ಅಡಿಪೊಳಿ ಸಾಂಗ್ ಹಿಟ್: ಕಾಲಿವುಡ್‌ಗೆ ಕಾಲಿಟ್ಟ ದಿಯಾ ಸುಂದರಿ

Suvarna News   | Asianet News
Published : Sep 23, 2021, 09:47 AM ISTUpdated : Sep 23, 2021, 09:50 AM IST
ಅಡಿಪೊಳಿ ಸಾಂಗ್ ಹಿಟ್: ಕಾಲಿವುಡ್‌ಗೆ ಕಾಲಿಟ್ಟ ದಿಯಾ ಸುಂದರಿ

ಸಾರಾಂಶ

ಅಡಿಪೊಳಿ ಆಲ್ಬಂ ಸಾಂಗ್ ಮೂಲಕ ಕಾಲಿವುಡ್‌ಗೆ ಎಂಟ್ರಿ ಸಖತ್ ಡ್ಯಾನ್ಸ್ ಸಾಂಗ್‌ನಲ್ಲಿ ಮಿಂಚಿದ ದಿಯಾ ಹಿರೋಯಿನ್

ದಿಯಾ ಸಿನಿಮಾದಲ್ಲಿ ಮಿಂಚಿ ಬೆಸ್ಟ್ ಲೀಡ್ ರೋಲ್‌ಗೆ ಸೈಮಾ ಅವಾರ್ಡ್ ಮುಡಿಗೇರಿಸಿಕೊಂಡ ನಟಿ ಖುಷಿ ರವಿ(Khushi Ravi) ಈಗ ಕಾಲಿವುಡ್‌ಗೂ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಟಾಲಿವುಡ್‌ನಲ್ಲಿ ನಟಿಸಿರೋ ಖುಷಿ, ಸ್ಯಾಂಡಲ್‌ವುಡ್‌ನಲ್ಲಿ ಮಿಂಚಿ, ಕಾಲಿವುಡ್‌ಗೂ ಹೆಜ್ಜೆ ಇಟ್ಟು ಸೌತ್‌ನ ಪ್ರಮುಖ 4 ಭಾಷೆಗಳಲ್ಲಿ 3 ಭಾಷೆಗಳಲ್ಲಿ ಈಗಾಗಲೇ ಛಾಪು ಮೂಡಿಸಿಬಿಟ್ಟಿದ್ದಾರೆ. ಇನ್ನು ಮಾಲಿವುಡ್‌ಗೆ ಬರೋದಂದು ಬಾಕಿ.

ಇತ್ತೀಚೆಗೆ ರಿಲೀಸ್ ಆದ ಆಲ್ಬಂ ಸಾಂಗ್‌ನಲ್ಲಿ ನಟಿ ಕೇರಳ(Kerala) ಕುಟ್ಟಿಯಾಗಿ ಮಿಂಚಿದ್ದಾರೆ. ಈ ಆಲ್ಬಂ ಸಾಂಗ್ ಅಂತೂ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಅಡಿಪೊಳಿ ಅನ್ನೋ ಹಾಡಿನಲ್ಲಿ ಡ್ಯಾನ್ಸ್‌ಗೂ ಕಮ್ಮಿ ಇಲ್ಲ ಅಂತ ತೋರಿಸಿಕೊಟ್ಟಿದ್ದಾರೆ ಖುಷಿ.

ಮತ್ತೆ ಕೆಲಸಕ್ಕೆ ಮರಳುವಂತಾಗಿರುವುದು ತುಂಬಾ ರೋಮಾಂಚನಕಾರಿಯಾಗಿದೆ. ಇದು ತಮಿಳಿನಲ್ಲಿ ನನ್ನ ಮೊದಲ ಅಸೈನ್‌ಮೆಂಟ್ ಆಗಿದ್ದು, ಇದು ಸೂಪರ್‌ಹಿಟ್ ಕುಟ್ಟಿ ಪಟ್ಟಾಸ್‌ನ ಹಿಂದಿರುವ ಜನರ ಆಲ್ಬಂ ಹಾಡು ಎಂಬುದು ಎರಡು ಪಟ್ಟು ವಿಶೇಷವಾಗಿದೆ. ಈ ಆಲ್ಬಂ ಸಾಂಗ್ 1 ಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ನಿಸ್ಸಂಶಯವಾಗಿ, ಅದೇ ತಂಡವು ನನ್ನನ್ನು ಸಂಪರ್ಕಿಸಿದಾಗ, ನಾನು ಉತ್ಸುಕಳಾಗಿದ್ದೆ ಎಂದು ಖುಶಿ ಹೇಳಿದ್ದಾರೆ. ಈ ಹಾಡಿಗೆ ಅಡಿಪೊಳಿ ಎಂದು ಹೆಸರಿಡಲಾಗಿದೆ.

