ಮನಸ್ಸಲ್ಲೇ ಮದ್ವೆಯಾಗಿದೆ, ಕಾಗದದ ತುಂಡ್ಯಾಕೆ? ಇಬ್ಬರು ಮಕ್ಕಳ ಬಳಿಕ ನಟ ಅರ್ಜುನ್​ ರಾಮ್​ಪಾಲ್​ ಮಾತು...

By Suchethana D  |  First Published Aug 2, 2024, 11:18 AM IST

ಇಬ್ಬರು ಮಕ್ಕಳಾದ ಮೇಲೂ ಬಾಲಿವುಡ್​ ನಟ ಅರ್ಜುನ್​ ರಾಮ್​ಪಾಲ್​ ಪ್ರೇಯಸಿ ಜೊತೆ ಮದುವೆಯಾಗಲಿಲ್ಲ. ಇದಕ್ಕೆ ಅವರು ಕೊಟ್ಟ ಕಾರಣ ಹೀಗಿದೆ...
 


ಬಾಲಿವುಡ್​ ನಟ ಅರ್ಜುನ್ ರಾಮ್​ಪಾಲ್   ರೂಪದರ್ಶಿ ಹಾಗೂ ಚಲನಚಿತ್ರ ನಿರ್ಮಾಪಕ ಕೂಡ. ದಿಲ್ ಕಾ ರಿಶ್ತಾ, ಹೌಸ್‌ಫುಲ್, ಓಂ ಶಾಂತಿ ಓಂ, ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಅರ್ಜುನ್ ರಾಮ್ ಪಾಲ್ (Arjun Rampal) ಹಲವು ಹಿಟ್​ ಚಿತ್ರಗಳನ್ನು ಕೊಟ್ಟವರು.  2001ರಲ್ಲಿ ಬಿಡುಗಡೆಯಾದ ರಾಜೀವ್ ರೈ ಅವರ ಪ್ರಣಯ ಚಿತ್ರ ಪ್ಯಾರ್ ಇಷ್ಕ್ ಔರ್ ಮೊಹಬ್ಬತ್​ನಿಂದ ಬಾಲಿವುಡ್​ಗೆ ಪದಾರ್ಪಣೆ ಮಾಡಿರುವ ಅವರು,  40 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಅವರು ಹೆಚ್ಚು ಸದ್ದು ಮಾಡುತ್ತಿರುವುದು ವೈಯಕ್ತಿಕ ಜೀವನದಿಂದ. ಏಕೆಂದರೆ 24ನೇ ವಯಸ್ಸಿನಲ್ಲಿಯೇ ಮದುವೆಯಾಗಿ ಎರಡು ಮಕ್ಕಳ ತಂದೆಯೂ ಆಗಿರುವ ಅರ್ಜುನ್​ ಅವರು, ಕೊನೆಗೆ ಸುದೀರ್ಘ ದಾಂಪತ್ಯಕ್ಕೆ ಬ್ರೇಕ್​ ಹಾಕಿ ಸದ್ಯ ಗರ್ಲ್​ಫ್ರೆಂಡ್ ಆಗಿರುವ ಮಾಡೆಲ್, ನಟಿ ಗೇಬ್ರಿಯೆಲ್ಲಾ ಜೊತೆ ಎಂಗೇಜ್​ ಆಗಿದ್ದಾರೆ. ಗರ್ಲ್​ಫ್ರೆಂಡ್​ನಿಂದ ಇವರಿಗೆ ಮತ್ತೆ ಇಬ್ಬರು ಮಕ್ಕಳಿದ್ದಾರೆ.

