ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಮದುವೆಯ ಹಿಂಟ್ ನೀಡಿದ ಬೆನ್ನಲ್ಲೇ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಭಾರಿ ವೈರಲ್ ಆಗಿದ್ದು, ಥಹರೇವಾರಿ ಕಮೆಂಟ್ಗಳು ಬರುತ್ತವೆ.
ವಯಸ್ಸು 49 ಆದರೂ ಯುವತಿಯಂತೆಯೇ ತಮ್ಮ ದೇಹವನ್ನು ಫಿಟ್ ಆಗಿಸಿಕೊಂಡಿರುವ ನಟಿ ಮಲೈಕಾ ಅರೋರಾ. 2017ರಲ್ಲಿ ಅರ್ಬಾಜ್ ಖಾನ್ಗೆ (Arbaz Khan) ವಿಚ್ಛೇದನ ನೀಡಿ ಇದೀಗ ತಮಗಿಂದ 12 ವರ್ಷ ಚಿಕ್ಕವರಾಗಿರುವ ಅರ್ಜುನ್ ಕಪೂರ್ ಜೊತೆ ಸಂಬಂಧ ಹೊಂದಿರುವ ವಿಷಯ ಹೊಸತೇನಲ್ಲ. ಅರ್ಜುನ್ ಕಪೂರ್ ಜೊತೆ ಲಿವ್ ಇನ್ ರಿಲೇಷನ್ನಲ್ಲಿ ಇದ್ದು ಹಲವಾರು ವರ್ಷಗಳೇ ಕಳೆದಿವೆ. ಮಾಜಿ ಪತಿಯ ಜೊತೆ ಮಧುರ ಸ್ನೇಹವನ್ನು ಇಟ್ಟುಕೊಂಡು, ನಟ ಅರ್ಜುನ್ ಕಪೂರ್ (Arjun Kapoor) ಜೊತೆ ಬಹಳ ವರ್ಷಗಳಿಂದ ಡೇಟಿಂಗ್ನಲ್ಲಿರುವ ನಟಿ ಮಲೈಕಾ ತಮ್ಮಿಬ್ಬರ ಸಂಬಂಧದ ಕುರಿತು ಕೆಲ ದಿನಗಳ ಹಿಂದೆ ಮುಕ್ತವಾಗಿ ಮಾತನಾಡಿದ್ದರು. ನಾವು ಮದುವೆಯಾಗದಿದ್ದರೇನು, ಪ್ರೀ ಹನಿಮೂನ್ ಹಂತವನ್ನು ಅನಭವಿಸುತ್ತಿದ್ದೇವೆ ಎಂದಿದ್ದರು. ಅರ್ಜುನ್ ಕಪೂರ್ ಜೊತೆ ಮದುವೆ ಆಗುವುದಿಲ್ಲವೆ ಎಂದು ಕೇಳಿದಾಗ, ಮದುವೆ ಯಾಕೆ? ಪ್ರೀ ಹನಿಮೂನ್ ಆನಂದ ಅನುಭವಿಸುತ್ತಿದ್ದೇವೆ. ಮದುವೆ ಎನ್ನುವುದು ಇಬ್ಬರ ನಡುವೆ ಚರ್ಚೆಯಾಗುವ ವಿಷಯ. ನಮಗೆ ಅನಿಸಿದರೆ, ನಾವು ಅದರ ಬಗ್ಗೆ ಯೋಚಿಸುತ್ತೇವೆ, ಆದರೆ ಸದ್ಯಕ್ಕೆ ಯಾವುದೇ ಯೋಜನೆಗಳಿಲ್ಲ ಎಂದಿದ್ದರು.
ಇದಾದ ಬಳಿಕ, ಕೆಲ ದಿನಗಳ ಹಿಂದೆ, ಮಲೈಕಾ ಸಂದರ್ಶನವೊಂದರಲ್ಲಿ ಅರ್ಜುನ್ ಕಪೂರ್ ಅವರನ್ನು ಮದುವೆಯಾಗಲು ರೆಡಿ ಎಂದು ಹೇಳಿದ್ದರು. ನಮ್ಮಿಬ್ಬರ ನಡುವೆ ವಯಸ್ಸಿನ ಅಂತರವಿದೆ. ಆದರೆ ಇದು ನಮ್ಮ ನಡುವೆ ಎಂದಿಗೂ ಸಮಸ್ಯೆಯಾಗಿಲ್ಲ. ಅರ್ಜುನ್ ಕಪೂರ್ ಬಹಳ ವಿವೇಚನೆ ಹಾಗೂ ಕಾಳಜಿಯುಳ್ಳ ವ್ಯಕ್ತಿ. ನಾನು ಅವನ ಗುಣಗಳನ್ನು ಹೆಚ್ಚು ಮೆಚ್ಚುತ್ತೇನೆ ಎಂದು ಮಲಿಕಾ ಅರೋರಾ ಬ್ರೈಡ್ಸ್ ಟುಡೇಗೆ ತಿಳಿಸಿದ್ದರು. ಅರ್ಜುನ್ ಜೊತೆ ನಾನು ಹೊಂದಿರುವ ಸಂಬಂಧವನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು ನಾನು ಇಷ್ಟಪಡುತ್ತೇನೆ. ಇಬ್ಬರೂ ಗೃಹಸ್ಥಾಶ್ರಮಕ್ಕೆ (Marriage) ಕಾಲಿಡಲು ನಿರ್ಧರಿಸಿರುವುದಾಗಿ ಅವರು ಹೇಳಿದ್ದರು.
