21 ವರ್ಷದ ಪುತ್ರಂಗೆ ಓಪನ್ನಾಗಿ ಸೆಕ್ಸ್‌ ಬಗ್ಗೆ ಕೇಳೋದಾ ಮಲೈಕಾ? ಅರ್ಹಾನ್‌ ತಿರುಗಿ ಹೇಳಿದ್ದೇನು?

Published : Apr 17, 2024, 01:31 PM IST
21 ವರ್ಷದ ಪುತ್ರಂಗೆ ಓಪನ್ನಾಗಿ ಸೆಕ್ಸ್‌ ಬಗ್ಗೆ ಕೇಳೋದಾ ಮಲೈಕಾ? ಅರ್ಹಾನ್‌ ತಿರುಗಿ ಹೇಳಿದ್ದೇನು?

ಸಾರಾಂಶ

ಮಗ ಅರ್ಹಾನ್‌ ಖಾನ್‌ಗೆ ಓಪನ್ನಾಗಿ ಸೆಕ್ಸ್‌ ಬಗ್ಗೆ ಪ್ರಶ್ನೆ ಕೇಳಿದ್ದಾರೆ ನಟಿ ಮಲೈಕಾ ಅರೋರಾ. ಇದಕ್ಕೆ ಮೌನವಾಗಿದ್ದ ಪುತ್ರ ಅರ್ಹಾನ್‌ ತಿರುಗಿ ಕೇಳಿದ್ದೇನು?   

ಬಾಲಿವುಡ್​ ಹಸಿಬಿಸಿ ಲೇಡಿ ಮಲೈಕಾ ಅರೋರಾ (Malaika Arora) ಮತ್ತು ಅರ್ಬಾಜ್ ಖಾನ್ ಅವರನ್ನು ಹಿಂದಿನ ದಿನದ ಹಾಟೆಸ್ಟ್ ಜೋಡಿಗಳಲ್ಲಿ ಒಂದು ಎಂದೇ ಕರೆಯಲಾಗುತ್ತಿತ್ತು. ಆದರೆ ಅವರು ಬೇರ್ಪಟ್ಟು ಹಲವು ವರ್ಷಗಳೇ ಕಳೆದಿವೆ. 2017ರಲ್ಲಿ ಈ ಜೋಡಿ ಬೇರ್ಪಟ್ಟಿದೆ. ಮಲೈಕಾ ಅರೋರಾಗೆ ಈಗ 49 ವರ್ಷ ವಯಸ್ಸು. ಅರ್ಬಾಜ್​ ಖಾನ್​ ಜೊತೆ ಬೇರ್ಪಟ್ಟ ಬಳಿಕ 12 ವರ್ಷ ಚಿಕ್ಕವಾಗಿರುವ ನಟ ಅರ್ಜುನ್ ಕಪೂರ್ (Arjun Kapoor) ಜೊತೆ ಕೆಲ ವರ್ಷಗಳಿಂದ ಡೇಟಿಂಗ್​ ಮಾಡುತ್ತಿದ್ದಾರೆ ಮಲೈಕಾ.  ಮಲೈಕಾ ಅರ್ಜುನ್​ ಕಪೂರ್​ ಜೊತೆ ಡೇಟಿಂಗ್​ನಲ್ಲಿದ್ದರೂ ಮಗನಿಗಾಗಿ ಆಗಾಗ್ಗೆ ಅರ್ಬಾಜ್​ ಖಾನ್​ರನ್ನು ಭೇಟಿಯಾಗುವುದು, ತಬ್ಬಿಕೊಳ್ಳುವುದು ನಡೆದಿದ್ದು, ಇವುಗಳ ವಿಡಿಯೋಗಳೂ ವೈರಲ್​ ಆಗುತ್ತಲೇ ಇರುತ್ತವೆ. ಮಲೈಕಾ ಏನೋ ಅರ್ಜುನ್​ ಕಪೂರ್​ ಜೊತೆ ಹಲವು ವರ್ಷಗಳಿಂದ ಸಂಬಂಧದಲ್ಲಿದ್ದಾರೆ. ಆದರೆ ಅದೇ ಇನ್ನೊಂದೆಡೆ ಅರ್ಬಾಜ್​ ಖಾನ್ ಕೆಲ ತಿಂಗಳ ಹಿಂದೆ ತಮ್ಮ ಅರ್ಧ ವಯಸ್ಸಿನ ಯುವತಿ ಶುರಾ ಜೊತೆ ಮದುವೆಯಾಗಿ ಸಮಸಾರ ಜೀವನ ನಡೆಸುತ್ತಿದ್ದಾರೆ.