ಇದೀಗ ಅರ್ಜುನ್​ ಅವರು, ತಮ್ಮ ದಾಂಪತ್ಯ ಜೀವನದ ಹಾಗೂ ಹಾಲಿ ಜೀವನದ  ಕುರಿತು ಮಾತನಾಡಿದ್ದಾರೆ.  ಅರ್ಜುನ್ ಬಹಳ ಚಿಕ್ಕ ವಯಸ್ಸಿನಲ್ಲೇ ಮೆಹರ್ ಜೆಸಿಯಾ ಅವರನ್ನು ವಿವಾಹವಾದರು ಮತ್ತು ಅವರು ಕೆಲವು ವರ್ಷಗಳ ಹಿಂದೆ ವಿಚ್ಛೇದನ ಪಡೆದರು. ಅವರಿಗೆ ಮಹಿಕಾ ರಾಂಪಾಲ್, ಮೈರಾ ರಾಂಪಾಲ್ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆದರೆ  ಮದುವೆಯಾದ ಸಂದರ್ಭದಲ್ಲಿ ಅವರಿಗೆ 24 ವರ್ಷ ವಯಸ್ಸಾಗಿತ್ತು. ಇಷ್ಟು ಚಿಕ್ಕ ವಯಸ್ಸಿನಲ್ಲಿ ತಾನು ಮದುವೆಯಾಗಬಾರದಿತ್ತು ಎಂದು ಅರ್ಜುನ್​ ಈಗ ಹೇಳಿದ್ದಾರೆ.  ಅರ್ಜುನ್ ಮತ್ತು ಮೆಹರ್ ಅವರು 1998 ರಲ್ಲಿ ಮದುವೆಯಾಗಿ ಸುಮಾರು 21 ವರ್ಷಗಳ ಕಾಲ ಮದುವೆಯಾಗಿದ್ದರು. ಅದರ ಬಗ್ಗೆ ಮಾತನಾಡುತ್ತಾ, ಅರ್ಜುನ್ ರಣವೀರ್ ಅಲ್ಲಾಬಾಡಿಯಾ ಅವರ ಪಾಡ್‌ಕ್ಯಾಸ್ಟ್‌ನಲ್ಲಿ, ಇದು ತುಂಬಾ ಮುಂಚೆಯೇ ಎಂದು ನಾನು ಭಾವಿಸುತ್ತೇನೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಮದುವೆಯಾಗಿದ್ದು ತಪ್ಪಾಯಿತು ಎಂದಿದ್ದಾರೆ.

Tap to resize

Latest Videos

ಮಾಧುರಿ ಮದ್ವೆ ವಿಷ್ಯ ತಿಳಿದಾಗ ನನ್ನಪ್ಪ ಬಾತ್‌ರೂಮ್‌ನಲ್ಲಿ.... ಆ ದಿನ ನೆನೆದ ದೀಪಿಕಾ ಪಡುಕೋಣೆ

 ಹೆಣ್ಣುಮಕ್ಕಳಿಗೆ ಹೋಲಿಸಿದರೆ ಗಂಡು ಮಕ್ಕಳಿಗೆ ತುಂಬಾ ನಿಧಾನವಾಗಿ ಮೆಚ್ಯುರಿಟಿ ಬರುತ್ತದೆ. 24ನೇ ವಯಸ್ಸಿನಲ್ಲಿ ಗಂಡು ಮಕ್ಕಳು ಮದುವೆಯಾಗಬಾರದು. ಅದು ನನ್ನ ಅರಿವಿಗೆ ಬಂದಿದೆ.  ಇದು ತುಂಬಾ ಚಿಕ್ಕ ವಯಸ್ಸು, ಕಲಿಯಲು ಮತ್ತು ಅನುಭವಿಸಲು ಬಹಳಷ್ಟು ಇದೆ. ಗಂಡಸರು ಮಹಿಳೆಯರಿಗಿಂತ ಬಹಳ ನಿಧಾನವಾಗಿ ಪ್ರಬುದ್ಧರಾಗುತ್ತಾರೆ ಎನ್ನುವುದನ್ನು ಇದು ಸಾಬೀತು ಮಾಡಿದೆ. ಅದರಲ್ಲಿಯೂ ಮದುವೆ ವಿಷಯಕ್ಕೆ ಬಂದರೆ ಗಂಡಸರು ತುಂಬಾ ನಿಧಾನವಾಗಿಯೇ ಪ್ರಬುದ್ಧರಾಗುತ್ತಾರೆ ಎಂದಿದ್ದಾರೆ. ತಾವು ಬಾಲ್ಯದ ಗೆಳತಿಯನ್ನು ವಿವಾಹವಾದರೂ ಆಕೆಯ ಜೊತೆ ದೀರ್ಘ ಕಾಲ ಬದುಕುವುದು ಚಿಕ್ಕ ವಯಸ್ಸಿನಲ್ಲಿ ಮದುವೆಯಾದರೆ ಕಷ್ಟವೇ ಎಂದಿದ್ದಾರೆ.
 

