ನನ್ನನ್ನು Sexy bobshell ಅನ್ನೋದಕ್ಕೆ ಬೇಜಾರಿದೆ: ಮಲೈಕಾ ಅರೋರಾ 

Published : Apr 07, 2023, 09:06 PM IST
ನನ್ನನ್ನು Sexy bobshell ಅನ್ನೋದಕ್ಕೆ ಬೇಜಾರಿದೆ: ಮಲೈಕಾ ಅರೋರಾ 

ಸಾರಾಂಶ

ಬಾಲಿವುಡ್ ನಟಿ ಮಲೈಕಾ ಅರೋರಾಗೆ ವರ್ಷ 50 ಆಗ್ತಾ ಬಂತು. ಆಳೆತ್ತರ ಬೆಳೆದ ಮಗನಿದ್ದಾನೆ ಅಂತ ಹೇಳುವುದು ಕಷ್ಟ. ಅಂತ ನಟಿಯನ್ನು sexy bombshell ಅಂತಾನೇ ಇವತ್ತಿಗೂ ಗುರುತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಐಟಂ ಡ್ಯಾನ್ಸ್ ಮೂಲಕವೇ ಗುರುತಿಸಿ ಕೊಂಡ ಬಾಲಿವುಡ್ ನಟಿ ಮಲೈಕಾ ಅರೋರಾಗೆ ವರ್ಷ 50 ಆಗ್ತಾ ಬಂತು. ಆಳೆತ್ತರ ಬೆಳೆದ ಮಗನಿದ್ದಾನೆ ಅಂತ ಹೇಳುವುದು ಕಷ್ಟ. ಅಂತ ನಟಿಯನ್ನು sexy bombshell ಅಂತಾನೇ ಇವತ್ತಿಗೂ ಗುರುತಿಸುತ್ತಾರೆ. ಈ ಬಗ್ಗೆ ನೋವು ತೋಡಿಕೊಂಡ ಮಲೈಕಾ, ನನ್ನನ್ನು ಗಂಭೀರ ನಟಿ ಎಂದು ಪರಿಗಣಿಸಲೇ ಇಲ್ಲ. ಈ ಬಗ್ಗೆ ನಂಗೆ ನೋವಿದೆ ಎಂದು ದುಃಖ ತೋಡಿಕೊಂಡಿದ್ದಾರೆ. ಈ ನೋವು ಅವರನ್ನೂ ಇವತ್ತಿಗೂ ಕಾಡುತ್ತಂತೆ. 

ಜನರು ಇವರನ್ನು ಕೇವಲ 'ಸೆಕ್ಸಿ ಬಾಂಬ್' ಎಂದು ಭಾವಿಸುತ್ತಿದ್ದ ಸಮಯದ ಬಗ್ಗೆ ಮಲೈಕಾ ಅರೋರಾ ಮನ ಬಿಚ್ಚಿ ಮಾತನ್ನಾಡಿದ್ದಾರೆ. ತನ್ನನ್ನು ಗಂಭೀರ ನಟಿಯೆಂದು ಬಾಲಿವುಡ್  ಪರಿಗಣಿಸದಿದ್ದಾಗ ತುಂಬಾ ನೋವಾಯಿತು ಎಂದು ಅವರು ಹೇಳಿದರು.

