ಹಾಲ್ಗೆನ್ನೆ ಚಲುವೆ ತಮನ್ನಾ ಭಾಟಿಯಾ ಟ್ರೋಲ್ ಆಗಿದ್ದಾರೆ. ಮನೀಶ್ ಮಲ್ಹೋತ್ರಾ ಮನೆಯಲ್ಲಿ ಯಾವ್ದೋ ಟೆನ್ಷನ್ ನಲ್ಲಿ ತಮನ್ನಾ ಮಾಡಿದ ಕೆಲಸ ವೈರಲ್ ಆಗಿದೆ. ಪಾಪರಾಜಿಗಳ ಸಲಹೆಗೆ ತಮನ್ನಾ ನೀಡಿದ ರಿಯಾಕ್ಷನ್ ಬಗ್ಗೆ ಫ್ಯಾನ್ಸ್ ಏನ್ ಹೇಳಿದಾರೆ ಗೊತ್ತಾ?
ಐಷಾರಾಮಿ (Luxury) ಮನೆಗಳಿಗೆ ಹೋದಾಗ ಅಲ್ಲಿರುವ ಸ್ವಿಚ್, ಬೇಸಿನ್ ಕಾಕ್ ಗಳನ್ನು ಹೇಗೆ ಬಳಸಬೇಕು ಗೊತ್ತಾಗೋದಿಲ್ಲ. ಸಾಮಾನ್ಯವಾಗಿ ಮಧ್ಯಮ ವರ್ಗದ ಜನರಿಗೆ ಈ ಕನ್ಫ್ಯೂಸ್ (Confuse) ಇರುತ್ತೆ ಅಂದ್ಕೊಂಡ್ರೆ ನಿಮ್ಮ ನಂಬಿಕೆ ಸುಳ್ಳು. ದಕ್ಷಿಣ ಭಾರತದ ಮಿಲ್ಕಿ ಕ್ವೀನ್ ತಮನ್ನಾ ಭಾಟಿಯಾ (South Indian Milky Queen Tamanna Bhatia) ಸೇರಿದಂತೆ ಸೆಲೆಬ್ರಿಟಿಗಳು ಕೂಡ ಕೆಲವೊಮ್ಮೆ ಕನ್ಫ್ಯೂಸ್ ಆಗ್ತಾರೆ. ಅದನ್ನು ಹೇಗೆ ಬಳಸೋದು ಗೊತ್ತಾಗೋದಿಲ್ಲ. ಇದಕ್ಕೆ ವೈರಲ್ ಆಗಿರುವ ತಮನ್ನಾ ಭಾಟಿಯಾ ವಿಡಿಯೋ ಉತ್ತರ ಎಗ್ಸಾಂಪಲ್.
ಸೋಶಿಯಲ್ ಮೀಡಿಯಾದಲ್ಲಿ ತಮನ್ನಾ ಭಾಟಿಯಾ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ತಮನ್ನಾ ಭಾಟಿಯಾ, ಮನೀಶ್ ಮಲ್ಹೋತ್ರಾ ಮನೆಯಲ್ಲಿ ಕಾಣಿಸಿಕೊಂಡಿದ್ದಾರೆ. ತಮನ್ನಾ ಸ್ವಲ್ಪ ಹೊತ್ತು ಬಾಗಿಲಿನ ಬಳಿ ಕಾಯ್ತಾರೆ. ನಂತ್ರ ಬೆಲ್ ಒತ್ತಲು ಮುಂದಾಗ್ತಾರೆ. ತಮನ್ನಾಗೆ ಬೆಲ್ ಯಾವುದು ಅಂತ ತಿಳಿಯೋದಿಲ್ಲ. ಹಾಗಾಗಿ ಬೆಲ್ ಬದಲು ಕ್ಯಾಮರಾ ಮೇಲೆ ಪ್ರೆಸ್ ಮಾಡ್ತಾರೆ. ಇದನ್ನು ನೋಡಿದ ಪಾಪರಾಜಿಗಳು ಅದು ಬೆಲ್ ಅಲ್ಲ ಮೇಡಂ, ಕ್ಯಾಮರಾ. ಆ ಕಡೆ ಬೆಲ್ ಇದೆ ನೋಡಿ ಅಂತ ಸಲಹೆ ನೀಡ್ತಾರೆ. ಪಾಪರಾಜಿಗಳ ಸಲಹೆಯನ್ನು ಅತ್ಯಂತ ಸೌಮ್ಯವಾಗಿ ಸ್ವೀಕರಿಸುವ ತಮನ್ನಾ, ಬೆಲ್ ಒತ್ತಿ ಮತ್ತೆ ಬಾಗಿಲ ಬಳಿ ಹೋಗಿ ನಿಲ್ತಾರೆ.
