ಜೈಲಿನಲ್ಲಿ ಕೊಲೆಯಾದ್ರೆ ಸಲ್ಮಾನ್ ಖಾನ್ ಕಾರಣವೆಂದ ಕೆಆರ್‌ಕೆ; ದೇಶದ್ರೋಹಿ ನಟನಷ್ಟೇ ಅಲ್ಲ, ನೀನು ಅದೇ..!

By Shriram BhatFirst Published Dec 25, 2023, 9:14 PM IST
Highlights

ಕೆಆರ್‌ಕೆ ಎಂದು ಕರೆಯಲ್ಪಡುವ ಕಮಾಲ್ ರಷೀದ್ ಖಾನ್ (KRK) ಹೆಸರು ಸಿನಿಮಾವಲಯದಲ್ಲಿ ಅಷ್ಟೇನೂ ಚಾಲ್ತಿಯಲ್ಲಿ ಇಲ್ಲದಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಅವರ ಹೆಸರು ಸಖತ್ ಫೇಮಸ್ ಎನ್ನಬಹುದು. 

ಕಮಾಲ್ ರಷೀದ್ ಖಾನ್ ಹೆಸರು ಸೋಷಿಯಲ್ ಮೀಡಿಯಾ ಬಳಕೆದಾರರಿಗೆ ಹೊಸ ಹೆಸರೇನೂ ಅಲ್ಲ. ಅವರು ಬಹಳಷ್ಟು ಬಾರಿ ಹಲವರ ಹೆಸರುಗಳನ್ನು ಹಾಕಿ ಟ್ವಿಟ್ಟರ್‌ನಲ್ಲಿ (ಈಗಿನ X)ಬಹಳಷ್ಟು ಆರೋಪಗಳನ್ನು ಮಾಡಿದ್ದರು. ತಮ್ಮ ಆರೋಪಕ್ಕೆ ಸಾಕಷ್ಟು ಪ್ರತ್ಯಾರೋಪಗಳನ್ನೂ ಸ್ವೀಕರಿಸಿದ್ದರು. ಇದೀಗ ಅವರು ಟ್ವೀಟ್ ಮಾಡಿದ್ದು, ಅದರಲ್ಲಿ 'ನನ್ನನ್ನು ಮುಂಬೈ ಏರ್‌ಪೋರ್ಟ್‌ನಲ್ಲಿ (Mumbai Airport) ಬಂಧಿಸಲಾಗಿದೆ. ನಾನು ಜೈಲಿನಲ್ಲಿ ಸತ್ತರೆ ಇದು ಒಂದು ಕೊಲೆ ಎಂದು ನೀವೆಲ್ಲರೂ ತಿಳಿಯತಕ್ಕದ್ದು' ಎಂದು ಬರೆದುಕೊಂಡಿದ್ದಾರೆ. 

ಸಲಾರ್ ಸಿನಿಮಾದಲ್ಲಿ 'ಅದೊಂದು' ಮಿಸ್ ಆಗ್ಬಿಟ್ಟಿದೆ; 'ಶೌರ್ಯಂಗ ಪರ್ವಂ'ನಲ್ಲಿ ಇರುತ್ತಾ?!

ಕೆಆರ್‌ಕೆ (KRK)ಎಂದು ಕರೆಯಲ್ಪಡುವ ಕಮಾಲ್ ರಷೀದ್ ಖಾನ್ (Kamaal Rashid Khan) ಹೆಸರು ಸಿನಿಮಾವಲಯದಲ್ಲಿ ಅಷ್ಟೇನೂ ಚಾಲ್ತಿಯಲ್ಲಿ ಇಲ್ಲದಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಅವರ ಹೆಸರು ಸಖತ್ ಫೇಮಸ್ ಎನ್ನಬಹುದು. ಕಾರಣ, ಆಗಾಗ ಅವರನ್ನು ಎಫ್‌ಐಆರ್‌ ಹಾಕಿ ಮುಂಬೈ ಪೊಲೀಸರು ಬಂಧಿಸುವುದು, ಬಿಡುಗಡೆ ಮಾಡುವುದು ನಡೆಯುತ್ತಲೇ ಇರುತ್ತದೆ. ಆದರೆ ಈಗ ಮತ್ತೆ ಕೆಆರ್‌ಕೆ ಬಂಧನವಾಗಿದೆ. ಈಗ ಅವರು ತಮ್ಮ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಿ ತಮ್ಮ ಮನದ ದುಗುಡ ತೋಡಿಕೊಂಡಿದ್ದಾರೆ. 

ಮುಂಬೈ 'ಗ್ಯಾರೇಜ್‌'ನಲ್ಲಿ ವಾಸವಿದ್ದ ನಟ; ಈಗ ದುಬೈ, ಲಂಡನ್‌, ಅಮೆರಿಕಾದಲ್ಲೂ ಮನೆ, ಹತ್ತು ಕಾರುಗಳು!