ಇದೀಗ, ಮಲೈಕಾ ಅರೋರಾ ಮತ್ತು ಅಬಾಜ್‌ ಖಾನ್‌ ಜೊತೆ ಇವರಿಗೆ ಹುಟ್ಟಿದ ಮಗ ಅರ್ಹಾನ್‌ ಖಾನ್‌ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಕತ್‌ ಸೌಂಡ್‌ ಮಾಡುತ್ತಿದೆ. ಅದೇನೆಂದರೆ,  ಅರ್ಹಾನ್ ಖಾನ್  ಪಾಡ್​​ಕಾಸ್ಟ್​ ಆರಂಭಿಸಿದ್ದು, ಅದಕ್ಕೆ ಅಮ್ಮ ಮಲೈಕಾರನ್ನು ಗೆಸ್ಟ್‌ ಆಗಿ ಕರೆಸಿದ್ದರು. ಈ ಪಾಡ್‌ಕಾಸ್ಟ್‌ನಲ್ಲಿ ಅಮ್ಮ-ಮಗನ ನಡುವೆ ವರ್ಜಿನಿಟಿ, ಲೈಂಗಿಕತೆ ಕುರಿತು ಓಪನ್‌ ಮಾತುಕತೆ ನಡೆದಿದೆ. ಅಷ್ಟಕ್ಕೂ ಮಲೈಕಾ ಮಗನಿಗೆ ಕೆಲವೊಂದು ಬೋಲ್ಡ್‌ ಪ್ರಶ್ನೆಗಳನ್ನು ಕೇಳಿದ್ದು, ಮಗ ಅರ್ಹಾನ್‌ ಕೂಡ ಅಷ್ಟೇ ಬೋಲ್ಡ್‌ ಆಗಿ ಉತ್ತರಿಸಿದ್ದಾರೆ.

ಮಲೈಕಾ ಅರೋರಾ ಹೊಟೆಲ್‌ನಲ್ಲಿ ಡ್ರೆಸ್‌ ಸರಿಪಡಿಸಿಕೊಳ್ತಿರೋ ಖಾಸಗಿ ವಿಡಿಯೋ ಲೀಕ್‌: ಫ್ಯಾನ್ಸ್‌ ಗರಂ 

