ಮಾಜಿ ಪತಿಯ ಮದ್ವೆ ಆಗ್ತಿದ್ದಂತೆಯೇ, ನಾಯಿ ಜೊತೆ ಪಾರ್ಟಿಗೆ​ ಹೋದ ಮಲೈಕಾ ಅರೋರಾ: ನೆಟ್ಟಿಗರು ಹೀಗೆಲ್ಲಾ ಹೇಳೋದಾ?

By Suvarna News  |  First Published Dec 26, 2023, 12:14 PM IST

ಅರ್ಬಾಜ್​ ಖಾನ್​ ಮದ್ವೆಯಾಗುತ್ತಿದ್ದಂತೆಯೇ ಅವರ ಮಾಜಿ ಪತ್ನಿ, ನಟಿ ಮಲೈಕಾ ಅರೋರಾ ನಾಯಿ ಜೊತೆ ಕ್ರಿಸ್​ಮಸ್​ ಪಾರ್ಟಿಗೆ ಹೋಗಿದ್ದು, ಸಾಕಷ್ಟು ಟ್ರೋಲ್​ಗೆ ಒಳಗಾಗುತ್ತಿದ್ದಾರೆ. 
 


 ನಟ ಸಲ್ಮಾನ್​ ಖಾನ್​ ಸಹೋದರ, ನಟಿ ಮಲೈಕಾ ಶರಾವತ್​  ಮಾಜಿ ಪತಿ, ರೂಪದರ್ಶಿ ಜಾರ್ಜಿಯಾ ಆಂಡ್ರಿಯಾನಿ ಮಾಜಿ ಲಿವ್​ ಇನ್​ ಪಾರ್ಟನರ್​ ಅರ್ಬಾಜ್​ ಖಾನ್​ ನಿನ್ನೆ ಅಂದ್ರೆ ಡಿಸೆಂಬರ್​ 25ರಂದು ಮರು ಮದುವೆಯಾದರು.  ಸಹೋದರಿ ಅರ್ಪಿತಾ ಖಾನ್​ ಶರ್ಮಾ ಅವರ ಮನೆಯಲ್ಲಿ ಕೆಲವೇ ಅತಿಥಿಗಳ ಸಮ್ಮುಖದಲ್ಲಿ 56 ವರ್ಷದ ಅರ್ಬಾಜ್​ ಖಾನ್​ ಅವರು 33 ವರ್ಷದ ಶುರಾ ಖಾನ್​ ಅವರ ಕೈಹಿಡಿದರು. ಮದುವೆಯಲ್ಲಿ ಮಲೈಕಾ ಪುತ್ರ ಅರ್ಹಾನ್​ ಖಾನ್​ ಕೂಡ ಆಗಮಿಸಿ ಸಂಗೀತ, ನೃತ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅಪ್ಪನ ಮದ್ವೆಗೆ ಭರ್ಜರಿ ಡ್ಯಾನ್ಸ್​ ಕೂಡ ಮಾಡಿದ್ದರು. ಇದು ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಸದ್ದು ಮಾಡುತ್ತಿದೆ.  ಆದರೆ ಮಲೈಕಾ ಶರಾವತ್​ ಮಾತ್ರ ಮಾಜಿ ಪತಿಯ ಮದ್ವೆಗೆ ಹೋಗಿರಲಿಲ್ಲ. 

