
ಮುಂಬೈ (ಸೆ.14) ಬಾಲಿವುಡ್ ಸೆಲೆಬ್ರೆಟಿ ದಂಪತಿಗಳಾದ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ತಮ್ಮ ಕಾರು ಕಲೆಕ್ಷನ್ ಹೆಚ್ಚಿಸಿದ್ದಾರೆ. ಇದೀಗ ಹೊಚ್ಚ ಹೊಸ ಹಮ್ಮರ್ ಇವಿ ಕಾರು ಖರೀದಿಸಿದ್ದಾರೆ. ಅಮೆರಿಕನ್ ಬ್ರ್ಯಾಂಡ್ ಹಮ್ಮರ್ ಕಾರು ಭಾರತದಲ್ಲಿ ಹಲವರಲ್ಲಿದೆ. ವಿಶೇಷ ಅಂದರೆ ಹಮ್ಮರ್ ಇವಿ ಭಾರತದಲ್ಲಿ ಬೆರಳೆಣಿಗೆ ಮಂದಿಯಲ್ಲಿ ಮಾತ್ರ ಇದೆ. ಇದೀಗ ಈ ದುಬಾರಿ ಹಾಗೂ ಐಷಾರಾಮಿ ಕಾರನ್ನು ರಣವೀರ್ ದೀಪಿಕಾ ದಂಪತಿ ಖರೀದಿಸಿದ್ದಾರೆ. ಹೊಸ ಕಾರಿನಲ್ಲಿ ರಣವೀರ್ ದೀಪಾಕಾ ಜಾಲಿ ರೈಡ್ ಮಾಡಿದ್ದಾರೆ. ಸೆಲೆಬ್ರೆಟಿ ಜೋಡಿಗಳ ಹೊಸ ಕಾರು ಹಾಗೂ ಜಾಲಿ ರೈಡ್ ಇದೀಗ ಭಾರಿ ಸದ್ದು ಮಾಡುತ್ತಿದೆ.
ಹೊಸ ಕಾರಿನಲ್ಲಿ ಸೆಲೆಬ್ರೆಟಿ ಜೋಡಿ ಮುಂಬೈನ ಜನಪ್ರಿಯ ರೆಸ್ಟೋರೆಂಟ್ ಬಾಂಗ್ ಮುಂಬೈಗೆ ತೆರಳಿ ಆಹಾರ ಸವಿದಿದ್ದಾರೆ. ಬಾಂಗ್ ಮುಂಬೈ ರೆಸ್ಟೋರೆಂಟ್ ಚೆಫ್ ಈ ಸೆಲೆಬ್ರೆಟಿ ಜೋಡಿಗಳ ಜೊತೆ ಫೋಟೋ ಕ್ಲಿಕ್ ಮಾಡಿ ಪೋಸ್ಟ್ ಮಾಡಿದ್ದಾರೆ. ಈ ರೆಸ್ಟೋರೆಂಟ್‌ನಿಂದ ದುಬಾರಿ ಹಮ್ಮರ್ ಕಾರಿನಲ್ಲಿ ಹೊರಬಂದ ಈ ಜೋಡಿಗಳನ್ನು ಪಾಪಾರಾಜಿಗಳು ಸುತ್ತವರಿದಿದ್ದರು. ಫೋಟೋ, ವಿಡಿಯೋ ಕ್ಲಿಕ್ ಮಾಡಿ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಮಗಳ ಬರ್ತ್ ಡೇ ಮುಗಿದು ಎರಡು ದಿನದ ಮೇಲೆ ದೀಪಿ ಪೋಸ್ಟ್, ಕೇಕ್ ಸಾಲಲ್ಲ ಮಗು ಮುಖ ತೋರಿಸಿ ಎಂದ ಫ್ಯಾನ್ಸ್
ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ಖರೀದಿಸಿದ ಹಮ್ಮರ್ ಇವಿ ಕಾರಿನ ಬೆಲೆ 4.57 ಕೋಟಿ ರೂಪಾಯಿ. ಇದು ಹಮ್ಮರ್ ಇವಿ 3X ಕಾರು. ಇತ್ತೀಚೆಗಷ್ಟೇ ಈ ಕಾರನ್ನು ಡೆಲಿವರಿ ಪಡೆದುಕೊಂಡಿದ್ದರು. ಮುಂಬೈನಲ್ಲಿ ಮನೆಗೆ ಹಮ್ಮರ್ ಡೀಲರ್ ಡೆಲಿವರಿ ಮಾಡಿದ್ದರು. ಈ ಕಾರು ಹಲವು ವಿಶೇಷತೆ ಹೊಂದಿದೆ. ಇದು ಅತ್ಯಂತ ಪವರ್‌ಫುಲ್ ಎಲೆಕ್ಟ್ರಿಕ್ ಎಸ್‌ಯುವಿ ಕಾರು. ಈ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ ಸರಿಸುಮಾರು 613 ಕಿಲೋಮೀಟರ್ ಮೈಲೇಜ್ ರೇಂಜ್ ನೀಡಲಿದೆ. ಇನ್ನು 2 ಗಂಟೆಯಲ್ಲಿ ಶೇಕಡಾ 90ರಷ್ಟು ಚಾರ್ಜ್ ಆಗಲಿದೆ. ಈ ಮೂಲಕ ಐಷಾರಾಮಿ ಎಸ್‌ಯುವಿ ಅತ್ಯುತ್ತಮ ಪ್ರಯಾಣದ ಅನುಭವ ನೀಡಲಿದೆ.
ಹಮ್ಮರ್ ಇವಿ 3ಎಕ್ಸ್ ಕಾರು ಫೋರ್ ವ್ಹೀಲ್ ಡ್ರೈವ್ ಹೊಂದಿದೆ. ಮುಂಭಾಗದಲ್ಲಿ ಒಂದು ಎಲೆಕ್ಟ್ರಿಕ್ ಮೋಟಾರ್, ರೇರ್‌ನಲ್ಲಿ ಎರಡು ಎಲೆಕ್ಟ್ರಿಕ್ ಮೋಟಾರ್ ಹೊಂದಿದೆ. ಲಿಕ್ವಿಡ್ ಕೂಲ್ಡ್, ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿದೆ. 170.0kWh ಬ್ಯಾಟರಿ ಪ್ಯಾಕ್ ನೀಡಲಾಗಿದೆ. ಲೆವಲ್ ಚಾರ್ಜರ್ ಫೀಚರ್ ನೀಡಲಾಗಿದೆ. 19.2 kW ಡಿಸಿ ಸಾಮರ್ಥ್ಯದ ಚಾರ್ಜ್ ನೀಡಲಾಗಿದ್ದು, ಡಿಸಿ ಫಾಸ್ಟ್ ಚಾರ್ಜರ್ ಹಾಗೂ ನಾರ್ಮಲ್ ಚಾರ್ಜರ್ ಮೂಲಕ ಚಾರ್ಜ್ ಮಾಡಬಹುದು. 830 ಹಾರ್ಸ್ ಪವರ್ ಸಾಮರ್ಥ್ಯ ಹೊಂದಿದೆ. 13.4 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ನೀಡಲಾಗಿದೆ.
ಅಂಬಾನಿ ಮನೆಯ ಗಣೇಶೋತ್ಸವದಲ್ಲಿ ರಣವೀರ್-ದೀಪಿಕಾ ಫೋಟೋ ವೈರಲ್, ಕಾಮೆಂಟ್ ಸುರಿಮಳೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.