ಅಂದಹಾಗೆ ಮಲೈಕಾ ಅರೋರಾ ಅವರು,  ಮಗ ಅರ್ಹಾನ್​ ಗೆ ಮೊದಲ ಬಾರಿಗೆ ನೀನು ಯಾವಾಗ ಸೆಕ್ಸ್‌ನಲ್ಲಿ ತೊಡಗಿಕೊಂಡೆ  ಎಂದು ಪ್ರಶ್ನೆ ಮಾಡಿದ್ದಾರೆ. ಅಷ್ಟಕ್ಕೂ 21 ಮಗನಿಗೆ ಈ ಪ್ರಶ್ನೆಯನ್ನು ಮಲೈಕಾ ಕೇಳಿದ್ದಾರೆ. ಈ ಮೂಲಕ  ನೀನು ಯಾವಾಗ ವರ್ಜಿನಿಟಿ ಕಳೆದುಕೊಂಡೆ ಎಂದು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ಮೊದಲು ಅರ್ಹಾನ್ ಮೌನ ತಾಳಿದ್ದಾನೆ. ನಂತರ, ಇದರ ಬಗ್ಗೆ ಉತ್ತರಿಸಿದ ಅರ್ಹಾನ್‌, ತಾಯಿಗೇ ಉಲ್ಟಾ ಪ್ರಶ್ನಿಸಿ ನೀವು ಯಾವಾಗ ಮದುವೆ ಆಗ್ತೀರಾ ಎಂದಿದ್ದಾರೆ. ಇದರ ವಿಡಿಯೋ ಸಕತ್‌ ವೈರಲ್‌ ಆಗಿದ್ದು, ನೆಟ್ಟಿಗರು ಷೇಮ್‌ ಷೇಮ್‌ ಎನ್ನುತ್ತಿದ್ದಾರೆ. 21 ವರ್ಷದ ಮಗನಿಗೆ ತಾಯೊಯೊಬ್ಬಳು ಇಂಥ ಪ್ರಶ್ನೆ ಕೇಳೋದಾ ಎನ್ನುತ್ತಿದ್ದಾರೆ. ಈ ಚಿತ್ರತಾರೆಯರಿಗೆ ಸಂಬಂಧಕ್ಕಂತೂ ಬೆಲೆನೇ ಇಲ್ಲ. ದುಡ್ಡಿಗಾಗಿ ಯಾರ ಜೊತೆ ಏನು ಬೇಕಾದ್ರೂ ಮಾಡಲು ಸಿದ್ಧ. ಕೊನೆ ಪಕ್ಷ ತಾಯಿ-ಮಗನ ಪವಿತ್ರ ಸಂಬಂಧಕ್ಕಾದರೂ ಬೆಲೆ ಕೊಡಿ. ಹೀಗೆ ಪಬ್ಲಿಕ್‌ ಆಗಿ ಇಂಥ ಪ್ರಶ್ನೆ ಮಾಡುತ್ತಾ ಹೆಮ್ಮೆಯ ವಿಷಯ ಎಂಬಂತೆ ಬಿಂಬಿಸುವುದು ಎಷ್ಟು ಸರಿ ಎಂದು ಪ್ರಶ್ನಿಸುತ್ತಿದ್ದಾರೆ. 

ಇನ್ನು ಅರ್ಬಾಜ್‌ ಖಾನ್‌ ಹೊಸ ಪತ್ನಿ ಶುರಾ ಖಾನ್‌ ಕುರಿತು ಹೇಳುವುದಾದರೆ, ಇವರು ಮೇಕಪ್​  ಕಲಾವಿದೆ.  ಅರ್ಬಾಜ್​ ಖಾನ್​ ಅವರ  ಚಿತ್ರ  ಪಾಟ್ನಾ ಶುಕ್ಲಾ ಸೆಟ್‌ನಲ್ಲಿ ಇಬ್ಬರೂ ಭೇಟಿಯಾದರು. ಅಲ್ಲಿಂದ ಇವರ ನಡುವೆ ಪ್ರೀತಿ ಅರಳಿತ್ತು ಎನ್ನಲಾಗಿದೆ.   ಅರ್ಬಾಜ್​ ಖಾನ್​ ಮತ್ತು ಶುರಾ ಖಾನ್​ ಅವರು ಕೆಲ ಕಾಲ ಡೇಟಿಂಗ್​ನಲ್ಲಿ ಇದ್ದರು. ಕೊನೆಗೆ ಮದುವೆಯಾಗಿದ್ದಾರೆ. ಇವರ ವಯಸ್ಸಿನ ಅಂತರ ನೋಡಿ ಟ್ರೋಲ್ ಕೂಡ ಆಗುತ್ತಿದ್ದು, ದುಡ್ಡಿಗಾಗಿ ಏನು ಬೇಕಾದ್ರೂ ಆಗತ್ತೆ ಬಿಡಿ ಅನ್ನುತ್ತಿದ್ದಾರೆ. 

ಇನ್ನೂ ಮದ್ವೆನೇ ಆಗ್ಲಿಲ್ಲ ಕಣ್ರೋ... ಫಸ್ಟ್​ನೈಟ್​ ಶುರು ಮಾಡಿಕೊಂಡುಬಿಟ್ರಾ ಎನ್ನೋದಾ ಫ್ಯಾನ್ಸ್​!
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?
10 ಭಾಷೆಗಳಲ್ಲಿ 90 ಸಿನಿಮಾಗಳು, ಗಂಗೂಲಿ ಜೊತೆ ಅಫೇರ್ ವದಂತಿ.. 50 ವರ್ಷವಾದರೂ ಮದುವೆಯಾಗದ ನಟಿ ಯಾರು?