ಎಲಾನ್ ಮಸ್ಕ್, ಮೆಸ್ಸಿಯನ್ನೂ ಹಿಂದಿಕ್ಕಿ 100 ಪ್ರಭಾವಿ ವ್ಯಕ್ತಿಗಳಲ್ಲಿ ನಂ.1 ಆದ ಶಾರುಖ್​ ಖಾನ್

Published : Apr 07, 2023, 06:52 PM IST
ಎಲಾನ್ ಮಸ್ಕ್,  ಮೆಸ್ಸಿಯನ್ನೂ ಹಿಂದಿಕ್ಕಿ 100 ಪ್ರಭಾವಿ ವ್ಯಕ್ತಿಗಳಲ್ಲಿ ನಂ.1 ಆದ ಶಾರುಖ್​ ಖಾನ್

ಸಾರಾಂಶ

ಎಲಾನ್ ಮಸ್ಕ್,  ಲಿಯೋನೆಲ್ ಮೆಸ್ಸಿ, ಮೆಟಾ ಸಿಇಓ ಮಾರ್ಕ್​ ಝಕರ್​ಬರ್ಗ್ ಸೇರಿದಂತೆ​ ಮುಂತಾದವರನ್ನು ಹಿಂದಿಕ್ಕಿ ಶಾರುಖ್ ಖಾನ್ 100 ಪ್ರಭಾವಿ ವ್ಯಕ್ತಿಗಳಲ್ಲಿ ನಂ.1 ಸ್ಥಾನ ಪಡೆದಿದ್ದಾರೆ. 

ಬಾಲಿವುಡ್ ಕಿಂಗ್ ಖಾನ್ ಶಾರುಖ್​ ಖಾನ್​​ ಭಾರತ ಮಾತ್ರವಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲೂ ಖ್ಯಾತಿಗಳಿಸಿದ್ದಾರೆ. ಭಾರತದಲ್ಲಿ ಮಾತ್ರವಲ್ಲದೇ ವಿದೇಶದಲ್ಲೂ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಬೇರೆ ಬೇರೆ ದೇಶಗಳ ಜನರು ಅವರನ್ನು ಇಷ್ಟಪಡುತ್ತಾರೆ. ಇದೀಗ ವಿಶ್ವದ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಶಾರುಖ್​ ಖಾನ್​ ನಂಬರ್​ ಒನ್​ ಪಟ್ಟಕ್ಕೆ ಏರುವ ಮೂಲಕ ಮತ್ತೊಂದು ದಾಖಲೆ ಮಾಡಿದ್ದಾರೆ. ಇದು ಶಾರುಖ್ ಅಭಿಮಾನಿಗಳಿಗೆ ಖುಷಿಯ ವಿಚಾರವಾಗಿದೆ. ಅಮೆರಿಕದ ಪ್ರತಿಷ್ಠಿತ ‘ಟೈಮ್’ ಮ್ಯಾಗಜಿನ್​ನ ಓದುಗರ ಸಮೀಕ್ಷೆ ಆಧಾರದ ಮೇಲೆ ಲಿಸ್ಟ್ ಬಿಡುಗಡೆ ಮಾಡಲಾಗಿದೆ. ಸಿನಿಮಾ, ರಾಜಕೀಯ, ಉದ್ಯಮ, ಕ್ರೀಡೆ, ಸಾಮಾಜಿಕ ಕಾರ್ಯ ಮುಂತಾದ ಕ್ಷೇತ್ರಗಳ ಘಟಾನುಘಟಿಗಳನ್ನೂ ಮೀರಿಸಿ ಶಾರುಖ್​ ಖಾನ್​ ನಂಬರ್​ ಒನ್​ ಆಗಿದ್ದಾರೆ. 

ಈ ವರ್ಷ ಶಾರುಖ್ ಪಾಲಿಗೆ  ಆಶಾದಾಯಕ ಆಗಿದೆ. ಅನೇಕ ವರ್ಷಗಳ ಬಳಿಕ ಶಾರುಖ್ ‘ಪಠಾಣ್​’ ಸಿನಿಮಾ ಅಭಿಮಾನಿಗಳ ಮುಂದೆ ಬಂದರು. ಈ ಸಿನಿಮಾಗೆ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ಮತ್ತು ಉತ್ತಮ ಪ್ರತಿಕ್ರಿಯೆ ಸಿಗುವ ಜೊತೆಗೆ ಬಾಕ್ಸ್ ಆಫೀಸ್‌ನಲ್ಲಿ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಜೊತೆಗೆ ವಿಶ್ವಮಟ್ಟದಲ್ಲಿ ಕಿಂಗ್ ಖಾನ್ ಖ್ಯಾತಿ ಮತ್ತಷ್ಟು ಹೆಚ್ಚಾಗಿದೆ. 

