
ಮುಂಬೈ(ಆ.07): ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆಗೆ ಬಂದ ಬಿಹಾರದ ಐಪಿಎಸ್ ಅಧಿಕಾರಿಯನ್ನು ಮುಂಬೈ ಮಹಾನಗರ ಪಾಲಿಕೆ ಕ್ವಾರೆಂಟೈನ್ ಮಾಡಿದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಇದೀಗ ಬಿಎಂಸಿ ಐಪಿಎಸ್ ಅಧಿಕಾರಿ ವಿನಯ್ ತಿವಾರಿಗೆ ಕ್ವಾರೆಂಟೈನ್ ವಿನಾಯಿತಿ ನೀಡಿದೆ.
ಸುಶಾಂತ್ ಸಾವಿನ ತನಿಖೆಗೆ ಆಗಸ್ಟ್ 2ರಂದು ಮುಂಬೈಗೆ ಆಗಮಿಸಿದ್ದ ವಿನಯ್ ತಿವಾರಿಯನ್ನು ಮೊಂಬೈ ಮಹಾನಗರ ಪಾಲಿಕೆ ಕ್ವಾರೆಂಟೈನ್ ಮಾಡಿತ್ತು. ಐಪಿಎಸ್ ಕ್ವಾರ್ಟರ್ಸ್‌ನಲ್ಲಿ ಉಳಿದುಕೊಳ್ಳುವುದಕ್ಕೂ ವ್ಯವಸ್ಥೆ ಮಾಡದೆ ಬೇರೆಯದೇ ಅತಿಥಿಗೃಹವನ್ನು ಒದಗಿಸಿತ್ತು.
ಸುಶಾಂತ್ ಸಾವಿನ ತನಿಖೆಗೆ ಬಂದ IPS ಅಧಿಕಾರಿಗೆ ಕ್ವಾರೆಂಟೈನ್..!
ಇದೀಗ ವಿನಯ್ ತಿವಾರಿಗೆ ಹೋಂ ಐಸೋಲೇಷನ್‌ನಿಂದ ವಿನಾಯಿತಿಯನ್ನು ನೀಡಲಾಗಿದೆ. ಎಸ್‌ಆರ್‌ಪಿಎಫ್ ಅತಿಥಿ ಗೃಹದಲ್ಲಿ ವಿನಯ್ ಅವನ್ನು ಕ್ವಾರೆಂಟೈನ್ ಮಾಡಲಾಗಿತ್ತು.
ಈ ಸಂಬಂಧ ಸ್ಪಷ್ಟನೆ ಕೊಟ್ಟಿರುವ ಬಿಎಂಸಿ ಪಾಟ್ನಾದ ಮುನ್ಸಿಪಲ್ ಕಮಿಷನರ್ ಜಿತೇಂದ್ರ ಕುಮಾರ್ ಗುಪ್ತಾ ಐಪಿಎಸ್‌ಗೆ ಪತ್ರ ಬರೆದಿದೆ. ವಿನಯ್ ಅವರಿಗೆ ಕ್ವಾರೆಂಟೈನ್‌ನಲ್ಲಿ ರಿಯಾತಿ ನೀಡಬೇಕೆಂಬ ಬೇಡಿಕೆಗೆ ಸ್ಪಂದಿಸಿ ಪಾಟ್ನಾಗೆ ವಾಪಾಸಾಗಲು ಅನುಮತಿಸಲಾಗಿದೆ.
ಸುಶಾಂತ್ ಕೇಸ್; 'ಎನೋ ಎಡವಟ್ಟಾಗಿದೆ' ಇಲ್ಲಿದ್ರೆ ಮುಂಬೈ ಹೀಗೆಲ್ಲ ಮಾಡ್ತಿರಲಿಲ್ಲ!
ಅಲ್ಪಾವಧಿ ಪ್ರಯಾಣದ ಮೇಲೆ ಬರುವವರಿಗೆ ಕ್ವಾರೆಂಟೈನ್‌ನಲ್ಲಿ ನೀಡುವ ರಿಯಾಯಿತಿ ವಿನಯ್ ತಿವಾರಿ ಅವರಿಗೆ ನೀಡಲಾಗಿದೆ ಎಂದು ವಿವರಿಸಲಾಗಿದೆ. ಇದರ ನಿಬಂಧನೆಗಳ ಪ್ರಕಾರ ಐಪಿಎಸ್ ಅಧಿಕಾರಿ ಕ್ವಾರೆಂಟೈನ್ ಆರಂಭವಾದ 8 ದಿನಗಳೊಳಗಾಗಿ ಹಿಂತಿರುಗಿ ಹೋಗಬೇಕಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.