ಐಶ್ವರ್ಯಾ ಹೆಸರು ಕೇಳಿದ್ದಕ್ಕೇ ನಾಚಿ ನೀರಾದ ಸಲ್ಮಾನ್‌ ಖಾನ್

By Suvarna NewsFirst Published Apr 13, 2023, 1:35 PM IST
Highlights

ಒಂದು ಪ್ರೆಸ್ ಮೀಟ್ ವೀಡಿಯೋ ಮತ್ತೆ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಇದರಲ್ಲಿ ಐಶ್ ಬೇಬಿ ಹೆಸರು ಹೇಳಿದ್ದೇ ಲೇಡಿ ಜರ್ನಲಿಸ್ಟ್ ಎದುರು ಸಲ್ಮಾನ್ ಖಾನ್ ನಾಚಿಕೊಂಡು ಕೆಂಪುಕೆಂಪಾದ್ರು. ಅಷ್ಟಕ್ಕೂ ಆ ಘಟನೆ ಏನು?

ಒಂದು ಕಾಲದಲ್ಲಿ ಐಶ್ವರ್ಯಾ ರೈ ಮತ್ತು ಸಲ್ಮಾನ್‌ ಖಾನ್ ಲವ್ವಲ್ಲಿ ಬಿದ್ದ ಜೋಡಿ. ಈ ಸಂಬಂಧದಿಂದ ಹೊರಬಂದು ಇಷ್ಟು ಕಾಲವಾಗಿದೆ. ಆದರೆ ಸಲ್ಮಾನ್ ಖಾನ್ ಐಶ್ ಬೇಬಿ ಹೆಸರು ಕೇಳಿದ್ರೂ ನಾಚಿ ನೀರಾಗ್ತಾರೆ. ಅಂಥಾ ವೀಡಿಯೋವೊಂದು ಈಗ ವೈರಲ್ ಆಗಿದೆ.

ಐಶ್ವರ್ಯಾ ರೈ ಸಲ್ಮಾನ್ ಖಾನ್ ಒಂದು ಕಾಲದ ಪ್ರೇಮದ ಹಕ್ಕಿಗಳು. ಆದರೆ ಆಮೇಲೆ ಬೇರಾದರು. ಇದೆಲ್ಲ ಆಗಿ ಸಾಕಷ್ಟು ವರ್ಷಗಳಾಗಿವೆ. ಆದರೂ ಜನರಿಗೆ ಈ ಜೋಡಿ ಮೇಲೆ ಅದೇನೋ ಆಸಕ್ತಿ. ಅವರಿಬ್ಬರೂ ಬೇರೆಯಾಗಿದ್ದರೂ, ಆ ಘಟನೆಗಳೆಲ್ಲ ನಡೆದು ಇಷ್ಟು ಕಾಲವಾಗಿದ್ದರೂ ಅವರಿಬ್ಬರು ಒಬ್ಬರ ಬಗ್ಗೆ ಒಬ್ಬರು ತೋರುವ ರಿಯಾಕ್ಷನ್ ವೀಡಿಯೋಗಳನ್ನು ಮತ್ತೆ ಮತ್ತೆ ಹುಡುಕಿ ತೆಗೆಯುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಹಾಕಿ ವೈರಲ್ ಮಾಡ್ತಾರೆ. ಅಂಥಾ ವೀಡಿಯೋವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ಭಲೇ ಸೌಂಡ್ ಮಾಡ್ತಿದೆ. ಅಂದಹಾಗೆ ಐಶ್ವರ್ಯಾ ರೈ ಎಂಬ ಭುವನ ಸುಂದರಿಯೂ ಸಲ್ಮಾನ್ ಖಾನ್ ಅನ್ನೋ ಸುಂದರಾಂಗನೂ ಪರಸ್ಪರ ಪರಿಚಿತರಾದದ್ದು 'ಹಮ್ ದಿಲ್ ದೇ ಚುಕೆ ಸನಮ್' ಸಿನಿಮಾದಲ್ಲಿ. ಇದು 1999ರಲ್ಲಿ ಬಂದ ಸಿನಿಮಾ. ಹೀಗೆ ಪರಿಚಯ ಸ್ನೇಹಕ್ಕೆ ತಿರುಗಿತು. ಅವರಿಬ್ಬರೂ ಡೇಟಿಂಗ್ ಅಂತ ಓಡಾಡತೊಡಗಿದರು. ಇಬ್ಬರ ನಡುವೆ ರಿಲೇಶನ್ ಶಿಪ್ ಏರ್ಪಟ್ಟಿತು. ಇಬ್ಬರೂ ಟಾಕ್ ಆಫ್ ದಿ ಟೌನ್ ಆದ್ರು. ಇಷ್ಟೆಲ್ಲ ಆದಮೇಲೆ 2002ರಲ್ಲಿ ಬ್ರೇಕ್ ಅಪ್ ಆಗಿ ಈ ಸಂಬಂಧದಿಂದ ದೂರಾದರು.

