ಹಿಂದೆಲ್ಲಾ ಸೌತ್ ನಟಿಯರನ್ನು ಇಂಡಸ್ಟ್ರಿಯಲ್ಲಿ ಹೇಗೆಲ್ಲಾ ನಡೆಸಿಕೊಳ್ಳುತ್ತಿದ್ದರು ಎಂಬ ಬಗ್ಗೆ ಮಾತನಾಡಿದ ನಟಿ ಸಮಂತಾ ರುತ್ ಪ್ರಭು
ಟಾಲಿವುಡ್‌ನ ಪ್ರತಿಭಾನ್ವಿತ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಹೊಸ ಪ್ರಾಜೆಕ್ಟ್‌ಗಳಲ್ಲಿ ಭಾಗಿಯಾಗುವುದರ ಜತೆಗೆ ಬೋಲ್ಡ್ ಫೋಟೋಶೂಟ್ ಮೂಲಕ ಆಗಾಗ ನಟಿ ಸದ್ದು ಮಾಡುತ್ತಲೇ ಇರುತ್ತಾರೆ. ಇದೀಗ ಈ ಸೌತ್ ಬ್ಯೂಟಿ ಶಾಕುಂತಲಂ ಸಿನಿಮಾದ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಬಹುನಿರೀಕ್ಷೆಯ ಶಾಕುಂತಲಂ ಸಿನಿಮಾ ಇದೇ ತಿಂಗಳು ರಿಲೀಸ್ ಆಗಲಿದೆ. ಶಾಕುಂತಲಂ ಪ್ರಚಾರ ನಿಮಿತ್ತಾ ಸಮಂತಾ ಅನೇಕ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಸಂದರ್ಶನಗಳಲ್ಲಿ ಸ್ಯಾಮ್ ಸಾಕಷ್ಟು ಇಂಟ್ರಸ್ಟಿಂಗ್ ವಿಚಾರಗಳನ್ನು ಬಿಚ್ಚಿಡುತ್ತಿದ್ದಾರೆ. ತಮ್ಮ ಮಾಜಿ ಪತಿ ನಾಗ ಚೈತನ್ಯ ಅವರಿಂದ ದೂರ ಆದ ಬಳಿಕ ಎದುರಿಸಿದ ಕಷ್ಟಗಳ ಬಗ್ಗೆಯೂ ಇದಾಗಲೇ ಅವರು ಮಾತನಾಡಿದ್ದಾರೆ. ಸಂದರ್ಶನದಲ್ಲಿ ಸಮಂತಾ ಅವರಿಗೆ ಈ ಹಿಂದಿನ ತಮ್ಮ ಅನುಭವಗಳನ್ನು ಮರೆಯಲು ಬಯಸುತ್ತೀರಾ ಎಂದು ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿಗ ಸಮಂತಾ, 'ನೀವು ನನ್ನನ್ನು ತೊಂದರೆಗೆ ಸಿಲುಕಿಸುತ್ತಿದ್ದೀರಿ. ನಾನು ಏನನ್ನೂ ಮರೆಯಲು ಬಯಸುವುದಿಲ್ಲ ಏಕೆಂದರೆ ಎಲ್ಲವೂ ನನಗೆ ಜೀವನದಲ್ಲಿ ಏನನ್ನಾದರೂ ಕಲಿಸಿದೆ, ಆದ್ದರಿಂದ ನಾನು ಮರೆಯಲು ಬಯಸುವುದಿಲ್ಲ, ಓ ದೇವರೇ, ನಾನು ಅದನ್ನು ಗಟ್ಟಿಯಾಗಿ ಹೇಳಬೇಕೇ?' ಎಂದು ಹೇಳುವ ಮೂಲಕ ನೋವು ತೋಡಿಕೊಂಡಿದ್ದರು.
