ಕುಡಿದು ಫೋಟೋ ಶೇರ್ ಮಾಡಿದ್ರಾ? ಅರ್ಜುನ್ ಕಪೂರ್ ಅರೆಬೆತ್ತಲೆ ಫೋಟೋ ಹಂಚಿಕೊಂಡ ಮಲೈಕಾಗೆ ನೆಟ್ಟಿಗರ ತರಾಟೆ

Published : May 29, 2023, 05:22 PM ISTUpdated : May 29, 2023, 05:23 PM IST
ಕುಡಿದು ಫೋಟೋ ಶೇರ್ ಮಾಡಿದ್ರಾ? ಅರ್ಜುನ್ ಕಪೂರ್ ಅರೆಬೆತ್ತಲೆ ಫೋಟೋ ಹಂಚಿಕೊಂಡ ಮಲೈಕಾಗೆ ನೆಟ್ಟಿಗರ ತರಾಟೆ

ಸಾರಾಂಶ

ನನ್ನ ಸೋಮಾರಿ ಹುಡುಗ ಎಂದು ಮಲೈಕಾ ಅರೋರಾ ಬಾಯ್‌ಫ್ರೆಂಡ್ ಅರ್ಜುನ್ ಕಪೂರ್ ಅರೆಬೆತ್ತಲೆ ಫೋಟೋ ಶೇರ್ ಮಾಡಿದ್ದಾರೆ. ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದಾರೆ.  

ಬಾಲಿವುಡ್‌ನ ನಟಿ ಹಾಗೂ ಡಾನ್ಸರ್ ಮಲೈಕಾ ಅರೋರಾ ಮತ್ತು ಅರ್ಜುನ್ ಕುಪೂರ್ ಪ್ರೀತಿ- ಪ್ರೇಮದ ವಿಚಾರ ಗುಟ್ಟಾಗಿ ಉಳಿದಿಲ್ಲ. ಸದಾ ಜೊತೆಯಲ್ಲೇ ಕಾಣಿಸಿಕೊಳ್ಳುವ ಈ ಜೋಡಿ ಸದಾ ಪ್ರವಾಸ ಅಂತ ಸುತ್ತಾಡುತ್ತಾ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಸದ್ಯ ಮಲೈಕಾ ಶೇರ್ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿಸಂಚಲನ ಮೂಡಿಸಿದೆ. ಭಾನುವಾರ ಮಲೈಕಾ ತನ್ನ ಬಾಯ್‌ಫ್ರೆಂಡ್ ಅರ್ಜುನ್ ಕಪೂರ್ ಫೋಟೋವನ್ನು ಶೇರ್ ಮಾಡಿದರು. ಅದು ಅರ್ಜುನ್ ಕಪೂರ್ ಅವರ ಅರೆಬೆತ್ತಲೆ ಫೋಟೋ.  

ಅರ್ಜುನ್ ಕಪೂರ್ ತನ್ನ ಖಾಸಗಿ ಭಾಗಕ್ಕೆ ದಿಂಬನ್ನು ಅಡ್ಡವಾಗಿ ಇಟ್ಟುಕೊಂಡು ಮಂಚದ ಮೇಲೆ ವಿಶ್ರಾಂತಿ ಪಡೆಯುತ್ತಿರುವ ಫೋಟೋವನ್ನು ಮಲೈಕಾ ಶೇರ್ ಮಾಡಿದ್ದಾರೆ. ಈ ಫೋಟೋ ನೋಡಿ ಅಭಿಮಾನಿಗಳು ಒಮ್ಮೆ ದಂಗಾಗಿದ್ದಾರೆ. ಈ ಫೋಟೋಗೆ 'ನನ್ನ ಸೋಮಾರಿ ಹುಡುಗ' ಎಂದು ಟ್ಯಾಗ್ ಲೈನ್ ಬೇರೆ ಕೊಟ್ಟಿದ್ದಾರೆ. ಈ ಫೋಟೋ ಶೇರ್ ಮಾಡಿ ಕಲವೇ ಕ್ಷಣಕ್ಕೆ ಸಿಕ್ಕಾಪಟ್ಟೆ ಟ್ರೋಲ್ ಆಗಿದೆ. ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. 

ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿ, 'ಇದನ್ನು ನಮಗ್ಯಾಕೆ ತೋರಿಸುತ್ತಿದ್ದಾರೆ' ಎಂದು ಕೇಳಿದ್ದಾರೆ. ಮತ್ತೋರ್ವರು ಕಾಮೆಂಟ್ ಮಾಡಿ, 'ಇದನ್ನು ಪೋಸ್ಟ್ ಮಾಡುವಾಗ ಮಲೈಕಾ ಕುಡಿದಿದ್ದರು' ಎಂದು ಹೇಳಿದ್ದಾರೆ. ಮತ್ತೋರ್ವರು ನಾಚಿಕೆ ಆಗ್ಬೇಕು ಎಂದು ಹೇಳಿದ್ದಾರೆ. 

ರೆಡ್ ಗೌನ್‌ನಲ್ಲಿ ಮಿಂಚಿದ ಮಲೈಕಾ ಅರೋರಾ: ಅರ್ಜುನ್ ಭಾಯ್ ಎಷ್ಟು ಲಕ್ಕಿ ಎಂದ ಫ್ಯಾನ್ಸ್

ಮಲೈಕಾ ಮತ್ತು ಅರ್ಜುನ್ ಕೆಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಅರ್ಬಾಜ್ ಖಾನ್ ಅವರಿಂದ ದೂರಾದ ಬಳಿಕ ಮಲೈಕಾ ಅರ್ಜುನ್ ಕಪೂರ್ ಜೊತೆ ಕ್ಲೋಸ್ ಆಗಿದ್ದರು. ಇಬ್ಬರೂ ಪ್ರೀತಿಸುತ್ತಿದ್ದು ಸದ್ಯದಲ್ಲೇ ಮದುವೆ ಕೂಡ ಆಗುತ್ತಾರೆ ಎನ್ನುವ ಸುದ್ದಿ ಅನೇಕ ಸಮಯದಿಂದ ಕೇಳಿಬರುತ್ತಲೇ ಇದೆ.  ಇಬ್ಬರ ನಡುವೆ 12 ವರ್ಷಗಳ ವಯಸ್ಸಿನ ಅಂತರವಿದೆ. ವಯಸ್ಸಿನ ಕಾರಣಕ್ಕಾಗಿಯೇ ಇಬ್ಬರೂ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದರು. ಆದರೂ ಯಾವುದಕ್ಕೂ ಹೆಚ್ಚು ತಲೆಕೆಡಿಸಿಕೊಳ್ಳದ ಮಲೈಕೈ-ಅರ್ಜುನ್ ಜೋಡಿ ಇದೀಗ ಅರೆ ಬೆತ್ತಲೆ ಫೋಟೋ ಹಂಚಿಕೊಂಡು ಟ್ರೋಲಿಗರ ಬಾಯಿಗೆ ಆಹಾರವಾಗಿದ್ದಾರೆ.

 ಪ್ರೀ ಹನಿಮೂನ್​ ಬಳಿಕ ಮದುಮಗಳಾಗಲು ರೆಡಿಯಾದ ನಟಿ ಮಲೈಕಾ!

ಇಬ್ಬರೂ ಸದಾ ಪ್ರವಾಸ ಅಂತ ಸುತ್ತಾಡುತ್ತಿರುತ್ತಾರೆ. ಆಗಾಗ ವಿದೇಶಕ್ಕೆ ಹಾರುತ್ತಿರುತ್ತಾರೆ. ಇತ್ತೀಚೆಗಷ್ಟೆ ಈ ಜೋಡಿ ಜರ್ಮನಿಯ ಬರ್ಲಿನ್‌ಗೆ ಹಾರಿದ್ದರು. ಅಲ್ಲಿಂದ ಒಂದಿಷ್ಟು ಫೋಟೋಗಳನ್ನು ಶೇರ್ ಮಾಡಿದ್ದರು. ಇಬ್ಬರ ರೊಮ್ಯಾಂಟಿಕ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಫೋಟೋಗಳನ್ನು ಶೇರ್ ಮಾಡಿ ಅರ್ಜುನ್ ಪ್ರೀತಿಯ ಸಾಲುಗಳನ್ನು ಬರೆದಿದ್ದರು. ಸಾಮಾಜಿಕ ಜಾಲತಾಣದಲ್ಲೂ ಆಗಾಗ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಬಾಯ್‌ಫ್ರೆಂಡ್ನ ಹಾಟ್ ಫೋಟೋ ಶೇರ್ ಮಾಡಿ ಹಿಗ್ಗಾಮುಗ್ಗಾ ಟ್ರೋಲ್ ಆಗಿದ್ದಾರೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?