ತೆಲುಗು ಸಿನಿಮಾದಲ್ಲಿ ದಿಯಾ ಖ್ಯಾತಿಯ ಖುಷಿ ನಟನೆ

ಇದರಲ್ಲಿ ಖುಶಿಯನ್ನು ಮಲಯಾಳಿ ಚೆಲುವೆಯಾಗಿ ತೋರಿಸಲಾಗಿದೆ. ಕುಟ್ಟಿ ಪಟ್ಟಾಸ್‌ನಲ್ಲಿ ಸಹ ಕುಮಾಲ್ ಖ್ಯಾತಿಯ ಕುಕ್‌ನ ಅಶ್ವಿನ್ ಕುಮಾರ್ ಹಿರೋ ರೋಲ್‌ನಲ್ಲಿ ಕಾಣಿಸಿಕೊಂಡಿದ್ದು, ಅವರು ನನಗೆ ಪ್ರಪೋಸ್ ಮಾಡೋಕೆ ಬರುವ ತಮಿಳು ಹುಡುಗನ ಪಾತ್ರವನ್ನು ಮಾಡಿದ್ದಾರೆ ಎಂದು ಹೇಳಿದ್ದಾರೆ.

ನಿಜ ಜೀವನದಲ್ಲಿ ಶಾಸ್ತ್ರೀಯ ನೃತ್ಯ ಅಭ್ಯಾಸ ಮಾಡಿರುವ ಖುಷಿಗೆ ಈ ಸೂಪರ್ ಡ್ಯಾನ್ಸ್ ಹೊಸ ಸ್ಟೈಲ್. ಈ ಪ್ರಾಜೆಕ್ಟ್ ನನಗೆ ತುಂಬಾ ಹೊಸದಾಗಿದೆ. ನಾವು ಅದಕ್ಕಾಗಿ ಅಭ್ಯಾಸ ಮಾಡುತ್ತಿದ್ದಾಗ ನಾನು ಅದನ್ನು ಸಂಪೂರ್ಣವಾಗಿ ಎಂಜಾಯ್ ಮಾಡಿದೆ ಎಂದಿದ್ದಾರೆ.

ಆಲ್ಬಮ್‌ಗೆ ಸಂಗೀತವನ್ನು ಸಿದ್ದು ಸಂಯೋಜಿಸಿದ್ದಾರೆ. ಅವರು ಪರಿಕಲ್ಪನೆ ಮಾಡಿದ್ದಾರೆ. ಅವರು ಅದನ್ನು ನಿರ್ದೇಶಿಸಿದ್ದಾರೆ. ಈ ಹಾಡಿಗೆ ಶರೀಫ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಅವರು ಪೆಟ್ಟಾ ಮತ್ತು ಜಗಮೇ ಥಂದಿರಾಮ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಸೆಟ್‌ಗಳು ಅದ್ದೂರಿಯಾಗಿದ್ದವು. ಬ್ಯಾಕ್ ಡ್ಯಾನ್ಸರ್‌ಗಳೂ ಇದ್ದರು. ಇದು ಸಿನಿಮಾ ಸಾಂಗ್‌ಗಿಂತ ಕಮ್ಮಿ ಇಲ್ಲ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬಿಗ್ ಬಜೆಟ್ '45' ಅದ್ದೂರಿ ಇವೆಂಟ್, ಕರ್ನಾಟಕದ ಏಳು ಜಿಲ್ಲೆಗಳ ಚಿತ್ರಮಂದಿರದಲ್ಲಿ ಇವೆಂಟ್ ನೇರ ಪ್ರಸಾರ!
World Idli Day: ಇಡ್ಲಿ ದಿನದಂದೇ ದೋಸೆ ತಿಂದ ಕಥೆ ನಿಮಗೆ ಗೊತ್ತಾ? ದೀಪಿಕಾ ಪಡುಕೋಣೆ ಈ ಯಡವಟ್ಟು ಮಾಡಿದ್ಯಾಕೆ?