ವಯಸ್ಸಾದರೇನು, ಮರೆಯಲಾದೀತೆ ಪ್ರಿಯಕರನ? ಜಯಾ ಎದುರೇ ಕುಣಿದಾಡಿದ ರೇಖಾ! ವಿಡಿಯೋ ವೈರಲ್​

Published : Aug 02, 2024, 11:50 AM IST
ವಯಸ್ಸಾದರೇನು, ಮರೆಯಲಾದೀತೆ ಪ್ರಿಯಕರನ? ಜಯಾ ಎದುರೇ ಕುಣಿದಾಡಿದ ರೇಖಾ! ವಿಡಿಯೋ ವೈರಲ್​

ಸಾರಾಂಶ

ಅಮಿತಾಭ್​ ಬಚ್ಚನ್​ ಅವರಿಗೆ ಅವಾರ್ಡ್​ ಬಂದಾಗ ಜಯಾ ಎದುರೇ ರೇಖಾ ಕುಣಿದಾಡಿದ ವಿಡಿಯೋ ವೈರಲ್​ ಆಗಿದೆ. ಆಗ ಆಗಿದ್ದೇನು?  

ಬಾಲಿವುಡ್‌ನ ನಿತ್ಯಹರಿದ್ವರ್ಣ ಸುಂದರಿ, ರೇಖಾ ಅವರೀಗ 70ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ.  ವಯಸ್ಸಾದರೂ  ಫಿಟ್​ನೆಸ್​ ಕಾಯ್ದುಕೊಂಡಿದ್ದಾರೆ ರೇಖಾ. ಸೂಪರ್‌ಸ್ಟಾರ್ ಅಮಿತಾಭ್​ ಬಚ್ಚನ್ (Amithabh Bhacchan) ಮತ್ತು ಒಂದು ಕಾಲದಲ್ಲಿ ಬಾಲಿವುಡ್​ ಆಳಿದ್ದ ಕೃಷ್ಣ ಸುಂದರಿ ರೇಖಾ ಅವರ ಪ್ರೇಮಕಥೆ ಯಾವ ಸಿನಿಮಾಗೂ ಕಡಿಮೆಯೇನಿಲ್ಲ.  ಇದು ಜಗಜ್ಜಾಹೀರವಾಗಿದ್ದರೂ ಅಮಿತಾಭ್ ಮಾತ್ರ ಇದನ್ನು ಬಹಿರಂಗವಾಗಿ ಒಪ್ಪಿಕೊಳ್ಳಲೇ ಇಲ್ಲ, ಆದರೆ ರೇಖಾ ತಮ್ಮ ಪ್ರೇಮ ಕಥೆಯ ಬಗ್ಗೆ ಹಲವಾರು ವೇದಿಕೆಗಳಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ಈ ಜೋಡಿಯ ಪ್ರೇಮಕಥೆ ಯಾರೂ ಮರೆಯಲು ಸಾಧ್ಯವಿಲ್ಲ. 70 ರ ದಶಕದಲ್ಲಿ, ಅಮಿತಾಭ್​ ಬಚ್ಚನ್ ಮತ್ತು ರೇಖಾ ಅವರ   ಸಂಬಂಧವು ಬಹಳ ಚರ್ಚಿತ ವಿಷಯವಾಗಿತ್ತು.  ಇದು ಕೇವಲ ಗಾಸಿಪ್​  ಆಗಿರಲಿಲ್ಲ, ಬದಲಿಗೆ ಇಬ್ಬರೂ ಪ್ರೀತಿಸುತ್ತಿದ್ದುದು ಕೂಡ ನಿಜವೇ ಆಗಿತ್ತು ಎನ್ನಲಾಗಿದೆ. 

