ಯಾವುದನ್ನು ಯಾರಿಗೂ ಸಾಬೀತು ಪಡಿಸ್ಬೇಕಿಲ್ಲ: ಮಹೇಶ್ ಭಟ್ ಭಾವುಕ ಬರಹ

Suvarna News   | Asianet News
Published : Aug 07, 2020, 01:48 PM IST
ಯಾವುದನ್ನು ಯಾರಿಗೂ ಸಾಬೀತು ಪಡಿಸ್ಬೇಕಿಲ್ಲ: ಮಹೇಶ್ ಭಟ್ ಭಾವುಕ ಬರಹ

ಸಾರಾಂಶ

ಸುಶಾಂತ್ ಸಿಂಗ್ ಸಾವಿನ ಸಂಬಂಧ ಬಾಲಿವುಡ್‌ ನೆಪೊಟಿಸಂನಲ್ಲಿ ಮಹೇಶ್ ಭಟ್, ಆಲಿಯಾ ಹೆಸರು ಕೇಳಿ ಬರುತ್ತಿರುವ ಬೆನ್ನಲ್ಲೇ ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಭಾವುಕ ಪತ್ರವೊಂದನ್ನು ಬರೆದಿದ್ದಾರೆ.

ಸುಶಾಂತ್ ಸಿಂಗ್ ಸಾವಿನ ಸಂಬಂಧ ಬಾಲಿವುಡ್‌ ನೆಪೊಟಿಸಂನಲ್ಲಿ ಮಹೇಶ್ ಭಟ್, ಆಲಿಯಾ ಹೆಸರು ಕೇಳಿ ಬರುತ್ತಿರುವ ಬೆನ್ನಲ್ಲೇ ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಭಾವುಕ ಪತ್ರವೊಂದನ್ನು ಬರೆದಿದ್ದಾರೆ.

ಸಡಕ್ 2 ಸಿನಿಮಾ ಮೂಲಕ ಕಂ ಬ್ಯಾಕ್ ಮಾಡಿರುವ ಮಹೇಶ್ ಭಟ್ ಸಿನಿಮಾದ ರಿಲೀಸಿಂಗ್ ಡೇಟ್‌ನ್ನು ಆಗಸ್ಟ್‌ 6ರಂದು ಬಹಿರಂಗಪಡಿಸಿದ್ದಾರೆ. ಆಲಿಯಾ ಭಟ್ ಅಭಿನಯದ ಸಡಕ್ 2 ಸಿನಿಮಾ ಆಗಸ್ಟ್ 28ರಂದು ಡಿಸ್ನಿ ಮತ್ತು ಹಾಟ್‌ಸ್ಟಾರ್‌ನಲ್ಲಿ ರಿಲೀಸ್ ಆಗಲಿದೆ.

ಸುಶಾಂತ್ ನಿಂದ ದೂರವಾಗು ಎಂದು ರಿಯಾಗೆ ಮಹೇಶ್‌ ಭಟ್ ಹೇಳಿದ್ರಾ?

ಈ ಹಿನ್ನೆಲೆಯಲ್ಲಿ ಮಹೇಶ್ ಭಟ್ ಬರೆದ ಭಾವುಕ ಪತ್ರವನ್ನು ಮಗಳು ಪೂಜಾ ಭಟ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅದರೊಂದಿಗೆ ಸಿನಿಮಾ ಚಿತ್ರೀಕರಣ ಸಂದರ್ಭ ಕ್ಲಿಕ್ಕಿಸಿದ ಕೆಲವು ಫೋಟೋಗಳನ್ನೂ ಶೇರ್ ಮಾಡಿಕೊಂಡಿದ್ದಾರೆ.

