ರಾಜಸ್ಥಾನಕ್ಕೆ ಹಾರಿದ ಪರಿಣಿತಿ ಚೋಪ್ರಾ- ಮದುವೆ ಕುರಿತು ಬಿಗ್​ ಅಪ್​ಡೇಟ್​ ಇಲ್ಲಿದೆ

Published : May 29, 2023, 04:47 PM ISTUpdated : May 29, 2023, 04:48 PM IST
ರಾಜಸ್ಥಾನಕ್ಕೆ ಹಾರಿದ ಪರಿಣಿತಿ ಚೋಪ್ರಾ- ಮದುವೆ ಕುರಿತು ಬಿಗ್​ ಅಪ್​ಡೇಟ್​ ಇಲ್ಲಿದೆ

ಸಾರಾಂಶ

ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಅವರ ಡೇಟಿಂಗ್​ ಸುದ್ದಿಗೆ ಕೊನೆಗೂ ತೆರೆ ಬಿದ್ದಿದ್ದು, ಈ ಜೋಡಿ ಈಗ ನಿಶ್ಚಿತಾರ್ಥ ಮಾಡಿಕೊಂಡಿದೆ. ಈಗ ಮದುವೆಯ ಬಗ್ಗೆ ಸುದ್ದಿ ಹೊರಬಂದಿದೆ.  

ಪ್ರಿಯಾಂಕಾ ಚೋಪ್ರಾ-ನಿಕ್ ಜೋನಾಸ್, ಕತ್ರಿನಾ ಕೈಫ್-ವಿಕ್ಕಿ ಕೌಶಲ್, ಕಿಯಾರಾ ಅಡ್ವಾಣಿ-ಸಿದ್ಧಾರ್ಥ್ ಮಲ್ಹೋತ್ರಾ ನಂತರ ಇದೀಗ ಮತ್ತೊಂದು ಸೆಲೆಬ್ರಿಟಿ ಜೋಡಿ ರಾಜಸ್ಥಾನದಲ್ಲಿ ರಾಯಲ್ ವೆಡ್ಡಿಂಗ್ ಸಮಾರಂಭದಲ್ಲಿ ಮದುವೆಯಾಗಲು ಯೋಜನೆ ರೂಪಿಸುತ್ತಿದೆ. ಹೌದು. ಅವರೇ  ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ. ಅಂದಹಾಗೆ ಎಲ್ಲರಿಗೂ ತಿಳಿದಿರುವಂತೆ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಅವರು ಆಮ್ ಆದ್ಮಿ ಪಕ್ಷದ ನಾಯಕ ಮತ್ತು ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರೊಂದಿಗೆ ಮೇ 13 ರಂದು ದೆಹಲಿಯಲ್ಲಿ ನಿಶ್ಚಿತಾರ್ಥ (Engagement) ಮಾಡಿಕೊಂಡರು. ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಅವರ ನಿಶ್ಚಿತಾರ್ಥದ ನಂತರ, ಅವರ ಅಭಿಮಾನಿಗಳು ಅವರ ಮದುವೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಏತನ್ಮಧ್ಯೆ, ಜೋಡಿಯ ಮದುವೆಯ ಬಗ್ಗೆ ದೊಡ್ಡ ಅಪ್ಡೇಟ್ ಹೊರಬಿದ್ದಿದೆ. ಪರಿಣಿತಿ ಚೋಪ್ರಾ (Parineeti Chopra ) ಮತ್ತು ರಾಘವ್ ಚಡ್ಡಾ ರಾಜಸ್ಥಾನದಲ್ಲಿ ಮದುವೆಯಾಗಲಿದ್ದಾರೆ ಎಂದು ಮಾಧ್ಯಮ ವರದಿಗಳಲ್ಲಿ ಹೇಳಲಾಗುತ್ತಿದೆ. 

