ಇತ್ತೀಚೆಗೆ ಬಾಲಿವುಡ್ ನಟಿ ಆಲಿಯಾ ಭಟ್ (Alia Bhatt) ಜಾಹಿರಾತು ವಿಡಿಯೋ ಒಂದು ವೈರಲ್ ಆಗಿತ್ತು. ಇದರಲ್ಲಿ ನಟಿ ಹಿಂದೂ ಸಂಪ್ರದಾಯದ ವಿವಾಹ ಪದ್ಧತಿಯಲ್ಲಿ ಬರುವ ಕನ್ಯಾದಾನ ಕ್ರಮದ ವಿರುದ್ಧ ಮಾತನಾಡುವುದನ್ನು ಕಾಣಬಹುದು. ಈಗ ಈ ಜಾಹೀರಾತಿನ ಬಗ್ಗೆ ಕಂಗನಾ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.
ಅಲಿಯಾ ಭಟ್ ವಧುವಾಗಿ ನಟಿಸಿರುವ ಈ ಜಾಹಿರಾತಿಗೆ ಆನ್‌ಲೈನ್‌ನಲ್ಲಿ ಭಾರೀ ಟೀಕೆ ವ್ಯಕ್ತವಾಗಿದ್ದು, ಈ ಚರ್ಚೆಯಲ್ಲಿ ಕಂಗನಾ ರಣಾವತ್ (Kangana Ranaut) ಅವರೂ ಭಾಗಿಯಾಗಿದ್ದಾರೆ. ಇನ್‌ಸ್ಟಗ್ರಾಂನಲ್ಲಿ ಪೋಸ್ಟ್ ಶೇರ್ ಮಾಡಿದ ನಟಿ ನಿಷ್ಕಳಂಕ ಮುಗ್ಧ ಗ್ರಾಹಕರ ದಾರಿ ತಪ್ಪಿಸಿ ಲಾಭ ಪಡೆಯಲು ಜಾಹೀರಾತಿನಲ್ಲಿ ಧರ್ಮವನ್ನು ಸೇರಿಸಬೇಡಿ ಎಂದು ಬ್ರಾಂಡ್‌ಗಳಲ್ಲಿ ಕೇಳಿಕೊಂಡಿದ್ದಾರೆ.
ದಾನ ಮಾಡೋಕೆ ನಾನೇನು ವಸ್ತೂನಾ ? ಕನ್ಯಾದಾನ ಕುರಿತು ನಟಿ ಆಲಿಯಾ ಕೇಸ್..!
ಈ ಜಾಹಿರಾತು ಸಂಪೂರ್ಣವಾಗಿ ಕನ್ಯಾದಾನವನ್ನು ಪ್ರಶ್ನೆ ಮಾಡಿತ್ತು. ಮಗಳನ್ನು ಪೋಷಕರು ಕನ್ಯಾದಾನ ಮಾಡಿ ವರನಿಗೆ ದಾನ ಮಾಡುವ ಬಗ್ಗೆ ಚಿತ್ರಿಸಲಾಗಿದೆ. ಧರ್ಮಗ್ರಂಥಗಳಲ್ಲಿ ಸ್ತ್ರೀಯರನ್ನು ಪೂಜಿಸಲಾಗುತ್ತದೆ. ಅವರನ್ನು 'ಅಸ್ತಿತ್ವದ ಅಮೂಲ್ಯ ಮೂಲ' ಎಂದು ನೋಡುವುದರಿಂದ ಯಾವುದೇ ಹಾನಿ ಇಲ್ಲ ಎಂದು ಕಂಗನಾ ಸುದೀರ್ಘವಾದ ಪೋಸ್ಟ್ ಬರೆದಿದ್ದಾರೆ.
