ ಮತ್ತೊಂದು ಅತ್ಯುನ್ನತ ಗೌರವಕ್ಕೆ ಪಾತ್ರವಾಗಿದ್ದಾರೆ. ಈ ಬಾರಿ ಚಿರಂಜೀವಿಗೆ ಜಾಗತಿಕ ಮಟ್ಟದ ಗೌರವ ದೊರೆತಿದೆ. ಗಿನ್ನಿಸ್ ವಿಶ್ವದಾಖಲೆ ಪುಟಗಳಲ್ಲಿ ಚಿರು ಹೆಸರು ದಾಖಲಾಗಿದ್ದು, ಮೋಸ್ಟ್ ಪ್ರೋಫೈಲಿಕ್ ಸ್ಟಾರ್ ಅನ್ನೋ ಪ್ರಮಾಣ ಪತ್ರ ನೀಡಿದೆ ಗಿನ್ನಿಸ್ ಸಂಸ್ಥೆ.
ಅಷ್ಟಕ್ಕೂ ಚಿರು ಹೆಸರಲ್ಲಿ ದಾಖಲಾಗಿರೋ ರೆಕಾರ್ಡ್ ಆದ್ರೂ ಏನು ಅಂತೀರಾ. ಅದರಲ್ಲೊಂದು ಗಮ್ಮತ್ತಿದೆ. ಚಿರಂಜೀವಿಯನ್ನು ಫ್ಯಾನ್ಸ್ ಗಾಡ್ ಆಫ್ ಡ್ಯಾನ್ಸ್ ಅಂತಾರೆ ಕರೀತಾರೆ. ಕ್ಲಾಸಿಕಲ್‌ನಿಂದ ಹಿಡಿದು ವೆಸ್ಟರ್ನ್ ವರೆಗೂ ಡ್ಯಾನ್ಸ್ ಕಲೆಯಲ್ಲಿ ಚಿರು ಮಾಸ್ಟರ್. ಚಿರಂಜೀವಿ ಆ್ಯಕ್ಷನ್‌ಗೆ ಎಷ್ಟು ಫೆಮಸ್ಸೋ ಅವರ ಡ್ಯಾನ್ಸಿಂಗ್ ಸ್ಕಿಲ್ ಕೂಡ ಅಷ್ಟೇ ಫೇಮಸ್ಸು. ಮೆಗಾಸ್ಟಾರ್ ಚಿರಂಜೀವಿ ಸಿನಿಮಾ ಅಂದ್ರೆ ಪಕ್ಕಾ ಮಾಸ್ ಮಸಾಲ ಪ್ಯಾಕೇಜ್. ಹಾಡು, ಫೈಟು, ಮಾಸ್ ಡೈಲಾಗ್ಸು, ಎಲ್ಲಕ್ಕಿಂತ ಹೆಚ್ಚಾಗಿ ಚಿರು ಡ್ಯಾನ್ಸ್ ನೋಡೋಕಂತ್ಲೇ ಫ್ಯಾನ್ಸ್ ಮುಗಿಬೀಳ್ತಾರೆ. ಜಗದೇಕ ವೀರುಡು ಅತಿಲೋಕ ಸುಂದರಿ, ಗ್ಯಾಂಗ್ ಲೀಡರ್, ಘರಾನಾ ಮೊಗುಡು, ಆಪತ್ ಬಾಂಧವಡು ಸಿನಿಮಾಗಳಲ್ಲಿನ ಚಿರು ಡ್ಯಾನ್ಸ್ ಸ್ಪೆಪ್ ಅದೆಷ್ಟು ಫೇಮಸ್, ಅಂದ್ರೆ ಚಿರು ಹೆಜ್ಜೆ ಹಾಕ್ತಿದ್ರೆ ಇವತ್ತು ಇಡೀ ಥೀಯೇಟರ್‌ನಲ್ಲಿ ಜನ ಹುಚ್ಚೆದ್ದು ಕುಣೀತಾರೆ.
ದರ್ಶನ್‌ಗೆ ಇದೆಲ್ಲಾ ಬೇಕಿತ್ತಾ? ಪ್ರಪಂಚದಲ್ಲಿ ಮಾಡೋಕೆ ಸಾಕಷ್ಟು ಕೆಲಸಗಳು ಇದೆ: 'ಕರಿಯಾ' ನಟಿ ಟಾಂಗ್
ಸದ್ಯ ಚಿರು ಹೆಸರಲ್ಲಿ ಗಿನ್ನಿಸ್ ದಾಖಲೆ ಆಗಿರೋದು ಕೂಡ ಡ್ಯಾನ್ಸ್ ವಿಚಾರಕ್ಕೇನೆ. ಚಿರಂಜೀವಿ ಅಕೌಂಟ್ ನಲ್ಲಿ 156 ಸಿನಿಮಾಗಳಿವೆ. ಅವುಗಳ ಪೈಕಿ 537 ಹಾಡುಗಳಲ್ಲಿ ಚಿರಂಜೀವಿ 24 ಸಾವಿರ ಡ್ಯಾನ್ಸ್ ಮೂವ್ ಮೆಂಟ್ ಮಾಡಿದ್ದಾರೆ. ವಿಶ್ವದಲ್ಲೇ ಇಷ್ಟೊಂದು ಡ್ಯಾನ್ಸ್ ಮೂವ್ ಮೆಂಟ್ ಮಾಡಿದ ಮತ್ತೊಬ್ಬ ನಟ ಇಲ್ಲವೇ ಇಲ್ಲ. ಸೋ ಇದೊಂದು ವಿಶೇಷ ದಾಖಲೆಯಾಗಿದ್ದು ಚಿರು ಹೆಸರು ಗಿನ್ನಿಸ್ ಬುಕ್ ನಲ್ಲಿ ರೆಕಾರ್ಡ್ ಆಗಿದೆ. ಹೈದ್ರಾಬಾದ್‌ನಲ್ಲಿ ನಡೆದ ಈ ಸಮಾರಂಭದಲ್ಲಿ ಮಿಸ್ಟರ್ ಪರ್ಫೆಕ್ಟ್ ಅಮೀರ್ ಖಾನ್ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸರ್ಟಿಫಿಕೇಟ್‌ನ ಚಿರುಗೆ ನೀಡಿದ್ದರು. ಈ ಕಾರ್ಯಕ್ರಮದಲ್ಲಿ ಚಿರಂಜೀವಿ ಕುಟುಂಬ ಸದಸ್ಯರು, ಸಾಯಿಧರಮ್ ತೇಜ್, ವರುಣ್ ತೇಜ್, ನಿರ್ಮಾಪಕರಾದ ಅಲ್ಲು ಅರವಿಂದ್, ಸುರೇಶ್ ಬಾಬು, ಹಿರಿಯ ನಿರ್ದೇಶಕ ರಾಘವೇಂದ್ರ ರಾವ್, ಬಾಬಿ ಸೇರಿದಂತೆ ಬಹುಳಷ್ಟು ಮೆಗಾ ಫ್ಯಾಮಿಲಿ ಆಪ್ತರು ಈ ಅಪೂರ್ವ ಕ್ಷಣವನ್ನು ಕಣ್ತುಂಬಿಕೊಂಡರು.