
ಚಿತ್ರ ನಿರ್ಮಾಪಕ ಹಾಗೂ ಆಲಿಯಾ ಭಟ್ ತಂದೆ ಮಹೇಶ್ ಭಟ್ ತುಂಬಾ ಸಂತೋಷವಾಗಿದ್ದಾರೆ. ಅದಕ್ಕೆ ಕಾರಣ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಮಗಳು ರಾಹಾ. ಮನೆಗೆ ಮೊಮ್ಮಗಳು ಬರ್ತಿದ್ದಂತೆ ತಮ್ಮ ಲೈಫ್ ಬದಲಾಗಿದೆ ಎನ್ನುವ ಮಹೇಶ್ ಭಟ್, ಮೊಮ್ಮಗಳು ದೊಡ್ಡವಳಾದ್ಮೇಲೆ ಯಾವ ಚಿತ್ರವನ್ನು ಮೊದಲು ತೋರಿಸ್ಬೇಕು ಎಂಬುದನ್ನು ಈಗ್ಲೇ ನಿರ್ಧರಿಸಿದ್ದಾರೆ. ಆದ್ರೆ ಅದು ಆಲಿಯಾ ಭಟ್ ಸಿನಿಮಾ ಅಲ್ಲ ಅನ್ನೋದು ವಿಶೇಷ.
ಸಂದರ್ಶನವೊಂದರಲ್ಲಿ ಮಾತನಾಡಿದ ಮಹೇಶ್ ಭಟ್ (Mahesh Bhatt) , ನನ್ನ ಜೀವನ ಈಗ ಮೊದಲಿನಂತೆ ಇಲ್ಲ. ಸಾಕಷ್ಟು ಬದಲಾವಣೆಯಾಗಿದೆ. ಈ ಬದಲಾವಣೆ ನನ್ನನ್ನು ಬೆರಗುಗೊಳಿಸುತ್ತದೆ ಎಂದಿದ್ದಾರೆ. ತನ್ನ ಮೊಮ್ಮಗಳಿಗೆ 16 ವರ್ಷವಾಗೋದನ್ನು ಕಾಯ್ತಿದ್ದೇನೆ ಎಂದ ಮಹೇಶ್ ಭಟ್, ಮೊಮ್ಮಗಳು (Granddaughter) ದೊಡ್ಡವಳಾಗ್ತಿದ್ದಂತೆ ಅವಳಿಗೆ ಯಾವ ಸಿನಿಮಾ ತೋರಿಸ್ತೀರಿ ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಮಹೇಶ್ ಭಟ್ ಉತ್ತರ ಅಚ್ಚರಿ ಹುಟ್ಟಿಸಿದೆ.
ಜೈಲಿನಲ್ಲಿ ದರ್ಶನ್ ಗ್ಯಾಂಗ್ ನಡುವೆ ಬಿರುಕು; ಹಣದಾಸೆಗೆ ಹೆಣ ಬಿಸಾಡಿದವರ ಗೋಳಾಟ, ಚೀರಾಟ, ಫೈಟಿಂಗ್
ರಾಹಾ (Raha) ಗೆ ಪೂಜಾ ಭಟ್ ಸಿನಿಮಾ ತೋರಿಸ್ತಾರಂತೆ ಮಹೇಶ್ ಭಟ್: ಮಹೇಶ್ ಭಟ್, ತಮ್ಮ ಮಗಳು ಆಲಿಯಾ ಭಟ್ ಚಿತ್ರವನ್ನು ಮೊಮ್ಮಗಳಿಗೆ ಮೊದಲು ತೋರಿಸಲು ಆಯ್ಕೆ ಮಾಡಿಲ್ಲ. ಬದಲಾಗಿ ಪೂಜಾ ಭಟ್ ಸಿನಿಮಾ ತೋರಿಸೋದಾಗಿ ಹೇಳಿದ್ದಾರೆ. ನಾನು, ಮೊಮ್ಮಗಳು 16 ವರ್ಷಕ್ಕೆ ಬಂದಾಗ ಆಕೆಗೆ ಸಿನಿಮಾ ತೋರಿಸಲು ಬಯಸ್ತೇನೆ. ಅದು ದಿಲ್ ಹೇ ಕಿ ಮಾನತಾ ನಹಿ ಸಿನಿಮಾ ಎಂದು ಮಹೇಶ್ ಭಟ್ ಹೇಳಿದ್ದಾರೆ. ಇದು ಹೃದಯವನ್ನು ಸ್ಪರ್ಶಿಸುವ ಸಿನಿಮಾ ಎಂದು ಮಹೇಶ್ ಭಟ್, ಚಿತ್ರದಲ್ಲಿ ಅಮೀರ್ ನಟನೆ ಅದ್ಭುತವಾಗಿತ್ತು. ಇಂದಿಗೂ ಜನರಿಗೆ ಹತ್ತಿರವಾಗುವ ಚಿತ್ರ ಇದು. ಅಂತಹ ಚಿತ್ರ, ರಾಹಾಗೆ ತೋರಿಸಲು ಉತ್ತಮ ಎಂದು ನಾನು ಭಾವಿಸ್ತೇನೆ ಎಂದಿದ್ದಾರೆ ಮಹೇಶ್ ಭಟ್.