ಇದಕ್ಕೂ ಮುನ್ನ ಸಮಂತಾ ಫೋಟೋಶೂಟ್ (Photoshoot) ಮಾಡಿಸಿಕೊಂಡು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಸಮಂತಾ ತೊಡುವ ಡ್ರೆಸ್ ಶೈಲಿ ನೋಡಿ ಅಭಿಮಾನಿಗಳು ಮುನಿಸಿಕೊಂಡಿದ್ದರು. `ಪುಷ್ಪ’ ಚಿತ್ರದಲ್ಲಿ ಸಮಂತಾ ಬೋಲ್ಡ್ ಅವತಾರ ನೋಡಿ, ಫ್ಯಾನ್ಸ್ ಸುಸ್ತಾಗಿದ್ದರು. ನಂತರ ಸಮಂತಾ ಅವರ ಹೊಸ ಫೋಟೋಶೂಟ್ ನೋಡಿ, ನಟಿಯನ್ನ ತರಾಟೆಗೆ ತೆಗೆದುಕೊಂಡಿದ್ದರು. ಹಳದಿ ಬಣ್ಣದ ಡ್ರೆಸ್‌ನಲ್ಲಿ ಸಮಂತಾ, ಬೋಲ್ಡ್ ಆಗಿ ಕ್ಯಾಮೆರಾ ಕಣ್ಣಿಗೆ ಪೋಸ್ ಕೊಟ್ಟಿದ್ದರು. ಅದು ಹಾಟ್ ಫೋಟೋಗಳಾಗಿದ್ದವು. ಇದರಿಂದ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಡಿವೋರ್ಸ್ ಆಗಿದ್ದೆ ತಡ, ಬೇಕಾಬಿಟ್ಟಿ ಡ್ರೆಸ್ (Dress) ಹಾಕುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ನಟಿಗೆ ಕ್ಲಾಸ್ ತೆಗೆದುಕೊಂಡಿದ್ದರು.
Oo Antava: ಪುಷ್ಪಾ-2ನಲ್ಲೂ ಸೊಂಟ ಬಳುಕಿಸಲಿದ್ದಾರೆಯೇ ಸಮಂತಾ? ನಟಿ ಹೇಳಿದ್ದೇನು?
ಇಂತಿಪ್ಪ ಸಮಂತಾ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳಲಿಲ್ಲ. ಆದರೆ ತಾವು ಈ ಹಿಂದೆ ಡಿಸೈನರ್ ಬಟ್ಟೆ ಬೇಕು ಎಂದು ಹೇಗೆಲ್ಲಾ ಪರದಾಡುವ ಸ್ಥಿತಿ ಇತ್ತು ಎಂದು ಸಂದರ್ಶನದಲ್ಲಿ ನಟಿ ಆ ದಿನಗಳನ್ನು ನೆನಪಿಸಿಕೊಂಡು ಭಾವುಕರಾಗಿದ್ದಾರೆ. ಹಿಂದೊಂದು ಕಾಲವಿತ್ತು. ನಾವು ಅಂದರೆ ಸೌತ್ ಸ್ಟಾರ್ಸ್ ಡಿಸೈನರ್ ಬಟ್ಟಗಳಿಗಾಗಿ ಪರದಾಡಬೇಕಿತ್ತು. ನಾವು ಬಟ್ಟೆ ಕೇಳಿದರೆ ನೀವು ಯಾರು? ಯಾವ ಸೌತ್ (South Actresses) ಎಂದು ಅವಮಾನಿಸುತ್ತಿದ್ದರು ಎಂದು ತಮ್ಮ ಆರಂಭಿಕ ದಿನಗಳನ್ನು ಸಮಂತಾ ನೆನಪಿಸಿಕೊಂಡಿದ್ದಾರೆ. ನಾರ್ತ್ ನಟಿಯರಿಗೆ ಮಣೆ ಹಾಕುತ್ತಿದ್ದರು. ದಕ್ಷಿಣದ ನಟಿಯರನ್ನು ಅಗೌರವದಿಂದ ಕಾಣಲಾಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಬಾಲಿವುಡ್ ಇಂಡಸ್ಟ್ರಿಯನ್ನು ಮೀರಿ ಪ್ರಾದೇಶಿಕ ಸಿನಿಮಾಗಳು ಮುನ್ನೆಲೆಗೆ ಬರುತ್ತಿದ್ದು, ಇದು ಸಂತೋಷಕರ ಸಂಗತಿ ಎಂದರು.