34ಕ್ಕೆ ಎರಡಾದ್ರೂ ಆಗ್ಬಾರದಾ? ಬಿಗ್ ಬಾಸ್ ಶೈನ್ ಶೆಟ್ಟಿ ಪ್ರೀತಿಯಲ್ಲಿದ್ದಾರಾ!
ಈ ವಿಡಿಯೋ ನೋಡಿದ ಬಳಕೆದಾರರು ನಾನಾ ಕಮೆಂಟ್ ಶುರು ಮಾಡಿದ್ದಾರೆ. ತಮನ್ನಾ ನೀಡಿದ ರಿಯಾಕ್ಷನ್ ವೀಕ್ಷಕರಿಗೆ ಇಷ್ಟವಾಗಿದೆ. ಕಾಟನ್ ಸಲ್ವಾರ್ ಕಮೀಜ್ನಲ್ಲಿ ತಮನ್ನಾ ಸುಂದರವಾಗಿ ಕಾಣ್ತಿದ್ದಾರೆ. ಅವರನ್ನು ಅಭಿಮಾನಿಗಳು ಸರಳ ಸುಂದರಿ ಅಂತ ಕರೆದಿದ್ದಾರೆ. ತುಂಬಾ ಮುಗ್ಧೆ ಅಂತ ಒಬ್ಬರು ಕಮೆಂಟ್ ಮಾಡಿದ್ರೆ ಓಹೋ, ಶ್ರೀಮಂತರಿಗೂ ಇಂಥ ಕನ್ಫ್ಯೂಸ್ ಆಗುತ್ತಾ ಅಂತ ಇನ್ನೊಬ್ಬರು ಬರೆದಿದ್ದಾರೆ. ಒಬ್ಬರು ಸೋ ಕ್ಯೂಟ್ ಅಂದ್ರೆ ಮತ್ತೊಬ್ಬರು ಭಾರತದಲ್ಲೂ ಗೋಡೆಗೆ ಕ್ಯಾಮರಾ ನೋಡಲು ಸಿಕ್ತಿದೆ ಎಂದು ಕಮೆಂಟ್ ಮಾಡಿದ್ದಾರೆ. ಕೆಲವರಿಗೆ ಕ್ಯಾಮರಾ ಇಟ್ಟಿರುವ ಜಾಗ ಅಚ್ಚರಿ ತಂದಿದ್ರೆ ಮತ್ತೆ ಕೆಲವರು ತಮನ್ನಾ ಕೂಡ ನಮ್ಮಂತೆ ಅಂತ ಸಮಾಧಾನಪಟ್ಟುಕೊಂಡಿದ್ದಾರೆ. ನಟ, ನಟಿಗೆ ಗೊತ್ತಿಲ್ಲದ ವಿಷ್ಯ ಪಾಪರಾಜಿಗಳಿಗೆ ತಿಳಿದಿರುತ್ತದೆ ಎಂದು ಮತ್ತೊಬ್ಬರು ಬರೆದಿದ್ದಾರೆ.