1991 ರ ಈ ಚಿತ್ರದಲ್ಲಿ ಮಹೇಶ್ ಭಟ್ ಹಿರಿಯ ಮಗಳು ಪೂಜಾ ಭಟ್ ನಟಿಸಿದ್ದರು. ಪೂಜಾ ಜೊತೆ ಅಮೀರ್ ಖಾನ್ ಪ್ರಮುಖ ಪಾತ್ರದಲ್ಲಿ ಮಿಂಚಿದ್ದರು. ಈ ಸಿನಿಮಾದ ಹಾಡುಗಳು ಈಗ್ಲೂ ನವ ಪ್ರೇಮಿಗಳನ್ನು ಆಕರ್ಷಿಸುತ್ತದೆ. ಹಮ್ ಹೇ ರಹೀ ಪ್ಯಾರ್ ಕೆ ಸಿನಿಮಾ ನೆನಪಿಸಿಕೊಂಡ ಮಹೇಶ್ ಭಟ್, ಅದಕ್ಕಿಂತ ದಿಲ್ ಹೇ ಕಿ ಮಾನತಾ ನಹಿ ಸಿನಿಮಾ ಹೆಚ್ಚು ಸೂಕ್ತ ಎಂದಿದ್ದಾರೆ.
ಮನಸ್ಸಲ್ಲೇ ಮದ್ವೆಯಾಗಿದೆ, ಕಾಗದದ ತುಂಡ್ಯಾಕೆ? ಇಬ್ಬರು ಮಕ್ಕಳ ಬಳಿಕ ನಟ ಅರ್ಜುನ್ ರಾಮ್ಪಾಲ್ ಮಾತು...
ಜೀವನ ನೋಡುವ ದೃಷ್ಟಿಕೋನ ಬದಲಿಸಿದ ರಾಹಾ : ಆಲಿಯಾ ಭಟ್ ಮಗಳು ರಾಹಾ ಬಂದ್ಮೇಲೆ ಏನೆಲ್ಲ ಬದಲಾವಣೆ ಆಗಿದೆ ಎಂಬುದನ್ನು ಕೂಡ ಮಹೇಶ್ ಭಟ್ ಹೇಳಿದ್ದಾರೆ. ರಾಹಾ ಬಂದ್ಮೇಲೆ ಜಗತ್ತನ್ನು ನೋಡುವ ನನ್ನ ದೃಷ್ಟಿ ಬದಲಾಗಿದೆ. ಅಜ್ಜನಾದ್ಮೇಲೆ ನಾನು ಜನರನ್ನು ಭಿನ್ನವಾಗಿ ನೋಡ್ತಿದ್ದೇನೆ ಎಂದು ಭಾವುಕರಾಗಿ ಹೇಳಿದ್ದಾರೆ. ಮಕ್ಕಳ ಸಾಧನೆಯ ಖುಷಿಯಿಂದ ನಾನು ಇನ್ನೂ ಹೊರಬಂದಿಲ್ಲ. ಆಗ್ಲೇ ಮೊಮ್ಮಗಳ ಹೊಸ ಆಯಾಮ ಶುರುವಾಗಿದೆ. ಆಲಿಯಾ ಒಬ್ಬ ನಟಿ ಮಾತ್ರವಲ್ಲ, ಒಳ್ಳೆಯ ತಾಯಿ ಕೂಡ ಹೌದು. ಇದು ಒಂದು ದೊಡ್ಡ ಬದಲಾವಣೆಯಾಗಿದೆ. ರಾಹಾ ಆಕಾಶದಿಂದ ಬಂದ ಉಡುಗೊರೆಯಂತಿದೆ. ಅದು ಎಲ್ಲಿಂದಲೋ ಹೊರಬಂದು ನಮ್ಮೆಲ್ಲರನ್ನು ಆಶ್ಚರ್ಯಗೊಳಿಸುತ್ತಿದೆ ಎಂದು ಮಹೇಶ್ ಭಟ್ ಮೊಮ್ಮಗಳನ್ನು ಹೊಗಳಿದ್ದಾರೆ. ಪ್ರಾಮಾಣಿಕವಾಗಿ ಹೇಳ್ಬೇಕೆಂದ್ರೆ ಮಕ್ಕಳಿಗಿಂತ ಮೊಮ್ಮಗಳ ಮೇಲೆ ಪ್ರೀತಿ ತಿರುಗಿದೆ ಎಂದಿದರುವ ಮಹೇಶ್ ಭಟ್, ಮಕ್ಕಳಿಗೆ ಜನರನ್ನು ಆಕರ್ಷಿಸುವ ಶಕ್ತಿ ಇರುತ್ತದೆ ಎಂದಿದ್ದಾರೆ. ಮಕ್ಕಳ ಸಾಧನೆ, ಮೊಮ್ಮಗಳ ಆಗಮನದ ಮಧ್ಯೆಯೇ ಮಹೇಶ್ ಭಟ್ ತಮ್ಮ ಕೆಲಸದಲ್ಲಿ ಬ್ಯುಸಿಯಿದ್ದಾರೆ. ಶೀರ್ಘದಲ್ಲೇ ಬ್ಲಡಿ ಇಷ್ಕ್ ಬಿಡುಗಡೆಯಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.