ಪರಿಣಿತಿ ಮನೆಯವರು ಇತ್ತೀಚೆಗೆ ಉದಯಪುರದಲ್ಲಿ ಸ್ಥಳ ನೋಡಿರಲು ಹೋಗಿರುವುದಾಗಿ ಸುದ್ದಿಯಾಗಿದೆ.  ಕಿಶನ್‌ಗಡ್​ನಲ್ಲಿಯೂ ಜಾಗ ನೋಡಿದ್ದಾರೆ.  ಉದಯಪುರದ ಉದಯವಿಲಾಸ್‌ಗೆ ಲೀಲಾ ಪ್ಯಾಲೇಸ್​ಗೆ ಭೇಟಿ ನೀಡಿರೋ ಕುಟುಂಬಸ್ಥರು,  ಪಿಚೋಲಾ ಸರೋವರದಲ್ಲಿ ದೋಣಿ ವಿಹಾರ ಮಾಡಿದ್ದಾರೆ.  ಈ ವೇಳೆ ಉದಯಪುರದ ಹವಾಮಾನದ ಬಗ್ಗೆ ಪರಿಣಿತಿ ವಿಚಾರಿಸಿದ್ದನ್ನು ಎನ್ನಲಾಗಿದೆ. ಆದ್ದರಿಂದ ಮದುವೆ ಇದೇ ವರ್ಷ ನಡೆಯುವ ಎಲ್ಲಾ ಮುನ್ಸೂಚನೆಗಳೂ ಸಿಗುತ್ತಿವೆ. ಕೊನೆಗೂ ಮದುವೆಯ ಸ್ಥಳವನ್ನು ಅಂತಿಮಗೊಳಿಸಲು ಅವರು ತಲುಪಿದ್ದಾರೆ ಎಂದು ಹೇಳಲಾಗುತ್ತಿದೆ. ಅದೇ ಸಮಯದಲ್ಲಿ, ರಾಘವ್ ಚಡ್ಡಾ (Raghav Chadda) ಅವರ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿವೆ, ಅದರಲ್ಲಿ ಅವರು ಪರಿಣಿತಿ ಚೋಪ್ರಾ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಇಬ್ಬರೂ ಸೇರಿ ರಾಜಸ್ಥಾನದಲ್ಲಿ ತಮ್ಮ ಮದುವೆಯ ಸ್ಥಳವನ್ನು ಅಂತಿಮಗೊಳಿಸಲಿದ್ದಾರೆ ಎನ್ನಲಾಗುತ್ತಿದೆ.

Parineeti Chopra Engaged: ಗುಸುಗುಸುಗೆ ಕೊನೆಗೂ ತೆರೆ- ಪ್ರೇಮಪಕ್ಷಿಗಳ ಎಂಗೇಜ್​ಮೆಂಟ್

ಪರಿಣಿತಿ ಚೋಪ್ರಾ ಅವರು ಪ್ರವಾಸೋದ್ಯಮ ಇಲಾಖೆಯ (Tourism Department) ಉಪ ನಿರ್ದೇಶಕಿ ಶಿಖಾ ಸಕ್ಸೇನಾ ಅವರನ್ನು ಭೇಟಿಯಾಗಿ ಸಮೀಪದ ವಿಶೇಷ ಹೋಟೆಲ್‌ಗಳು (Hotels) ಮತ್ತು ಪ್ರವಾಸಿ ಸ್ಥಳಗಳ ಬಗ್ಗೆ ವಿಚಾರಿಸಿದ್ದಾರೆ. ಈ ಜೋಡಿ ತಮ್ಮ ಮದುವೆಯ ಸ್ಥಳವನ್ನು ಉದಯಪುರ ಅಥವಾ ಜೈಪುರದಲ್ಲಿ ಅಂತಿಮಗೊಳಿಸಬಹುದು ಎಂದು ಹೇಳಲಾಗುತ್ತಿದೆ. ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಅವರ ವಿವಾಹದ ಬಗ್ಗೆ ಊಹಾಪೋಹಗಳಿವೆ, ಇಬ್ಬರೂ ಅಕ್ಟೋಬರ್‌ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಬಹುದು ಎನ್ನಲಾಗುತ್ತಿದೆ.  ಸೆಪ್ಟೆಂಬರ್​ನಲ್ಲಿಯೇ  ಮದುವೆಯಾಗುವ ಬಗ್ಗೆ ನಟಿ ಯೋಚಿಸಿದ್ದಾರೆ ಎನ್ನಲಾಗಿದೆ. ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಅವರ ನಿಶ್ಚಿತಾರ್ಥದಲ್ಲಿ, ಇಬ್ಬರ ಕುಟುಂಬದ ಸದಸ್ಯರನ್ನು ಹೊರತುಪಡಿಸಿ, ಆಪ್ತರು ಭಾಗಿಯಾಗಿದ್ದರು. ಇನ್ನು ಇಬ್ಬರ ಮದುವೆಗೆ ಯಾರು ಬರುತ್ತಾರೆ ಎಂಬುದು ಕಾದು ನೋಡಬೇಕಿದೆ.