ಖ್ಯಾತ ಟಿವಿ ಸೆಲೆಬ್ರಿಟಿ ಮಲೈಕಾ ತಮ್ಮ ವೃತ್ತಿಜೀವನದಲ್ಲಿ ಬಹಳ ಸಮಯದವರೆಗೆ ಇಷ್ಟವಿಲ್ಲದ tag line ಇಟ್ಟುಕೊಂಡಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.  ಜನರು ತಮ್ಮ ಬಗ್ಗೆ ಹೇಗೆ ಯೋಚಿಸುತ್ತಾರೆ ಎಂಬುದು ನನಗೆ ಬೇಸರ ತಂದಿದೆ. ಮತ್ತು ಅದರಿಂದ ಅವರು  ನಿರಂತರವಾಗಿ ಆಂತರಿಕ ಕಲಹಗಳೊಂದಿಗೆ ವ್ಯವಹರಿಸುತ್ತಾರೆ! ಎಂದು ಬ್ರೈಡ್ಸ್ ಟುಡೆಗೆ ನೀಡಿದ ಸಂದರ್ಶನದಲ್ಲಿ, ಮಲೈಕಾ ಮಾತನಾಡಿದ್ದಾರೆ.  "ಜನರು ನಮ್ಮನ್ನು ಬಾಂಬ್ಶೆಲ್ ಎಂದು ಗ್ರಹಿಸಿದಾಗ, ಯಾರೂ ನಿಮ್ಮನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಈ ಬಗ್ಗೆ ಬಹಳ ಸಮಯದಿಂದಲೂ ನಂಗೆ ನೋವು ಕಾಡುತ್ತಲೇ ಇದೆ.  ಜನರು ನನ್ನನ್ನು ಒಂದೇ ದೃಷ್ಟಿಕೋನದಲ್ಲಿ ನೋಡುತ್ತಾರೆಂದು ತಿಳಿದು ಬಹಳ  ಬೇಸರವಾಯಿತು. ನನ್ನ ಬಗ್ಗೆ ಯೋಚಿಸಿದಾಗ ಜನರಿಗೆ ಬರಿ 'ಉತ್ತಮ ದೇಹ' ಮತ್ತು 'ಒಳ್ಳೆಯ ಮುಖ' ಮಾತ್ರ ನೆನಪಾಗುವುದು; ಇವೆಲ್ಲದರಿಂದ ದೂರವಿರಲು ನಾನು ನನ್ನ ಒಳಿತಿಗಾಗಿ ಬಹಳಷ್ಟು ಬೇರೆ ಬೇರೆ ಕೆಲಸ ಮಾಡಿದ್ದೇನೆ.

 'ನನಗೆ ಆತ್ಮವಿಶ್ವಾಸವು ಎಂದಿಗೂ ಸಮಸ್ಯೆಯಾಗಿರಲಿಲ್ಲ. ನನ್ನಲ್ಲಿ ಹೇರಳವಾಗಿರುವ ಒಂದು ವಿಷಯವಿದ್ದರೆ ಅದು ಆತ್ಮವಿಶ್ವಾಸ ಎಂಬುವುದು ಚೆನ್ನಾಗಿ ಬಲ್ಲೆ. ನಾನು ಶಾಂತ ಸ್ವಭಾವದವಳು.  ಬುದ್ಧಿವಂತೆಯೂ ಹೌದು.   ಇದಿಲ್ಲದಿದ್ದರೆ ನಾನು ಖಂಡಿತವಾಗಿಯೂ ಈ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ. ನನಗೆ ನೆನಪಿದೆ ನಾನು ನಿರಂತರವಾಗಿ ಆಂತರಿಕ ಕಲಹಗಳನ್ನು ಎದುರಿಸುತ್ತಿದ್ದೆ.  ಹೀಗೆ ಹೇಳುತ್ತಾ, ನಾನು ಹುಟ್ಟು ಹಸ್ಲರ್ ಮತ್ತು ನಾನು ಹಸ್ಲರ್ ಆಗಿಯೇ ಸಾಯುತ್ತೇನೆ’’ ಎಂದು ಹೇಳಿಕೊಂಡರು.

