ಬಾಲಿವುಡ್ ನಟಿ ಮಲೈಕಾ ಆರೋರಾ(Malaika Arora) ಅವರು ಇತ್ತೀಚೆಗೆ ಅವರ ಯೋಗ ಕ್ಲಾಸ್‌ಗೆ ಬರುವಾಗ ಕಾರಿನಿಂದಿಳಿದು ನಡೆದ ಸ್ಟೈಲ್ ಈಗ ಟ್ರೋಲ್ ಆಗಿದೆ. ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು ಇದ್ಯಾವುದಪ್ಪಾ ಹೊಸ ಸ್ಟೈಲ್ ಎಂದು ನೆಟ್ಟಿಗರು ಹಿಗ್ಗಾಮುಗ್ಗ ಟ್ರೋಲ್ ಮಾಡಿದ್ದಾರೆ. ಬ್ಲಾಕ್ ಔಟ್‌ಫಿಟ್‌ನಲ್ಲಿ ಕಂಡ ನಟಿಯ ವಿಡಿಯೋ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.
ಮಲೈಕಾ ಅರೋರಾ ಬಾಲಿವುಡ್(Bollywood) ಇಂಡಸ್ಟ್ರಿಯ ನಟಿಯರಲ್ಲಿ ತುಂಬಾ ಆಕ್ಟಿವ್ ಮತ್ತು ಫಿಟ್ನೆಸ್ ಫ್ರೀಕ್. ನಟಿ ತನ್ನ ಕಿಲ್ಲಿಂಗ್ ಫ್ಯಾಷನ್ ಸೆನ್ಸ್ ಮತ್ತು ಫಿಟ್‌ನೆಸ್‌ಗೆ ಹೆಸರುವಾಸಿಯಾಗಿದ್ದಾರೆ. ಈ ಕಾರಣದಿಂದಲೇ 47 ವರ್ಷದ ಮಾಡೆಲ್ ಮಲೈಕಾರನ್ನು ಸ್ಟೈಲ್ ಮಮ್ಮಿ ಎಂದು ಕರೆಯುತ್ತಾರೆ.
ಮಲೈಕಾ ಆರೋರಾಗೆ ಸಿಕ್ಕಿದ್ರು ಹೊಸ ಯೋಗ ಫ್ರೆಂಡ್..!
ನಟಿ ತನ್ನ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳು, ಜಿಮ್ ಸೆಷನ್‌ಗಳು ಅಥವಾ ಬಾಯ್‌ಫ್ರೆಂಡ್ ಅರ್ಜುನ್ ಕಪೂರ್‌ನೊಂದಿಗೆ ವೀಕೆಂಡ್ ಕಳೆಯುವ ಫೋಟೋ ಶೇರ್ ಮಾಡುವ ಮೂಲಕ ಯಾವಾಗಲೂ ಸುದ್ದಿಯಲ್ಲಿರುತ್ಥಾರೆ. ಆದರೂ ಇತ್ತೀಚೆಗೆ ನಟಿ ಮುಂಬೈನಲ್ಲಿ ಯೋಗ ತರಗತಿಗಳಿಗೆ ಹೋಗುವಾಗ ಅವರ 'ವಿಲಕ್ಷಣ' ವಾಕಿಂಗ್ ಸ್ಟೈಲ್‌ನಿಂದ ಟ್ರೋಲ್ ಆಗಿದ್ದಾರೆ. ಬ್ಲಾಕ್ ಬಿಗಿಯುಡುಪು, ಕಪ್ಪು ಕ್ರಾಪ್ ಟಾಪ್, ಚಪ್ಪಲಿ ಮತ್ತು ಹೇರ್ ಬನ್ ಮಾಡಿ ಮಲೈಕಾ ತನ್ನ ಕಾರಿನಿಂದ ಕೆಳಗಿಳಿದು ಒಳಗೆ ಹೋದಾಗ ಪಾಪರಾಜಿಗಳು ಕ್ಲಿಕ್ ಮಾಡಿದ್ದಾರೆ.
ಈ ವಿಡಿಯೋವನ್ನು ಕೇವಲ ಫೋಟೋಗ್ರಫರ್‌ಗಳು ಮಾತ್ರವಲ್ಲದೆ ಆಕೆಯ ಫ್ಯಾನ್ ಪೇಜಗಳೂ ಹಂಚಿಕೊಂಡಿದ್ದಾರೆ. ಕಮೆಂಟ್ ಸೆಕ್ಷನ್‌ನಲ್ಲಿ ನಟಿಯನ್ನು ಟ್ರೋಲ್ ಮಾಡುವ ಕಮೆಂಟ್‌ಗಳೇ ತುಂಬಿದೆ. ಜನರು ಆಕೆಯ ನಡಿಗೆಯನ್ನು 'ಬಾತುಕೋಳಿ'ಗೆ ಹೋಲಿಸಿದರೆ, ಆಕೆಯ ನಡಿಗೆ ಎದ್ದುಕಾಣುವ ಕಾರಣವನ್ನು ಅನೇಕರು ಪ್ರಶ್ನಿಸಿದ್ದಾರೆ.
ಕೆಲಸದ ವಿಚಾರದಲ್ಲಿ ಅವರು ಪ್ರಸ್ತುತ ಎಂಟಿವಿ ಕಾರ್ಯಕ್ರಮದ ಸೂಪರ್ ಮಾಡೆಲ್ ಆಫ್ ದಿ ಇಯರ್ ಸೀಸನ್ 2ನಲ್ಲಿ ಮಿಲಿಂದ್ ಸೋಮನ್ ಮತ್ತು ಅನುಷಾ ದಾಂಡೇಕರ್ ಜೊತೆ ತೀರ್ಪುಗಾರರಾಗಿ ಇದ್ದಾರೆ.