ಇದು ನಿಮ್ಮ ಗೆಲುವು ಅಮ್ಮ; ಪದ್ಮಶ್ರೀ ಸ್ವೀಕರಿಸಿದ KGF-2 ನಟಿ ರವೀನಾ ಟಂಡನ್‌ಗೆ ಪುತ್ರಿಯ ಹೃದಯಸ್ಪರ್ಶಿ ಪತ್ರ

Published : Apr 07, 2023, 06:28 PM IST
ಇದು ನಿಮ್ಮ ಗೆಲುವು ಅಮ್ಮ; ಪದ್ಮಶ್ರೀ ಸ್ವೀಕರಿಸಿದ KGF-2 ನಟಿ ರವೀನಾ ಟಂಡನ್‌ಗೆ ಪುತ್ರಿಯ ಹೃದಯಸ್ಪರ್ಶಿ ಪತ್ರ

ಸಾರಾಂಶ

ಪದ್ಮಶ್ರೀ ಸ್ವೀಕರಿಸಿದ KGF-2 ನಟಿ ರವೀನಾ ಟಂಡನ್‌ಗೆ ಪುತ್ರಿ ಹೃದಯಸ್ಪರ್ಶಿ ಪತ್ರ ಬರೆದಿದ್ದಾರೆ. 

ಬಾಲಿವುಡ್ ಖ್ಯಾತ ನಟಿ ರವೀನಾ ಟಂಡನ್ ಭಾರತದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾಗಿರುವ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ್ದಾರೆ. ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಏಪ್ರಿಲ್ 5ರಂದು ರವೀನಾ ಟಂಡನ್ ಪ್ರಶಸ್ತಿ ಸ್ವೀಕರಿಸಿದರು. ರವೀನಾ ಪ್ರಶಸ್ತಿ ಸ್ವೀಕರಿಸುವ ಸಮಯದಲ್ಲಿ ಪತಿ ಅನಿಲ್ ಥಡಾನಿ ಮತ್ತು ಮಕ್ಕಳು ಜೊತೆಯಲಿದ್ದರು. ಪ್ರಶಸ್ತಿ ಬಂದ ಖುಷಿಯನ್ನು ನಟಿ ರವೀನಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 

ನಟಿ ರವೀನಾ ಸಂತಸ ವ್ಯಕ್ತಪಡಿಸಿದ ಬೆನ್ನಲ್ಲೇ ಮಗಳು ರಾಶಾ ಅಮ್ಮನಿಗೆ ಹೃದಯಸ್ಪರ್ಶಿ ಸಾಲು ಹಂಚಿಕೊಂಡಿದ್ದಾರೆ. ಪದ್ಮಶ್ರೀ ಪ್ರಶಸ್ತಿ, 'ಭಾರತದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾಗಿದೆ. ಇದು ನಿಮಗೆ ಎಂಥ ವರ್ಷವಾಗಿದೆ. ನೀವು ಯಾವಾಗಲೂ ಹೇಳುತ್ತಿದ್ದೀರಿ ಇದು ನಿಮ್ಮ ಸಾಧನೆಗೆ ನಿಮ್ಮ ತಂದೆಯೇ ಎಲ್ಲಾ ಅಂತ. ಜೊತೆಗೆ ನಿಮ್ಮ ಶ್ರಮ ಕೂಡ ಇದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ನೀವು ಸ್ವೀಕರಿಸುತ್ತಿರುವ ಎಲ್ಲಾ ಯಶಸ್ಸು, ಪ್ರೀತಿ ಮತ್ತು ಗೌರವಕ್ಕೆ ನೀವು ಅರ್ಹರು. ನಮ್ಮ ಅತ್ಯಂತ ಗೌರವಾನ್ವಿತ ಜನರ ಮುಂದೆ ನೀವು ಮತ್ತು ನಿಮ್ಮ ಕೆಲಸವನ್ನು ಗೌರವಿಸುವುದನ್ನು ನೋಡುತ್ತಿರುವ ನಾನು ಹೆಮ್ಮೆಯ ಮಗಳು. ಇದು ನಿಮ್ಮ ಗೆಲುವು ಅಮ್ಮ. ನಿಮ್ಮ ನಮ್ರತೆ, ಅನುಗ್ರಹ ಮತ್ತು ದಯೆ ರಣಬೀರ್ ಮತ್ತು ನಾನು ಕಷ್ಟಪಟ್ಟು ಕೆಲಸ ಮಾಡಲು ಮತ್ತು ನಮ್ಮ ಅತ್ಯುತ್ತಮ ವ್ಯಕ್ತಿಗಳಾಗಿರಲು ಪ್ರೇರೇಪಿಸುತ್ತದೆ. ನೀವು ಮುಂದೆ ಏನು ಮಾಡುತ್ತೀರಿ ಎಂದು ನೋಡಲು ಕಾಯಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ. 