ಅನುಷ್ಕಾ ಕರಿಯರ್​ ಹಾಳು ಮಾಡಲು ಹೊರಟಿದ್ದ ಕರಣ್​ ಜೋಹರ್! ಶಾಕಿಂಗ್​ ವಿಡಿಯೋ

ಮಲೈಕಾ ತನ್ನ ಬಾಲಿವುಡ್ ನ ವೃತ್ತಿಜೀವನವನ್ನು  ದಿಲ್ ಸೆ (1998) ಚಿತ್ರದ ಹಿಟ್ ಚೈಯಾ ಚೈಯ್ಯಾ ಗೀತೆಯೊಂದಿಗೆ  ಪ್ರಾರಂಭಿಸಿದರು. ಬಿಚ್ಚೂ (2000), ದಬಾಂಗ್ ನ ಮುನ್ನಿ ಬದ್ನಾಮ್ ಹುಯಿ (2010), ಹೌಸ್ಫುಲ್ 2 ನಿಂದ ಅನಾರ್ಕಲ್ ಡಿಸ್ಕೋ ಚಾಲಿ ಮತ್ತು 2012ರಲ್ಲಿ ದಬಾಂಗ್ 2 ನಿಂದ ಪಾಂಡೆ ಜಿ ಸೀತಿ ಮುಂತಾದ ಇತರ ಹಾಡುಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಮಲೈಕಾ ಹಲವಾರು ರಿಯಾಲಿಟಿ ಶೋಗಳಾದ ನಚ್ ಬಲಿಯೆ, ಜರಾ ನಚ್ಕೆ ದಿಖಾ, ಜಲಕ್ ದಿಖ್ಲಾ ಜಾ, ಇಂಡಿಯಾಸ್ ಗಾಟ್ ಟ್ಯಾಲೆಂಟ್, ಇಂಡಿಯಾಸ್ ನೆಕ್ಸ್ಟ್ ಟಾಪ್ ಮಾಡೆಲ್ ಮತ್ತು ಇಂಡಿಯಾಸ್ ಬೆಸ್ಟ್ ಡ್ಯಾನ್ಸರ್ ನ ಭಾಗವಾಗಿದ್ದಾರೆ.

ಇದು ನಿಮ್ಮ ಗೆಲುವು ಅಮ್ಮ; ಪದ್ಮಶ್ರೀ ಸ್ವೀಕರಿಸಿದ KGF-2 ನಟಿ ರವೀನಾ ಟಂಡನ್‌ಗೆ ಪುತ್ರಿಯ

ಇತ್ತೀಚೆಗೆ, ಮಲೈಕಾ ಡಿಸ್ನಿ+ ಹಾಟ್ ಸ್ಟಾರ್ ಗೆ ಪಾದಾರ್ಪಣೆ ಮಾಡಿದರು. ಮೂವಿಂಗ್ ಇನ್ ವಿತ್ ಮಲೈಕಾ ಶೋನಲ್ಲಿ ಫಿಲ್ಟರ್ ಇಲ್ಲಿದೆ  ಮಾತನಾಡುವ ಮೂಲಕ ಅಭಿಮಾನಿಗಳಿಗೆ ತಮ್ಮ ಜೀವನದ ಬಗ್ಗೆ ಇರುವ ಕೂತುಹಲ ತಣಿಸುತ್ತಿದ್ದಾರೆ. ಅವರು ತೇರಾ ಕಿ ಖಯಾಲ್ ಎಂಬ ಹೊಸ ಹಾಡಿನಲ್ಲಿ ಗಾಯಕ ಗುರು ರಾಂಧವಾ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ಹಾಡನ್ನು ಗುರು ರಾಂಧವ ಹಾಡಿದ್ದಾರೆ. ಅವರು ರಾಯಲ್ ಮಾನ್ ಜೊತೆಗೆ ಸಾಹಿತ್ಯವನ್ನೂ ಬರೆದಿದ್ದಾರೆ. ಬಾಸ್ಕೋ ಲೆಸ್ಲಿ ಮಾರ್ಟಿಸ್ ಅವರ ವೀಡಿಯೊ ನಿರ್ದೇಶನದೊಂದಿಗೆ ಸಂಜೋಯ್ ಹಾಡನ್ನು ಸಂಯೋಜಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?