ಪ್ರೀ ಹನಿಮೂನ್ ಬಳಿಕ ಮದುಮಗಳಾಗಲು ರೆಡಿಯಾದ ನಟಿ ಮಲೈಕಾ!
ಆದರೆ ಇದೀಗ ಕುತೂಹಲದ ಘಟ್ಟದಲ್ಲಿ ಮದುವೆಯ ಸುಳಿವು ನೀಡಿದ ಬೆನ್ನಲ್ಲೇ ಈ ಜೋಡಿ ಅಜ್ಞಾತ ಸ್ಥಳಕ್ಕೆ ಹೋಗಿದ್ದಾರೆ. ವಿಮಾನ ನಿಲ್ದಾಣದಲ್ಲಿ ಇಬ್ಬರೂ ಲಗುಬಗೆಯಿಂದ ಹೋಗುತ್ತಿರುವ ವಿಡಿಯೋ ವೈರಲ್ ಆಗಿದ್ದು, ಥಹರೇವಾರಿ ಕಮೆಂಟ್ಗಳಿಗೆ ಕಾರಣವಾಗಿದೆ. ಅವರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೀಡಿಯೊವನ್ನು ಪಾಪರಾಜಿಗಳು Instagram ನಲ್ಲಿ ಹಂಚಿಕೊಂಡಿದ್ದಾರೆ. ಮಲೈಕಾ ಅರೋರಾ ಬಿಳಿ ಸ್ಯಾಟಿನ್ ಶರ್ಟ್ ಅನ್ನು ಧರಿಸಿದ್ದಾರೆ. ಕೈಯಲ್ಲಿ ಜಾಕೆಟ್ ಹಿಡಿದಿರುವುದನ್ನು ಸಹ ಕಾಣಬಹುದು. ಮತ್ತೊಂದೆಡೆ, ಅರ್ಜುನ್ ಕಪೂರ್ ಕ್ಯಾಶುಯಲ್ ಟೀ ಶರ್ಟ್ ಮತ್ತು ಡೆನಿಮ್ ಜಾಕೆಟ್ ಧರಿಸಿದ್ದಾರೆ. ಅರ್ಜುನ್ ಕಪೂರ್ ಕನ್ನಡಕವನ್ನು (Spect) ಹಾಕಿಕೊಂಡು ವಿಮಾನ ನಿಲ್ದಾಣವನ್ನು ಪ್ರವೇಶಿಸಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ವೀಡಿಯೊವನ್ನು ಆನ್‌ಲೈನ್‌ನಲ್ಲಿ (Online) ಹಂಚಿಕೊಂಡ ತಕ್ಷಣ, ನೆಟಿಜನ್‌ಗಳು ಮಲೈಕಾ ಅರೋರಾ ಅವರ ಸೌಂದರ್ಯವನ್ನು ಮಾಮೂಲಿನಂತೆ ಕೊಂಡಾಡಿದರೆ, ಇನ್ನು ಹಲವರು ಈ ಜೋಡಿಯ ಕಾಲೆಳೆಯುವುದನ್ನು ಬಿಡಲಿಲ್ಲ. ಪ್ರೀ ಹನಿಮೂನ್ ಆಯ್ತು, ಮದುವೆಯ ಸುಳಿವೂ ಕೊಟ್ಟಾಯ್ತು. ಇನ್ನೇನು ಮಾಡಲು ಹೊರಟಿದ್ದೀರಿ ಎಂದು ಟ್ರೋಲಿಗರು ಪ್ರಶ್ನಿಸಿದರೆ, ಬರುವಾಗ ಇಬ್ಬರೇ ಬನ್ನಿ, ಬೇಬಿ ಬಂಪ್ ಷೋ (Baby Bump) ಮಾಡಬೇಡಿ ಎಂದು ಕಾಲೆಳೆದಿದ್ದರೆ, ಇನ್ನು ಅದೊಂದೇ ಬಾಕಿ ಇರುವುದು, ಅಷ್ಟರ ಒಳಗೆ ದಯವಿಟ್ಟು ಅಧಿಕೃತವಾಗಿ ಮದ್ವೆಯಾಗಿ ಎಂದಿದ್ದಾರೆ. ಮಾಜಿ ಪತಿಯ ಜೊತೆಗೂ ಆಗಾಗ್ಗೆ ಕಿಸ್ (Kiss) ಮಾಡುತ್ತಾ, ಇತ್ತ ಅರ್ಜುನ್ ಜೊತೆಗೂ ಸಂಬಂಧ ಬೆಳೆಸುತ್ತಿರುವ ನಿಮ್ಮ ಈ ಸಂಬಂಧಕ್ಕೆ ಮದುವೆಯ ಮುದ್ರೆ ಕೊನೆಗಾದರೂ ಸಿಗುತ್ತಾ ಎಂದು ಕೆಲವರು ಪ್ರಶ್ನಿಸಿದ್ದಾರೆ.
ದಿವಾ ಯೋಗದ ಮಹತ್ವ ತಿಳಿಸಿದ ಮಲೈಕಾ, ನಗ್ನ ಯೋಗ ಬೆಸ್ಟ್ ಅನ್ನೋದಾ ನೆಟ್ಟಿಗರು?