ಜೈಲಿನಲ್ಲಿ ದರ್ಶನ್ ಗ್ಯಾಂಗ್ ನಡುವೆ ಬಿರುಕು; ಹಣದಾಸೆಗೆ ಹೆಣ ಬಿಸಾಡಿದವರ ಗೋಳಾಟ, ಚೀರಾಟ, ಫೈಟಿಂಗ್
ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಜೈಲು ಸೇರಿದ ಆರೋಪಿಗಳ ನಡುವೆ ಬಿರುಕು ಮೂಡಿದ್ದು, ಜೈಲಿನಲ್ಲಿ ಪರಸ್ಪರ ಬೈಯುತ್ತಾ ಜಗಳ ಮಾಡಿಕೊಳ್ಳುತ್ತಿದ್ದಾರೆ.
ಬೆಂಗಳೂರು (ಆ.02): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ವಿಚಾರಣಾಧೀನ ಕೈದಿಗಳಾಗಿ ಪರಪ್ಪನ ಅಗ್ರಹಾರ ಜೈಲಿನಿಂದ ತುಮಕೂರು ಜೈಲಿಗೆ ಶಿಫ್ಟ್ ಆಗಿರುವ ನಟ ದರ್ಶನ್ ಗ್ಯಾಂಗ್ ಸದಸ್ಯರ ನಡುವೆ ಈಗ ಬಿರುಕು ಮೂಡಿದೆ. ಎಲ್ಲರೂ ಪೊಲೀಸರಿಗೆ ಸರೆಂಡರ್ ಆಗೋಣ, ಕೆಲವೇ ದಿನಗಳಲ್ಲಿ ಬಿಡುಗೆಯಾಗಿ ಹೊರಗೆ ಬರ್ತೀವಿ ಎಂದು ಹೇಳಿದ್ದ ರಾಘವೇಂದ್ರನ ಮಾತು ಕೇಳಿ ಪರ್ಮನೆಂಟ್ ಜೈಲಿನಲ್ಲಿಯೇ ಕೊಳೆಯುವಂತಾಗಿದೆ ಎಂದು ಪರಸ್ಪರ ಅವ್ಯಾವಚ್ಯ ಶಬ್ದಗಳಿಂದ ಬೈದುಕೊಳ್ಳುತ್ತಿದ್ದಾರೆ.
ನಟಿ ಪವಿತ್ರಾಗೌಡಗೆ ಅಶ್ಲೀಲವಾಗಿ ಕಾಮೆಂಟ್ ಮಾಡಿದ್ದಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿದ ನಟ ದರ್ಶನ್ ಅಂಡ್ ಗ್ಯಾಂಗ್‌ನಿಂದ ಆತನನ್ನು ಭೀಕರವಾಗಿ ಹಲ್ಲೆ ಮಾಡಿ ಕೊಲೆಗೂದು ಚರಂಡಿಗೆ ಹೆಣ ಬೀಸಾಡಲಾಗಿತ್ತು. ಈ ಪ್ರಕರಣ ಬೆಳಕಿಗೆ ಬರುವ ಮುನ್ನವೇ ನಾಲ್ವರು ದರ್ಶನ್ ಅಭಿಮಾನಿಗಳಿಗೆ ಹಣದ ಆಮಿಷವೊಡ್ಡಿ ಹಾಗೂ ಜೈಲಿನಿಂದ ಬಿಡಿಸಿಕೊಂಡು ಬರುವ ಭರವಸೆ ನೀಡಿದ್ದ ರಾಘವೇಂದ್ರ ಕೊಲೆ ಆರೋಪವನ್ನು ತಮ್ಮ ಮೇಲೆ ಹಾಕಿಕೊಂಡು ಪೊಲೀಸರಿಗೆ ಸರೆಂಡರ್ ಆಗುವಂತೆ ತಿಳಿಸಿದ್ದರು. ಆದರೆ, ರೇಣುಕಾಸ್ವಾಮಿಗೆ ಹಲ್ಲೆ ಮಾಡದೇ, ಕೊಲೆಯನ್ನೂ ಮಾಡದೇ ಕೇವಲ ಸರೆಂಡರ್ ಆಗಿದ್ದ ಆರೋಪಿಗಳು ಈಗ ಜೈಲಿನಲ್ಲಿಯೇ ಕೊಳೆಯುವ ಸ್ಥಿತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿಗಳು ತಮ್ಮ ತಮ್ಮ ನಡುವೆಯೇ ಪರಸ್ಪರ ಬೈದುಕೊಳ್ಳುತ್ತಿರುವ ಘಟನೆ ನಡೆಯುತ್ತಿದೆ.