ಕಮಾಲ್ ರಷೀದ್ ಖಾನ್ ಹೇಳುವ ಪ್ರಕಾರ, 'ನಾನು ಕಳೆದ ಒಂದು ವರ್ಷದಂದ ಮುಂಬೈನಲ್ಲೇ ವಾಸವಾಗಿದ್ದೇನೆ. ನಾನು ನನ್ನ ಎಲ್ಲಾ ಕೋರ್ಟ್‌ಗಳ ವಾಯಿದೆ ದಿನಾಂಕಗಳಲ್ಲಿ ನಾನು ತಪ್ಪದೇ ಹಾಜರಿ ಹಾಕುತ್ತಿದ್ದೇನೆ. ಇಂದು ನಾನು ಹೊಸ ವರ್ಷದ ಆಚರಣೆ ಮಾಡಲು ದುಬೈಗೆ ಹೊರಟಿದ್ದೆ. ಆದರೆ, ನನ್ನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಅವರ ಪ್ರಕಾರ 2016 ಕೇಸ್‌ಗೆ ಸಂಬಂಧಿಸಿ ನನ್ನ ವಿಚಾರಣೆ ಮಾಡಲು ಅರೆಸ್ಟ್ ಮಾಡಲಾಗಿದೆ. ಆದರೆ, ಸಲ್ಮಾನ್ ಖಾನ್ (Salman Khan) 'ಟೈಗರ್ 3' (Tiger 3) ಚಿತ್ರದ ಸೋಲಿಗೆ ನಾನು ಕಾರಣ ಎನ್ನುತ್ತಿದ್ದಾರೆ. ಒಮ್ಮೆ ನಾನು ಪೊಲೀಸ್ ವಿಚಾರಣೆಯಲ್ಲಿ ಅಥವಾ ಜೈಲಿನಲ್ಲಿ ಸತ್ತರೆ ಅದು ಕೊಲೆ (Murder) ಮತ್ತು ಅದಕ್ಕೆ ಯಾರು ಜವಾಬ್ದಾರಿ ಎಂದು ನೀವೆಲ್ಲರೂ ಅರಿತಿರಬೇಕು' ಎಂದು ಕೆಆರ್‌ಕೆ ಟ್ವೀಟ್ ಮಾಡಿದ್ದಾರೆ. 

ಮುಂಬೈ 'ಗ್ಯಾರೇಜ್‌'ನಲ್ಲಿ ವಾಸವಿದ್ದ ನಟ; ಈಗ ದುಬೈ, ಲಂಡನ್‌, ಅಮೆರಿಕಾದಲ್ಲೂ ಮನೆ, ಹತ್ತು ಕಾರುಗಳು!

ಆದರೆ, ಅವರ ಸೋಷಿಯಲ್ ಮೀಡಿಯಾ ಪೋಸ್ಟ್‌ಗೆ ವಿಭಿನ್ನ ಪ್ರತಿಕ್ರಿಯೆಗಳು ಬಂದಿವೆ. ಕೆಲವರು 'ಕರ್ಮ ನಿನ್ನ ಪಾಲಿಗೆ ವಾಪಸ್ ಬಂದಿದೆ, ಅನುಭವಿಸು' ಎಂದಿದ್ದರೆ ಕೆಲವರು 'ನಿನಗೆ ಎನೂ ತೊಂದರೆ ಆಗುವುದಿಲ್ಲ, ಧೈರ್ಯವಾಗಿರು' ಎಂದಿದ್ದಾರೆ. ಆದರೆ ರಾಹುಲ್ ಎಂಬವರು 'ನೀನು ದೇಶದ್ರೋಹಿ ಸಿನಿಮಾದಲ್ಲಿ ನಟಿಸಿರುವುದು ಮಾತ್ರವಲ್ಲ, ಸ್ವತಃ ನೀನೇ ದೇಶದ್ರೋಹಿ ಆಗಿದ್ದೀಯಾ' ಎಂದು ಕಾಮೆಂಟ್ ಹಾಕಿದ್ದಾರೆ. ಒಟ್ಟಿನಲ್ಲಿ Kamaal Rashid Khan ಮುಂಬೈನಲ್ಲಿ ಅರೆಸ್ಟ್ ಆಗಿದ್ದು, ಮುಂದಿನ ಬೆಳವಣಿಗೆಯನ್ನು ಕಾದು ನೋಡಬೇಕಿದೆ.

ಹೀನಾಯ ಕಳಪೆ ಪಟ್ಟ ಪಡೆದ ಭಾರತದ ಟಿವಿ ಶೋ; ಅಮೆರಿಕಾ ನಂಟಿನಿಂದ ಇಂಡಿಯಾದಲ್ಲಿ ಗಂಟುಮೂಟೆ ಕಟ್ಟಿತಾ?

click me!