Raveena Tandon: ನನ್ನ ತೊಡೆಗಳ ಮೇಲೆ ಆ ಸ್ತ್ರೀವಾದಿಗಳ ಕಣ್ಣಿತ್ತು: ಭಯಾನಕ ರಹಸ್ಯ ಬಿಚ್ಚಿಟ್ಟ ನಟಿ

ರವೀನಾ ಟಂಡನ್ ಭಾವುಕ 

ಹೃದಯಸ್ಪರ್ಶಿ ಸಾಲುಗಳ ಜೊತೆಗೆ ಪದ್ಮಶ್ರೀ ಕೈಯಲ್ಲಿ ಹಿಡಿದು ನಿಂತಿರುವ ಅಮ್ಮನ ಜೊತೆ ಕ್ಲಿಕ್ಕಿಸಿಕೊಂಡ ಸುಂದರ ಫೋಟೋಗಳನ್ನು ರಾಶಾ ಶೇರ್ ಮಾಡಿದ್ದಾರೆ. ಇನ್ನೂ ಈ ಬಗ್ಗೆ ಆಂಗ್ಲ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ನಟಿ ರವೀನಾ ಟಂಡನ್, ಇದು ನಿಜಕ್ಕೂ ಭಾವನಾತ್ಮಕ ಕ್ಷಣವಾಗಿದೆ. ಇದು ನನ್ನ ತಂದೆಯ ಕನಸಾಗಿತ್ತು. ಇದು ನನ್ನ ತಂದೆಯ ಹೆಮ್ಮೆಯ ಕ್ಷಣವಾಗಿದೆ' ಎಂದು ಹೇಳಿದ್ದರು.

ನನ್ನ ತಲೆಯಲ್ಲಿ ಇನ್ನೂ ಉಳಿದಿದೆ; ಅಕ್ಷಯ್ ಕುಮಾರ್ ಜೊತೆಗಿನ ನಿಶ್ಚಿತಾರ್ಥ ಮುರಿದ ಬಗ್ಗೆ ಮೌನ ಮುರಿದ ರವೀನಾ ಟಂಡನ್

'ನನಗೆ ಈ ಗೌರವ ಸಿಕ್ಕಾಗ ದುರದೃಷ್ಟವಶಾತ್, ಅದನ್ನು ನೋಡಲು ಅವರು ಇಲ್ಲಿಲ್ಲ. ಹಾಗಾಗಿ, ಇದು ನನಗೆ ಮಿಶ್ರ ಭಾವನೆಯಾಗಿದೆ. ಇದು ಸ್ವಲ್ಪ ಸಂತೋಷ ಮತ್ತು ಹೆಚ್ಚು ಸಂತೋಷದಿಂದ ಕೂಡಿತ್ತು. ನಾನು ಅವರ ಬಗ್ಗೆ ಯೋಚಿಸುತ್ತಿದ್ದಾಗ ತುಂಬಾ ಸಂತೋಷವಾಗುತ್ತದೆ ಕೊನೆಗೂ ನಾನು ನನ್ನ ತಂದೆಯ ಕನಸನ್ನು ಈಡೇರಿಸಿದ್ದೇನೆ' ಎಂದು ಹೇಳಿದರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?