ಮದುವೆಯಾದ ಗೆಳತಿಗೆ ಸಹಕರಿಸುವಂತೆ ಕಿರುಕುಳ ಕೊಟ್ಟ ಕ್ಲಾಸ್‌ಮೇಟ್ಸ್; ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣು
ಹೌದು, ದರ್ಶನ್ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಕೇಸಿನಲ್ಲಿರೋ ಆರೋಪಿಗಳದ್ದು ಒಂದೊಂದು ಕಥೆಯಾಗಿದೆ. ತುಮಕೂರು ಜೈಲಲ್ಲಿರೋ ನಾಲ್ವರ ನಡುವೆ ಮಾತಿನ ಚಕಮಕಿ ಆರಂಭವಾಗಿದೆ. ಒಬ್ಬೊಬ್ಬರ ಮೇಲೆ ಒಬ್ಬಬ್ಬೊರು ಕಾರಣವೆಂದು ಹೇಳಿಕೊಂಡು ಬೈಗುಳ ಆರಂಭಿಸಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸಿನ ಆರೋಪಿಗಳಾದ ರವಿಶಂಕರ್, ನಿಖಿಲ್, ಕಾರ್ತಿಕ್ ಹಾಗೂ ಕೇಶವ ಎಲ್ಲರೂ ಒಂದೇ ಬ್ಯಾರಕ್ ನಲ್ಲಿದ್ದು ನಿನ್ನ ಮಾತು ಕೇಳಿ ನಾನೂ ಸಿಕ್ಕಾಕೊಂಡೆ ಅಂತ ಪರಸ್ಪರ ನಿಂದನೆ ಮಾಡಿಕೊಳ್ಳುತ್ತಿದ್ದಾರೆ. ಪರಸ್ಪರ ಬೈದಾಡಿಕೊಂಡು ಒಬ್ಬರ ಮೇಲೆ ಆರೋಪ ಪ್ರತ್ಯಾರೋಪ ಮಾಡಿಕೊಳ್ಳುತ್ತಿದ್ದಾರೆ.
ದರ್ಶನ್ ಅಭಿಮಾನಿ ಸಂಘದ ಚಿತ್ರದುರ್ಗ ಜಿಲ್ಲಾಧ್ಯಕ್ಷ ರಾಘವೇಂದ್ರನ ಮಾತು ಕೇಳಿ ನಾವು ಕೊಲೆ ಕೇಸಿನಲ್ಲಿ ಸಿಲುಕಿದ್ದೇವೆ. ನಮಗೆ ಜೈಲೇ ಗಟ್ಟಿಯಾಗುತ್ತದೆ ಎಂಬ ಅನುಮಾನ ಕಾಡುತ್ತಿದೆ. ನಮ್ಮ ಕುಟುಂಬ ಸದಸ್ಯರು ತೀವ್ರ ಬಡವರಾಗಿದ್ದಾರೆ. ಅವರು ಜೀವನ ಮಾಡುವುದೇ ದೊಡ್ಡ ಸಾಹಸವಾಗಿರುವಾಗ, ಈಗ ಜೈಲಿನಲ್ಲಿರುವ ನಮಗೆ ಯಾರು ಸಹಾಯ ಮಾಡ್ತಾರೆ ಎಂದು ಗೋಳಾಡುತ್ತಿದ್ದಾರೆ. ಈಗ ನಮ್ಮೆಲ್ಲರ ಜೀವನ ಸೆಟ್ಲ್ ಆಗುತ್ತೆ ಡೋಂಟ್ ವರಿ ಎಂದಿದ್ದ ರಾಘವೇಂದ್ರನೂ ಜೈಲು ಕಂಬಿ ಎಣಿಸುತ್ತಿದ್ದಾನೆ. ಈಗ ನಮ್ಮ ಗತಿ, ಕುಟುಂಬದ ಪರಿಸ್ಥಿತಿ ಏನು ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.
ಬೆಂಗಳೂರು ಮೆಟ್ರೋ ನಿಲ್ದಾಣಗಳು ಮಕ್ಕಳಿಗೆ ಮಾರಕ; ಆಟವಾಡುತ್ತಲೇ ಟ್ರ್ಯಾಕ್‌ಗೆ ಬಿದ್ದ 4 ವರ್ಷದ ಮಗು
ದರ್ಶನ್ ಹಾಗೂ ಗ್ಯಾಂಗ್‌ನಿಂದ ರೇಣುಕಾಸ್ವಾಮಿಯನ್ನು ಹೊಡೆದು ಕೊಲೆ ಮಾಡಿದ ಬಳಿಕ ಮೃತದೇಹ ಬಿಸಾಡಿದ್ದು, ಸ್ಟೇಷನ್ ಗೆ ಹೋಗಿ ಸರೆಂಡರ್ ಆಗಿದ್ದು ಎಲ್ಲಾ ರಾಘವೇಂದ್ರ ಹೇಳಿದಂತೆ ಮಾಡಿದ್ದೇವೆ. ನಾವು ದುಡ್ಡಿನ ಆಸೆಗೆ ತಪ್ಪು ಮಾಡಿಬಿಟ್ಟಿದ್ದೇವೆ ಎಂದು ಜೈಲು ಸಿಬ್ಬಂದಿ ಬಳಿ ಆರೋಪಿಗಳು ಅಳಲು ತೋಡಿಕೊಂಡಿದ್ದಾರೆ. ಜೊತೆಗೆ, ಜೈಲಿನ ಬ್ಯಾರಕ್‌ನಲ್ಲಿದ್ದಾಗ ಒಂದೇ ಸೆಲ್‌ನಲ್ಲಿರುವ ಆರೋಪಿಗಳು ಪರಸ್ಪರ ಜೋರು ಮಾತುಗಳಿಂದ ಬೈದಾಡಿಕೊಂಡು ಇತರರಿಗೂ ತೊಂದರೆ ಉಂಟು ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜೈಲಾಧಿಕಾರಿಗಳು ಆರೋಪಿಗಳಿಗೆ ಸುಮ್ಮನಿರುವಂತೆ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ, ಆರೋಪಿಗಳು ಪರಸ್ಪರ ಗಲಾಟೆ ಮಾಡಿಕೊಂಡು ಹೊಡೆದಾಡಿಕೊಂಡರೆ ಕಷ್ಟವೆಂದು ಅವರ ಸೆಲ್‌ನ ಬಳಿ ಸಿಬ್ಬಂದಿ ನಿಯೋಜನೆ ಮಾಡಿ ಭದ್ರತೆ ಬಗ್ಗೆ ನಿಗಾವಹಿಸಲಾಗಿದೆ.