ನನ್ನ ವಿಫಲ ದಾಂಪತ್ಯದ ಸಂಪೂರ್ಣ ಜವಾಬ್ದಾರಿಯನ್ನು ನಾನೇ ತೆಗೆದುಕೊಳ್ಳುತ್ತೇನೆ ಎಂದಿರೋ ಅರ್ಜುನ್​ ಈಗ ನಟಿ  ಗೇಬ್ರಿಯೆಲಾ ಡಿಮೆಟ್ರಿಯಾಡ್ಸ್ ಅವರೊಂದಿಗೆ ಸಂಬಂಧದಲ್ಲಿದ್ದಾರೆ. ಇವರಿಗೆ ಈಗ ಇಬ್ಬರು ಮಕ್ಕಳಿದ್ದಾರೆ. ಅವರ ಹೆಸರು ಅರಿಕ್​  ಮತ್ತು ಅರಿವ್​. ಇಬ್ಬರು ಮಕ್ಕಳಾದರೂ ಮದುವೆಯಾಕೆ ಆಗಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿರುವ ಅರ್ಜುನ್​, ಮದುವೆ ಎನ್ನುವ ಕಾಗದದ ತುಂಡು ಯಾಕೆ, ನಾವು ಮತ್ತು ಗೇಬ್ರಿಯೆಲಾ ಮನಸ್ಸಿನಲ್ಲಿಯೇ ಮದುವೆಯಾಗಿದ್ದೇವೆ. ಕಾಗದ ತುಂಡಿನ ಅವಶಸ್ಯಕತೆ ಇಲ್ಲ. ನಾವು ಒಟ್ಟಿಗೇ ಚೆನ್ನಾಗಿದ್ದೇವೆ. ಮದುವೆಯಾಗಿದೆ ಎನ್ನುವ ಬಗ್ಗೆ ಮನಸ್ಸಿನಲ್ಲಿ ಯಾವುದೇ ಗೊಂದಲವಿಲ್ಲ. ಮದುವೆ ಅವಶ್ಯಕತೆಯೇ ಇಲ್ಲ ಎಂದಿದ್ದಾರೆ.  ಇನ್ನು ನಟನ ಸಿನಿಮಾ ವಿಷಯಕ್ಕೆ ಬರುವುದಾದರೆ, ಇವರು,  ಕೊನೆಯದಾಗಿ 'ಕ್ರಾಕ್' ನಲ್ಲಿ ಕಾಣಿಸಿಕೊಂಡರು, ಇದರಲ್ಲಿ ವಿದ್ಯುತ್ ಜಮ್ವಾಲ್, ಆಮಿ ಜಾಕ್ಸನ್, ನೋರಾ ಫತೇಹಿ ಕೂಡ ನಟಿಸಿದ್ದಾರೆ.

ಸಂಸತ್ತಿಗೆ ಬರುವ ಮೊದಲು ರಾಹುಲ್​ ಗಾಂಧಿ ಪರೀಕ್ಷೆ ನಡೆಸಿ ಎಂದ ಕಂಗನಾ! ಏನಿದು ಹೊಸ ವರಸೆ?

click me!