ಇನ್ನು ಈ ಜೋಡಿಯ ಎಂಗೇಜ್​ಮೆಂಟ್ ಕುರಿತು ಹೇಳುವುದಾದರೆ, ಪಂಜಾಬಿ ಶೈಲಿಯಲ್ಲಿ ಈ ಜೋಡಿಯ ಎಂಗೇಜ್‌ಮೆಂಟ್‌ (Engagement) ನಡೆದಿದೆ.  ಪ್ರಿಯಾಂಕಾ ಚೋಪ್ರಾ ಕೂಡ  ಸೇರಿ ಎರಡೂ ಕುಟುಂಬದ ಹಲವರು ಈ ಖುಷಿಯ ಕ್ಷಣದ ಭಾಗವಾಗಿದ್ದರು. ಆಯ್ದ ಸ್ನೇಹಿತರ ಸಮ್ಮುಖದಲ್ಲಿ ಈ ಜೋಡಿಯ ನಿಶ್ಚಿತಾರ್ಥ ನೆರವೇರಿತ್ತು. ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ ಸೇರಿ ರಾಜಕೀಯ ಗಣ್ಯರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 150ಕ್ಕೂ ಅಧಿಕ ಅತಿಥಿಗಳ ಸಮ್ಮುಖದಲ್ಲಿ ಉಂಗುರ ಬದಲಿಸಿಕೊಳ್ಳುವ ಮೂಲಕ ಪ್ರೀತಿಯಲ್ಲಿದ್ದ ಈ ಜೋಡಿ ದಾಂಪತ್ಯಕ್ಕೆ ಕಾಲಿಡಲು ಅಧಿಕೃತ ಮುದ್ರೆಯೊತ್ತಿದ್ದು, ಇದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ. ನಿಶ್ಚಿತಾರ್ಥ ಸಮಾರಂಭದಲ್ಲಿ ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ತುಂಬಾ ರೊಮ್ಯಾಂಟಿಕ್ ಆಗಿ ಕಾಣುತ್ತಿದ್ದರು. ಅಲ್ಲಿ ಪರಿಣಿತಿ ಹಾಡುತ್ತಿದ್ದಾಗ, ರಾಘವ್ ಆಕೆಯನ್ನು ಕಿಸ್​ (Kiss) ಮಾಡಿದ್ದರು. ಈಗ  ಜೋಡಿಯಮದುವೆಯ ಬಗ್ಗೆ ಫ್ಯಾನ್ಸ್​ ಕಾತರರಾಗಿದ್ದಾರೆ.

ಉತ್ತಮ ಆಯ್ಕೆಯಿರುವಾಗ ರಾಜಕಾರಣಿಯನ್ಯಾಕೆ ಮದ್ವೆಯಾಗ್ಲಿ ಎಂದಿದ್ರು ಪರಿಣಿತಿ!
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?