Latest Videos

ಐಶ್ವರ್ಯಾ ರೈ ಈ ಸಂಬಂಧದಿಂದ ಹೊರಬಂದು ವರ್ಷ ಕಳೆಯುವಷ್ಟರಲ್ಲೇ ಅಭಿಷೇಕ್ ಬಚ್ಚನ್ ಜೊತೆ ಪ್ರೇಮದಲ್ಲಿ ಬಿದ್ದರು. ಇಬ್ಬರ ಮದುವೆಯೂ ಆಗಿ ಬಚ್ಚನ್ ಖಾನ್ ದಾನ್ ಸೊಸೆ ಆದಳು. ಈಗ ತನ್ನಷ್ಟೇ ಎತ್ತರಕ್ಕೆ ಬೆಳೆದ ಮಗಳು ಆರಾಧ್ಯ ಬೇರೆ ಇದ್ದಾರೆ. ಆದರೆ ನಮ್ ಸಲ್ಲು ಭಾಯ್ ಮಾತ್ರ ಇದಾಗಿ ಎಷ್ಟೋ ರಿಲೇಶನ್ ಶಿಪ್‌ನಲ್ಲಿ ಬಿದ್ದು ಗುದ್ದಾಡಿದರೂ ಮದುವೆ ಅಂತೊಂದು ಆಗಲಿಲ್ಲ. ಐಶ್ವರ್ಯಾ ಸಂಬಂಧದಿಂದ ಹೊರಬಂದ ಮೇಲೆ ಅನೇಕ ಬಾಲಿವುಡ್ ಹಾಲಿವುಡ್ ನಟಿಯರು, ಮಾಡೆಲ್ ಗಳ ಜೊತೆಗೆಲ್ಲ ಸಲ್ಮಾನ್ ಹೆಸರು ಓಡಾಡಿದರೂ ಅವರ್ಯಾರೂ ಸಲ್ಲು ಮನೆ ಹೊಸಿಲು ತುಳಿದು ಬಲಗಾಲಿಟ್ಟು ಮನೆ, ಮನದೊಳಗೆ ಬರಲಿಲ್ಲ.

ದಕ್ಷಿಣದವರ ಬಗ್ಗೆ ಭಾರೀ ತಾರತಮ್ಯ; ಒಂದೊಳ್ಳೆ ಡಿಸೈನರ್ ಬಟ್ಟೆ ಸಿಗುತ್ತಿರಲಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ ಸಮಂತಾ