ಹಲವಾರು ತಮಿಳು, ತೆಲುಗು, ಕನ್ನಡ ಸಿನಿಮಾಗಳು ಬಾಲಿವುಡ್ ಸಿನಿಮಾಗಳನ್ನು ಸೋಲಿಸುತ್ತಿವೆ ಎಂದು ನಟಿ ಈ ಸಂದರ್ಭದಲ್ಲಿ ಹೇಳಿದರು. ಈ ಮೂಲಕ ದಕ್ಷಿಣ ಹಾಗೂ ಉತ್ತರ ಭಾರತದ ಸಿನಿಮಾಗಳ ಮಧ್ಯೆ ಇದ್ದಂತಹ ಅಂತರವನ್ನು ವಿವರಿಸಿದರು. ಭಾರತೀಯ ಸಿನಿಮಾಗಳ ಪಿರಮಿಡ್ನಲ್ಲಿ ಹಿಂದಿ ಸಿನಿಮಾಗಳು ಮೇಲಿನ ಸ್ಥಾನದಲ್ಲಿದ್ದವು. ಆದರೆ ಕಳೆದ 5 ವರ್ಷಗಳಲ್ಲಿ ಆರ್ಆರ್ಆರ್, ಕೆಜಿಎಫ್ 2 (KGF-2), ಪುಷ್ಪಾ: ದಿ ರೈಸ್, ಕಾಂತಾರ ಸೇರಿ ಹಲವಾರು ಸಿನಿಮಾಗಳು ಬಾಕ್ಸ್ ಆಫೀಸ್ ದಿಕ್ಕನ್ನೇ ಬದಲಾಯಿಸಿವೆ. ಮಲಯಾಳಂ ಸಿನಿಮಾಗಳು ಕ್ವಾಲಿಟಿ ಬಾರ್ ಮೀರಿ ಬಂದಿವೆ ಎಂದು ಸಂತಸ ವ್ಯಕ್ತಪಡಿಸಿದರು.
Deepika Padukone: 'ಪಠಾಣ್' ನಾಯಕಿ ಗರ್ಭಿಣಿ? ಏನಿದು ಬಿಸಿಬಿಸಿ ಸುದ್ದಿ?
ಸೌತ್ ನಟಿಯರು ಅಷ್ಟು ದೂರದಿಂದ ಇಲ್ಲಿಯವರೆಗೆ ಬಂದಿದ್ದೇವೆ. ಇದು ನಿಜಕ್ಕೂ ಅದ್ಭುತ. ಈಗ ನಾವೆಲ್ಲಿರಬೇಕೋ ಅಲ್ಲಿಗೆ ತಲುಪಿದ್ದೇವೆ ಎಂದು ಹೇಳಿದ್ದಾರೆ. ಇದೇ ವೇಳೆ ತಮ್ಮ ಕರಿಯರ್ ಕುರಿತು ಮಾತನಾಡಿದ ನಟಿ, ನನ್ನ ಕರಿಯರ್ (Career) ಹಲವು ಏರಿಳಿತಗಳಿಂದ ಕೂಡಿತ್ತು, ನಾನು ತೆರೆದ ಪುಸ್ತಕವಾಗಿರಲು ಬೇಗ ನಿರ್ಧಾರ ಮಾಡುವ ಮೂಲಕ ಒಳ್ಳೆಯ ಕೆಲಸ ಮಾಡಿದೆ. ಇದು ನನ್ನನ್ನು ಕೆಟ್ಟ ದಿನಗಳಿಗೆ ರೆಡಿ ಮಾಡಿತು ಎಂದರು. ಇದೇ ವೇಳೆ ಪುಷ್ಪಾ ಸಿನಿಮಾದ ಊ ಅಂಟಾವಾ ಹಾಡಿನಲ್ಲಿ ಕಾಣಿಸಿಕೊಂಡ ಬಳಿಕ ವರ್ಚಸ್ಸು ಹೆಚ್ಚಿಸಿಕೊಂಡಿರೋ ಸಮಂತಾ ಪುಷ್ಪಾ ಸೀಕ್ವಲ್ನಲ್ಲಿ ನರ್ತಿಸುವುದಿಲ್ಲ ಎಂದೂ ಹೇಳಿದ್ದಾರೆ. ಸದ್ಯ ಬಿಗ್ ಬಜೆಟ್ ಸಿನಿಮಾ ಶಾಕುಂತಲಂ ಮೂಲಕ ಪ್ರೇಕ್ಷರನ್ನು ತಲುಪಲಿರುವುದಾಗಿ ಹೇಳಿದ್ದಾರೆ.