ಇದರ ನಡುವೆಯೇ, ಮಲೈಕಾ ಅರೋರಾ ಮತ್ತು ಅರ್ಜುನ್​ ಕಪೂರ್​ ನಡುವೆ ಎಲ್ಲವೂ ಸರಿಯಿಲ್ಲ ಎಂದೇ ಹೇಳಲಾಗುತ್ತಿದೆ. ಮಲೈಕಾ ಅರೋರಾ (Malaika Arora) ಮತ್ತು ಅರ್ಬಾಜ್ ಖಾನ್ ಅವರನ್ನು ಹಿಂದಿನ ದಿನದ ಹಾಟೆಸ್ಟ್ ಜೋಡಿಗಳಲ್ಲಿ ಒಂದು ಎಂದೇ ಕರೆಯಲಾಗುತ್ತಿತ್ತು. ಆದರೆ ಅವರು ಬೇರ್ಪಟ್ಟು ಹಲವು ವರ್ಷಗಳೇ ಕಳೆದಿವೆ. 2017ರಲ್ಲಿ ಈ ಜೋಡಿ ಬೇರ್ಪಟ್ಟಿದೆ. ಮಲೈಕಾ ಅರೋರಾಗೆ ಈಗ 49 ವರ್ಷ ವಯಸ್ಸು. ಅರ್ಬಾಜ್​ ಖಾನ್​ ಜೊತೆ ಬೇರ್ಪಟ್ಟ ಬಳಿಕ 12 ವರ್ಷ ಚಿಕ್ಕವಾಗಿರುವ ನಟ ಅರ್ಜುನ್ ಕಪೂರ್ (Arjun Kapoor) ಜೊತೆ ಕೆಲ ವರ್ಷಗಳಿಂದ ಡೇಟಿಂಗ್​ ಮಾಡುತ್ತಿದ್ದಾರೆ ಮಲೈಕಾ. ಇವರಿಬ್ಬರು ಜೊತೆಯಾಗಿ ಕಾಣಿಸಿಕೊಂಡಾಗ ಆಗುವಷ್ಟು ಟ್ರೋಲ್​ ಇನ್ನಾವುದಕ್ಕೂ ಆಗುತ್ತಿಲ್ಲ ಎನ್ನಬಹುದೇನೋ.  ಮಲೈಕಾ ಅರ್ಜುನ್​ ಕಪೂರ್​ ಜೊತೆ ಡೇಟಿಂಗ್​ನಲ್ಲಿದ್ದರೂ ಮಗನಿಗಾಗಿ ಆಗಾಗ್ಗೆ ಅರ್ಬಾಜ್​ ಖಾನ್​ರನ್ನು ಭೇಟಿಯಾಗುವುದು, ತಬ್ಬಿಕೊಳ್ಳುವುದು ನಡೆದಿದ್ದು, ಇವುಗಳ ವಿಡಿಯೋಗಳೂ ವೈರಲ್​ ಆಗುತ್ತಲೇ ಇರುತ್ತವೆ. ಆದರೆ ಇದರ ಬೆನ್ನಲ್ಲೇ ಇವರಿಬ್ಬರೂ ಬ್ರೇಕಪ್​ ಆಗಿದ್ದಾರೆ ಎಂಬ ಭಾರಿ ಸುದ್ದಿ ಬಿ ಟೌನ್​ನಲ್ಲಿ ಹರಿದಾಡುತ್ತಿದೆ.  

Tap to resize

Latest Videos

56 weds 33! ಮಂಟಪಕ್ಕೆ ಬಂದ 56ರ ಮದುಮಗ ಅರ್ಬಾಜ್ ಖಾನ್: ಮದ್ವೆಮನೆ ವಿಡಿಯೋ ವೈರಲ್​

ಇದೀಗ ಮಾಜಿ ಪತಿಯ ಮದುವೆಯ ಬೆನ್ನಲ್ಲೇ ಮಗನ ಜೊತೆ ನಾಯಿ ಹಿಡಿದುಕೊಂಡು ಮಲೈಕಾ  ಕ್ರಿಸ್​ಮಸ್​ ಪಾರ್ಟಿಗೆ ಹೋಗಿರುವ ವಿಡಿಯೋ ವೈರಲ್​ ಆಗಿದೆ. ಈ ವಿಡಿಯೋದಲ್ಲಿ ಅಂಥದ್ದೇನೂ ವಿಶೇಷವಿಲ್ಲ. ಮಗ ಅರ್ಹಾನ್​ ಜೊತೆ ಮಲೈಕಾ ಹೋಗಿದ್ದಾರೆ. ಆದರೆ ಅರ್ಬಾಜ್​ ಖಾನ್​ ಮದ್ವೆ ಸಕತ್​ ಸದ್ದುಮಾಡುತ್ತಿರುವ ಕಾರಣ, ಇದರಲ್ಲಿಯೂ ಟ್ರೋಲಿಗರು  ಮಲೈಕಾ ಅವರನ್ನು ಟ್ರೋಲ್​ ಮಾಡುತ್ತಿದ್ದಾರೆ. ಅರ್ಬಾಜ್​ ಖಾನ್​ ಇನ್ನೊಂದು ಮದ್ವೆಯಾಗಿರುವುದರಿಂದ ನಟಿಯ ಮೊಗದಲ್ಲಿ ತುಂಬಾ ಬೇಸರ ಕಾಣಿಸುತ್ತಿದೆ, ಅದು ಗೊತ್ತಾಗಬಾರದು ಎಂದು ಕೂಲಿಂಗ್​ ಗ್ಲಾಸ್​ ಹಾಕಿ ಬಂದಿದ್ದಾರೆ ಎನ್ನುವುದು ಹಲವು ನೆಟ್ಟಿಗರ ಅಭಿಮತ. ಅಪರೂಪದಕ್ಕೆ ದೇಹ ಪ್ರದರ್ಶನ ಮಾಡದೇ ಮಲೈಕಾ ಕಾಣಿಸಿಕೊಂಡಿರುವ ಬಗ್ಗೆಯೂ ಕಮೆಂಟ್​ಗಳ ಸುರಿಮಳೆಯಾಗುತ್ತಿದೆ. ಮಗ ಮದ್ವೆಗೆ ಹೋದರೂ ಮಲೈಕಾ ಗೈರಾಗಿದ್ದು ಕೂಡ ಸಾಕಷ್ಟು ಚರ್ಚೆಗೆ ಒಳಗಾಗುತ್ತಿದೆ. 