ಟೈಮ್​ ಮ್ಯಾಗಜಿನ್​ನ 12 ಲಕ್ಷಕ್ಕೂ ಅಧಿಕ ಓದುಗರು ವೋಟ್​ ಮಾಡಿದ್ದಾರೆ. 100 ಪ್ರಭಾವಿ ವ್ಯಕ್ತಿಗಳಲ್ಲಿ ಯಾವ ಸೆಲೆಬ್ರಿಟಿ ಎಷ್ಟನೇ ಸ್ಥಾನಕ್ಕೆ ಅರ್ಹರಾಗಿದ್ದಾರೆ ಎಂಬುದನ್ನು ಓದುಗರ ಸಮೀಕ್ಷೆಯ ಮೂಲಕ ನಿರ್ಧರಿಸಲಾಗಿದೆ. ಶೇ.4ರಷ್ಟು ಓದುಗರು ಶಾರುಖ್​ ಖಾನ್​ಗೆ ವೋಟ್​ ಹಾಕುವ ಮೂಲಕ ನಂಬರ್​ ಸ್ಥಾನ ಅಲಂಕರಿಸಿದ್ದಾರೆ. ವಿಶ್ವದ ಘಟಾನುಘಟಿಗಳನ್ನು ಹಿಂದಿಕ್ಕಿರುವುದು ಅಚ್ಚರಿ ಮೂಡಿಸಿದೆ. ಎಲಾನ್ ಮಾಸ್ಕ್, ಮೆಸ್ಸಿ ಅವರಂದ ವಿಶ್ವ ಮಟ್ಟದ ವ್ಯಕ್ತಗಳನ್ನು ಕಿಂಗ್ ಖಾನ್ ಹಿಂದಿಕ್ಕಿದ್ದಾರೆ. 

ಮೈಸೂರು ಸಿಲ್ಕ್‌ ರೇಶ್ಮೆ ಸೀರೆ ಗೊತ್ತಿಲ್ವಾ?; ಮೈ ಕಾಣುವ ಸೀರೆ ಧರಿಸಿದ್ದಕ್ಕೆ ಸುಹಾನಾ ಖಾನ್‌ ವಿರುದ್ಧ ನೆಟ್ಟಿಗರು ಗರಂ

ಆಸ್ಕರ್​ ವಿಜೇತ ನಟಿ ಮಿಶಾಲ್​ ಯೋ, ಟೆನ್ನಿಸ್​ ಆಟಗಾರ್ತಿ ಸೆರೆನಾ ವಿಲಿಯಮ್ಸ್​, ಮೆಟಾ ಸಿಇಓ ಮಾರ್ಕ್​ ಝಕರ್​ಬರ್ಗ್, ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ ಮತ್ತು ಟ್ವಿಟರ್ ಸಿಇಒ ಎಲೋನ್ ಮಸ್ಕ್ ಸೇರಿದಂತೆ​ ಮುಂತಾದವರನ್ನು ಶಾರುಖ್​ ಖಾನ್​ ಹಿಂದಿಕ್ಕಿದ್ದಾರೆ. ಫುಟ್ಬಾಲ್​ ಆಟಗಾರ ಲಿಯೋನೆಲ್​ ಮೆಸ್ಸಿ ಅವರು 5ನೇ ಸ್ಥಾನದಲ್ಲಿದ್ದಾರೆ. ಶಾರುಖ್​ ಖಾನ್​ ಅವರು ಅಗ್ರ ಸ್ಥಾನ ಪಡೆದಿರುವುದಕ್ಕೆ ಅಬಿಮಾನಿಗಳು, ಗಣ್ಯರು ಸೇರಿದಂತೆ ಅನೇಕರು ಅವರಿಗೆ ಅಭಿನಂದನೆ ತಿಳಿಸುತ್ತಿದ್ದಾರೆ. 

ಮತ್ತೆ ಒಂದಾದ 'ಪಠಾಣ್' ಜೋಡಿ; ಶಾರುಖ್ 'ಜವಾನ್'ಗೆ ದೀಪಿಕಾ ಪಡುಕೋಣೆ ಎಂಟ್ರಿ

ಶಾರುಖ್​ ಖಾನ್​ ಸದ್ಯ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪಠಾಣ್ ಸಕ್ಸಸ್ ಬಳಿಕ ಶಾರುಖ್ ಸಿನಿಮಾಗಳ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಸದ್ಯ ತಮಿಳು ನಿರ್ದೇಶಕ ಅಟ್ಲಿ ಕುಮಾರ್​ ಜೊತೆ ‘ಜವಾನ್​’ ಸಿನಿಮಾ ಮಾಡುತ್ತಿದ್ದಾರೆ. ರಾಜ್​ಕುಮಾರ್​ ಹಿರಾನಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಡಂಕಿ’ ಚಿತ್ರದಲ್ಲೂ ಶಾರುಖ್​ ನಟಿಸುತ್ತಿದ್ದಾರೆ. ಈ ಎರಡು ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.  


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?