ತನ್ನ ಪೋಸ್ಟ್‌ನ ಕ್ಯಾಪ್ಶನ್‌ನಲ್ಲಿ ಕಂಗನಾ ಎಲ್ಲಾ ಬ್ರಾಂಡ್‌ಗಳಿಗೆ ವಿನಮ್ರ ವಿನಂತಿ. ಧರ್ಮ, ಅಲ್ಪಸಂಖ್ಯಾತ, ಬಹುಸಂಖ್ಯಾತ ರಾಜಕೀಯವನ್ನು ವಸ್ತುಗಳನ್ನು ಮಾರಾಟ ಮಾಡಲು ಬಳಸಬೇಡಿ. ನಿಷ್ಕಳಂಕ ಗ್ರಾಹಕರನ್ನು ಜಾಹೀರಾತಿನೊಂದಿಗೆ ನಯವಾಗಿ ವಿಭಜಿಸುವುದನ್ನು ನಿಲ್ಲಿಸಿ ಎಂದಿದ್ದಾರೆ.
ಜಾಹೀರಾತಿನಲ್ಲಿ ತನ್ನ ಭಾವೀ ಪತಿಯೊಂದಿಗೆ ಮಂಟಪದಲ್ಲಿ ಕುಳಿತಿದ್ದಾಗ, ಆಲಿಯಾ ತನ್ನ ಕುಟುಂಬದ ಪ್ರತಿಯೊಬ್ಬ ಸದಸ್ಯ-ಅಜ್ಜಿ, ತಂದೆ ಮತ್ತು ತಾಯಿ-ಮತ್ತು ಅವರು ಅವರನ್ನು ಎಷ್ಟು ಪ್ರೀತಿಸುತ್ತಾರೆ ಎಂದು ತಿಳಿಸುತ್ತಾರೆ. ಆದರೂ ಮದುವೆಗಳಲ್ಲಿ ಕನ್ಯಾದಾನದ ಅಭ್ಯಾಸದ ವಿರುದ್ಧ ಆಕೆ ಆಕ್ಷೇಪಿಸುತ್ತಾಳೆ. ಅವಳನ್ನು ತುಂಬಾ ಪ್ರೀತಿಸುತ್ತಿದ್ದರೂ, ಅವಳನ್ನು ಯಾವಾಗಲೂ ಬೇರೆಯವಳು ಹಾಗೂ ತಮ್ಮ ಕುಟುಂಬದ ತಾತ್ಕಾಲಿಕ ಭಾಗ ಎಂದು ಏಕೆ ಪರಿಗಣಿಸಲಾಗಿದೆ ಎಂದು ವಧು ಪ್ರಶ್ನಿಸುತ್ತಾಳೆ.
ನಾನು ದಾನ ಮಾಡಬೇಕಾದ ವಸ್ತುವೇ? ಕನ್ಯಾದಾನ ಮಾತ್ರ ಯಾಕೆ ಎಂದು ಆಕೆ ಸ್ವಗತದಲ್ಲಿ ಕೇಳುತ್ತಾಳೆ. ಅವಳ ಅತ್ತೆ ಮತ್ತು ಮಾವ ತಮ್ಮ ಮಗನನ್ನೂ ಬಿಟ್ಟು ಹೋದಾಗ ಅವಳಿಗೆ ಆಶ್ಚರ್ಯವಾಗುತ್ತದೆ. ಎಲ್ಲರೂ ನಗುತ್ತಾರೆ, ಮತ್ತು ದಂಪತಿಗಳು ಮದುವೆಯಾಗುತ್ತಾರೆ. ಇದನ್ನು ಆಧುನಿಕ ಪರಿಕಲ್ಪನೆ ಮತ್ತು ಮಹಿಳಾ ಸಬಲೀಕರಣದ ಬಲವಾದ ಸಂದೇಶ ಎಂದು ಪ್ರಶಂಸಿಸಲಾಗಿದ್ದರೂ, ಇತರರು ಕಂಗನಾ ಅವರ ಭಾವನೆಗಳನ್ನು ಬೆಂಬಲಿಸಿದ್ದಾರೆ.