ಈಕೆ ತುಂಬಾ  ನೋವಿನಿಂದ ಇರುವಂತೆ ಕಾಣುತ್ತಿದೆ ಎಂದು ಒಬ್ಬರು ಹೇಳಿದ್ರೆ, ಅರ್ಜುನ್​ ಕಪೂರ್​ ಬದ್ಲು ನಾಯಿ ಯಾಕೆ ಅಂತ ನಟಿಯ ಕಾಲೆಳೆದಿದ್ದಾರೆ ಇನ್ನು ಕೆಲವರು. ಮಾಜಿ ಪತಿ ಮದ್ವೆಯಾಯ್ತು, ತಾನಿನ್ನೂ ಲಿವ್​ ಇನ್​ ನಲ್ಲಿಯೇ ಇರೋ ನೋವು ಕಾಡ್ತಿದೆ ಮಲ್ಲಿಕಾಗೆ ಎಂದು ಕೆಲವರು ಹೇಳುತ್ತಿದ್ದರೆ, ಅರ್ಜುನ್​ ಕಪೂರ್​ಗಿಂತ ನಾಯಿಯೇ ಬೆಸ್ಟ್​ ಅಂತ ಅಂದ್ಕೊಂಡಿರ್ಬೇಕು ಈಕೆ ಎಂದು ಮತ್ತೆ ಕೆಲವರು ಕಮೆಂಟ್​ ಮಾಡುತ್ತಿದ್ದಾರೆ. ಇನ್ನು ಮಗನನ್ನೂ ಬಿಡದ ಕೆಲ ನೆಟ್ಟಿಗರು, ಮಗ ನೋಡಿ ಪಾಪ ರಾತ್ರಿ ಅಪ್ಪನ ಮದ್ವೆಗೆ ಹೋಗ್ಬೇಕು, ಬೆಳಿಗ್ಗೆ ಅಮ್ಮನ ಜೊತೆ ವಾಕಿಂಗ್​ಗೆ ಬರ್ಬೇಕು... ಇಬ್ಬರನ್ನೂ ಮೆಂಟೇನ್​ ಮಾಡುವುದು ಎಷ್ಟು ಕಷ್ಟ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಅರ್ಬಾಜ್​ ಖಾನ್​ ಅವರ ಮರು ಮದುವೆ ಹಾಗೂ ಮಲೈಕಾ ಮತ್ತು ಅರ್ಜುನ್​ ಕಪೂರ್​ ನಡುವಿನ ಬ್ರೇಕಪ್​ ವದಂತಿ ಸದ್ಯ ಟ್ರೋಲಿಗರ ಬಾಯಿಗೆ ಆಹಾರ ಆಗುತ್ತಿದೆ. 

ಇಬ್ಬರು ಮಕ್ಕಳ ಜೊತೆ ಕಾಣಿಸಿಕೊಂಡ ಅಭಿಷೇಕ್​ ಬಚ್ಚನ್​ ಎಕ್ಸ್​ ಕರಿಷ್ಮಾ ಕಪೂರ್: ಈಕೆಯದ್ದು ನೋವಿನ ಬದುಕು!
 

click me!