ಇನ್ನೊಂದು ವಿಡಿಯೋದಲ್ಲಿ ಮನೀಶ್ ಮಲ್ಹೋತ್ರಾ ಮನೆಯಲ್ಲಿಯೇ ವಿಜಯ್ ವರ್ಮಾ (Vijay Varma) ಹಾಗೂ ತಮನ್ನಾ ಭಾಟಿಯಾ ಕಾಣಿಸಿಕೊಂಡಿದ್ದಾರೆ. ಪಾಪರಾಜಿಗಳು ವಿಜಯ್ ವರ್ಮಾ ಫೋಟೋ ತೆಗೆಯಲು ಮುಂದಾಗ್ತಿದ್ದಂತೆ ಹಿಂದೆ ಸರಿದು ನಿಂತ ತಮನ್ನಾ, ತಾಳ್ಮೆಯಿಂದ ಕಾಯ್ತಾರೆ. ನಂತ್ರ ತಮನ್ನಾ ಹಾಗೂ ವಿಜಯ್ ಪಾಪರಾಜಿಗಳಿಗೆ ಫೋಸ್ ಕೊಡೋದನ್ನು ನೋಡ್ಬಹುದು. ತಮನ್ನಾ ಈ ವಿಡಿಯೋವನ್ನು ಫ್ಯಾನ್ಸ್ ಇಷ್ಟಪಟ್ಟಿದ್ದಾರೆ.
ತಮನ್ನಾ ಭಾಟಿಯಾ ಹಾಗೂ ವಿಜಯ್ ವರ್ಮಾ ಲವ್ ಸ್ಟೋರಿ ಸದ್ಯ ಚರ್ಚೆಯಲ್ಲಿದೆ. 38 ವರ್ಷದ ನಟ ವಿಜಯ್ ವರ್ಮಾ, ಒಟಿಟಿಯಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿದ್ದಾರೆ. ವಿಜಯ್, ಡಾರ್ಲಿಂಗ್ಸ್, ಮಿರ್ಜಾಪುರ್ 2, ದಹದ್ ಮತ್ತು ಜಾನೆ ಜಾನ್ ಮೂಲಕ ಹೆಚ್ಚು ಪ್ರಸಿದ್ಧಿ ಪಡೆದಿದ್ದಾರೆ. ಇನ್ನು ತಮನ್ನಾ ಭಾಟಿಯಾ, 34 ವರ್ಷದ ತಮನ್ನಾ ಭಾಟಿಯಾ ದಕ್ಷಿಣ ಚಿತ್ರರಂಗದಲ್ಲಿ ಮಾತ್ರವಲ್ಲದೆ ಬಾಲಿವುಡ್ನಲ್ಲಿಯೂ ಮಿಂಚುತ್ತಿದ್ದಾರೆ. ಇತ್ತೀಚಿಗೆ ಸ್ತ್ರೀ2 ನ ಆಜ್ ಕಿ ರಾತ್ ಹಾಡು, ತಮನ್ನಾ ಪ್ರಸಿದ್ಧಿಯನ್ನು ಡಬಲ್ ಮಾಡಿದೆ.
ಮನೆಗೆ ಬಂದ ಮಗ ಧರ್ಮ ಕೀರ್ತಿರಾಜ್‌ಗೆ ಶಹಬ್ಬಾಸ್‌ಗಿರಿ ನೀಡಿದ ಕೀರ್ತಿರಾಜ್
2023 ರಲ್ಲಿ ತಮನ್ನಾ ಹಾಗೂ ವಿಜಯ್ ವರ್ಮಾ, ಲಸ್ಟ್ ಸ್ಟೋರೀಸ್ 2ದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರ ಇವರಿಬ್ಬರನ್ನು ಮತ್ತಷ್ಟು ಹತ್ತಿರ ಮಾಡಿತ್ತು. ಈಗಾಗಲೇ ತಮನ್ನಾ ಹಾಗೂ ವಿಜಯ್ ತಮ್ಮ ಸಂಬಂಧವನ್ನು ಒಪ್ಪಿಕೊಂಡಿದ್ದಾರೆ. ಮದುವೆ ಡೇಟ್ ಅನೌನ್ಸ್ ಮಾತ್ರ ಬಾಕಿ ಇದೆ. ಮೂಲಗಳ ಪ್ರಕಾರ, ಮದುವೆಗೆ ತಯಾರಿ ನಡೆಯುತ್ತಿದ್ದು, ತಮನ್ನಾ ಮತ್ತು ವಿಜಯ್ ಮುಂಬೈನಲ್ಲಿ ಐಷಾರಾಮಿ ಅಪಾರ್ಟ್ಮೆಂಟ್ ಹುಡುಕುತ್ತಿದ್ದಾರೆ ಎಂಬ ಸುದ್ದಿ ಇದೆ.