ಬೆಳ್ಳಿ ಪರದೆಯ ಮೇಲೆ ಈ ಜೋಡಿಯ ಕೆಮೆಸ್ಟ್ರಿಯನ್ನು ಹಾಡಿ ಕೊಂಡಾಡಿದ್ದ ಅಭಿಮಾನಿಗಳು, ನಿಜ ಜೀವನದಲ್ಲಿಯೂ ಇವರಿಬ್ಬರು ಜೋಡಿಯಾಗಲಿ ಎಂದೇ ಹಾರೈಸಿದ್ದರು. ಆದರೆ ವಿಧಿಯ ಲೀಲೆಯೇ ಬೇರೆಯಾಗಿತ್ತು. ಒಬ್ಬರನ್ನೊಬ್ಬರು ಬಿಟ್ಟಿರದ ಜೋಡಿ ಕೊನೆಗೆ ಹಾವು ಮುಂಗುಸಿಯಾಗಿತ್ತು. ಇವರಿಬ್ಬರ ನಡುವೆ ಜಯಾ ಬಾಧುರಿ (Jaya Badhuri) ಎಂಟ್ರಿ ಕೊಟ್ಟಿದ್ದರು. ಅಮಿತಾಭ್ ಬಚ್ಚನ್ ಹಾಗೂ ಜಯಾ ಅವರು 1973ರಲ್ಲಿ ಮದುವೆಯಾದರು. ಅಮಿತಾಭ್​ ಬಚ್ಚನ್​ ಅವರ ಮದುವೆ ಜಯಾ ಅವರ ಜೊತೆಗೆ ಆದ ನಂತರ ರೇಖಾ ಜರ್ಜರಿತರಾಗಿದ್ದ ಸುದ್ದಿ ಇಂದಿಗೂ ಚರ್ಚಿತ ವಿಷಯವೇ. ಕೆಲ ತಿಂಗಳ ಹಿಂದಷ್ಟೇ ಅಮಿತಾಭ್​ ಅವರು ರೇಖಾ ಅವರ ಫೋಟೋ ಶೇರ್​ ಮಾಡಿಕೊಂಡು ಎಲ್ಲರ ಹುಬ್ಬೇರಿಸಿದ್ದರು. ಇದು ಹಳೆಯ ಫೋಟೋ ಆಗಿದ್ದು, ಅಮಿತಾಭ್ ತಮ್ಮ ಕೈಯಲ್ಲಿ ಮೈಕ್‌ ಹಿಡಿದುಕೊಂಡು ಜನರತ್ತ ಕೈ ಬೀಸುತ್ತಾರೆ. ರಾಜ್ ಕಪೂರ್ ಅವರ ಪಕ್ಕದಲ್ಲಿ ಮತ್ತು ರೇಖಾ ಮತ್ತು ಶಮ್ಮಿ ಕಪೂರ್ ಸ್ವಲ್ಪ ದೂರದಲ್ಲಿ ನಿಂತಿದ್ದಾರೆ, ಜೊತೆಗೆ ಚಿತ್ರರಂಗದ ಇತರ ಸದಸ್ಯರು ಫೋಟೋದಲ್ಲಿದ್ದರು. ಅಷ್ಟಕ್ಕೂ ಅವರು ಈ ಫೋಟೋ ಶೇರ್​ ಏಕೆ ಮಾಡಿದರು ಎನ್ನುವುದು ಇಂದಿಗೂ ಸಸ್ಪೆನ್ಸ್ ಆಗಿಯೇ ಉಳಿದಿದೆ. 

ಕುಷ್ಠರೋಗಿ ಎಂದು ಶಾಲೆಯಿಂದ ಬಹಿಷ್ಕರಿಸಿದ್ದ ನಟಿ ಬಾಲಿವುಡ್​​ ಸೂಪರ್​ ಸ್ಟಾರ್​! ಡಿಂಪಲ್​ ಕಥೆಯೇ ರೋಚಕ

ಅದೇನೇ ಇದ್ದರೂ ರೇಖಾ ಅವರು ಅಮಿತಾಭ್​ ಅವರನ್ನು ಇಂದಿಗೂ ಮರೆತಂತೆ ಕಾಣುತ್ತಿಲ್ಲ.  ಅಮಿತಾಭ್​ ಅವರು ಮದುವೆಯಾದ ಬಳಿಕ  ನಟಿ, ದೆಹಲಿಯ ಖ್ಯಾತ ಕೈಗಾರಿಕೋದ್ಯಮಿ ಮುಖೇಶ್ ಅಗರ್​ವಾಲ್​ ಅವರನ್ನು 1990ರಲ್ಲಿ ವಿವಾಹವಾದರು. ಆಗ ಈ ಮದುವೆಯ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು.  ರೇಖಾಳ (Rekha) ಜೀವನದಲ್ಲಿ ಇದ್ದಕ್ಕಿದ್ದಂತೆ ಮುಖೇಶ್ ಬಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಸಕತ್​ ಸದ್ದು ಮಾಡಿತ್ತು. ಈ ಬಗ್ಗೆ ಪ್ರಶ್ನೆ ಕೇಳಿದ್ದಾಗ ರೇಖಾ, 'ನಾನು ನನ್ನ ವೃತ್ತಿಜೀವನದಲ್ಲಿ ಆ ಹಂತದಲ್ಲಿಯೇ ಇದ್ದೆ. ನಾನು ಮದುವೆಯಾಗಬೇಕು ಎಂದು ಭಾವಿಸಿದ್ದೆ. ನಾವು ಎಲ್ಲಿ ಭೇಟಿಯಾದೆವು, ಯಾವಾಗ ಭೇಟಿಯಾದೆವು, ಹೇಗೆ ಭೇಟಿಯಾದೆವು ಎಂಬುದು ಮುಖ್ಯವಲ್ಲ. ನಾವು ಭೇಟಿಯಾಗಿದ್ದೆವು. ನಾವು ಮದುವೆಯಾಗಿದ್ದೆವು ಎಂಬುದು ಮುಖ್ಯವಾಗಿತ್ತು. ಈ ಮದುವೆಯಿಂದ ನಾನು ಏನು ಕಲಿತೆ ಅಥವಾ ಕಳೆದುಕೊಂಡಿದ್ದೆ ಎಂದು ತಿಳಿಯುವುದು ಮುಖ್ಯ ಎಂದಿದ್ದರು. ಆಘಾತಕಾರಿ ವಿಷಯವೆಂದರೆ ಮುಖೇಶ್ ನೇಣು ಬಿಗಿದುಕೊಂಡು ತನ್ನ ಜೀವನವನ್ನು ಅಂತ್ಯಗೊಳಿಸಿದ್ದರು. ಇದು ಕೂಡ ಇಂದಿಗೂ ಚರ್ಚಿತ ವಿಷಯವೇ ಆಗಿದೆ. 