ಇಂದು ನಾವು ನಮ್ಮ ಪ್ರಯಾಣದ ಕೊನೆಯ ಹಂತವನ್ನು ಪ್ರಾರಂಭಿಸುತ್ತಿದ್ದೇವೆ. ನಾನು ಅಶಕ್ತನಾಗಿರುತ್ತೇನೆ! ಯಾವುದೇ ಹೊರೆ, ತೂಕವಿಲ್ಲ. ಕಾಪಾಡಿಕೊಳ್ಳಲು ಯಾವುದೇ ಖ್ಯಾತಿ ಇಲ್ಲ. ಸಾಧಿಸಲು ಯಾವುದೇ ಮಿಷನ್ ಇಲ್ಲ. ಯಾರಿಗೂ ಏನನ್ನೂ ಸಾಬೀತುಪಡಿಸಬೇಕಾಗಿಲ್ಲ ಎಂದು ಮಹೇಶ್ ಭಟ್ ಬರೆದಿದ್ದಾರೆ.

ಆಲಿಯಾ ಭಟ್ 'ಸಡಕ್-2' ಪೋಸ್ಟರ್‌ ರಿಲೀಸ್‌; ಬಹಿಷ್ಕರಿಸುವಂತೆ ನೆಟ್ಟಿಗರಿಂದ ಆಕ್ರೋಶ!

ಸಿನಿಮಾ ಹಿಟ್ ಆದರೆ ಅದು ನಿಮಗೆಲ್ಲರಿಗೂ ಸೇರುತ್ತದೆ. ಒಂದು ವೇಳೆ ಸಿನಿಮಾ ಸೋತರೆ ಅದು ನನ್ನದು. ಇದು ಒಬ್ಬ ನಿರ್ದೇಶಕನ ಕರ್ತವ್ಯ ಮತ್ತು ಲಾಭವೂ. ನೀವು ನೀಡಿರುವ ಬೆಂಬಲ ಪ್ರೀತಿಗೆ ನನ್ನ ಧನ್ಯವಾದ. ನಿಮ್ಮಿಂದಾಗಿಯೇ ತಯಾರಾದ ಈ ಸಿನಿಮಾವನ್ನು ನಾನು ಬಹಳ ಪ್ರೀತಿಸುತ್ತೇನೆ. ಈಗ ಸ್ವತಂತ್ರ ಹಕ್ಕಿಯಂತೆ ಭಾಸವಾಗುತ್ತಿದೆ.  ಮಹೇಶ್ ಹೊರಡುವಾ ಎಂದು ಕಾಡು ಕರೆಯುತ್ತಿದೆ ಎಂದು ಬರೆದಿದ್ದಾರೆ.

ಮಹೇಶ್ ಭಟ್ ಅವರ 1991ರ ಸಡಕ್ ಸಿನಿಮಾದ ಮುಂದುವರಿದ ಭಾಗವೇ ಸಡಕ್ 2. ಇದರಲ್ಲಿ ಆಲಿಯಾ ಭಟ್, ಆದಿತ್ಯಾ ರಾಯ್ ಕಪೂರ್, ಸಂಜಯ್ ದತ್, ಪೂಜಾ ಭಟ್ ಕೂಡಾ ನಟಿಸಿದ್ದಾರೆ.

ಸುಶಾಂತ್‌ನ ಪ್ರೇಯಸಿಯನ್ನು ಲಪಟಾಯಿಸಿದ್ದರಾ ಮಹೇಶ್‌ ಭಟ್‌?

ಈ ಮೊದಲು ಸಡಕ್ ಸಿನಿಮಾವನ್ನು ಥಿಯೇಟರ್‌ನಲ್ಲಿ ಬಿಡುಗಡೆ ಮಾಡಲು ಉದ್ದೇಶಿಸಲಾಗಿತ್ತಾದರೂ ಕೊರೋನಾ ವೈರಸ್ ನಿಂದಾಗಿ ಡಿಜಿಟಲ್ ರೂಪದಲ್ಲಿ ರಿಲೀಸ್ ಮಾಡಲಾಗುತ್ತಿದೆ ಎಂದು ಮಹೇಶ್ ಭಟ್ ತಿಳಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ರೀನಾ, ಕಿರಣ್ & ಲವರ್ ಗೌರಿ.. 'ನಾವೆಲ್ಲರೂ ಒಂದೇ ಫ್ಯಾಮಿಲಿ' ಎಂದ ಅಮೀರ್ ಖಾನ್; ಒಳಗೊಳಗೇ ನಕ್ಕ ನೆಟ್ಟಿಗರು!
ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!