ಬಾಲಿವುಡ್ ಕೂಡ ಕುಟುಂಬ ರಾಜಕಾರಣದಂತೆ. ಅಲ್ಲಿ ಸಾಕಷ್ಟು ಕುಟುಂಬದ ಅಪ್ಪ, ಮಗ, ಮೊಮ್ಮಗನೇ ನಟನೆ ಮಾಡ್ತಿದ್ದಾರೆ. ನಟಿ ರೇಖಾಗೂ ಸಹೋದರಿಯನ್ನು ಈ ಕ್ಷೇತ್ರಕ್ಕೆ ತರುವ ಅವಕಾಶವಿತ್ತು. ಆದ್ರೆ ಅವರೇ ಸಹೋದರಿಗೆ ಲಕ್ಷ್ಮಣ ರೇಖೆ ಎಳೆದ್ರು.
ಬಾಲಿವುಡ್‌ನ ಎವರ್‌ಗ್ರೀನ್ ನಟಿ ರೇಖಾ. ಅವರ ನಟನೆ ಜೊತೆ ಅವರ ಲುಕ್‌ಗೆ ಅಭಿಮಾನಿಗಳು ಫಿದಾ ಆಗ್ತಾರೆ. ಬಾಲಿವುಡ್‌ನ ಪ್ರಸಿದ್ಧ ನಟಿಯರ ಪಟ್ಟಿಯಲ್ಲಿ ರೇಖಾ ಹೆಸರಿದೆ. ರೇಖಾ ಅನೇಕ ಪ್ರಸಿದ್ಧ ಕಲಾವಿದರ ಜೊತೆ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ. ಬಾಲಿವುಡ್ ಗೆ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಈಗ ಸಿನಿಮಾದಿಂದ ದೂರವಿದ್ರೂ ಆಗಾಗ ಸಿನಿಮಾ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವ ನಟಿ ರೇಖಾ, ಫ್ಯಾಷನ್ ವಿಷ್ಯದಲ್ಲಿ ಹಿಂದೆ ಬಿದ್ದಿಲ್ಲ. ತಮ್ಮ ಫ್ಯಾಷನ್, ಅಲಂಕಾರದ ಮೂಲಕವೆ ಅಭಿಮಾನಿಗಳನ್ನು ಸೆಳೆಯುತ್ತಾರೆ.
ದಿಗ್ಗಜ ಕಾಲವಿದರ ಜೊತೆ ನಟಿಸಿರುವ ರೇಖಾ (Rekha) ಗೆ ಆರಂಭದಲ್ಲಿ ಬಾಲಿವುಡ್ (Bollywood) ನಲ್ಲಿ ಉಳಿಯೋದು ಕಷ್ಟವಾಗಿತ್ತು. ನಟನೆಯಲ್ಲಿ ಸೈ ಎನ್ನಿಸಿಕೊಂಡು ಒಂದಾದ್ಮೇಲೆ ಒಂದು ಸಿನಿಮಾ ಗಿಟ್ಟಿಸಿಕೊಳ್ಳುವುದು ಸುಲಭವಾಗಿರಲಿಲ್ಲ. ಆರಂಭದಲ್ಲಿ ನಟಿ ರೇಖಾ ಸಾಕಷ್ಟು ಕಷ್ಟಪಟ್ಟಿದ್ದಾರೆ.
ಅಮೃತಧಾರೆ ನಟಿ ಸಾರಾ ಅಣ್ಣಯ್ಯ ಪ್ರಕಾರ ಭಾರತದ ಪ್ರಧಾನಿ ಪಪ್ಪಿ ಅಂತೆ; ಹಾಗಾದ್ರೆ ಯಾರೀ ಪಪ್ಪಿ?
ನಟಿ ರೇಖಾ ಹಾಗೂ ಬಿಗ್ ಬಿ ಅಮಿತಾಬ್ ಬಚ್ಚನ್ (Amitabh Bachchan) ಬಗ್ಗೆ ಸಾಕಷ್ಟು ಗಾಸಿಪ್ ಇದೆ. ಅದ್ರಲ್ಲಿ ಯಾವುದು ಸತ್ಯ, ಯಾವುದು ಸುಳ್ಳು ಎಂಬುದು ಸರಿಯಾಗಿ ಗೊತ್ತಿಲ್ಲ. ಇನ್ನು ರೇಖಾ ಮದುವೆ, ಪತಿ ಸಾವಿನಲ್ಲೂ ಅನೇಕ ರಹಸ್ಯ ಅಡಗಿದೆ. ಈ ಎಲ್ಲದರ ಮಧ್ಯೆ ಅನೇಕರಿಗೆ ರೇಖಾ ಕುಟುಂಬದ ಬಗ್ಗೆ ತಿಳಿದಿಲ್ಲ. ನಾವಿಂದು ನಟಿ ರೇಖಾ ಸಹೋದರಿ ಯಾಕೆ ಬಾಲಿವುಡ್ ಗೆ ಬಂದಿಲ್ಲ ಎಂಬುದರ ಮಾಹಿತಿ ನೀಡ್ತೇವೆ.