ಹಾಗಿದ್ರೆ ಇನ್ನೂ ಸಲ್ಲು ಐಶ್ವರ್ಯಾ ನೆನಪಿಂದ ಹೊರಬಂದಿಲ್ವಾ? ಅನ್ನೋ ಪ್ರಶ್ನೆ ಅವರ ಫ್ಯಾನ್ಸ್ (Fans)ಗೆ ಇದೆ. ಇದಕ್ಕೆ ಸಾಕ್ಷಿ ಅನ್ನೋ ಹಾಗೆ ಒಂದು ವೀಡಿಯೋ ವೈರಲ್(Viral) ಆಗಿದೆ. ಇದೆಲ್ಲ ಆಗಿದ್ದು ಐದು ವರ್ಷಗಳ ಕೆಳಗೆ. ಆದರೆ ಆ ವೀಡಿಯೋ ಮತ್ತೆ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡು ವೈರಲ್ ಆಗ್ತಿದೆ. ಅಷ್ಟಕ್ಕೂ ಆ ವೀಡಿಯೋದಲ್ಲಿರೋದು ಪ್ರೆಸ್ ಮೀಟ್(Pressmeet) ಒಂದರಲ್ಲಿ ಸಲ್ಲು ಭಾಯ್ ನಡೆದುಕೊಂಡ ರೀತಿ. ಆ ಪ್ರೆಸ್ ಮೀಟ್ ಗೆ ಒಬ್ಬ ಜರ್ನಲಿಸ್ಟ್ ಬಂದಿದ್ದರು. ಆಕೆಯ ಹೆಸರು ಐಶ್ವರ್ಯಾ ಅಂತಲೇ. ಆಕೆ ಪ್ರಶ್ನೆ ಕೇಳೋ ಮುಂಚೆ ತನ್ನ ಹೆಸರು ಹೇಳಿದಳು. ಅಲ್ಲೀವರೆಗೆ ಸರಿಯಾಗಿಯೇ ಇದ್ದ ಸಲ್ಮಾನ್ ಐಶ್ ಬೇಬಿ ಹೆಸರು ಕೇಳಿದ್ದೇ ನಾಚಿಕೊಂಡರು. ಮುಖ ಕೆಂಪೇರಿಸಿಕೊಂಡರು.

 
 
 
 
 
 
 
 
 
 
 
 
 
 
 

A post shared by HT.SEVEN (@ht.seven_)

 

ಆಕೆಯ ಕಡೆ ದಿಟ್ಟಿಸಿ ನೋಡೋದಕ್ಕೂ ಆತನಿಂದ ಸಾಧ್ಯವಾಗಲಿಲ್ಲ. ಎಲ್ಲೆಲ್ಲೋ ನೋಡ್ತಾ ಆಕೆಯ ಪ್ರಶ್ನೆ ಕೇಳಿಸಿಕೊಳ್ತಿದ್ದ ಸಲ್ಮಾನ್‌ಗೆ ಆ ಲೇಡಿ ಜರ್ನಲಿಸ್ಟ್. ಸ್ವಲ್ಪ ಈ ಕಡೆನಾದ್ರೂ ನೋಡಿ ಅಂದಾಗ ನಾಚಿಕೊಂಡೇ ಕಿರುನಗುತ್ತಾ ಅತ್ತ ನೋಡಿ ಅವರ ಪ್ರಶ್ನೆಗೆ ಉತ್ತರಿಸೋ ಪ್ರಯತ್ನ ಮಾಡಿದ್ರು.

ಐಶ್ವರ್ಯಾ ಹೆಸರು ಕೇಳಿದ್ರೇ ಈ ಲೆವೆಲ್‌ಗೆ ನಾಚ್ಕೊಳ್ಳೋ ಸಲ್ಮಾನ್ ಇನ್ನೂ ಐಶ್ ಬೇಬಿ ಮೇಲೆ ಲವ್ವಿಟ್ಟುಕೊಂಡಿದ್ದಾರ(Love) ಅನ್ನೋದು ಹಲವರ ಪ್ರಶ್ನೆ. ಇದಕ್ಕೆ ಉತ್ತರ ನೀಡೋ ಸ್ಥಿತಿಯಲ್ಲಂತೂ ಸಲ್ಲು ಭಾಯ್ ಇಲ್ಲದ ಕಾರಣ ಎಲ್ಲವನ್ನೂ ಅಭಿಮಾನಿಗಳ ಇಮ್ಯಾಜಿನೇಶನ್‌ಗೇ(Imagination) ಬಿಡಲಾಗಿದೆ.

ಶೂಟಿಂಗ್‌ ಸೆಟ್‌ನಲ್ಲಿ ಬಾಂಬ್‌ ಸ್ಫೋಟ; ಸಂಜಯ್ ದತ್ ಕಣ್ಣಿಗೆ ಚುಚ್ಚಿದ ಗಾಜು, ಸ್ಪಷ್ಟನೆ ಕೊಟ್ಟ ನಟ

click me!