ಇಷ್ಟೆಲ್ಲಾ ಆದ ಬಳಿಕ ರೇಖಾ ಮತ್ತೆ ಮದುವೆಯಾಗಲಿಲ್ಲ. ಇತ್ತೀಚೆಗೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭವೊಂದರ ವಿಡಿಯೋ ವೈರಲ್​  ಆಗುತ್ತಿದ್ದು, ಇದರಲ್ಲಿ  ನಟಿ ರೇಖಾ, ಅಮಿತಾಭ್​ ಬಚ್ಚನ್​, ಜಯಾ ಬಾಧುರಿ, ದೀಪಿಕಾ ಪಡುಕೋಣೆ, ರಣಬೀರ್​ ಕಪೂರ್​ ಮುಂತಾದವರನ್ನು ನೋಡಬಹುದು. ಆದರೆ ಇಲ್ಲಿ ಹೈಲೈಟ್​ ಆದದ್ದು ರೇಖಾ. ಇದಕ್ಕೆ ಕಾರಣ, ಅಮಿತಾಭ್​ ಬಚ್ಚನ್​ ಅವರಿಗೆ ಪ್ರಶಸ್ತಿ ಬಂದಾಗ ನಿರೂಪಕರು ಅವರ ಹೆಸರನ್ನು ಹೇಳುತ್ತಿದ್ದಂತೆಯೇ ಜಯಾ ಬಚ್ಚನ್​ ಅವರಿಗಿಂತಲೂ ಹೆಚ್ಚು ಖುಷಿಯಾದದ್ದು ರೇಖಾ ಅವರಿಗೆ! ಅಮಿತಾಭ್​ ಹೆಸರು ಹೇಳುತ್ತಿದ್ದಂತೆಯೇ ರೇಖಾ ಅವರಿಗೆ ಖುಷಿ ತಡೆದುಕೊಳ್ಳಲು  ಆಗದೇ ಜಯಾ ಅವರನ್ನು ಹಿಡಿದು ತಬ್ಬಿಕೊಂಡು ಬಿಟ್ಟರು. ಅವರ ಮೊಗದಲ್ಲಿ ಅದೆಷ್ಟು ಖುಷಿ ಇತ್ತು ಎಂದರೆ, ಜಯಾ ಅವರಿಗೂ ಅಷ್ಟು ಖುಷಿಯಾದಂತೆ ಕಾಣುತ್ತಿರಲಿಲ್ಲ. ರೇಖಾ ಅವರ ಈ ಖುಷಿಯನ್ನು ನೋಡಿ ಜಯಾ ಒಂದು ಹಂತದಲ್ಲಿ ಮುಖವನ್ನು ಸಪ್ಪಗೆ ಮಾಡಿಕೊಂಡರೂ ನಂತರದಲ್ಲಿ ಸುಧಾರಿಸಿಕೊಂಡರು. ಪ್ರಶಸ್ತಿ ಸ್ವೀಕರಿಸಿದ ಬಳಿಕ ಅಮಿತಾಭ್​ ಮಾತನಾಡುವಾಗಲೂ ಕ್ಯಾಮೆರಾ ಕಣ್ಣು ರೇಖಾ ಮತ್ತು ಜಯಾ ಮೇಲೆ ಕೇಂದ್ರೀಕೃತವಾಗಿತ್ತು. ಆಗಲೂ ರೇಖಾ ಖುಷಿ ಪಡುವುದನ್ನು ನೋಡಬಹುದು. ಮೊದಲ ಪ್ರೀತಿಯನ್ನು ಮರೆಯಲು ಸಾಧ್ಯವೇ ಇಲ್ಲ ಎನ್ನುವ ಗಾದೆ ಮಾತು ಕೂಡ ಇದೆ ಅಲ್ವಾ?

ಮನಸ್ಸಲ್ಲೇ ಮದ್ವೆಯಾಗಿದೆ, ಕಾಗದದ ತುಂಡ್ಯಾಕೆ? ಇಬ್ಬರು ಮಕ್ಕಳ ಬಳಿಕ ನಟ ಅರ್ಜುನ್​ ರಾಮ್​ಪಾಲ್​ ಮಾತು...

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?