ಬಾಲಿವುಡ್ ನ ಅನೇಕ ಕಲಾವಿದರು ನಟನಾ ಶಿಕ್ಷಣವನ್ನು ತಮ್ಮ ಕುಟುಂಬದಿಂದ ಪಡೆದು ನಟರಾಗಿದ್ದಾರೆ. ಅದ್ರಲ್ಲಿ ನಟಿ ರೇಖಾ ಕೂಡ ಹೊರತಾಗಿಲ್ಲ. ನಟಿ ರೇಖಾ ತಂದೆ ಹಾಗೂ ತಾಯಿ ಇಬ್ಬರೂ ಕಲಾವಿದರು. ಹಾಗಾಗಿ ರಕ್ತದಲ್ಲಿಯೇ ನಟನೆ ಕಲೆ ಇತ್ತು. ರೇಖಾ ಮನೆಯಲ್ಲಿಯೇ ನಟನೆ ಕಲಿತು ಭೇಷ್ ಎನ್ನಿಸಿಕೊಂಡರು. ತೆಲುಗು ಚಲನಚಿತ್ರ ರಂಗುಲಾ ರತ್ನಂ ಮೂಲಕ ಬಾಲ ಕಲಾವಿದೆಯಾಗಿ ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಪ್ರಾರಂಭಿಸಿದರೂ, ಹಿಂದಿ ಚಿತ್ರರಂಗಕ್ಕೆ ಅವರ ಪ್ರವೇಶ 1970 ರಲ್ಲಾಗಿತ್ತು.
ನಟಿ ರೇಖಾ ಮಾತ್ರವಲ್ಲ ಅವರ ಸಹೋದರಿ ರಾಧಾ ಕೂಡ ನಟನೆಯಲ್ಲಿ ಮುಂದಿದ್ದರು. ಸೌಂದರ್ಯದಲ್ಲೂ ರೇಖಾಗಿಂತ ಒಂದು ಕೈ ಹೆಚ್ಚಿದ್ದ ಸಹೋದರಿ ಎಲ್ಲರನ್ನೂ ಆಕರ್ಷಿಸುತ್ತಿದ್ದರು. ಆದ್ರೆ ಸಹೋದರಿ ರಾಧ ನಟಿಸಲು ರೇಖಾ ಅನುಮತಿ ನೀಡಲಿಲ್ಲ. ಹಾಗಾಗಿಯೇ ಅವರು ಬಾಲಿವುಡ್ ನಿಂದ ಸಂಪೂರ್ಣ ದೂರ ಉಳಿದಿದ್ದಾರೆ.
ನಟಿ ರೇಖಾ ತಂದೆಗೆ ಮೂವರು ಪತ್ನಿಯರು. ಒಟ್ಟೂ ಆರು ಹೆಣ್ಣು ಮಕ್ಕಳಾದ್ರೆ ಒಬ್ಬ ಮಗ. ರೇಖಾ ತಾಯಿಗೆ ಇಬ್ಬರು ಹೆಣ್ಣು ಮಕ್ಕಳು. ಅದ್ರಲ್ಲಿ ರಾಧಾ ರೇಖಾಗಿಂತ ಸುಂದರವಾಗಿದ್ದರು. ರೇಖಾಗೆ ಒಂದಾದ್ಮೇಲೆ ಒಂದರಂತೆ ಆಫರ್ ಸಿಗ್ತಿರುವ ವೇಳೆ ರೇಖಾ ಸಹೋದರಿಗೂ ಆಫರ್ ಬಂದಿತ್ತು. ರೇಖಾ ಬಾಲ್ಯದಲ್ಲಿಯೇ ನಟನೆ ಶುರು ಮಾಡಿದ್ದರು.
ಗಂಡ ಮಕ್ಳು ನಂಗೂ ಬೇಕು, ಸಮಯ ಸಿಕ್ಕರೆ ಮದ್ವೆ ಮಾಡ್ಕೊಳ್ತೀನಿ: 'ಕುರುಬನ ರಾಣಿ' ನಟಿ ಹೇಳಿಕೆ ವೈರಲ್
ಎಲ್ಲ ಅಂದುಕೊಂಡಂತೆ ಆದ್ರೆ ರೇಖಾ ಸಹೋದರಿ ಬಾಬಿ ಚಿತ್ರದಲ್ಲಿ ನಟಿಸಬೇಕಾಗಿತ್ತು. ಆದ್ರೆ ರೇಖಾ ಈ ಆಫರ್ ತಳ್ಳಿ ಹಾಕಿದ್ದರು. ವೃತ್ತಿ ಜೀವನದ ಆರಂಭದಲ್ಲಿ ರೇಖಾ ಸಾಕಷ್ಟು ಸಮಸ್ಯೆ ಎದುರಿಸಿದ್ದರು. ಅವರಿಗೆ ನಟಿಸಲು ಅವಕಾಶ ಸಿಗ್ತಿರಲಿಲ್ಲ. ಅದೇ ಸ್ಥಿತಿ ಸಹೋದರಿಗೆ ಬರಬಾರದು ಎನ್ನುವ ಕಾರಣಕ್ಕೆ ಅವರು ಆಫರ್ ನಿರಾಕರಿಸಿದ್ದರು. ಒಂದ್ವೇಳೆ ಅವರು ನಟಿಸಿದ್ದೇ ಆಗಿದ್ದಲ್ಲಿ ರೇಖಾಗಿಂತ ಪ್ರಸಿದ್ಧಿ ಪಡೆಯುತ್ತಿದ್ದರು. ಆ ಚಿತ್ರದಲ್ಲಿ ನಟಿಸಿದ ಡಿಂಪಲ್ ಕಪಾಡಿಯಾ ರಾತ್ರೋರಾತ್ರಿ ಸ್ಟಾರ್ ಆದ್ರು. ರಾಧಾ, ಸಹೋದರಿ ರೇಖಾ ಜೊತೆ ಅನೇಕ ಸಿನಿಮಾ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಆದ್ರೆ ಬಣ್ಣ ಹಚ್ಚಿಲ್ಲ. ಸದ್ಯ ಅಮೆರಿಕಾದಲ್ಲಿ ಪತಿ ಜೊತೆ ರಾಧ ಸುಖಕರ ಜೀವನ ನಡೆಸುತ್ತಿದ್ದಾರೆ.